ಕುಮಟಾ: ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ಕೃಷಿ ಇಲಾಖೆ ಹಾಗೂ ತೋಟಗಾರಿಕಾ ಮಹಾವಿದ್ಯಾಲಯ ಶಿರಸಿ ಮತ್ತು ತೋಟಗಾರಿಕಾ ವಿಸ್ತರಣಾ ಶಿಕ್ಷಣ ಘಟಕ, ಎ,ವಿ,ಪಿ ಸೇವಾ ಸಂಸ್ಥೆ ಸಿ.ಪಿ,ಎಫ್ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಗತಿಪರ ರೈತರಿಂದ ರೈತರಿಗಾಗಿ ತರಬೇತಿ ಕಾರ್ಯಕ್ರಮವನ್ನು ಕುಮಟಾ ತಾಲೂಕಿನ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಎ.ವಿ.ಪಿ ಸೇವಾ ಸಂಸ್ಥೆಯ ಅಧ್ಯಕ್ಷರು ಪ್ರಗತಿಪರ ರೈತರಾದ ಗಣಪತಿ ನಾಯ್ಕ ದೀಪ ಬೆಳಗಿಸಿದ್ರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರಸಿ ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ,ಎಸ್.ಐ ಅಥಣಿ ವಹಿಸಿದ್ರು. ಈ ವೇಳೆ ಮಾತನಾಡಿದ ಮಾನ್ಯ ಸಹಾಯಕ ಕೃಷಿ ನಿರ್ದೇಶಕರಾದ ಮುನಿಸ್ವಾಮಿ ಮಾತನಾಡಿ, ಇದೊಂದು ವಿಶೇಷವಾದ ಕಾರ್ಯಕ್ರಮವಾಗಿದೆ. ಎಷ್ಟೋ ರೈತರು ತಮ್ಮ ಬೆಸಾಯದಲ್ಲಿ ಬರುವ ಸಮಸ್ಯೆಗಳಿಗೆ ತಮ್ಮದೆ ಆದ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುವ ಮೂಲಕ ಪ್ರಗತಿಪರ ರೈತರಾಗುತ್ತಾರೆ. ಅಂತಹ ರೈತರಿಂದ ತರಬೇತಿ ನೀಡುವ ಕಾರ್ಯಕ್ಕೆ ಮುಂದಾದ ಸರಕಾರದ ಯೋಜನೆ ಉತ್ತಮವಾದದ್ದು ಎಂದರು..

RELATED ARTICLES  ಕುಮಟಾ ರಸ್ತೆಯಲ್ಲಿ ಹೋಗುತ್ತಿದ್ದಾಗ ಚಿನ್ನದ ಸರ ಎಗರಿಸಿದ ಕತರ್ನಾಕ್ ಚೋರ ಈಗ ಅಂದರ್.!!

ಬಳಿಕ ಮಾತನಾಡಿದ ಮಾನ್ಯ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಚಿದಂಬರಂ, ನಮ್ಮ ರಾಜ್ಯದಲ್ಲಿ ಎಷ್ಟೂ ರೈತರು ತಮ್ಮ ತಮ್ಮ ಕೃಷಿಯಲ್ಲಿ ಪ್ರಗತಿಯನ್ನು ಸಾಧಿಸಿರುತ್ತಾರೆ, ಆದರೆ ಅಂತಹ ರೈತರನ್ನು ಮುಖ್ಯವಾಹಿನಿಗೆ ತರುವಲ್ಲಿ ಮುಂದಾಗಿರಲಿಲ್ಲ ಈ ಕಾರ್ಯಕ್ರಮ ಅಂತಹ ರೈತರಿಗೆ ಸಹಕಾರಿಯಾಗಲಿದೆ ಎಂದರು..

RELATED ARTICLES  ಅನುದಾನ ರಹಿತ ಪ್ರಥಮ ದರ್ಜೆ ಕಾಲೇಜಿಗೆ ಸಿಕ್ಕಿದೆ ಹೊಸ ಭರವಸೆ!

ಇದೆ ವೇಳೆ ಮಾತನಾಡಿದ ಮಾನ್ಯ ಸಹಾಯಕ ಕೃಷಿ ನಿದೇಶಕರಾದ ಶಂಕರ್ ಹೆಗಡೆ, ಕೃಷಿ ಕ್ಷೇತ್ರದಲ್ಲಿ ರೈತನೆ ವಿಜ್ಞಾನಿಯಾಗಿದ್ದಾನೆ, ಆದ್ದರಿಂದ ಕೃಷಿಯಲ್ಲಿ ಸಾಧನೆ ಮಾಡಿದ ರೈತರಿಂದಲೆ ರೈತರಿಗೆ ಮಾಹಿತಿ ನೀಡುವ ಈ ಕಾರ್ಯ ಬಹಳ ಯಶಸ್ವಿಯಾಗಲಿದೆ ಎನ್ನುವ ನಂಬಿಕೆ ಇದೆ ಎಂದರು..

ಈ ಕಾರ್ಯಕ್ರಮದ ವೇದಿಕೆಯಲ್ಲಿ ಡಾ,ಪುಷ್ಪಾ, ಶಿವಾನಂದ ಹೊಂಗಲ್, ರಘುನಾಥ ಆರ್, ಶಿವಕುಮಾರ ಕೆ,ಎಮ್ ಸೇರಿದಂತೆ ಅನೇಕರು ಭಾಗಿಯಾಗಿದ್ರು. ಮತ್ತು ಅನೇಕ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ರು..