ಶಿವಮೊಗ್ಗ : ಶಿವಮೊಗ್ಗದ ಸಂಗೀತ ವಿದ್ವಾನ್ ಅರವಿಂದ್ ಹೆಗಡೆ- ಆಶಾ ದಂಪತಿಯ ಪುತ್ರಿ ಅನುಷಾ ಹೆಗಡೆ ತಮ್ಮ ಮಗಳು ಲವ್ ಜಿಹಾದ್ ಗೆ ಸಿಲುಕಿದ್ದಾಳೆ ಎಂದು ದೂರಿದ್ದಾರೆ. ಈ ಸಂಬಂಧ ಮಗಳನ್ನು ರಕ್ಷಿಸಿ ಎಂದು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾರೆ.

ಮೂಲತಃ ಶಿವಮೊಗ್ಗದವರಾದ ಅರವಿಂದ್ ಹೆಗಡೆ- ಆಶಾ ದಂಪತಿ ಹದಿಮೂರು ವರ್ಷದ ಹಿಂದೆ ಮೈಸೂರಿಗೆ ಹೋಗಿ ನೆಲೆಸಿದ್ದರು. ದಂಪತಿಯ ಪುತ್ರಿ ಅನುಷಾ ಮೈಸೂರಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾಗ ಜಾವೀದ್ ಖಾನ್ ಎಂಬಾತನ ಜೊತೆ ಲವ್ ಆಗಿದೆ.ಮನೆಯವರ ವಿರೋಧದ ನಡುವೆಯೂ ಜಾವೀದ್ ಖಾನ್ ಮತ್ತು ಅನುಷಾ ವರ್ಷದ ಹಿಂದೆ ಮದುವೆ ಆಗಿದ್ದಾರೆ.

ಅನುಷಾ ಹೆಗಡೆ ತಂದೆ ದೂರಿರುವಂತೆ ಕಳೆದ ಒಂದು ವರ್ಷದ ಹಿಂದೆ ಜಾವೆದ್’ಳನ್ನು ಮದುವೆಯಾಗಿದ್ದ ಅನುಷ ಗಂಡನ ಕಿರುಕುಳಕ್ಕೆ ಬೇಸತ್ತು ಕೆಲ ದಿನಗಳ ಹಿಂದೆ ತವರು ಮನೆ ಶಿವಮೊಗ್ಗಕ್ಕೆ ಬಂದಿದ್ದಳು.ಅನುಷಾ ಮಾನಸಿಕವಾಗಿ ಕುಗ್ಗಿ ಹೋಗಿದ್ದರಿಂದ ನೊಂದು ಮನೋವೈದ್ಯರ ಬಳಿ ಕರೆದುಕೊಂಡು ಹೋಗಲು ಸಿದ್ದನಾಗಿದ್ದೆ. ಅಷ್ಟರಲ್ಲಿ ಮೈಸೂರಿನಿಂದ ಬಂದ ಜಾವೇದ್ ಮಗಳನ್ನು ಪುಸಲಾಯಿಸಿ ಮತ್ತೆ ಮೈಸೂರಿಗೆ ಕರೆದುಕೊಂಡು ಹೋಗಿದ್ದಾನೆ.

RELATED ARTICLES  ರಾಮಚಂದ್ರಾಪುರ ಮಠದ ವಿರುದ್ದದ ಪಿಐಎಲ್ ಮರು ಪರಿಶೀಲನಾ ಅರ್ಜಿಯನ್ನೂ ವಜಾಗೊಳಿಸಿದ ನ್ಯಾಯಾಲಯ

ಜಾವಿದ್ ಖಾನ್ ಈ ಮೊದಲು ಮೈಸೂರಿನ ನಫಿಸಾ ಎಂಬುವರನ್ನು ಮದುವೆಯಾಗಿದ್ದ ಬಳಿಕ ವರದಕ್ಷಿಣೆ ಕಿರುಕುಳ ನೀಡಿದ್ದ. ನಂತರ ಕೋರ್ಟ್ ಹೊರಗೆ ಮದುವೆ ಖರ್ಚಿನ ಇತ್ಯರ್ಥಕ್ಕೆ ಸಂಬಂಧ ಮುರಿದು ಹೋಗಿದೆ.ನಂತರ ಚಿಕ್ಕಮ್ಮ ನ ಮಗಳನ್ನು ಮದುವೆಯಾಗಿ ಕೈಕೊಟ್ಟ ಜಾವೆದ್.2013 ರಲ್ಲಿ ಮೈಸೂರು ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿಗೆ ಸೇರಿದ ಮಗಳ ಮೇಲೆ ಕಣ್ಣು ಹಾಕಿ ಮದುವೆ ಮಾಡಿಕೊಂಡಿದ್ದಾನೆ ಎಂದು ದೂರಿರುವ ಪೋಷಕರು ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ದೂರು ದಾಖಲಿಸಿದ್ದಾರೆ.

RELATED ARTICLES  ಕೊರೋನಾವನ್ನು ಆಯುರ್ವೇದದ ಮೂಲಕ ಗುಣಪಡಿಸಬಲ್ಲೆ : ಡಾ.ಕಜೆ

ಆದ್ರೆ ಈ ನಡುವೆ ಮಾತನಾಡಿರುವ ಅನುಷಾ ನಾನು ಯೊರ ಒತ್ತಾಯದಿಂದ ಮದುವೆಯಾಗಿಲ್ಲ. ಜಾವೆದ್ ನನ್ನು ಪ್ರೀತಿಸಿ ಮದುವೆಯಾಗಿದ್ದೇನೆ. ಅವರಿಗೆ ಎರಡು ಮದುವೆಯಾಗಿರುವ ವಿಷಯ ನನಗೆ ಗೊತ್ತಿತ್ತು. ಜಾವೆದ್ ಅವರೇ ನನ್ನ ದೂರ ಇಡಲು ಪ್ರಯತ್ನಿಸಿದ್ದರು. ಆದ್ರೆ ನಾನು ಕೇಳಲಿಲ್ಲ. ಅವರನ್ನೇ ಮದುವೆಯಾಗಬೇಕು ಎಂದು ಹಠ ಹಿಡಿದು ಮದುವೆಯಾಗಿದ್ದೇನೆ. ನನಗೆ ನನ್ನ ಹೆತ್ತವರಿಂದ ಯಾವುದೇ ಪ್ರೀತಿ ಸಿಕ್ಕಿಲ್ಲ. ಈಗ ನಿಜವಾದ ಪ್ರೀತಿ ಸಿಕ್ಕಿದೆ. ನನ್ನ ಪೋಷಕರು ನಮ್ಮಿಬ್ಬರನ್ನು ನೆಮ್ಮದಿಯಾಗಿ ಬದುಕಲು ಬಿಡಲಿ ಎಂದು ಮನವಿ ಮಾಡಿದ್ದಾರೆ.