ಶಿರಸಿ :- ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ನೆಡೆದ ಪರೇಶ್ ಮೇಸ್ತ ಸಾವಿಗೆ ನ್ಯಾಯಕೋರಿ ಪ್ರತಿಭಟನೆ ನೆಡೆಸಿದವರನ್ನು ಪೊಲೀಸ್ ಇಲಾಖೆ ಬಂಧಿಸುವಲ್ಲಿ ನಿರತವಾಗಿದೆ. ಇದನ್ನ ಈ ಕೂಡಲೇ ನಿಲ್ಲಿಸಬೇಕೆಂದು ಶಿರಸಿಯಲ್ಲಿ ಹಿಂದೂಪರ ಸಂಘಟಕರು ಹಾಗೂ ಬಿಜೆಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು. ಶಿರಸಿಯ ಉಪ ವಿಭಾಗಾಧಿಕಾರಿ ಕಚೇರಿ ಎದುರು ಜಮಾಯಿಸಿದ ನೂರಾರು ಕಾರ್ಯಕರ್ತರು ಬಂಧಿತರನ್ನ ಕೂಡಲೇ ಬಿಡುಗಡೆಗೊಳಿಸಬೇಕೆಂದು ಉಪ ವಿಭಾಗಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಾಸಕ ವಿಶ್ವೇಶ್ವರ್ ಹೆಗಡೆ ಕಾಗೇರಿ ಶಿರಸಿ ನಗರ ಶಾಂತತೆಗೆ ಮರಳಿದ್ದರೂ ಪೊಲೀಸರು ತಾಲೂಕಿನ ಬೇರೆ ಬೇರೆ ಮನೆಗಳಿಗೆ ನುಗ್ಗಿ, ಬೆದರಿಸಿ ಅಮಾಯಕರನ್ನ ಬಂಧನ ಮಾಡ್ತಿದಾರೆ. ಅವ್ರ ಮೇಲೆ ಕೊಲೆ ಯತ್ನದ ಕೇಸನ್ನ ದಾಖಲು ಮಾಡ್ತಿರೋದು ಜನರ ಆತಂಕಕ್ಕೆ ಕಾರಣವಾಗಿದೆ. ಈ ರೀತಿ ಒಂದು ಸಮುದಾಯವನ್ನ ಸಂತೃಪ್ತಿಗೊಳಿಸಲು ಸರ್ಕಾರ, ಪೊಲೀಸ್ ಮತ್ತು ಜಿಲ್ಲಾಡಳಿತವನ್ನ ಬಳಸಿಕೊಳ್ತಿದೆ. ಇದೇ ರೀತಿಯ ವಾತಾವರಣ ಇಡೀ ಜಿಲ್ಲೆಯಲ್ಲಿ ಮುಂದುವರೆದಿದೆ. ಈ ರೀತಿಯ ಪೊಲೀಸ್ ದೌರ್ಜನ್ಯ ನಿಲ್ಲದಿದ್ದಲ್ಲಿ ನಾವು ಪುನಃ ಉಗ್ರ ಹೋರಟಕ್ಕೆ ಇಳಿಯಬೇಕಾಗುತ್ತದೆ ಅಂತ ಎಚ್ಚರಿಸಿದರು.