ಶಿರಸಿ: ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ ಚಾಲನೆ ನೀಡಿದರು.

ತಾಲೂಕಿನ ಹಂಚಿನಕೇರಿ ರಸ್ತೆ ಸುಧಾರಣೆ, ಬ್ಯಾ ಗದ್ದೆ ರಸ್ತೆ ಸುಧಾರಣೆ, ಮೀಸಗುಂದ್ಲಿ ಸೇತುವೆ ಸುಧಾರಣೆ ಹಾಗೂ ನೆಗು ಪಂಚಾಯತ್ ರಸ್ತೆ ಸುಧಾರಣೆ ಕಾಮಗಾರಿ ಸೇರಿದಂತೆ ಒಟ್ಟೂ 50 ಲಕ್ಷ ರೂ.ಗಳ ಕಾಮಗಾರಿಗೆ ಜಯಶ್ರೀ ಮೊಗೇರ ಚಾಲನೆ ನೀಡಿದರು.

RELATED ARTICLES  ಪ್ರಮೋದ ಹೆಗಡೆ ಅವರ ಅಭಿನಂದನಾ ಸಮಾರಂಭಕ್ಕೆ ಭರ್ಜರಿ ಸಿದ್ಧತೆ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ನಾಯಕರ ಬೆಂಬಲ ಮತ್ತು ಸಲಹೆ ಹಾಗೂ ಬೇಡಿಕೆಯ ಮೇರೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿಯೂ ಇನ್ನು ಹೆಚ್ಚಿನ ಅನುದಾನ ನೀಡಲಾಗುವುದು.. ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

RELATED ARTICLES  ಕಾಣಿಸಿಕೊಂಡ ಒಕ್ಕಣ್ಣ ನಾಗಿಣಿ

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ದುಭಾಶಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗ್ವತ್, ತಾಪಂ ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ಜಿಲ್ಲಾ ಪಂಚಾಯತ ಸದಸ್ಯ ಬಸವರಾಜ ದೊಡ್ಮನಿ ಹಾಗೂ ಅಧಿಕಾರಿಗಳಾದ ಬಿಬಿ ಖಟ್ಟೂರ್, ರಾಮಚಂದ್ರ ಗಾಂವಕರ ಉಪಸ್ಥಿತರಿದ್ದರು.