ಚಂದ್ರಗಿರಿ ವಲಯ ಸಭೆ
ದಿನಾಂಕ 10/12/2017 ರವಿವಾರ
ಮುಳ್ಳೆರಿಯಾ ಮಂಡಲಾಂತರ್ಗತ ಚಂದ್ರಗಿರಿ ವಲಯ ಸಭೆಯು ಬೆಳ್ಳೆಚ್ಚಾಲು ಮರದಮೂಲೆ ಸುಬ್ರಹ್ಮಣ್ಯ ಭಟ್ ರವರ ನಿವಾಸದಲ್ಲಿ ಸಾಯಂಕಾಲ 3.00ಗಂಟೆಗೆ ಸರಿಯಾಗಿ ಜರಗಿತು.

ಸುಬ್ರಹ್ಮಣ್ಯ ಭಟ್ ಮರದಮೂಲೆ ವಲಯಾಧ್ಯಕ್ಶರ ನೇತ್ರತ್ವದಲ್ಲಿ ಧ್ವಜಾರೋಹಣ ನೆರವೇರಿಸಿದರು. ಶಂಖನಾದ ಗುರುವಂದನೆಯೊಂದಿಗೆ ಸಭೆ ಪ್ರಾರಂಭವಾಯಿತು.

ವಲಯ ಕಾರ್ಯದರ್ಶಿ ರಾಜಗೋಪಾಲ ಕೈಪ್ಪಂಗಳ ಇವರು ಸಭೆಗೆ ಎಲ್ಲರನ್ನೂ ಸ್ವಾಗತಿಸಿ ಗತ ಸಭೆಯ ವರದಿ ಸವಿವರವಾಗಿ ಮಂಡಿಸಿದರು.
ವಲಯ ಕೋಶಾಧಿಕಾರಿಗಳಾದ ಸುಬ್ರಹ್ಮಣ್ಯ ಭಟ್ ಆಲಂತಡ್ಕ ಇವರು ಲೆಕ್ಕ ಪತ್ರ ಮಂಡಿಸಿದರು.
ದೀಪಕಾಣಿಕೆ ಸಂಗ್ರಹವನ್ನು ಪ್ರತಿಯೊಂದು ಮನೆಯವರು ಅವರ ಘಟಕಾಧ್ಯಕ್ಷರಲ್ಲಿ ಜನವರಿ ತಿಂಗಳಲ್ಲಿ ನಿರ್ದಿಷ್ಟ ಸೂಚಿಸಿದ ದಿನಾಂಕಗಳಲ್ಲಿ ಸಮರ್ಪಿಸುವಂತೆ ತಿಳಿಸಲಾಯಿತು.

RELATED ARTICLES  ಮತ್ತೆ ಪ್ರಾರಂಭವಾಗಲಿದೆ ಮಳೆ..? : ಘೋಷಣೆಯಾಯ್ತು ರೆಡ್ ಅಲರ್ಟ.

ಡಿಸೆಂಬರ್ ತಿಂಗಳಲ್ಲಿ ಜರಗುವ ಅಖಿಲ ಭಾರತ ಹವ್ಯಕ ಪರಿಷತ್ ಚುನಾವಣೆ ಕುರಿತು ವಲಯ ಕಾರ್ಯದರ್ಶಿ ಮಾಹಿತಿ ನೀಡಿದರು.

ದಿನಾಂಕ 30/4/2018 ರಂದು ಜರಗುವ ಶ್ರೀಚಂದ್ರಮೌಳೀಶ್ವರ ದೆವಾಲಯದ ಬ್ರಹ್ಮಕಲಶೊತ್ಸವ ಆಮಂತ್ರಣ ಪತ್ರಿಕೆ ಯನ್ನು ಸಭೆಯಲ್ಲಿ ವಿತರಿಸಲಾಯಿತು.

ಡಿಸೆಂಬರ್ ತಿಂಗಳಲ್ಲಿ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಜರಗುವ ವಿಭಾಗೀಯ ಸಮಾವೇಶದಲ್ಲಿ ವಲಯ ಪದಾಧಿಕಾರಿಗಳು, ಘಟಕಾಧ್ಯಕ್ಶಶರು, ಶ್ರೀಕಾರ್ಯಕರ್ತರು, ಮಾತೃ ವಿಭಾಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ವಿಭಾಗವಾರು ವರದಿಯನ್ನುತರಬೆಕು, ಮಾತ್ರವಲ್ಲ ಕಾರ್ಯ ಕ್ರಮ ಯಶಸ್ವಿಯಾಗಿ ನಡೆಯುವಂತೆ ಸಹಕರಿಸಬೇಕೆಂದು ವಿನಂತಿಸಿದರು.
ಬಳಿಕ ವಿಭಾಗವಾರು ಪ್ರಮುಖರು ವರದಿಯನ್ನು ಮಂಡಿಸಲಾಯಿತು.

ದಶಂಬರ್ ತಿಂಗಳ 22 ರಂದು ಬೆಳ್ಳೆಚ್ಚಾಲು ಸುಬ್ರಹ್ಮಣ್ಯ ಭಟ್ ಮರದಮೂಲೆ ಇವರಲ್ಲಿ ಜರಗುವ ಏಕಾದಶ ರುದ್ರ, ಶಿವಪೂಜೆ, ದುರ್ಗಾ ಪೂಜೆ ಯಂದು ಕುಂಕುಮಾರ್ಚನೆ ಮಾಡುವುದೆಂದು ತೀರ್ಮಾನಿಸಿರುತ್ತಾರೆ ಆಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳಬೇಕೆಂದು ಮನೆಯವರು ವಿನಂತಿಸಿದರು.
ಮಾತೃ ವಿಭಾಗದ ಮಂಡಲ ಪದಾಧಿಕಾರಿಯಾದ ಗೀತ ದಿನೇಶ್ ಇವರು ಘಟಕ ಸಂಚಾಲಕಿಯರ ಕೆಲಸ ಕಾರ್ಯಗಳು ಅದರ ಔಚಿತ್ಯದ ಕುರಿತು ಮಾಹಿತಿ ನೀಡಿದರು.

RELATED ARTICLES  ಸರಕಾರಿ ನೌಕರರಿಗೆ ಸಿಹಿ ಸುದ್ದಿ: 6ನೇ ವೇತನ ಆಯೋಗಕ್ಕೆ ಗ್ರೀನ್ ಸಿಗ್ನಲ್

ವಲಯ ಅಧ್ಯಕ್ಷರಾದ ಬಾಲಕೃಷ್ಣ ಭಟ್ ಅಮ್ಮಂಕಲ್ಲು ಇವರು ವಲಯ ಯೋಜನೆಯ ಬಗ್ಗೆ ಮಾಹಿತಿಗಳನ್ನಿತ್ತರು
ರಾಮತಾರಕಮಂತ್ರ ಶಾಂತಿಮಂತ್ರ, ಶಂಖನಾದ, ಧ್ವಜ ಅವತರಣದೊಂದಿಗೆ ಸಭೆ ಮುಕ್ತಾಯವಾಯಿತು.

ವರದಿ ಚಿತ್ರ (ಎಸ್. ಕೆ. ಪಿ. ಮುಂಡೊಳುಮೂಲೆ) ಶಿಶ್ಯಮಾಧ್ಯಮ ಚಂದ್ರಗಿರಿ ವಲಯ.