ಕಾರವಾರ: ಮೊದಲ ಹಂತದಲ್ಲಿ ಜಿಲ್ಲೆಯ 20 ಆಯ್ದ ಯುವಕ ಅಥವಾ ಯುವತಿಯರಿಗೆ ತೆರೆದ ನೀರಿನಲ್ಲಿ ಧುಮುಕುವ ತರಬೇತಿ (Open water driver course) ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ತರಬೇತಿಗೆ ತಗಲುವ ವೆಚ್ಚವನ್ನು ಭರಿಸಲು ಕರಾವಳಿ ಉತ್ಸವ ಸಮಿತಿ ತೀರ್ಮಾನಿಸಿದ್ದು, ಇದರ ಆಯೋಜನೆಯ ಜವಾಬ್ದಾರಿಯನ್ನು ಜಿಲ್ಲಾ ಪ್ರವಾಸಿ ಸ್ಥಳಗಳ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿಗೆ ನೀಡಲಾಗಿದೆ.
ಡಿಪ್ಲೋಮಾ ಅಥವಾ ಪಿಯುಸಿ (ವಿಜ್ಞಾನ) ವಿದ್ಯಾರ್ಹತೆ ಹೊಂದಿರುವ, 200 ಮೀ. ನಿರಂತರ ಈಜು ಬರುವ 18 ರಿಂದ 35 ವರ್ಷ ವಯೋಮಿತಿ ಒಳಗಿನವರು ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಅವರು ಕನಿಷ್ಟ 60 ಕೆ.ಜಿ ತೂಕ ಹಾಗೂ 165 ಸೆಂ.ಮೀ. ಎತ್ತರ ಇರಬೇಕು.
ಇದೇ 21 ರಂದು ಮುರ್ಡೇಶ್ವರದ ಆರ್‌ಎನ್‌ಎಸ್ ಗಾಲ್ಫ್ ರೆಸಾರ್ಟ್‌ನ ಈಜು ಕೊಳದಲ್ಲಿ ಈಜು ಪರೀಕ್ಷೆ ನಡೆಯಲಿದ್ದು, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಹಾಗೂ ಆಸಕ್ತರು ಮೂಲ ದಾಖಲಾತಿಗಳೊಂದಿಗೆ ಹಾಗೂ ಈಜು ಸಮವಸ್ತ್ರದೊಂದಿಗೆ ನೇರವಾಗಿ ಬೆಳಿಗ್ಗೆ 10ಕ್ಕೆ ಅಲ್ಲಿ ಹಾಜರಿದ್ದು, ಸಾಮರ್ಥ್ಯ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದು.