ಭಟ್ಕಳ: ದಕ್ಷಿಣ ಭಾರತದ ಪ್ರಮುಖ ಕೊಯಮತ್ತೂರಿನ ರ್ಯಾಪಿಡ್ ಪೋಲೀಸ್ ಪೋರ್ಸನ 130 ಸಿಬ್ಬಂದಿ ಸೇರಿದಂತೆ ಅಧಿಕಾರಿಗಳು ಹಾಗೂ ಭಟ್ಕಳ ಪೋಲೀಸ್ ಅಧಿಕಾರಿಗಳು ಮತ್ತು ರಾಜ್ಯದ ವಿವಿಧೆಡೆಯಿಂದ ಬಂದ ಪೋಲೀಸ್ ಅಧಿಕಾರಿಗಳು ತಾಲೂಕಿನ ಜನರಲ್ಲಿದ್ದ ಭಯ ದೂರ ಮಾಡಲು ಪಥ ಸಂಚಲನ ನಡೆಸಿ ಪೋಲೀಸ್ ಬಲ ಪ್ರದರ್ಶಿಸಿದರು.

ಜಿಲ್ಲೆಯಾದ್ಯಂತ ಕಳೆದ 15 ದಿನದ ಹಿಂದೆ ಅಶಾಂತಿಯ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿಗೆ ದಕ್ಷಿಣ ಭಾರತದ ಪ್ರಮುಖ ಕೊಯಮತ್ತೂರಿನ ರ್ಯಾಪಿಡ್ ಪೋಲೀಸ್ ಪೋರ್ಸನ ಪಥ ಸಂಚಲನ ನಡೆಸಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಹೆಚ್ಚುವರಿ ಎಎಸ್ಪಿ ನೇತೃತ್ವದಲ್ಲಿ ತಾಲೂಕಿನ ಪೋಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಳೊಂದಿಗೆ ರ್ಯಾಪಿಡ್ ಪೋಲೀಸ್ ಪೋರ್ಸನ ಅಧಿಕಾರಿಗಳು, ಸಿಬ್ಬಂದಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು. ಕೇರಳ, ತಮಿಳುನಾಡು ಆಂಧ್ರ, ಕರ್ನಾಟಕ ಮೂಲದ ಅಧಿಕಾರಿಗಳು ಕೇಂದ್ರೀಯ ಮೀಸಲು ಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾಲೂಕಿನ ಸಂಶುದ್ದೀನ್ ಸರ್ಕಲ್‍ನಿಂದ ತೆರಳಿದ ಪಥ ಸಂಚಲನ ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಮಾರಿಗುಡಿ ದೇವಸ್ಥಾನ, ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಚೌಕ ಬಜಾರ್ ಮಾರ್ಗವಾಗಿ ಸುಲ್ತಾನ್ ಸ್ಟ್ರೀಟ್, ನಗರ ಪೋಲೀಸ್ ಠಾಣೆ ಮಾರ್ಗವಾಗಿ ಪುನಃ ಸಂಶುದ್ದೀನ್ ಸರ್ಕಲ್‍ನಲ್ಲಿ ಕೊನೆಗೊಂಡಿತು.

RELATED ARTICLES  ಲಾಡ್ಜಗೆ ಬಾ ಎಂದು ಕಾಟ ಕೊಡುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರಿಂದ‌ ಧರ್ಮದೇಟು.

ಈ ವಿಶೇಷ ರ್ಯಾಪಿಡ್ ಪೋರ್ಸಿ ತಂಡವು ಕಾರು, ಮಿಲಿಟರಿ ಮಾದರಿ ವಾಹನಗಳಲ್ಲಿ ಬಂದೂಕುಧಾರಿಗಳಾಗಿ ನಗರದ ಪ್ರಮುಖ ಸ್ಥಳಕ್ಕೆ ತೆರಳಿ ಜನರಲ್ಲಿದ್ದ ಆತಂಕ ದೂರ ಮಾಡಿ ಪೋಲೀಸ್ ಬಲಪ್ರದರ್ಶನ ಇದೆಯೆಂಬ ವಿಶ್ವಾಸ ಮೂಡಿಸಿದರು. ಪಥ ಸಂಚಲನದಲ್ಲಿ ರ್ಯಾಪಿಡ್ ಪೋಲೀಸ್ ಪೋರ್ಸನ ಎಎಸ್ಪಿ ಆರ್. ಸುಂದರ ಕುಮಾರ್, ಇಬ್ಬರು ಡಿವೈಎಸ್ಪಿಗಳಾದ ರಾಬೀನ್ ಪಿಜೆ, ವಿಜಯಲಕ್ಷ್ಮೀ ಸೇರಿದಂತೆ 16 ಮಹಿಳಾ ಸಿಬ್ಬಂದಿ ಸೇರಿ ಒಟ್ಟು 130 ಸಿಬ್ಬಂದಿಗಳು ಮತ್ತು ಜಿಲ್ಲಾ ಪೋಲೀಸ್ ಹೆಚ್ಚುವರಿ ಎಸ್ಪಿ ಗೋಪಾಲ್ ಬ್ಯಾಕೋಡ್, ಭಟ್ಕಳ ಡಿವೈಎಸ್ಪಿ ಕೆ.ಎ.ಶಿವಕುಮಾರ್, ನರಗುಂದ ಡಿವೈಎಸ್ಪಿ ಗುರುಮಾರ್ತುರ್, ಸಿಪಿಐ ಕುಮಾರಸ್ವಾಮಿ ಸೇರಿದಂತೆ ನಗರ, ಗ್ರಾಮೀಣ ಹಾಗು ಮುರ್ಡೇಶ್ವರ ಪಿಎಸೈಗಳು ಹಾಗೂ 200 ಕೆಎಸ್‍ಆರ್‍ಪಿ ತುಕಡಿ, 250 ಸಿವಿಲ್ ಪೋಲೀಸರು ಇದ್ದರು

RELATED ARTICLES  ವೈಜ್ಞಾನಿಕ ಚಿಂತನೆ ಬೆಳೆಸಿ- ಡಾ. ರವಿರಾಜ ಕಡ್ಲೆ