ಕುಮಟಾ : ಬೆಂಗಳೂರಿಗೆ ಪ್ರಯಾಣಿಸುವ ಗೋಕರ್ಣ, ಕುಮಟಾ, ಹೊನ್ನಾವರ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಸ್ಲೀಪರ್ ಕೋಚ್ ಬಸ್ಸುಗಳನ್ನು ಒದಗಿಸುವಲ್ಲಿ ಶಾಸಕಿ ಶಾರದಾ ಶೆಟ್ಟಿ ಯಶಸ್ವಿಯಾಗಿದ್ದಾರೆ .ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಅವರು ಈ ಬಸ್ ವ್ಯವಸ್ಥೆ ಮಾಡಿಸಿದ್ದಾರೆ.ಎರಡು ಬಸ್ಗಳು ಗೋಕರ್ಣದಿಂದ ಬೆಂಗಳೂರಿಗೆ ದಿನನಿತ್ಯ ಸಂಚರಿಸಲಿದೆ.

ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಶಾಸಕಿ ಶಾರದಾ ಮೋಹನ್ ಶೆಟ್ಟಿ ಬೆಂಗಳೂರಿಗೆ ಪ್ರಯಾಣಿಸುವ ಗೋಕರ್ಣ ಕುಮಟಾ ಹೊನ್ನಾವರ ಜನತೆಯ ಬಹುದಿನದ ಬೇಡಿಕೆಯನ್ನು ಈಡೇರಿಸುವುದಾಗಿ ಆಶ್ವಾಸನೆ ನೀಡಿದರು. ಇದೀಗ ಅವರು ಜನತೆಗೆ ಉಪಯುಕ್ತ ವ್ಯವಸ್ಥೆ ಕಲ್ಪಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ.

RELATED ARTICLES  ಅಣ್ಣ ತಂಗಿ ಒಂದೇ ದಿನ ಮರಣ: ಕುಮಟಾದಲ್ಲಿ ನಡೆಯಿತೊಂದು ಘಟನೆ.

ಗೋಕರ್ಣದಿಂದ ಬೆಂಗಳೂರಿಗೆ ತೆರಳಲು ಸ್ಲೀಪರ್ ಕೋಚ್ ಖಾಸಗಿ ಬಸ್ಸುಗಳನ್ನು ಹೊರತುಪಡಿಸಿದರೆ ಸರ್ಕಾರದ ಯಾವುದೇ ರೀತಿಯ ಸ್ಲೀಪರ್ ಕೋಚ್ ಬಸ್ಸುಗಳು ಇಲ್ಲವಾಗಿತ್ತು . ಹೀಗಾಗಿ ಗೋಕರ್ಣದಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಸ್ಲೀಪರ್ ಕೋಚ್ ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಶಾಸಕರಲ್ಲಿ ವಿನಂತಿ ಮಾಡಿಕೊಂಡಿದ್ದರು . ಅವರ ಮನವಿಗೆ ಸ್ಪಂದಿಸಿದ ಶಾಸಕರು ಇದೀಗ ಬಸ್ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಿದ್ದಾರೆ .

ಪ್ರತಿದಿನ ರಾತ್ರಿ ಎಂಟು ಗಂಟೆಗೆ ಗೋಕರ್ಣದಿಂದ ತೆರಳುವ ಈ ಬಸ್ ಕುಮಟಾ ಹೊನ್ನಾವರ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರು ತಲುಪಲಿದೆ . ಈ ವ್ಯವಸ್ಥೆಯಿಂದಾಗಿ ಅನೇಕ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ .

RELATED ARTICLES  ಜನರಿಗಾಗಿ ನಾವು ಕಾರ್ಯ ಮಾಡುತ್ತಿದ್ದೇವೆ : ದಿನಕರ‌ ಶೆಟ್ಟಿ.

IMG 20171221 WA0002

ಇಂದು ಕುಮಟಾ ಬಸ್ ನಿಲ್ದಾಣದಲ್ಲಿ ಈ ಹೊಸ ಬಸ್ಸುಗಳಿಗೆ ಪೂಜೆ ಸಲ್ಲಿಸಿ ನಂತರ ಚಾಲನೆ ನೀಡಿದ ಶಾಸಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜನರಲ್ಲಿ ವಿನಂತಿಸಿಕೊಂಡರು .

ಸಾಮಾನ್ಯರಿಗೆ ಹಾಗೂ ಬಡ ಜನತೆಗೆ ಅನುಕೂಲವಾಗುವ ದೃಷ್ಟಿಯಿಂದ ಈ ವ್ಯವಸ್ಥೆ ಕಲ್ಪಿಸಿದದ ಶಾಸಕರ ಕಾರ್ಯಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ .

ಇದೇ ರೀತಿಯಾಗಿ ಜನತೆಯ ಸೇವೆ ಹಾಗೂ ಸಮಾಜಕ್ಕೆ ಉಪಯುಕ್ತ ಕಾರ್ಯಗಳು ಶಾಸಕರಿಂದ ನಡೆಯುತ್ತಲೇ ಇರಲಿ ಎನ್ನುವುದು ಜನತೆಯ ಆಶಯವಾಗಿದೆ .