ಕುಮಟಾ : ಸಾಮಾಜಿಕ ಪರಿಶೋಧನೆಯಲ್ಲಿ ಸಾಮಾಜಿಕ ಪರಿಶೋಧನಾ ಸಂಯೋಜಕರಷ್ಟೇ ಗ್ರಾಮ ಸಂಪನ್ಮೂಲ ವ್ಯಕ್ತಿಗಳ ಪಾತ್ರ ಕೂಡ ಅತ್ಯಂತ ಮಹತ್ವವಾದ್ದು. ಈ ಕಾರಣದಿಂದ ಅವರಿಗೆ ತರಬೇತಿ ನೀಡುತ್ತಿರುವುದು ಮಹತ್ವಪೂರ್ಣವಾಗಿದೆ ಎಂದು ಕುಮಟಾ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಹೇಶ ಕುರಿಯವರ್ ಹೇಳಿದರು. ಅವರು ಮಂಗಳವಾರ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕುಮಟಾದಲ್ಲಿ ಮಹಿಳಾ ಸ್ವ ಸಹಾಯ ಸಂಘದಿಂದ ಆಯ್ಕೆಯಾದ ಸದಸ್ಯರಿಗೆ ನಾಲ್ಕು ದಿನಗಳ ವಸತಿ ಸಹಿತ ಗ್ರಾಮ ಸಂಪನ್ಮೂಲ ವ್ಯಕ್ತಿಗಳ ತರಭೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

RELATED ARTICLES  ದಾಂಡೇಲಿಯಲ್ಲಿ ಸಾಮಾನ್ಯ ಸಭೆ. ಮಹತ್ವದ ಅಂಶಗಳ ಚರ್ಚೆ.

ಎಂ.ಓ.ಆರ್.ಡಿ. ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ, ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು,ಜಿಲ್ಲಾ ಪಂಚಾಯತ ಉತ್ತರ ಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ತರಬೇತಿ ಆಯೋಜಿಸಲಾಗಿತ್ತು.

ಸಾಮಾಜಿಕ ಪರಿಶೋಧನೆಯಲ್ಲಿ ಮಹಿಳೆಯರ ಪತ್ರ ಹಿರಿದ್ದಾಗಿದ್ದು, ಅವರು ಸಕ್ರೀಯವಾಗಿ ತೊಡಗಿಕೊಂಡರೆ ಉತ್ತಮ ಪಲಿತಾಂಶ ಕಾಣಬಹದಾಗಿದೆ ಎಂದು ತರಬೇತಿ ಕೇಂದ್ರದ ನಿರ್ದೇಶಕರಾದ ಮುನಿಸ್ವಾಮಿ ನುಡಿದರು.

ತರಬೇತಿಯ ಸಂಪೂರ್ಣ ಪ್ರಯೋಜನ ಪಡೆಯುವಂತೆ ಮತ್ತು ಈ ಸಂದರ್ಬದಲ್ಲಿ ತಮ್ಮ ಯಾವುದೇ ಗೊಂದಲಗಳಿಗೆ ಪರಿಹಾರ ತಾಲೂಕು ಮತ್ತು ಜಿಲ್ಲಾ ಸಂಯೋಜಕರಿಂದ ಪಡೆದುಕೊಳ್ಳಿ ಎಂಬ ಕಿವಿಮಾತನ್ನು ಜಿಲ್ಲಾ ಸಂಯೋಜಕರಾದ ಗಣಪತಿ ಹೆಗಡೆ ತಿಳಿಸಿದರು. ತಾ.ಪಂ. ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ನಾಗರಾಜ್ ಮಾತನಾಡಿದರು.

RELATED ARTICLES  ಸಂಪನ್ನವಾದ ಧಾರೇಶ್ವರ ಜಾತ್ರೆ: ಹರಿದುಬಂದ ಜನಸಾಗರ

ಈ ಸಂದರ್ಭದಲ್ಲಿ ಹೊನ್ನಾವರ ತಾಲೂಕು ಸಂಯೋಜಕ ಉಮೇಶ ಮುಂಡಳ್ಳಿ, ಹೊನ್ನಾವರ ತಾಲೂಕು ಸಂಯೋಜಕ ಚಿದಾನಂದ ಗೌಡ, ಯಲ್ಲಾಪುರ ಸಂಯೋಜಕ ಗಿರಿಧರ ನಾಯ್ಕ, ಹಾಜರಿದ್ದರು. ಅಂಕೋಲಾ ಸಂಯೋಜಕಿ ಗೀತಾ ಗಾಂವಕರ್ ಸ್ವಾಗತಿಸಿದರು ಕುಮಟಾ ತಾಲೂಕು ಸಂಯೋಜಕ ನಾಗರಾಜ ಹಬ್ಬು ಸ್ವಾಗತಿಸಿದರು.