ಯಲ್ಲಾಪುರ: ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸಾಮಾನ್ಯ ಸಭೆಯಲ್ಲಿ ನಡೆಯಿತು. ಉಜ್ವಲ ಯೋಜನೆಯಿಂದ ವಂಚಿತರಾಗುತ್ತಿರುವವರ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. 2011ರ ಜನಗಣತಿಯಲ್ಲಿ ಬಿಪಿಇಎಲ್ ಕಾರ್ಡ್ ಗೆ ಗುರುತಿಸಲ್ಪಟ್ಟವರಿಗೆ ಮಾತ್ರ ಉಜ್ವಲ ಯೋಜನೆಯಡಿ ಗ್ಯಾಸ್ ವಿತರಣೆಗೆ ಅವಕಾಶ ನೀಡಲಾಗಿದೆ. ಆದರೆ ಅದಕ್ಕೂ ಪೂರ್ವದಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ ಹಲವರು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಅಂಥವರಿಗೂ ಸೌಲಭ್ಯ ಸಿಗುವಂತಾಗಬೇಕೆಂದು ತಾ.ಪಂ ಸದಸ್ಯ ನಾಗರಾಜ ಕವಡಿಕೆರೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷೆ ಭವ್ಯಾ ಶೆಟ್ಟಿ, ಉಜ್ವಲ ಯೋಜನೆಯ ಗ್ಯಾಸ್ ವಿತರಣೆ ಕಾರ್ಯಕ್ರಮಗಳಿಗೆ ತಮ್ಮನ್ನು ಆಹ್ವಾನಿಸುತ್ತಿಲ್ಲ. ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನೂ ನನ್ನ ಬಳಿ ತರಬೇಡಿ, ನೀವೇ ಪರಿಹರಿಸಿಕೊಳ್ಳಿ ಎಂದು ಖಾರವಾಗಿ ನುಡಿದರು.

RELATED ARTICLES  ಸಿಂಚನಾ ಹೆಗಡೆ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕೃಷಿ ಇಲಾಖೆಯ ಸಿಬ್ಬಂದಿ ಹರ್ಷ ಲಿಂಗದಾಳ ರೈತರ ಸಬ್ಸಿಡಿ ಹಣವನ್ನು ತಮ್ಮ ಖಾತೆಯಲ್ಲಿಟ್ಟುಕೊಂಡು ವಂಚಿಸಿದ ಪ್ರಕರಣದ ಬಗ್ಗೆಯೂ ಚರ್ಚೆ ನಡೆಯಿತು. ಸಭೆಗೆ ಹಾಜರಾಗದ ಸಹಾಯಕ ಕೃಷಿ ನಿರ್ದೇಶಕ ವಿ. ಜಿ. ಹೆಗಡೆ ವಿರುದ್ಧ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಒಂದು ವರ್ಷದ ಹಿಂದೆ ಪ್ರಕರಣ ಬೆಳಕಿಗೆ ಬಂದಿದ್ದರೂ ಆಂತರಿಕ ತನಿಖೆಯ ನೆಪದಲ್ಲಿ ಜನಪ್ರತಿನಿಧಿಗಳಿಗೂ ಮಾಹಿತಿ ನೀಡದೇ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನವನ್ನು ಸಹಾಯಕ ಕೃಷಿ ನಿರ್ದೇಶಕರು ನಡೆಸುತ್ತಿದ್ದಾರೆ. ಕೊನೆಗೆ ಅನಿವಾರ್ಯವಾಗಿ ದೂರು ನೀಡಿದ್ದಾರೆ. ಅವ್ಯವಹಾರದ ಬಗ್ಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಇಂತಹ ಅಧಿಕಾರಿಗಳನ್ನು ತಾಲೂಕಿನಿಂದ ವರ್ಗಾಯಿಸಬೇಕೆಂದು ಆಗ್ರಹಿಸಿದರು. ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದ ಅಶೋಕ ತಿನ್ನೇಕರ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಅವರ ಪತ್ನಿ ಕವಿತಾ ತಿನ್ನೇಕರ್ ಆಯ್ಕೆಯಾದರು. ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಸದಸ್ಯ ನಟರಾಜ ಗೌಡರ್ ಅವರ ಹೆಸರು ಪ್ರಸ್ತಾಪವಾಯಿತು. ಕೊನೆಗೆ ಸರ್ವಾನುಮತದಿಂದ ಕವಿತಾ ತಿನ್ನೇಕರ ಅವರು ಆಯ್ಕೆಯಾದರು.

RELATED ARTICLES  ಬ್ರಿಟಿಷರೊಡನೆ ಹೋರಾಡುತ್ತ ದೇಶದಲ್ಲಿಯೇ ಮೊದಲು ಸಾವನ್ನಪ್ಪಿದ ದೊರೆ ಟಿಪ್ಪು: ಸಚಿವ ದೇಶಪಾಂಡೆ.