ಭಟ್ಕಳ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬಿ.ಜಿ.ಎಸ್.ಕೇಂದ್ರೀಯ ವಿದ್ಯಾಲಯದ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಂಗವಾಗಿ ತಾಲೂಕಾ ಮಟ್ಟದಲ್ಲಿ ವಿವಿಧ ಸ್ಪರ್ಧೆಗಳು ಇಲ್ಲಿನ ಆನಂದಾಶ್ರಮ ಸಂಯುಕ್ತ ಪ.ಪೂ.ಕಾಲೇಜಿನ ಆಡಿಟೋರಿಯಮ್ ನಲ್ಲಿ ಜರುಗಿತು. ಕಾರ್ಯಕ್ರಮವನ್ನು ಬೆಳ್ಕೆ ಪ್ರೌಢಶಾಲಾ ವಿದ್ಯಾರ್ಥಿ ಅಭಿಷೇಕ ನಾಯ್ಕ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಮಕ್ಕಳಿಗಾಗಿಯೇ ವಿಶೇಷವಾಗಿ ಇಂಥ ಕಾರ್ಯಕ್ರಮ ಸಂಘಟಿಸಿರುವುದ ಅತ್ಯಂತ ಖುಷಿಕೊಡುವ ಸಂಗತಿ. ಸಾಹಿತ್ಯ ಪರಿಷತ್ತು ಹಾಗೂ ಬಿ.ಜಿ.ಎಸ್.ಶಿಕ್ಷನ ಸಂಸ್ಥೆ ಇಂಥ ಅಪರೂಪದ ಅವಕಾಶ ಕಲ್ಪಸಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆನಂದಾಶ್ರಮ ಪ್ರೌಢಶಾಲಾ ವಿದ್ಯಾರ್ಥಿ ರಾಹುಲ ಯಾಜಿ ಮಾತನಾಡಿ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಸಾಹಿತ್ಯಿಕ ಪರಂಪರೆ ಹೊಂದಿದ, ಅತ್ಯಂತ ಹೆಚ್ಚು ಜ್ಯಾನಪೀಠ ಪ್ರಶಸ್ತಿ ಪಡೆದ,ಶಾಸ್ತ್ರೀಯ ಸ್ಥಾನಮಾನ ಹೊಂದಿದ ಸುಂದರ ಭಾಷೆಯಾಗಿದೆ. ಕನ್ನಡಕ್ಕಾಗಿ ನಾವು ದೊಡ್ಡ ದೊಡ್ಡ ಕಾರ್ಯಗಳನ್ನು ಮಾಡಲಾಗದಿದ್ದರೂ ಕನ್ನಡದ ಸಾಹಿತ್ಯವನ್ನು ಓದುವ, ತಾಯ್ನುಡಿಗಾಗಿ ಹೃದಯಪೂರ್ವಕವಾದ ಅಭಿಮಾನ ಹೊಂದಿದ್ದರೆ ಸಾಕು ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಆನಂದಾಶ್ರಮ ಪ್ರೌಢಶಾಲೆಯ ಪ್ರಾಂಶುಪಾಲೆ ಸಿಸ್ಟರ್ ಥೆರೇಸಾ ರವರು ಮಾತನಾಡಿ ಸಾಹಿತ್ಯ ನಮ್ಮ ಮನಸನ್ನು ಅರಳಿಸಿ, ವ್ಞಕ್ತಿತ್ವ ರೂಪಿಸಿ ಬದುಕನ್ನು ಹಸನಾಗಿಸಿತ್ತದೆ. ಸಾಹಿತ್ಯ ಪರಿಷತ್ತು ಹಾಗೂ ಬಿ.ಜಿ.ಎಸ್. ಶಿಕ್ಷಣ ಸಂಸ್ಥೆ ಮಕ್ಕಳಿಗಾಗಿ ಉತ್ತಮ ಕಾರ್ಯಕ್ರಮ ಸಂಘಟಿಸಿದುದಕ್ಕಾಗಿ ಅಭಿನಂದಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಆಶಯ ನುಡಿಗಳನ್ನಾಡಿ ಮಕ್ಕಳಲ್ಲಿ ಸಾಹಿತ್ಯದ ಒಲವನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸುವ ಮೂಲಕ ಅವರ ವ್ಯಕ್ತಿತ್ವ ವಿಕಾಸಕ್ಕೆ ನೆರವಾಗುವುದರ ಜೊತೆಗೆ ಅವರಲ್ಲಿನ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯನ್ನೊದಗಿಸಿವುದಕ್ಕಾಗಿಯೇ ಇಂಥ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ ಎಂದು ನುಡಿದರು.

RELATED ARTICLES  ಪ್ರಾರಂಭವಾಯ್ತು ವೀಸ್ಟಾ ಡೋಮೋ ರೈಲಿನ ಪ್ರಯಾಣ

IMG 20171221 125938

ಕಾರ್ಯಕ್ರಮದ ವೇದಿಕೆಯಲ್ಲಿ ಬಿ.ಜ.ಎಸ್. ಶಿಕ್ಷಣ ಸಂಸ್ಥೆಯ ಶಿಕ್ಷಕ ಸಂದೀಪ ನಾಯ್ಕ, ಆನಂದಾಶ್ರಮ ಪ್ರೌಢಶಾಲಾ ಶಿಕ್ಷಕ ಫೆಡ್ರಿಕ್ ಟೆಲ್ಲಿಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆನಂದಾಶ್ರಮ ಪ್ರೌಢ ಶಾಲಾವಿದ್ಯಾರ್ಥಿಗಳು ನಾಡಗೀತೆ ಹಾಡಿದರೆ ಶ್ರೇಯಾ ವಿ.ನಾಯಕ ಸ್ವಾಗತಿಸಿದರು. ನಾಗೇಂದ್ರ ನಾಯ್ಕ ಮತ್ತು ಜಗದೀಶ ನಾಯ್ಕ ಕಾಯಕ್ರಮ ನಿರ್ವಹಿಸಿದರು. ಕು.ವರೇಣ್ಯ ನಾಯಕ ವಂದಿಸಿದರು. ಕಾರ್ಯಕ್ರಮದಲ್ಲಿ ಕಸಾಪ ಸಂಘಟನಾ ಕಾರ್ಯದರ್ಶಿ ಪ್ರಕಾಶ ಶಿರಾಲಿ, ಪ್ರಶಿಕ್ಷಕರಾದ ಜಗದೀಶ ನಾಯ್ಕ, ಬೇಬಿ ಮೊಗೇರ, ಸ್ವಾತಿ ಮೆಸ್ತ ಮತ್ತು ರಾಜೇಶ್ವರಿ ನಾಯ್ಕ ಮತ್ತು ಆನಂದಾಶ್ರಮ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಗಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಆನಂದಾಶ್ರಮ ಪ್ರೌಢಶಾಲೆಯ ಶ್ರೇಯಾ ವಿ.ನಾಯಕ, ನ್ಯೂ ಇಂಗ್ಲೀಷ ಪ್ರೌಢಶಾಲೆಯ ರೂಪಿತಾ ಭಟ್ ಅನುಕೃಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದರೆ,ಸೋನಾರಕೇರಿ ಸರಕಾರಿ ಪ್ರೌಢ ಶಾಲೆಯ ವಿಧ್ಯಾರ್ಥಿನಿ ಅಂಕಿತಾ ದೇವಡಿಗ ಹಾಗೂ ಬೀನಾ ವೈದ್ಯ ಇಂಟರ್ ನ್ಯಾಶನಲ್ ಶಾಲೆಯ ಕಾವ್ಯ ಪಂಡಿತ್ ತ್ರತೀಯ ಸ್ಥಾನ ಪಡೆದರು.

RELATED ARTICLES  ಕತ್ತಲೆಯ ಮನೆಯಲ್ಲಿ ಬೆಳಕಿನ ಕಿರಣ ಮೂಡಿಸಿದ್ದಾರೆ ನಾಗರಾಜ ನಾಯ್ಕ ತೊರ್ಕೆ!

ಭಾಷಣ ಸ್ಪರ್ಧೆಯಲ್ಲಿ ಸರ್ಕಾರಿ ಪ್ರೌಢ ಶಾಲೆ ಬೆಳ್ಕೆಯ ಅಭಿಷೇಕ ನಾಯ್ಕ, ಆನಂದಶ್ರಮ ಪ್ರೌಢಶಾಲೆಯ ರಾಹುಲ ಯಾಜಿ, ಬೀನಾ ವೈದ್ಯ ಇಂಟರ್ ನ್ಯಾಶನಲ್ ಶಾಲೆಯ ಅಂಕತಾ ಹೆಗಡೆ ಅನುಕ್ರಮವಾಗಿ ಪ್ರಥಮ ದ್ವಿತೀಯ ಹಾಗು ತೃತೀಯ ಸ್ಥಾನ ಪಡೆದರು. ಕವನ ವಾಚನದಲ್ಲಿ ಆನಂದಶ್ರಮ ಪ್ರೌಢ ಶಾಲೆಯ ದರ್ಶನ್, ಬಿನಾ ವೈದ್ಯ ಶಾಲೆಯ ಧನ್ಯಶ್ರೀ, ಆನಂದಾಶ್ರಮ ಪ್ರೌಢ ಶಾಲೆಯ ಅಂಕಿತಾ ಅನುಕ್ರಮವಾಗಿ ಪ್ರಥಮ ದ್ವಿತೀಯ ಹಾಗು ತೃತೀಯ ಸ್ಥಾನ ಪಡೆದರು. ಕಥಾ ವಾಚನದಲ್ಲಿ ತೆಂಗಿನಗುಂಡಿ ಸರ್ಕಾರಿ ಪ್ರೌಢಶಾಲೆಯ ಮಧು ಎಮ್.ನಾಯ್ಕ ಪ್ರಥಮ ಸ್ಥಾನ ಗಳಿಸಿದ್ದಾರೆ.ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಸ್ತಿ ಪತ್ರ ಹಾಗೂ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. ಈ ಎಲ್ಲ ವಿಜೇತರು ಇದೇ ಬರುವ 23ನೇ ತಾರೀಖಿನ ಶನಿವಾರದಂದು ಕುಮಟಾ ತಾಲೂಕಿನ ಮಿರ್ಜಾನನಲ್ಲಿರುವ ಬಿ,ಜಿ.ಎಸ್.ಕೇಂದ್ರೀಯ ವಿದ್ಯಾಲಯದಲ್ಲಿ ನಡೆಯುವ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಭಟ್ಕಳ ಕಸಾಪ ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ ಅಭಿನಂಧಿಸಿದ್ದಾರೆ.