ಇಂದಿನ ಆಧುನಿಕ ಲೈಫ್ ಸ್ಟೈಲ್ನಲ್ಲಿ ಆರೋಗ್ಯ ಬಹುಮುಖ್ಯ. ದಿನನಿತ್ಯ ಒತ್ತಡದ ಕೆಲಸ, ಫಾಸ್ಟ್ಮೂವಿಂಗ್ ಲೈಫ್ಗೆ ಸದೃಢ ಆರೋಗ್ಯ ತುಂಬಾ ಅವಶ್ಯ. ಆದ್ದರಿಂದಲೇ ಯಾವುದೇ ಖರ್ಚಿಲ್ಲದೆ ಸರಳ ತುಂಬಾ ಸುಲಭವಾಗಿ ಮಾಡಬಹುದಾಂತಾ ವ್ಯಾಯಾಮವೆಂದರೆ ಅದುವೇ ವಾಕಿಂಗ್..!ಕಿರುಚುವ ಅಲಾರಾಮ್ ತಲೆಯ ಮೇಲೆ ಮೊಟಕಿ, ಹೊದ್ದು ಮಲಗುವವರಿಗೆ ವಾಕಿಂಗ್ನ ಮಹಿಮೆ, ಪ್ರಯೋಜನಗಳು ಅರಿವಾಗಲು ಸಾಧ್ಯವೇ ಇಲ್ಲ. ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರಿಗೂ ಸಹ ವಾಕಿಂಗ್ಗಿಂತ ಬೇರೆ ಯಾವ ವ್ಯಾಯಾಮಗಳಿಲ್ಲ. ನಿಮ್ಮ ವಾಹನಕ್ಕೆ ದಿನದಲ್ಲಿ ಕೆಲ ಸಮಯವಾದರೂ ವಿಶ್ರಾಂತಿ ನೀಡಿ, ನಿಮ್ಮ ಕಾಲುಗಳಿಗೆ ಚಾÀಲನೆ ನೀಡಿ.ನಡಿಗೆ ಹೃದಯಕ್ಕೆ ಬೆಸ್ಟ್ ಫ್ರೆಂಡ್ಕಾಲುಗಳು ನಮ್ಮ ಎರಡನೆಯ ಹೃದಯವೆಂಬ ಮಾತಿನಲ್ಲಿ ಅತಿಶಯೋಕ್ತಿಯಿಲ್ಲವೆನ್ನಬಹುದು.

ವಾರಕ್ಕೆ ಐದು ದಿನಗಳು ಪ್ರತಿನಿತ್ಯವೂ 30-40 ನಿಮಿಷಗಳಷ್ಟು ಕಾಲ್ನಡಿಗೆಯನ್ನು ಸಾಧಿಸಿದ್ದೇ ಆದರೆ ಹೃದ್ಯೋಗ ನಿಮಿತ್ತ ಸಾವನ್ನಪ್ಪುವ ಸಂಭವ ಅರ್ಧದಷ್ಟು ಕುಂಠಿತಗೊಳ್ಳುತ್ತದೆ. ಹೃದಯಾಘಾತ ಹಾಗೂ ಬ್ಯೆಪಾಸ್ ಚಿಕಿತ್ಸೆಯಾಗಿರುವವರೂ ಬಲು ಬೇಗನೆ ಚೇತರಿಸಿಕೊಳ್ಳಲು ವಾಕಿಂಗ್ ಸಹಾಯ ಮಾಡುತ್ತದೆ. ದ್ಯೆಹಿಕ ಆರೋಗ್ಯ, ಮಾನಸಿಕ ಆರೋಗ್ಯ ಹಾಗೂ ಭಾವನಾತ್ಮಕ ಆರೋಗ್ಯಗಳನ್ನು ಸಮಸ್ಥಿತಿಯಲ್ಲಿಡಲು ದಿವ್ಯೌಷಧವಾಗಿರುವ ವಾಕಿಂಗ್, ಬೆಳಗಿನ ತಾಜಾ ಗಾಳಿ ಶ್ವಾಸಕೋಶಗಳನ್ನು ಪ್ರವೇಶಿಸುತ್ತಿದ್ದಂತೆಯೇ, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿ.ಆಮ್ಲಜನಕ, ಸ್ನಾಯುಗಳಿಗೆ ಲಭ್ಯವಾಗುವದರಿಂದ, ರಕ್ತನಾಳಗಳಿಗೆ ಹೆಚ್ಚಿನ ವಿಶ್ರಾಂತಿ ದೊರೆತು ರಕ್ತದೊತ್ತಡ ಸಮಸ್ಥಿತಿಯಲ್ಲಿರುತ್ತದೆ. ಸ್ಥೂಲಕಾಯರಾಗುರುವವರಿಗೆ ಬೊಜ್ಜು ಕರಗಿಸಲು, ವಾಕಿಂಗ್ ಹೇಳಿಮಾಡಿಸಿದ ವ್ಯಾಯಾಮ. ಹೊಟ್ಟೆಯ ಸುತ್ತ ಆವರಿಸಿಕೊಂಡಿರುವ ಕೊಬ್ಬು, ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಲಕ್ವಗಳಿಗೆ ರಹದಾರಿ. ಗಂಟೆಗೆ, ಎರಡು-ಮೂರು ಕಿಮೀ ವೇಗದಲ್ಲಿ ನಡೆಯುವ ವ್ಯಕ್ತಿ ಸುಮಾರು 250ರಿಂದ 300ರಷ್ಟು ಕ್ಯಾಲೊರಿ ಶಕ್ತಿಯನ್ನು ವ್ಯಯ ಮಾಡಲು ಸಾಧ್ಯ.

RELATED ARTICLES  ಪೊಲೀಸ್ ಠಾಣೆಯಲ್ಲಿಯೇ ಸ್ಯೂಸೈಡ್ ಮಾಡಿಕೊಂಡ ವ್ಯಕ್ತಿ.

ಬೊಜ್ಜು ಕರಗಿಸಬೇಕೆನ್ನುವವರು, ಎರಡೂ ಕ್ಯೆಗಳನ್ನು ಬೀಸುತ್ತಾ ನಡೆದರೆ, ಹೆಚ್ಚಿನ ಲಾಭ ಪಡೆಯಬಹುದು. ಮೂಳೆಗಳು ಬಲಗೊಳ್ಳುತ್ತವೆ50ವರ್ಷ ದಾಟಿದವರಿಗೆಲ್ಲಾ ಮೂಳೆಗಳ ಸಾಂದ್ರತೆ ಕಡಿಮೆಯಾಗುವ ಸಾಧ್ಯತೆ ಜಾಸ್ತಿ. ಮಹಿಳೆಯರನ್ನೂ ಹೆಚ್ಚಾಗಿ ಕಾಡುವ ಟೊಳ್ಳು ಮೂಳೆ ರೋಗ, ಪ್ರತಿವರ್ಷ ಸ್ವಲ್ಪ ಪ್ರಮಾಣದ ಮೂಳೆರಾಶಿಯನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.ಸಣ್ಣ, ಪುಟ್ಟ ಪೆಟ್ಟುಗಳನ್ನು ಸಹಿಸುವ ಶಕ್ತಿಯಿಲ್ಲದೆ, ಮೂಳೆಗಳು ದುರ್ಬಲವಾಗಿ, ಮುರಿಯುವ ಸಂಭವವಿರುತ್ತದೆ. ಕ್ರಮವಾಗಿ ನಡಿಗೆಯನ್ನು ಮಾಡುವದರಿಂದ ಎಲುಬುಗಳು ಶಕ್ತಿಯುತವಾಗಿ ಎಲುಬಿನ ಸಾಂದ್ರತೆ ಹೆಚ್ಚುತ್ತದೆ. ಮಧುಮೇಹದ ಆಪತ್ತು…

ಆರಂಭದ ಹಂತದ ಮಧುಮೇಹ, ದಿನನಿತ್ಯ ಎರಡು ಕಿಮೀ ಬಿರುಸಾಗಿ ನಡೆದರೆ, ಯಾವ ಚಿಕಿತ್ಸೆಯೂ ಇಲ್ಲದೆ ನಿಯಂತ್ರಣದಲ್ಲಿರುತ್ತದೆಂದು ಪರಿಣಿತರಿಂದ ಸಿಧ್ಧವಾಗಿದೆ. ಗರ್ಭಿಣಿ ಸ್ತ್ರೀಯರನ್ನು ಕಾಡುವ ಮಧುಮೇಹದ ತೊಂದರೆಯನ್ನೂ ಹಿತಮಿತವಾದ ನಡಿಗೆಯಿಂದಲೇ ನಿಯಂತ್ರಿಸಬಹುದು. ಮಾಂಸಪೇಶಿಗಳು ನಡಿಗೆಯ ಸಮಯ ಹೆಚ್ಚಿನಂಶ ಗ್ಲೂಕೋಸ್ ಬಳಸುವದರಿಂದ, ರಕ್ತದಲ್ಲಿರುವ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿರುತ್ತದೆ. ಖಿನ್ನತೆ ದೂರ…ವಾಹನಗಳ, ಜನಜಂಗುಳಿಯ ಸದ್ದಿಲ್ಲದೆ ಪ್ರಕೃತಿ ಅತಿ ಸುಂದರಳಾಗಿ ಕಾಣುವ ಸಮಯವಿದು. ಬೆಳಗಿನ ಸೊಬಗಿನ ಸಮಯದಲ್ಲಿ ಹಕ್ಕಿಗಳಿಂಚರ ಕಿವಿಗೆ ಇಂಪೆನಿಸಿದರೆ, ಮೂಡಲಮನೆಯ ಮುತ್ತಿನ ನೀರು ಸೂರ್ಯದೇವನನ್ನು ಎಬ್ಬಿಸುವ ಸನ್ನಾಹದಲ್ಲಿರುವಂತೆ ತೋರುತ್ತದೆ.ಬಣ್ಣಗಳ ಓಕುಳಿಯನ್ನು ಹಾಸಿ ಹೊದೆದ ಆಗಸವನ್ನುನೋಡುವಾಗ, ಖಿನ್ನತೆ ಮಾಯವಾಗಿಬಿಡುತ್ತದೆ. ಮಹಾತ್ಮಾ ಗಾಂಧೀಜಿಯವರು ಸಹ ಸೂರ್ಯೋದಯದ ಅನುಪಮ ಸೊಬಗಿಗೆ ಮಾರು ಹೋಗಿ, ಬೆಳಗಿನ ನಡಿಗೆಯಲ್ಲಿ ತಮ್ಮ ಜೊತೆಯಾಗಿರಲು, ತಮ್ಮ ಹಿಂಬಾಲಕರನ್ನು ಪ್ರೋತ್ಸಾಹಿಸುತ್ತಿದ್ದರು. ಬಿರುಸಿನ ನಡಿಗೆ, ಒತ್ತಡಗಳನ್ನು ತಡೆಗಟ್ಟಿ, ಹಗಲಿನ ಶಕ್ತಿಯನ್ನು ವೃಧ್ಧಿಸುವದರಿಂದ, ರಾತ್ರಿ, ದೀರ್ಘವಾದ, ಗಾಢವಾದ ನಿದ್ದೆಗೆ ಜಾರಲು ಸಹಾಯ ಮಾಡುತ್ತದೆ. ವಾಕಿಂಗ್ ಮಾಡುವಾಗ ಸ್ನೇಹಿತರ ಜೊತೆಯಿದ್ದರಂತೂ ಸುಸ್ತಿನ ಸದ್ದೇ ಇರದು. ಮುಂದೆ ಸಾಗಲಾರೆನೆಂದು ಮುಷ್ಕರ ಹೂಡುವ ಕಾಲುಗಳು, ವಾಕಿಂಗ್ ಮೇಟ್ಗಳು ಜೊತೆಯಿರುವಾಗ ಆಂiಸವನ್ನು ಮರೆಮಾಚುತ್ತವೆ. ಕಾಲುಗಳಿಗಿಂತ ಉತ್ತಮ ವ್ಯೆದ್ಯರಿಲ್ಲ, ಎನ್ನುತ್ತದೆ, ವ್ಯೆದ್ಯ ವಿಜ್ಞಾನ. ಜಡತ್ವ ದೂರವಾಗಿಸುವ, ಆಯಸ್ಸು ಹೆಚ್ಚಿಸುವ ವಾಕಿಂಗ್ ರೂಢಿಸಿಕೊಂಡರೆ ಸಾಕು, ಅದೇ ನಿಮ್ಮನ್ನು ಮುನ್ನಡೆಸುವ ಜವಾಬ್ದಾರಿ ಹೊರುತ್ತದೆ.

RELATED ARTICLES  ಅಘನಾಶಿನಿಕಾಗಾಲ ಬಾಡ ಹೊಲನಗದ್ದೆ ಯ ಗ್ರಾಮದೇವಿ ಶ್ರೀ ಕಾಂಚಿಕಾ ಪರಮೇಶ್ವರಿ ದೇವಿಯ ಲಕ್ಷ ದೀಪೋತ್ಸವಕಾರ್ಯಕ್ರಮ.