ಯಲ್ಲಾಪುರ: ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಬಳಗಾರ ಕ್ರಾಸ್ ಬಳಿ ನಡೆದಿದೆ.

ಗೋ ಗ್ಯಾಸ್ ಆಕ್ಸಿಜನ್ ತುಂಬಿಕೊಂಡು ಮಂಗಳೂರು ಕಡೆಗೆ ಹೊರಟಿದ್ದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಬಳಗಾರ ಕ್ರಾಸ್ ಬಳಿ ಸೇತುವೆ ಮೇಲೆ ಕಟ್ಟೆಗೆ ಡಿಕ್ಕಿ ಹೊಡೆದು ಹೆದ್ದಾರಿಯಲ್ಲಿ ಬಿದ್ದಿದೆ. ಇದರಿಂದ ಕೆಲಕಾಲ ಆತಂಕ ಉಂಟು ಮಾಡಿತ್ತು. ಟ್ಯಾಂಕರ್ ಸಂಪೂರ್ಣ ಜಖಂಗೊಂಡಿದ್ದು, ಅಪಘಾತದ ರಭಸಕ್ಕೆ ಸೇತುವೆಯ ತಡೆಗೋಡೆ ಉರುಳಿ ಬಿದ್ದಿದೆ. ಟ್ಯಾಂಕರ್‍ನ ಎರಡು ಗಾಲಿಗಳು ಕಳಚಿ, ರಸ್ತೆಯ ಪಕ್ಕದಲ್ಲಿ ಬಿದ್ದಿದೆ. ಅದೃಷ್ಟವಶಾತ್ ಆಕ್ಸಿಜನ್ ಸೋರಿಕೆಯಾಗಿಲ್ಲ.

RELATED ARTICLES  ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ : ನಾಲ್ವರು ಎನ್ 'ಕೌಂಟರ್' ನಲ್ಲಿ ಹತ

ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಹೆದ್ದಾರಿ ಮೇಲೆಯೇ ಟ್ಯಾಂಕರ್ ಬಿದ್ದಿದ್ದರಿಂದ ವಾಹನಗಳು ಒಂದೇ ಬದಿಯಲ್ಲಿ ಸಾಗುವಂತಾಯಿತು. ಅಂಕೋಲಾದಿಂದ ಕ್ರೇನ್ ತರಿಸಿ, ಟ್ಯಾಂಕರ್ ತೆರವುಗೊಳಿಸಲಾಯಿತು. ಕೆಲಕಾಲ ಸಂಚಾರಕ್ಕೆ ಅಡಚಣಿ ಉಂಟಾಗಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

RELATED ARTICLES  ತಮ್ಮತನ ಕಾಯ್ದುಕೊಂಡು ಸಮಗ್ರ ಹಿಂದೂ ಸಮಾಜಕ್ಕೆ ಕೊಡುಗೆ ನೀಡಿ: ರಾಘವೇಶ್ವರ ಶ್ರೀ