ಹೊನ್ನಾವರ : ವಿಜಯಪುರ ಜಿಲ್ಲೆ, ಸಿಂದಗಿ ತಾಲ್ಲೂಕಿನ ಮೊರಟಗಿ ಕಲ್ಪವೃಕ್ಷ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಪ.ಪೂ ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಹೊನ್ನಾವರದ ಎಸ್.ಡಿ.ಎಮ್. ಪದವಿಪೂರ್ವ ಮಹಾವಿದ್ಯಾಲಯದ ೫ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕ್ರಮವಾಗಿ ಅಖಿಲಾ ಹೆಗಡೆ, ಜಾನಪದಗೀತೆ – ಪ್ರಥಮ (ಪ್ರಥಮ ಪಿ.ಯು), ರೇಷ್ಮಾ ಹೆಗಡೆ, ಜಾನಪದಗೀತೆ -ದ್ವಿತೀಯ ( ದ್ವಿತೀಯ ಪಿ.ಯು), ನರಸಿಂಹ ಭಕ್ತ, ಇಂಗ್ಲಿಷ್ ಪ್ರಬಂಧ – ದ್ವಿತೀಯ (ದ್ವಿತೀಯ ಪಿ.ಯು), ಮನುಶ್ರೀ ಹೆಗಡೆ, ಕನ್ನಡ ಆಶು ಭಾಷಣ – ದ್ವಿತೀಯ (ಪ್ರಥಮ ಪಿ.ಯು), ರಂಜಿತಾ ನಾಯ್ಕ , ಭಾವಗೀತೆ – ತ್ರತೀಯ (ದ್ವಿತೀಯ ಪಿ.ಯು) ಸ್ಥಾನ ಗಳಿಸುವ ಮೂಲಕ ವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾರೆ.

RELATED ARTICLES  ಭಟ್ಕಳದಲ್ಲಿ ಗಾಂಜಾ ಮಾರಾಟ..! ನಾಲ್ವರು ಅಂದರ್..!

ಇವರ ಈ ಸಾಧನೆಗೆ ಪ್ರಾಂಶುಪಾಲರು, ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯವರು ಅಭಿನಂದನೆ ಸಲ್ಲಿಸಿರುತ್ತಾರೆ..