ಜಿಯೋ ಮತ್ತು ಏರ್ ಟೆಲ್ ಒಂದಾದ ಪೈಪೋಟಿಗೆ ಇಳಿದು ತಮ್ಮ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುತ್ತಿವೆ. ಅಂತೂ ಲಾಭ ಪಡೆದುಕೊಳ್ಳುವವರು ಗ್ರಾಹಕರು. ಇತ್ತೀಚೆಗಷ್ಟೇ ರಿಲಯನ್ಸ್ ಜಿಯೋ 52 ರೂ ಗಳ ಯೋಜನೆಯೊಂದನ್ನು ಬಿಡುಗಡೆ ಮಾಡಿದ್ದರು. ಅದಕ್ಕೆ ಸ್ಪರ್ಧೆಯೊಡ್ಡಲು ಈಗ ಏರ್ ಟೆಲ್ 49 ರೂ ಗಳ ಹೊಸ ಆಫರ್ ನ್ನು ಹೊರತಂದಿದೆ. ಅಲ್ಲದೆ ಇನ್ನೂ ಹಲವಾರು ಪ್ರೀಪೇಯ್ಡ್ ಯೋಜನೆಗಳ ಬಗ್ಗೆ ತಿಳಿದುಕೊಳ್ಳೋಣ;

29 ರೂ ಯೋಜನೆ:

RELATED ARTICLES  ರಾಮ ಸೇತುವೆಯ ಕುರಿತು ಕೇಂದ್ರ ಸರ್ಕಾರದ ನಿಲುವು ಏನು ಗೋತ್ತಾ?

ಏರ್ ಟೆಲ್ ನ 29 ರು ಗಳ ಡೇಟಾ ಬೂಸ್ಟ್ ಪ್ಯಾಕ್ ನಲ್ಲಿ 28 ದಿನಗಳವರೆಗೆ 150 ಎಂಬಿ 2ಜಿ/3ಜಿ/4ಜಿ ಡೇಟಾ ಪಡೆಯಬಹುದು.

49 ರೂ ಯೋಜನೆ:

ನೀವು 49ರೂ ಗೆ ರೀಚಾರ್ಜ್ ಮಾಡಿದರೆ ನಿಮಗೆ 1 ದಿನಕ್ಕೆ 1 ಜಿಬಿ 2ಜಿ/3ಜಿ/4ಜಿ ಡೇಟಾವನ್ನು ದೊರೆಯುತ್ತದೆ. ಏರ್ ಟೆಲ್ ನ ಮೈಏರ್ಟೆಲ್ ಆ್ಯಪ್ ಅಥವಾ ಸಂಸ್ಥೆಯ ವೆಬ್ ಸೈಟ್ ನಲ್ಲಿ ಇದರ ವಿವರಗಳು ಲಭ್ಯವಿದೆ.

51 ರೂ ಯೋಜನೆ:

RELATED ARTICLES  ನಾಡಿನ 63 ಗಣ್ಯರಿಗೆ 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ.

ಈ ಯೋಜನೆಯಲ್ಲಿ ದಿನಕ್ಕೆ 1 ಜಿಬಿ 2ಜಿ/3ಜಿ/4ಜಿ ಡೇಟಾ ಮತ್ತು ಉಚಿತ ಕರೆ ಸೌಲಭ್ಯವನ್ನು 7 ದಿನಗಳ ಅವಧಿಗೆ ನೀಡಲಾಗುತ್ತದೆ.

98 ರೂ ಯೋಜನೆ:

ಇದರಲ್ಲಿ 1 ಜಿಬಿ 2ಜಿ/3ಜಿ/4ಜಿ ಡೇಟಾ 5 ದಿನಗಳವರೆಗೆ ಲಭ್ಯವಿದ್ದು, 28 ದಿನಗಳವರೆಗೆ ವ್ಯಾಲಿಡಿಟಿ ಇದೆ.

99 ರೂ ಯೋಜನೆ:

99ರೂ ರೀಚಾರ್ಜ್ ಮಾಡಿದರೆ 2 ಜಿಬಿ 2ಜಿ/3ಜಿ/4ಜಿ ಡೇಟಾ 5 ದಿನಗಳ ಅವಧಿಯವರೆಗೆ ಇರುತ್ತದೆ.

146 ರೂ ಯೋಜನೆ:

1 ಜಿಬಿ 2ಜಿ/3ಜಿ/4ಜಿ ಡೇಟಾ ಪ್ಯಾಕ್ 7 ದಿನಗಳ ಅವಧಿಗೆ ದೊರೆಯುತ್ತದೆ.