ಹೊನ್ನಾವರ : ಹೊನ್ನಾವರ ತಾಲ್ಲೂಕಿನ ಹಳದೀಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಹಳದೀಪುರ-ಕರಿಮೂಲೆ-ತಾರೀಬಾಗಿಲು ಸಂಪರ್ಕ ರಸ್ತೆ ಅಂದಾಜು 4.5 ಕಿ.ಮೀ ಅಭಿವೃದ್ಧಿಪಡಿಸುವ ಕಾಮಗಾರಿಗಳಿಗೆ 1 ಕೋಟಿ ಅನುದಾನವನ್ನು ಶಾಸಕರು ಮಂಜೂರು ಮಾಡಿಸಿದ್ದು, ಕಾಮಗಾರಿಯ ಕುರಿತು ಸ್ಥಳೀಯ ಗ್ರಾ.ಪಂ ಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಇಂದು ಪರಿಶೀಲನೆ ನಡೆಸಿದರು.
ಹೊನ್ನಾವರ ತಾಲೂಕಿನ ಹಳದಿಪುರ ಪಂಚಾಯಿತಿ ವ್ಯಾಪ್ತಿಯಲ್ಲಿನ ಹಳದಿಪುರ- ಕರಿ ಮೂಲೆ- ತಾರಿಬಾಗಿಲ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಯ ಬೇಡಿಕೆಯನ್ನು ಈ ಭಾಗದ ಜನರು ಶಾಸಕರಿಗೆ ಸಲ್ಲಿಸಿದರು . ಜನತೆಯ ಮೂಲ ಸೌಕರ್ಯಗಳಲ್ಲಿ ಒಂದಾದ ರಸ್ತೆ ಅಭಿವೃದ್ಧಿಯ ಕುರಿತು ತುರ್ತು ಕ್ರಮ ಕೈಗೊಂಡ ಶಾಸಕರು ಈ ಭಾಗದ ರಸ್ತೆಗೆ ಅನುದಾನವನ್ನು ತರುವ ಪ್ರಯತ್ನವನ್ನು ನಡೆಸಿದರು .ಈಗ ಅನುದಾನ ಬಿಡುಗಡೆಯಾಗಿದ್ದು ಒಂದು ಕೋಟಿ ರೂಪಾಯಿ ರಸ್ತೆಗೆ ಮಂಜೂರಾಗಿದೆ.
ಸುಮಾರು 4.5 ಕಿಲೋಮೀಟರ್ ಉದ್ದದ ರಸ್ತೆಗೆ ಅನುದಾನ ಮಂಜೂರಾಗಿದ್ದು ಈ ಕಾಮಗಾರಿಯ ಕುರಿತು ಸ್ಥಳೀಯ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸ್ಥಳವನ್ನು ಪರಿಶೀಲಿಸಿದ ಶಾಸಕರು ಅನುದಾನ ಬಿಡುಗಡೆಯಾಗಿದ್ದು ಸಮರ್ಪಕ ಕಾಮಗಾರಿ ನಿರ್ವಹಿಸುವಂತೆ ಸೂಚನೆ ನೀಡಿದರು .
ಈ ಭಾಗದ ಜನರಿಗೆ ತೀರಾ ಅಗತ್ಯವಾಗಿದ್ದ ರಸ್ತೆ ಅಭಿವೃದ್ಧಿಗೆ ತಾನು ಮುಂದಾಗಿದ್ದು ಅಭಿವೃದ್ಧಿಪಡಿಸುವ ಕಾಮಗಾರಿಗೆ ಒಂದು ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ .ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರಕ್ಕೆ ಅವರು ಧನ್ಯವಾದ ಸಮರ್ಪಿಸಿದರು . ಈ ಭಾಗದ ಜನರು ರಸ್ತೆ ಅಭಿವೃದ್ಧಿಯ ನಂತರದಲ್ಲಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ವಿನಂತಿಸಿದರು .
ಈ ಸಂದರ್ಭದಲ್ಲಿ ಹಳದೀಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಗುಣಮಾಲಾ ಇಂದ್ರ ಗ್ರಾಮ ಪಂಚಾಯತಿ ಸದಸ್ಯ ವಿನಾಯಕ ಶೆಟ್ಟಿ ,ದಾಮೋದರ ನಾಯ್ಕ, ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಸ್ಥಳೀಯರು ಹಾಜರಿದ್ದರು .