ಹೃದಯದ ಸಮಸ್ಯೆಯಿಂದ ಬಳಲುತ್ತಿರುವ ಪಂಜಾಬ್‍ನ ಬಾಕ್ಸರ್ ಕೌರ್ ಸಿಂಗ್ ಅವರಿಗೆ ಬಾಲಿವುಡ್ ನಟ ಶಾರುಖ್ ಖಾನ್ ಹಣಕಾಸಿನ ನೆರವು ನೀಡಿದ್ದಾರೆ.

ಪಂಜಾಬ್‍ನ ಖನಾಲ್ ಖುರ್ದ್ ಪ್ರದೇಶದವರಾದ ಕೌರ್ ಸಿಂಗ್ 1982ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದಿದ್ದರು. ಆದರೆ ಇತ್ತೀಚೆಗೆ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಮತ್ತು ಔಷಧಿಗಾಗಿ ತಿಂಗಳಿಗೆ 8 ಸಾವಿರ ರೂಪಾಯಿಗಳನ್ನು ವ್ಯಯಿಸಬೇಕಿದೆ. ಆದರೆ ಬಡವರಾಗಿರುವ ಕೌರ್ ಸಿಂಗ್ ಅವರಿಗೆ ಅದನ್ನು ಭರಿಸುವ ಶಕ್ತಿ ಇಲ್ಲ. ಈ ಕುರಿತು ಸುದ್ದಿ ತಿಳಿದ ಶಾರುಖ್, ದೇಶಕ್ಕೆ ಗೌರವ ತಂದಿದ್ದ ಕೌರ್ ಸಿಂಗ್ ಅವರಿಗೆ 5 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಶಾರುಖ್ ಒಡೆತನದ ಕೋಲ್ಕತಾ ನೈಟ್ ರೈಡರ್ಸ್ ಫೌಂಡೇಶನ್ ಮೂಲಕ ಹಣಕಾಸಿನ ನೆರವು ನೀಡಲಾಗಿದೆ.

RELATED ARTICLES  ಸಾರ್ವಜನಿಕರಿಗೆ ನಿರಾಳ: ದೇಶದಾದ್ಯಂತ ಮತ್ತೆ ಇಳಿಕೆಯಾಗಿರುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ..

`ಕ್ರೀಡಾಪಟುಗಳು ದೇಶಕ್ಕೆ ಗೌರವ ಮತ್ತು ಹೆಮ್ಮೆ ತರುವವರು ಮತ್ತು ಅವರನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಕೌರ್ ಸಿಂಗ್ ಅವರ ಕುರಿತ ಸುದ್ದಿಯನ್ನು ಓದಿದ ನಂತರ, ಒಂದು ಕ್ರೀಡಾ ಘಟನವಾಗಿ ಅವರ ಜತೆ ನಿಲ್ಲಬೇಕೆಂದು ಬಯಸಿದೆ. ಕೌರ್ ಸಿಂಗ್ ಅವರು ಶೀಘ್ರ ಚೇತರಿಸಿಕೊಳ್ಳಲಿ,” ಎಂದು ಶಾರುಖ್ ತಿಳಿಸಿದ್ದಾರೆ.

RELATED ARTICLES  ಅನಗತ್ಯವಾಗಿ ಶ್ರೀಗಳ ಹೆಸರು ಕೆಡಿಸುವ ಪ್ರಯತ್ನ ನಡೆಯುತ್ತಿರುವುದು ಖಂಡನೀಯ.