ಬೆಂಗಳೂರು: ಕರ್ನಾಟಕದ ಮೇಲೆ ಬಿಜೆಪಿ ಧ್ವಜ ನೆಡಬೇಕೆಂದು ರಾಜ್ಯದತ್ತ ದೃಷ್ಟಿ ನೆಟ್ಟ ಚಾಣಕ್ಯರು, ಗುಜರಾತ್ ಚುನಾವಣೆಯಲ್ಲಿ ಪ್ರಯಾಸದ ಗೆಲುವು ಸಾಧಿಸಿದ ಬೆನ್ನಲ್ಲಿಯೇ ರಾಜ್ಯದಲ್ಲಿ ಕಾರ್ಯತಂತ್ರ ಹೆಣೆಯಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.

ಚಾಣಕ್ಯರು ಬುಲಾವ್ ನೀಡಿದ ಹಿನ್ನೆಲೆಯಲ್ಲಿಯೇ ನವಲಗುಂದ, ನರಗುಂದ, ಗದಗನಲ್ಲಿ ನಡೆಯಬೇಕಿದ್ದ ಪರಿವರ್ತನಾ ಯಾತ್ರೆಯನ್ನು ಮುಂದೂಡಿದ ಯಡಿಯೂರಪ್ಪ, ಬುಧವಾರ(ಡಿ.20) ರಂದು ದೆಹಲಿಗೆ ತೆರಳಲಿದ್ದಾರೆ. ಚುನಾವಣಾ ಪ್ರಚಾರ ಪ್ರಾರಂಭಿಸುವ ಮುನ್ನವೇ ರಾಜ್ಯದ ಜನತೆಗೆ ಯಾವ ಉಡುಗೊರೆ ನೀಡಿ, ಅವರ ಮನಸ್ಸು ಗೆಲ್ಲಬಹುದು ಎಂಬುವುದು ಚರ್ಚೆಯ ಪ್ರಮುಖ ವಿಷಯವಾಗಿದೆ ಎಂದು ಬಿಜೆಪಿ ವಲಯದಲ್ಲ ಕೇಳಿ ಬರುತ್ತಿದೆ.

RELATED ARTICLES  ಮಲ್ಯಗೆ ಸಾಲ ಕೊಡಿಸಿದವರಾರು? ಪ್ರಶ್ನೆಗೆ ಸಿಕ್ಕಿದೆ ಉತ್ತರ!

ಹಲವು ದಶಕಗಳಿಂದ ನಡೆಯುತ್ತಿರುವ ಮಹಾದಾಯಿ ವಿಚಾರ, ಲಿಂಗಾಯಿತ ಪ್ರತ್ಯೇಕ ಧರ್ಮ ಸೇರಿದಂತೆ ಇನ್ನೂ ಹಲವು ವಿಷಯಗಳ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯೂ ದಟ್ಟವಾಗಿದೆ. ರಾಜ್ಯದಲ್ಲಿ ಚುನಾವಣಾ ತಂತ್ರ ಹೆಣೆಯುವುದಕ್ಕಾಗಿಯೇ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಈ ತಿಂಗಳ ಅಂತ್ಯದಿಂದ ರಾಜ್ಯದಲ್ಲಿಯೇ ಠಿಕಾಣಿ ಹೂಡಲಿದ್ದಾರೆ. ಹೀಗಾಗಿ ಯಡಿಯೂರಪ್ಪ ಅವರ ದೆಹಲಿ ಪ್ರವಾಸ, ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

RELATED ARTICLES  ಹವ್ಯಕ ಮಹಾಸಭೆಯಿಂದ ನಾಳೆ ಸಾರ್ವಜನಿಕ ಉಚಿತ ವೈದ್ಯಕೀಯ ತಪಾಸಣಾ ಶಿಬಿರ: ಸಾರ್ವಜನಿಕರಿಗೆ ಮುಕ್ತ ಅವಕಾಶ