ಬೆಂಗಳೂರು: ರಾಜಕೀಯ ಚತುರ ಎಂದೇ ಬಿಜೆಪಿ ವಲಯದಲ್ಲಿ ಖ್ಯಾತಿ ಗಳಿಸಿದ ಅಮಿತ್ ಶಾ ಅವರ ಕಣ್ಣು ಸದ್ಯ ರಾಜ್ಯದ ಮೇಲೆ ಕಣ್ಣು ಬಿದ್ದಿದೆ. ರಾಜ್ಯದಲ್ಲಿ ಚುನಾವಣೆ ಸಮೀಪಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೇ ಕುಳಿತು ರಣತಂತ್ರ ಹೆಣೆಯಲು ನಗರದಲ್ಲಿಯೇ ಮನೆ ಬಾಡಿಗೆಗೆ ಪಡೆದಿದ್ದಾರೆ.

ಹೀಗಾಗಿಯೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಸಾದರಹಳ್ಳಿಯಲ್ಲಿ ಮನೆಯೊಂದನ್ನು ಬಾಡಿಗೆ ಪಡೆದಿದ್ದಾರೆ. ಇನ್ನೂ ಮುಂದೆ ಇಲ್ಲಿಯೇ ಬಿಜೆಪಿಯ ಕಾರ್ಯತಂತ್ರ ನಡೆಯಲಿವೆ. ಅವರ ಹಲವು ಆಪ್ತರು ಕೂಡ ಈ ಮನೆಗೆ ಆಗಮಿಸಲಿದ್ದಾರೆ. ಈ ನಿಟ್ಟಿನಲ್ಲಿಯೇ ಈ ಹೊಸ ಮನೆಗೆ ಜನೇವರಿ ಮೊದಲ ವಾರದಲ್ಲಿಯೇ ವಾಸ್ತವ್ಯ ಹೂಡುವ ಸಾಧ್ಯತೆ ಇದೆ.

RELATED ARTICLES  ಗೋವಾದ ಪರ್ತಗಾಳಿಯಲ್ಲಿ ಚಾರ್ತುಮಾಸ ವೃತಾಚರಣೆ

ಅಮಿತ್ ಶಾ ವಾರದಲ್ಲಿ ಎರಡು ಬಾರಿ ಬೆಂಗಳೂರಿನ ಈ ಮನೆಗೆ ಭೇಟಿ ನೀಡಲಿದ್ದಾರೆ. ಹೀಗಾಗಿಯೇ ಬಿಜೆಪಿ ಕಚೇರಿ ಹಾಗೂ ವಿಮಾನ ನಿಲ್ದಾಣಕ್ಕೆ ಸಮೀಪವಿರುವಂತೆ ಈ ಮನೆಯನ್ನು ಬಾಡಿಗೆ ಪಡೆಯಲಾಗಿದೆ. ಅಲ್ಲದೇ, ಬೆಂಗಳೂರಿಗೆ ಬಂದ ಸಂದರ್ಭದಲ್ಲಿ ರಾಜ್ಯದ ಇನ್ನೂಳಿದ ಪ್ರಮುಖ ನಗರಗಳಾದ ಹುಬ್ಬಳ್ಳಿ, ಮೈಸೂರು, ಮಂಗಳೂರು ಹಾಗೂ ಬೆಳಗಾವಿಗೆ ಕೂಡ ತೆರಳಿ ಆ ಭಾಗದ ನಾಯಕರೊಂದಿಗೆ ಚರ್ಚಿಸಿ ಕಾರ್ಯತಂತ್ರ ಹೆಣೆಯಲಿದ್ದಾರೆ.

RELATED ARTICLES  ವಿವಿವಿ ಗುರುಕುಲಗಳ ಆನ್‍ಲೈನ್ ತರಗತಿ ಜುಲೈ 22 ರಿಂದ ಆರಂಭ.