ಮುಂಡಗೋಡ: ಎಲ್ಲ ಧರ್ಮಗಳು ಕೂಡ “ಸರ್ವೇ ಜನಾಃ ಸುಖಿನೋ ಭವಂತು” ಎಂಬ ಸಂದೇಶವನ್ನೇ. ಸಾರುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ಹೇಳಿದರು. ಅವರು ಬೆಂಥೇಸ್ಟಾ ಎಜಿ ಚರ್ಚ ಇಂದೂರು ಹಾಗೂ ಗೋಲ್ಡ್‍ಸ್ಕ್ವೇರ್ ಇವೆಂಟ್ ಮ್ಯಾನೇಜಮೆಂಟ್ ಕಂ.ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ 2017ನೇ ಕ್ರಿಸ್‍ಮಸ್ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಎಲ್ಲ ಧರ್ಮಗಳು ಕೂಡ ಸಮರಸ ಭಾವನೆಗಳ ಸಾಮರಸ್ಯವನ್ನೇ ಸಾರುತ್ತವೆ ಎಂದರು.

ಮುಂಡಗೋಡ ತಾಲೂಕು ಹಿಂದುಳಿದ ತಾಲೂಕಾಗಿರಬಹುದು ಆದರೆ ಇದೊಂದು ಸಜ್ಜನರ ತಾಲೂಕು, ನಾಡಿನ ಎಲ್ಲ ಧರ್ಮದ, ಎಲ್ಲ ಭಾಷೆಯ,ಎಲ್ಲ ಸಂಸ್ಕøತಿಯ ಜನರ ಒಟ್ಟಾಗಿ ಸಹಬಾಳ್ವೆಯಿಂದ ಬದುಕು ನಡೆಸುವ ಏಕೈಕ ತಾಲೂಕು ಎಂದು ವರ್ಣಿಸಿದರು.ಕಾರ್ಯಕ್ರಮದಲ್ಲಿ ಜಾನ್ಸನ್ ಪಿಂಟೋ , ಅತ್ತಿವೇರಿ ಮಾತೆ ಬಸವರಾಜೇಶ್ವರಿ, ಮುಸ್ಲೀಂ ಮುಖಂಡ ಬಿ.ಎಫ್.ಬೆಂಡಿಗೇರಿಯವರನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮತ್ತು ಶಾಸಕ ಶಿವರಾಮ ಹೆಬ್ಬಾರ ಸೇರಿ ಸನ್ಮಾನಿಸಿ ಗೌರವಿಸಲಾಯಿತು.

RELATED ARTICLES  ಬೇಸಿಗೆ ಪ್ರಾರಂಭದಲ್ಲಿಯೇ ಹೆಚ್ಚಿದೆ ಸೆಕೆ: ಹೈರಾಣಾಗುತ್ತಿದ್ದಾರೆ ಕರಾವಳಿ ಜನರು!

ನಾಡಿನ ಎಲ್ಲ ಧರ್ಮದವರಿಗೂ ಸಚಿವ ಆರ್.ವಿ. ದೇಶಪಾಂಡೆ ಮತ್ತು ಶಾಸಕ ಶಿವರಾಮ ಹೆಬ್ಬಾರ ಕ್ರಿಸ್‍ಮಸ್ ಉತ್ಸವದ ಶುಭಾಶಯಗಳನ್ನು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಥೇಸ್ಟಾ ಎಜಿ ಚರ್ಚ ಇಂದೂರನ ಫಾಸ್ಟರ್ ಎ.ಎಮ್.ಜಾನ್ಸನ್ ವಹಿಸಿದ್ದರು. ಉತ್ಸವದ ಆರಂಭದಲ್ಲಿ ಪಿ.ಟಿ.ಸ್ಯಾಮ್‍ಸನ್ ಪ್ರಾರ್ಥನೆ ಮತ್ತು ಎ.ಜಿ.ಚರ್ಚ ತಂಡದವರಿಂದ ನೃತ್ಯಗೀತೆಯೊಂದಿಗೆ ಆರಂಭಿಸಿದರು.

RELATED ARTICLES  ಜೂನ್ 01 ರಿಂದ ಜುಲೈ 31 ರ ವರೆಗೆ ಯಾಂತ್ರೀಕೃತ ಮೀನುಗಾರಿಕೆಗೆ ಬ್ರೇಕ್

ಈ ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ್, ಜಿಲ್ಲಾ ಪಂಚಾಯತ ಸದಸ್ಯರಾದ ರವಿಗೌಡ ಪಾಟೀಲ್, ಎಲ್.ಟಿ.ಪಾಟೀಲ್, ತಾ.ಪಂ.ಅಧ್ಯಕ್ಷೆ ದಾಕ್ಷಾಯಣಿ ಸುರಗೀಮಠ, ಮತ್ತು ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿಯವರು ಸೇರಿದಂತೆ ಹಲವಾರು ಧರ್ಮದ ಗುರುಗಳು ಉಪಸ್ಥಿತರಿದ್ದರು.