ಹೊನ್ನಾವರ: ಉತ್ತರ ಕನ್ನಡ ಜಿಲ್ಲಾ ರಾಮಕ್ಷತ್ರಿಯ ನೌಕರರ ಸಂಘ (ರಿ.) ಹೊನ್ನಾವರ ಇದರ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಡಿ.24 ರಂದು ರವಿವಾರ ಮಂಕಿಯ ಕೊಕ್ಕೇಶ್ವರ ರಾಮಕ್ಷತ್ರೀಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ ಚಿತ್ರದುರ್ಗ ಸಾರಿಗೆ ಇಲಾಖೆಯ ಎ.ಆರ್.ಟಿ.ಓ. ಈಶ್ವರ ನಾಯ್ಕ ಆಗಮಿಸುವರು. ಮುಖ್ಯ ಅತಿಥಿಯಾಗಿ ಅಧ್ಯಕ್ಷರು, ಕೊಕ್ಕೇಶ್ವರ ಎಜ್ಯುಕೇಶನಲ್ ಹಾಗೂ ಚಾರಿಟೆಬಲ್ ಟ್ರಸ್ಟ್ (ರಿ.) ಮಂಕಿ ಅಣ್ಣಪ್ಪ ನಾಯ್ಕ, ಎ.ಇ.ಇ, ನಗರಾಭಿವೃದ್ಧಿಕೋಶ, ಕಾರವಾರ ಆರ್.ಪಿ. ನಾಯ್ಕ ವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉತ್ತರ ಕನ್ನಡ ಜಿಲ್ಲಾ ರಾಮಕ್ಷತ್ರಿಯ ನೌಕರರ ಸಂಘದ ಆರ್.ಎಸ್. ನಾಯ್ಕ ವಹಿಸುವರು, ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾ ರಾಮಕ್ಷತ್ರಿಯ ನೌಕರರ ಸಂಘದ ಗೌರವಾಧ್ಯಕ್ಷ ಮೋಹನ ಎಸ್. ಸಾಳೇಹಿತ್ತಲ್, ಡಾ|| ಕಿಶೋರ್ ಚಂದಾವರ್‍ಕರ್, ಆನಂದು ಮಾಸ್ತಿಕಟ್ಟೆ, ಉಮಾ ಬಿ. ನಾಯ್ಕ, ಉಪಸ್ಥಿತರಿರುವರು.
ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಿಗೆ ಹಾಗೂ ಸಾಧಕರನ್ನು ಸನ್ಮಾನಿಸಲಾಗುವುದು, 2017-18 ನೇ ಸಾಲಿನ “ರಾಮಕ್ಷತ್ರೀಯ ಸೇವಾ ಶ್ರೀ” ಪ್ರಶಸ್ತಿಯನ್ನು ಹನುಮಂತ ಆರ್. ನಾಯ್ಕ, ಮಂಕಿ ಇವರಿಗೆ ನೀಡಿ ಗೌರವಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ರಾಮಕ್ಷತ್ರಿಯ ನೌಕರರ ಸಂಘದ ಕಾರ್ಯದರ್ಶಿ ವಿ.ಡಿ. ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.