ಕುಮಟಾ: ವಿದಾರ್ಥಿಗಳಾದವರು ಬದುಕಿನ ಉನ್ನತ
ಸ್ಥಾನಕ್ಕೇರಲು ಶಕ್ತಿ ಮೀರಿ ಪ್ರಯತ್ನ ಪಡಲೇಬೇಕು.
ಯಾವುದೇ ಜವಾಬ್ದಾರಿ ನಿರ್ವಹಣೆಗೆ ಸರಳ ಮಾರ್ಗಗಳಿಲ್ಲ. ಕಠಿಣ ಸವಾಲನ್ನು ಎದುರಿಸುವ ಛಲ ಮತ್ತು ಮೊದಲ ಪಾಠದ ಅರಿವು ಶಾಲೆಯಿಂದಲೇ ಪ್ರಾರಂಭವಾಗುತ್ತದೆ ಎಂದು ಇನ್ಫೋಸಿಸ್ ಸಂಸ್ಥೆಯ ಹಣಕಾಸು ವಿಭಾಗದ ಸಹಾಯಕ ಉಪಾಧ್ಯಕ್ಷ ಶ್ರೀಪಾದ ಶಾನಭಾಗ ನುಡಿದರು.
ಅವರು ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಜೀವನದ ಉದ್ದೇಶ ಈಡೇರಿಸಿಕೊಳ್ಳುವ ಮಹತ್ವಾಕಾಂಕ್ಷೆ ಯೋಜನೆಯ ಕುರಿತು ಸಂವಾದಿಸಿದರು.
ಮುಖ್ಯಾಧ್ಯಾಪಕ ಎನ್.ಆರ್.ಗಜು ಸ್ವಾಗತಿಸಿ ಹಳೆಯ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ಸಂತಸದ
ಕ್ಷಣಗಳನ್ನು ಹಂಚಿಕೊಂಡಾಗ ಈಗಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿಸೆಲೆ ಚಿಗುರೊಡೆಯುತ್ತದೆ. ಆ ಮೂಲಕ ಪ್ರಭಾವಿತರಾಗಿ ಹೊಸ ಹೊಂಗನಸನ್ನು ಕಟ್ಟಿಕೊಳ್ಳುತ್ತಾರೆ ಎಂದು ಅಭಿಪ್ರಾಯಿಸಿದರು.
ಶಾಲಾ ಪೋಷಕಿ ಸಂಧ್ಯಾ ಪ್ರಭು ಉಪಸ್ಥಿತರಿದ್ದರು. ಶಿಕ್ಷಕ ಕಿರಣ ಪ್ರಭು ವಂದಿಸಿದರು. ಈ ಸಂದರ್ಭದಲ್ಲಿ ಶ್ರೀಪಾದ ಶಾನಭಾಗ ಅವರನ್ನು ಶಾಲಾವತಿಯಿಂದ
ಗೌರವಿಸಲಾಯಿತು.