ಹೊನ್ನಾವರ ; ಡಿಸೆಂಬರ್ 6 ರಂದು ಹೊನ್ನಾವರದ ಕೋಮುಗಲಭೆಯಲ್ಲಿ 18 ವರ್ಷದ ಯುವಕ ಶ್ರೀ. ಪರೇಶ ಮೇಸ್ತರವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮಾಧ್ಯಮದ ವರದಿಯ ಪ್ರಕಾರ ಪರೇಶ ಮೆಸ್ತಾರನ್ನು ಅಪಹರಿಸಿ, ಅವನಿಗೆ ಚಿತ್ರಹಿಂಸೆ ನೀಡಿ, ಬಲಗೈಗೆ ಹಾಕಿದ ಶಿವಾಜಿ ಮಚ್ಚೆಯ ಚರ್ಮವನ್ನು ಸುಲಿದು, ಮುಖಕ್ಕೆ ಬಿಸಿ ಎಣ್ಣೆ ಸುರಿದು, ಮರ್ಮಾಂಗವನ್ನು ಕತ್ತರಿಸಿ ಭೀಕರ ಮತ್ತು ಭೀಬತ್ಸವಾಗಿ ಹತ್ಯೆ ಮಾಡಿ ಅವರನ್ನು ಶೆಟ್ಟಿಕೆರೆ ಕೆರೆಗೆ ಎಸೆದಿರುವುದು ಗಮನಕ್ಕೆ ಬಂದಿದೆ.

ಸರಕಾರ ಇದನ್ನು ಸಹಜ ಸಾವು ಎಂದು ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಈ ಹಿಂದೆಯೂ ರಾಜ್ಯ ಸರಕಾರ ಮಡಿಕೇರಿಯ ಕುಟ್ಟಪ್ಪರವರನ್ನು ಜಿಹಾದಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಅದನ್ನು ರಾಜ್ಯ ಸರಕಾರ ಸಹಜ ಸಾವು ಎಂದು ಪ್ರಕರಣವನ್ನು ತಿರುಚಲು ಪ್ರಯತ್ನಿಸಿತ್ತು. ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶ್ರೀ. ಆರ್. ರುದ್ರೇಶರವರ ತನಿಖೆ ಮಾಡಿದ ಎನ್‍ಐಎ ಅವರನ್ನು ಧಾರ್ಮಿಕ ಉದ್ದೇಶಕ್ಕೆ ಹತ್ಯೆ ಮಾಡಿರುವುದು ಗಮನಕ್ಕೆ ಬಂದಿತು. ಒಟ್ಟಾರೇ ರಾಜ್ಯದಲ್ಲಿ 20 ಕ್ಕೂ ಅಧಿಕ ಹಿಂದೂ ನಾಯಕರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಜ್ಯ ಸರಕಾರದ ಮುಸ್ಲಿಂ ತುಷ್ಠೀಕರಣ ನೀತಿ ಮತ್ತು ಹಿಂದೂ ವಿರೋಧಿ ಧೋರಣೆಯೇ ಕಾರಣವಾಗಿದೆ.

RELATED ARTICLES  ಋಷಿಯುಗ- ಕಲಿಯುಗ ಶಿಕ್ಷಣದ ಸಮನ್ವಯ ಅಗತ್ಯ: ರಾಘವೇಶ್ವರ ಶ್ರೀ

ಹಾಗಾಗಿ ಈ ಹತ್ಯೆಗಳ ಹಿಂದಿರುವ ಜಾಲವನ್ನು ಪತ್ತೆ ಹಚ್ಚಿ ಸಂಬಂಧಿತರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಶನಿವಾರದಂದು ಹೊನ್ನಾವರದಲ್ಲಿ ತಹಶೀಲದಾರರ ಅನುಪಸ್ಥಿತಿಯಲ್ಲಿ ರಾಷ್ಟ್ರೀಯ ಹಿಂದೂ ಆಂದೋಲನದಲ್ಲಿ ಆಗ್ರಹಿಸಲಾಯಿತು ಮತ್ತು ಮುಂದಿನ ಬೇಡಿಕೆ ಇಡಲಾಯಿತು.

RELATED ARTICLES  ಚಾಲಕನ‌ ನಿಯಂತ್ರಣ‌ ತಪ್ಪಿ ಪಲ್ಟಿಯಾದ ಕಿತ್ತಳೆ ಹಣ್ಣು ತುಂಬಿದ ಲಾರಿ

ಈ ಸಂಧರ್ಭದಲ್ಲಿ ಸೌ.ವಾಸಂತಿ ಮುರ್ಡೇಶ್ವರ, ಶ್ರೀ.ಚಂದ್ರಶೇಖರ ಮೇಸ್ತ, ಪ್ರಕಾಶ ಮೇಸ್ತ, ಸೌ.ಜಯಶ್ರೀ ಕಲ್ಗಲ್, ಸೌ.ಪಾರ್ವತಿ ಭಟ್, ವಿವೇಕ ಶೇಟ ಮುಂತಾದವರು ಉಪಸ್ಥಿತರಿದ್ದರು.