ಕುಮಟಾ: ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಕುಮಟಾ ತಾಲೂಕಿನ ಮಿರ್ಜಾನಿನ ಬಿ.ಜಿ.ಎಸ್ ಕೇಂದ್ರೀಯ ವಿದ್ಯಾಲಯ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕುಮಟಾದ ಕ್ಷೇತ್ರ ಶಿಕ್ಷಣಾಧಿಕಾರಿಗಳು ದೀಪ ಬೆಳಗಿಸುವುದರ ಮೂಲಕ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು ಕರಾವಳಿಯಲ್ಲಿ ನಾನೂ ನೋಡಿದಂತೆ ಕನ್ನಡದ ಬಳಕೆ ಕಡಿಮೆ ಎಂದಿನಿಸುತ್ತಿದೆ. ನಮ್ಮ ಕನ್ನಡ ನಾಡಿನಲ್ಲಿ ಅನೇಕ ಸಾಹಿತಿಗಳು ಜನಿಸಿ ಕನ್ನಡ ಭಾಷೆಯ ಬಗ್ಗೆ ಅನೇಕ ಸಾಹಿತ್ಯಗಳನ್ನು ನಮಗೆ ನೀಡಿದ್ದಾರೆ. ಅತಂಹ ಕನ್ನಡ ಸಾಹಿತ್ಯವನ್ನು ಉಳಸಿಕೊಂಡು ಬೆಳಸಬೇಕಾಗಿದೆ. ಇಂದಿನ ವಿದ್ಯಾರ್ಥಿಗಳಲ್ಲಿ ಅನೇಕ ಪ್ರತಿಭೆಗಳು ಇದೆ. ಅತಂಹ ಪ್ರತಿಭೆಗಳಿಗೆ ಅವಕಾಶವನ್ನು ನೀಡುವ ಮೂಲಕ ಸಾಹಿತ್ಯಾಭರುಚಿಯನ್ನು ಬೆಳಸಬೇಕು. ಅಂದಾಗ ಮಾತ್ರ ನಮ್ಮ ಭಾಷೆ ಅಭಿವೃದ್ದಿಯಾಗುತ್ತದೆ ಎಂದರು.
ಡಾ.ಎ,ವಿ.ಬಾಳಿಗಾ ಕಾಲೇಜಿನ ಉಪನ್ಯಾಸಕರಾದ ಜಿ.ಎಲ್.ಹೆಗಡೆ ಮಾತನಾಡಿ, ಈ ಜಿಲ್ಲೆಯಲ್ಲಿರುವಷ್ಟು ವೈವಿದ್ಯಮಯ ಕನ್ನಡ ಮತ್ತೆ ಯಾವ ಜಿಲ್ಲೆಯಲ್ಲಿಯೂ ಇಲ್ಲ, ಅತ್ಯಂತ ಪ್ರಾಚೀನ ಪದಗಳು ಬೇಕಾದರೆ ನಮ್ಮ ಜಿಲ್ಲೆಗೆ ಬರಬೇಕಾಗುತ್ತದೆ ಎಂದರು.
ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಅರವಿಂದ ಕರ್ಕಿಕೋಡಿ ಮಾತನಾಡಿ, ಇಂತಹ ಸಮ್ಮೇಳನ ನಮ್ಮ ಭಾಷೆಯ ಕಿಚ್ಚನ್ನು ಹೆಚ್ಚಿಸಬೇಕು ಎಂದರು. ಅಲ್ಲದೆ, ಸಮ್ಮೆಳನದ ಮಧ್ಯೆ ಎದ್ದುಹೋದ ಕ್ಷೇತ್ರ ಶಿಕ್ಷಣಾಧಿಕರಿಗಳ ನಿಲುವನ್ನು ಖಂಡಿಸಿದರು. ಬೇರೆ ಜಿಲ್ಲೆಯಿಂದ ಆಗಮಿಸಿ ನಮ್ಮ ಜಿಲ್ಲೆಯಲ್ಲಿ ಕನ್ನಡ ಬಳಕೆ ಕಡಿಮೆ ಎನ್ನುವ ಶಿಕ್ಷಣಾಧಿಕಾರಿಗಳಿಗೆ ನಮ್ಮ ಜಿಲ್ಲೆಯ ಕನ್ನಡದ ಬಗ್ಗೆ ಎಷ್ಟು ತಿಳಿದಿದೆ ಎಂದು ಖಾರವಾಗಿ ಪ್ರಶ್ನಿಸಿದರು.
ಈ ಸಮ್ಮೆಳನದಲ್ಲಿ ವಿವಿಧ ತಾಲೂಕಿನ ಶಾಲೆಯಿಂದ ಆಗಮಿಸಿದ ವಿದ್ಯಾರ್ಥಿಗಳು ವಿಚಾರಗೋಷ್ಠಿ,ಕವಿಗೋಷ್ಠಿ,ಹನಿಗವನ,ಕಥಾವಾಚನ,ಪ್ರಭಂದ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಈ ಸಮ್ಮೆಳನದ ಸರ್ವಾಧ್ಯಕ್ಷತೆಯನ್ನು ವಿದ್ಯಾರ್ಥಿನಿ ಕೀರ್ತಿ ಹೆಗಡೆ ವಹಿಸಿದ್ದರು. ಕ.ಸಾ.ಪ ತಾಲೂಕಾಧ್ಯಕ್ಷ ಶ್ರೀಧರ ಉಪ್ಪಿನ ಗಣಪತಿ, ಎಂ.ಟಿ ಗೌಡ., ಬಿಜಿಜ್ ಮಿರ್ಜಾನ್ ಕೇಂದ್ರೀಯ ವಿದ್ಯಾಲಯದ ಪ್ರಾಚಾರ್ಯರಾದ ಶಶಿಕುಮಾರ ಉಪಸ್ಥಿತರಿದ್ದರು