ಶಿರಸಿ: ರಾಷ್ಟ್ರ ಪ್ರಶಸ್ತಿ ಪುರಸ್ಕತ ಬ್ರಹ್ಮಶ್ರೀ ಬಾಲಚಂದ್ರ ಶಾಸ್ತ್ರಿಗಳ ಹೆಸರಿನಲ್ಲಿ ಧಾರವಾಡದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸಂಸ್ಕøತ ಪಾಠಶಾಲೆ ನೀಡುವ ಬ್ರಹ್ಮಶ್ರೀ ಪ್ರಶಸ್ತಿ ಈ ಬಾರಿ ಮೇಲುಕೋಟೆ ಸಂಸ್ಕøತ ಮಹಾ ವಿದ್ಯಾಲಯದ ಪ್ರಾಚಾರ್ಯ ವಿ. ಉಮಾಕಾಂತ ಭಟ್ಟ ಕೆರೇಕೈ ಅವರಿಗೆ ಲಭಿಸಿದೆ.

ಉತ್ತರ ಕನ್ನಡದ ಶಿರಸಿ ತಾಲೂಕಿನ ಕೆರೇಕೈ ಮೂಲದ ಉಮಾಕಾಂತ ಭಟ್ಟ ಅವರು ಸಂಸ್ಕøತ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಯಕ್ಷಗಾನ, ತಾಳಮದ್ದಲೆಗೆ ನೀಡಿದ ಕೊಡುಗೆಯನ್ನು ಗಮನಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಧಾರವಾಡದ ಸಂಸ್ಕøತ ಪಾಠಶಾಲೆಗೆ ಏಳು ದಶಕಗಳಿಂದ ಶ್ರಮಿಸಿದ ಮೇರು ವಿದ್ವಾಂಸರಾದ ಶಾಸ್ತ್ರಿಗಳ ನಾಲ್ಕನೇ ಪುಣ್ಯ ಸ್ಮರಣೆ ಡಿ.25ರಂದು ಧಾರವಾಡದಲ್ಲಿ ನಡೆಯಲಿದ್ದು, ಅಂದು ಸಂಜೆ 5:30ಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

RELATED ARTICLES  ಹೆದ್ದಾರಿ ಅಗಲೀಕರಣ ಕಾಮಗಾರಿ.

ಹುಬ್ಬಳ್ಳಿ ಅದ್ವೈತ ವಿದ್ಯಾಶ್ರಮದ ಶ್ರೀಪ್ರಣವಾನಂದತೀರ್ಥ ಮಹಾಸ್ವಾಮಿಗಳು ಹಾಗೂ ಹೆಬ್ಬಳ್ಳಿ ಚೈತನ್ಯಾಶ್ರಮದ ಸದ್ಗುರು ದತ್ತಾವಧೂತ ಮಹಾರಾಜರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಕರ್ನಾಟಕ ಕಂಡ ಶ್ರೇಷ್ಠ ವಿದ್ವಾಂಸರು ಬಾಲಚಂದ್ರ ಶಾಸ್ತ್ರಿಗಳು. ಅವರ ಪುಣ್ಯ ಸ್ಮøತಿಯಲ್ಲಿ ಸಿಗುತ್ತಿರುವ ಪ್ರಶಸ್ತಿ ನನ್ನ ಶಾಸ್ತ್ರ ವ್ಯವಸಾಯಕ್ಕೆ ಸಿಗುತ್ತಿರುವ ಆಶೀರ್ವಾದ ಪೂರ್ವಕ ಬೆಂಬಲ ಎಂದು ಭಾವಿಸುತ್ತನೆ ಎಂದು ಉಮಾಕಾಂತ ಭಟ್ಟ ಸಂತಸ ವ್ಯಕ್ತಪಡಿಸಿದ್ದಾರೆ.

RELATED ARTICLES  ಕುಮಟಾ ಪುರಸಭೆ : ಅಧ್ಯಕ್ಷರಾಗಿ ಮೋಹಿನಿ ಗೌಡ, ಉಪಾಧ್ಯಕ್ಷರಾಗಿ ರಾಜೇಶ್ ಪೈ ಆಯ್ಕೆ