ಮಳೆಗಾಲದ ಪ್ರಾರಂಭದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವುದು ಆವಶ್ಯಕ.

ಈ ಸಮಯದಲ್ಲಿ  ತೇವಾಂಶದ ಪ್ರಮಾಣ ಹೆಚ್ಚಾಗಿರುವುದರಿಂದ ದೇಹದ ಮೇಲೆ ಇದು ಪರಿಣಾಮವಾಗುತ್ತದೆ. ಈ ಕಾಲದಲ್ಲಿ ಶೀತ, ನೆಗಡಿ, ಜ್ವರ ಸರ್ವೆಸಾಮಾನ್ಯ.ಮಳೆಗಾಲದಲ್ಲಿ ನೀರು ಕಲುಷಿತವಾಗುತ್ತದೆ ಸೊಂಕು ಬಹುಬೇಗ ತಗುಲುತ್ತದೆ.ದೇಹದ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.ಕಲುಷಿತ ನೀರಿನಿಂದ ಸೊಳ್ಳೆ ನೊಣಗಳ ಸಂಖ್ಯೆ ಹೆಚ್ಚಾಗುವುದು, ಜೊತೆಗೆ ರೋಗಗಳು ಹರಡುತ್ತವೆ. ಕೆಲವು ಸರಳವಾದ ಉಪಾಯಗಳನ್ನು ನಮ್ಮದಾಗಿಸಿಕೊಂಡಲ್ಲಿ ಅನಾರೋಗ್ಯದಿಂದ ದೂರವಿರಬಹುದು.

1. ಸುತ್ತ-ಮುತ್ತಲಿನ ಪರಿಸರ
ಸುತ್ತಮುತ್ತಲಿನ ಪರಿಸರ ನಮ್ಮ ಆರೋಗ್ಯವನ್ನು ಕೆಡಿಸುತ್ತದೆ.ನಮ್ಮ ವಾಸ ಸ್ಥಳದ ಸುತ್ತ ಮುತ್ತ ನೀರು ನಿಂತಿದ್ದರೆ ಸೊಳ್ಳೆ ಮತ್ತು ನೊಣಗಳ ಉತ್ಪತ್ತಿಗೆ ಕಾರಣವಾಗುವುದು. ಸೊಳ್ಳೆ ಮತ್ತು ನೊಣಗಳಿಂದ ರೋಗಗಳು ಹರಡುತ್ತವೆ. ಸುತ್ತ ಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಕಾಳಜಿವಹಿಸಿ. ಸೊಳ್ಳೆಗಳಿಂದ ಡೆಂಗ್ಯು, ಮಲೇರಿಯ, ಚಿಕನ್ ಗುನ್ಯಾ, ಆನೆ ಕಾಲು ರೋಗಗಳು ಮತ್ತು ನೊಣಗಳಿಂದ ಕಾಲರಾ ಹರಡುತ್ತದೆ.

RELATED ARTICLES  ‘ನಮ್ಮ ಮೆಟ್ರೋ’ದಲ್ಲಿ 80 ಹುದ್ದೆಗಳಿಗೆ ಅರ್ಜಿ ಆಹ್ವಾನ!

2. ಶರೀರವನ್ನು ಬೆಚ್ಚಗಿಡಿ.
* ಮಳೆಯಲ್ಲಿ ನೆನೆಯ ಬೇಡಿ.
* ಅಸ್ತಮಾ ಅಥವಾ ಮಧುಮೇಹದಿಂದ ಬಳಲುತ್ತಿದ್ದರೆ ಒದ್ದೆ ಗೋಡೆಗಳಿಂದ ದೂರವಿರಿ. ಇದು ಶಿಲೀಂಧ್ರ ಬೆಳವಣಿಗೆಯನ್ನು ಉತ್ತೇಜಿಸುವುದಲ್ಲದೆ ಅಪಾಯಕಾರಿ ಕೂಡ.

RELATED ARTICLES  Job News - 3484 ಹುದ್ದೆಗೆ ಅರ್ಜಿ ಸಲ್ಲಿಕೆ ಪ್ರಾರಂಭ

3. ಆಹಾರ
* ಬಿಸಿಯಾದ ಆಹಾರ ಸೇವಿಸಿ.
* ಗಿಡಮೂಲಿಕೆಗಳ ಚಹಾವನ್ನು ಸೇವಿಸಿ.
* ಸಾಕಷ್ಟು ನೀರನ್ನು ಕುಡಿಯಿರಿ
* ವಿಟಮಿನ್-ಸಿ ಹೊಂದಿರುವ ಆಹಾರವನ್ನು ಸೇವಿಸಿ.
* ಬೆಳ್ಳುಳ್ಳಿ, ಕೆಂಪು ಮೆಣಸು ಶುಂಠಿ, ಇಂಗು, ಜೀರಿಗೆ, ಅರಿಶಿಣ ಮತ್ತು ಕೊತ್ತಂಬರಿಗಳನ್ನು ಆಹಾರದ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಸಿ.
* ರೋಗನಿರೋಧಕ ಶಕ್ತಿಗೆ ಮತ್ತು ಜೀರ್ಣ ಕ್ರಿಯೆ ವರ್ಧಿಸಲು ಸಹಾಯಕ .
* ಹಸಿಯಾದ ಆಹಾರ ಸೇವಿಸ ಬೇಡಿ.
* ತರಕಾರಿಗಳನ್ನು ಚೆನ್ನಾಗಿ ತೊಳೆದು ಉಪಯೋಗಿಸಿ.