ಕುಮಟಾ : ತಾಲೂಕಿನ ಅರ್ಬನ ಕೋ-ಒಪರೇಟಿವ್ ಬ್ಯಾಂಕ್ ನ ಶತಮಾನೋತ್ಸವ ಸಮಾರಂಭ ತಾಲೂಕಿನ ಗಿಬ್ ಹೈಸ್ಕೂಲ ರಾಜೇಂದ್ರ ಸಂಭಾಗಂಣದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ದಿ ಸಚಿವರಾದ ಆರ್,ವಿ,ದೇಶಪಾಂಡೆ ದೀಪ ಬೆಳಗಿಸುವ ಮೂಲಕ ನೆರವರಿಸಿದರು. ನಂತರ ಇದೆ ವೇಳೆ ಬ್ಯಾಂಕಿನ ಶತವೈಭವದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಗೊಳಿಸಿದ ಅವರು ಬಳಿಕ ಮಾತನಾಡಿ ಯಾವ ಬ್ಯಾಂಕ್ ಆರೋಗ್ಯಕರವಾಗಿರುತ್ತದೆಯೋ ಅತಂಹ ಬ್ಯಾಂಕ ಗ್ರಾಹಕರ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗುತ್ತದೆ. ಅದೇ ರೀತಿ ಕುಮಟಾ ಅರ್ಬನ್ ಬ್ಯಾಂಕ ಕೂಡ ಉತ್ತಮ ಸೇವೆ ನೀಡಿರುವುದರಿಂದ ಇಂದು ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ ಎಂದ ಅವರು ಇಂದಿನ ಬ್ಯಾಂಕಗಳು ಕೈಗಾರಿಕೆಗೆ,ಗುಡಿಗಾರಿಕೆಗೆ ಸಹಾಯವಾಗುವಂತೆ ಸಾಲ ನೀಡಬೇಕು ಇದರಿಂದ ಅನೇಕ ಉದ್ಯೋಗಗಳು ಸೃಷ್ಠಿಯಾಗುತ್ತದೆ, ಮತ್ತು ಬ್ಯಾಂಕ ವ್ಯವಾಹರ ಕೂಡ ಸುಧಾರಿಸುತ್ತದೆ ಎಂದರು.

RELATED ARTICLES  ಕೊಲೆ ಮಾಡಿ ತಪ್ಪಿಸಿಕೊಂಡಿದ್ದ ವ್ಯಕ್ತಿ ಪೋಲೀಸ್ ಬಲೆಗೆ!

vlcsnap 2017 12 24 15h07m52s329

ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಯ ಬಗ್ಗೆ ಮಾತನಾಡಿದ ಮಾನ್ಯ ಸಚಿವರಾದ ಆರ್.ವಿ.ದೇಶಪಾಂಡೆ ಜಿಲ್ಲೆಯಲ್ಲಿ ಕುಮಟಾ.ಹೊನ್ನಾವರ ಶಿರಸಿಯತಂಹ ತಾಲೂಕುಗಳು ಬಹಳ ಶಾಂತಿಯುತವಾದ ತಾಲೂಕು ಅತಂಹ ಕಡೆ ಈ ರೀತಿಯಾಗಿ ಅಹಿತಕರಘಟನೆ ನಡೆದಿರುವುದು ನನಗೆ ಬಹಳ ಬೇಸರ ತಂದಿದೆ. ನನ್ನ ರಾಜಕೀಯ ಜೀವನದಲ್ಲಿ ಇತಂಹ ಘಟನೆ ನಮ್ಮ ಶಾಂತಿಯುತ ತಾಲೂಕಿನಲ್ಲಿ ನಡೆದಿರುವುದು ಮೊದಲನೇಯದಾಗಿದೆ. ಈ ರೀತಿಯಾಗಿ ಬೆಂಕಿ ಹಚ್ಚುವ ಮೂಲಕ ಯಾವುದೆ ಮುಖಂಡರುಗಳು ಸಮಸ್ಯೆ ಎದುರಿಸಿಲ್ಲ ಸಮಸ್ಯೆ ಎದುರಿಸಿರುವುದು ಅಮಾಯಕರು ಎಂದ ಅವರು ಅಮಾಯಕರಿಗೆ ತೊಂದರೆ ಆದರೆ ನಾವು ಸುಮ್ಮನೆ ಇರುವುದಿಲ್ಲ ಯಾರು ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾರೋ ಅತಂಹವರಿಗೆ ಶಿಕ್ಷೆ ಆಗಬೇಕು ಎಂದರು. ಮತ್ತು ರಾಜ್ಯದಲ್ಲಿ ಬಿ.ಜೆ.ಪಿ ನಾಯಕರು ಮನಸ್ಸಿಗೆ ಬಂದ ಹಾಗೇ ಏಕವಚನದಲ್ಲಿ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುತಿದ್ದಾರೆ. ಈ ಬಗ್ಗೆ ರಾಹೂಲ್ ಗಾಂದಿಯವರು ತೆಗದುಕೊಂಡ ನಿರ್ಧಾರವನ್ನು ಮೋದಿಯವರು ತೆಗೆದುಕೊಳ್ಳಬೇಕು ಎಂದು ಹೇಳಿದ್ರು.

RELATED ARTICLES  ಇಂದಿನ(ದಿ-08/02/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ

ಈ ಕಾರ್ಯಕ್ರಮದ ವೇದಿಕೆಯಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿ.ಉಪಸ್ಥಿತರಿದ್ದರು ಮತ್ತು ಬ್ಯಾಂಕ ಆಡಳಿತ ಮಂಡಳಿ ಅಧ್ಯಕ್ಷರಾದ ರಾಮನಾಥ ಶ್ರೀಧರ ಶಾನಭಾಗ್,ಉಪಾಧ್ಯಕ್ಷ ಮುಕುಂದ ಶಾನಭಾಗ್, ಆರ್,ಎಸ್,ಭಾಗ್ವತ್,ಮಧೂಸೂಧನ ಶೆಟ್ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕ್ ಗ್ರಾಹಕರು,ಷೇರುದಾರರು,ಸಾರ್ವಜನಿಕರು ಆಗಮಿಸಿದ್ರು, ಮಾಜಿ ಶಾಸಕ ದಿನಕರ ಶೆಟ್ಟಿ,ಶಿವಾನಂದ ಹೆಗಡೆ ಭಾಗಿಯಾಗಿದ್ರು.