ಹೊನ್ನಾವರ : ತಾಲ್ಲೂಕಿನ ಬಡಗಣಿ ಗೋ ಗ್ರೀನ್ ಹೋಮ್ ಸ್ಟೇಯಲ್ಲಿ ನಡೆದ ‘ನಾವು ನಮ್ಮಿಷ್ಟ ‘ ನಂಗೋ ನಂಗ್ಲಿಷ್ಟ’ ಫೇಸ್ ಬುಕ್ ಗೆಳೆಯರ “ಸ್ನೇಹ ಸಂಭೃಮ” ಯಶಸ್ವಿಯಾಯಿತು .

“ನಿಮ್ಮ ಬಿಡುವಿನ ಸಮಯದಲ್ಲಿ ಬನ್ನಿ.. ಬಿಂದಾಸ್ ಮಾತಾಡಿ..ನಾವು ನಮ್ಮಿಷ್ಟ. ನಂಗೋ ನಂಗ್ಲಿಷ್ಟ” ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಾರಂಭವಾದ ಈ ಫೇಸ್ ಬುಕ್ ಗ್ರೂಪ್ ನ ವಾರ್ಷಿಕ ಸ್ನೇಹ ಸಮ್ಮೇಳನ ಬಹಳ ಯಶಸ್ವಿಯಾಗಿ ಸಂಪನ್ನವಾಯಿತು .

ನಾವು ನಮ್ಮಿಷ್ಟ ಎಂಬ ಹೆಸರಿನ ಫೇಸ್ಬುಕ್ ಬಳಗದ ಮಿತ್ರರೆಲ್ಲ ಸೇರಿ ವರ್ಷಕ್ಕೊಮ್ಮೆ ನಡೆಸುವ ಸ್ನೇಹ ಸಂಭ್ರಮ ಈ ವರ್ಷದಲ್ಲಿ ಅದ್ಧೂರಿಯಾಗಿ ಜರುಗಿ ಬಹಳ ಯಶಸ್ಸು ಕಂಡಿದ್ದು ವಿಶೇಷ .

ಗ್ರೂಪ್ನ ಅಡ್ಮಿನ್ ಗಳಾದ ಶ್ರೀ ಸೂರ್ಯನಾರಾಯಣ ಹೆಗಡೆ ಕಡತೋಕ ಮತ್ತು ಶ್ರೀಮತಿ ಸಾವಿತ್ರಿ ರಮೇಶ್ ಶಿರಸಿ ಇವರೊಂದಿಗೆ ಇವರ ಮಿತ್ರ ವೃಂದದವರು ಸೇರಿ ನಡೆಸಿದ ಈ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು .

ಪ್ರತಿದಿನ ಕ್ರಿಯಾಶೀಲರಾಗಿರುವ ಎರಡು ಸಾವಿರಕ್ಕೂ ಹೆಚ್ಚಿನ ಗೆಳೆಯರನ್ನು ಹೊಂದಿರುವ ಈ ಗ್ರೂಪ್ ನಲ್ಲಿ ಯುವಕ ಯುವತಿ ಯರಲ್ಲದೇ ಮಧ್ಯ ವಯಸ್ಸಿನ ಹಿರಿಯ ವಯಸ್ಸಿನ ಮಹನೀಯರು ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದು ಇಂದು ಅವರೆಲ್ಲರೂ ಸ್ನೇಹಕೂಟದಲ್ಲಿ ಹಾಜರಾಗಿ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟರು .

RELATED ARTICLES  ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ. 96.77

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಾನಂದ ಹೆಗಡೆ ಕಡತೋಕಾ , ಶ್ರೀಕುಮಾರ್ ಟ್ರಾವೆಲ್ಸ್ ನ ಮಾಲೀಕರಾದ ವೆಂಕಟರಮಣ ಹೆಗಡೆ ಕವಲಕ್ಕಿ ,ಅವರ ಜೊತೆಯಲ್ಲಿ ವಿವಿಧ ಗ್ರೂಪ್ನ ಅಡ್ಮಿನ್ ಗಳಾದ ವಿನಾಯಕ ಬ್ರಹ್ಮೂರು ,ಪ್ರವೀಣ್ ಹೆಗಡೆ, ಸೀಮಾ ಅಬ್ರಿ, ಶುಭಾ ಗಿರಣಿ ಮನೆ ಮುಂತಾದವರು ಹಾಜರಿದ್ದರು .

ಈ ಸಂದರ್ಭದಲ್ಲಿ ಮಾತನಾಡಿದ ಶಿವಾನಂದ ಹೆಗಡೆಯವರು ಫೇಸ್ ಬುಕ್ ನ ಗೆಳೆಯರೆಲ್ಲ ಒಂದೆಡೆ ಸೇರಿ ಒಂದೇ ಕುಟುಂಬದವರಂತೆ ಕಾರ್ಯಕ್ರಮ ನಡೆಸುತ್ತಿರುವುದು ಬಹಳ ಸಂತಸ ತಂದಿದೆ ಎಂದರು .

ವೆಂಕಟರಮಣ ಹೆಗಡೆ ಮಾತನಾಡಿ ನಮ್ಮ ಸಮಾಜದವರು ಒಟ್ಟಿಗೆ ಸೇರುವುದು ಬಹಳ ಕಷ್ಟ.ಇಂತಹ ಸಮಾಜ ಬಂಧುಗಳು ಒಂದೇ ಕುಟುಂಬದಂತೆ ಸೇರಿ ಸಂತಸದಿಂದ ಇರುವುದು ನಮಗೂ ಹಾಗೂ ನಮ್ಮ ಸಮಾಜದವರಿಗೂ ಅತ್ಯಂತ ಹರ್ಷ ತಂದಿದೆ ಎಂದು ಸಂತೋಷ ಹಂಚಿಕೊಂಡರು .

v
ಗ್ರೂಪ್ನ ಅಡ್ಮಿನ್ ಆದ ಸೂರ್ಯನಾರಾಯಣ ಹೆಗಡೆ ಎಲ್ಲರನ್ನೂ ಅತ್ಯಂತ ಪ್ರೀತಿಯಿಂದ ಸಭೆಗೆ ಸ್ವಾಗತಿಸಿದರು .ಸ್ನೇಹ ಕೂಟದ ಸಂಪೂರ್ಣ ಜವಾಬ್ದಾರಿ ವಹಿಸಿದ್ದ ಇವರು ಅತ್ಯಂತ ಕ್ರಿಯಾಶೀಲರಾಗಿ ಎಲ್ಲರನ್ನೂ ಹುರಿದುಂಬಿಸುತ್ತಾ ಕಾರ್ಯಕ್ರಮದಲ್ಲಿ ಅಚ್ಚುಕಟ್ಟಾಗಿ ಎಲ್ಲ ವ್ಯವಸ್ಥೆ ಕಲ್ಪಿಸಿದರು .

RELATED ARTICLES  ಕುಮಟಾದಲ್ಲಿ ಇಂದೂ ಮುಂದುವರೆದ ಕೊರೋನಾ ಆರ್ಭಟ

ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು ಯುವಕ ಯುವತಿಯರಿಗಾಗಿ ವಿವಿಧ ಸ್ಪರ್ಧೆಗಳು ಜೊತೆಗೆ ರಸಪ್ರಶ್ನೆ ಸ್ಪರ್ಧೆ ಎಲ್ಲರನ್ನೂ ಆಕರ್ಷಿಸಿತು . ಬಹುಮಾನ ಪಡೆದ ವಿಜೇತರಿಗೆ ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು .ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಿದವು.

ಹವ್ಯಕ ಸಂಪ್ರದಾಯ ಹಾಗೂ ಹವ್ಯಕರ ಪರಂಪರೆಯನ್ನು ಉಳಿಸಿ ಬೆಳೆಸುವ ಪದಾರ್ಥ ಗಳನ್ನೊಳಗೊಂಡ ಊಟ ಎಲ್ಲರನ್ನೂ ಆಕರ್ಷಿಸಿತು . ಬಗೆಬಗೆಯ ಸಿಹಿತಿಂಡಿಗಳ ಜೊತೆಗೆ ಹವ್ಯಕ ಪರಂಪರೆಯಲ್ಲಿ ಬಂದ ಅನೇಕ ಪದಾರ್ಥಗಳು ಜನ ಮೆಚ್ಚುಗೆ ಗಳಿಸಿದವು .

ಇದೇ ಸಂದರ್ಭದಲ್ಲಿ ಜಗ್ಗರ್ಸಿ/ಸಂಧಿಗ್ದಮ್ ಕಿರುಚಿತ್ರದ ಪ್ರದರ್ಶನ ಕೂಡ ನಡೆಯಿತು .ಹವ್ಯಕರನ್ನೇ ಹೆಚ್ಚಾಗಿ ಒಳಗೊಂಡ ಈ ಚಿತ್ರ ಅತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡಿತು .

IMG 20171225 WA0001

ಗ್ರೂಪ್ ನ ಕ್ರಿಯಾಶೀಲ ಸದಸ್ಯರಾದ ಜಯದೇವ ಬಳಗಂಡಿ ಮತ್ತು ಕಲ್ಪನಾ ಹೆಗಡೆ ಇವರು ಎಲ್ಲರೊಂದಿಗೂ ಪ್ರೀತಿಯಿಂದ ಬೆರೆಯುತ್ತ ವೈಶಿಷ್ಟ್ಯ ಪೂರ್ಣವಾಗಿ ಕಾರ್ಯಕ್ರಮ ನಿರೂಪಿಸಿದರು . ಅತ್ಯಂತ ಮನೋಜ್ಞವಾಗಿ ಪ್ರಶ್ನೆಗಳನ್ನು ಕೇಳುತ್ತಾ ಎಲ್ಲರ ಅಭಿಪ್ರಾಯ ಸಂಗ್ರಹಿಸುತ್ತ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಿಸಿದರು .