ಕುಮಟಾ : ಮಹದಾಯಿ ವಿವಾದಕ್ಕೆ ಸಂಬಂಧಿಸಿದ ಪ್ರಶ್ನೆ ಮಾತ್ರ ಕೇಳಬೇಡ್ರಿ.. ಬೇರೆ ಏನಾದರೂ ಕೇಳಿ….’

ಹೀಗೆ ಹೇಳಿದ್ದು ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್‌.

ಜಿ.ಎಸ್.ಬಿ ಯುವ ವಾಹಿನಿ ಬೆಳ್ಳಿ ಹಬ್ಬ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದ ಅವರು ಸ್ಥಳೀಯ ಬಿಜೆಪಿ ಕಚೇರಿಗೂ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು.

RELATED ARTICLES  ಸನದಿ ಬುಕ್ ಕಾರ್ನರ್‌ಗೆ ಚಾಲನೆ: ನಜೀರಾ ಸನದಿ ಅಭಿಮತ

ಬೈನಾ ಬೀಚ್‌ ನಿರಾಶ್ರಿತರ ಪುನರ್‌ವಸತಿ ಕುರಿತು ಕೇಳಿದ ಪ್ರಶ್ನೆಗೆ ‘ಆ ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ಅದರ ಬಗ್ಗೆಯೂ ಮಾತನಾಡುವುದಿಲ್ಲ’ ಎಂದು ಪರಿಕ್ಕರ್ ಹೇಳಿದರು. ಪರಿಕ್ಕರ್‌ ಅವರು ಪಣಜಿಯಿಂದ ರೈಲಿನಲ್ಲೇ ಬಂದು, ರೈಲಿನಲ್ಲೇ ವಾಪಸ್ಸಾದರು.

RELATED ARTICLES  ಡಿ.15ಕ್ಕೆ ಧಾರಾ ರಾಮಾಯಣ ಮಹಾಮಂಗಲ: ಶ್ರೀರಾಮ ಸಾಮ್ರಾಜ್ಯ ಪಟ್ಟಾಭಿಷೇಕ