ಗೋಕರ್ಣ: ಸರಳತೆ ಮತ್ತು ಸ್ಪಷ್ಟತೆ ನಿಜವಾದ ಜ್ಞಾನ ಮಾರ್ಗಿಗಳ ಪ್ರಧಾನ ಗುಣ ಲಕ್ಷಣಗಳಾಗಿವೆ.ಜ್ಞಾನ ಮಾರ್ಗದಲ್ಲಿರುವವರು ಎಂದಿಗೂ ವೈಭವ ಮತ್ತು ಆಡಂಬರಗಳಿಂದ ಮುಕ್ತರಾಗಿರುತ್ತಾರೆ. ಇದಕ್ಕೆ ಮಹರ್ಷಿ ದೈವರಾತರು ಮತ್ತು ಅವರ ಜೀವನ ನಿದರ್ಶನವಾಗಿದೆ ಎಂದು ದೈವರಾತರ ಪುತ್ರಿ ಭಾರತಿ ಶರ್ಮಾ ನುಡಿದರು.

ಅವರು ದೈವರಾತರ ಕರ್ಮ ಭೂಮಿ ಅಶೋಕೆಯಲ್ಲಿ ಮಹರ್ಷಿಗಳ ಜನ್ಮ ದಿನಾಚರಣೆ ನಿಮಿತ್ತ ನಡೆದ ನೂತನ ಗೀತಮಾಲಿಕಾ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

RELATED ARTICLES  ಹೊನ್ನಾವರದಲ್ಲಿ 10 ಯಲ್ಲಾಪುರದಲ್ಲಿ 3 ಕೊರೋನಾ ಕೇಸ್

ಜ್ಞಾನಿ ಆದವನು ಎಲ್ಲ ಧರ್ಮವನ್ನು ಸಮಾನವಾಗಿ ಗೌರವಿಸುತ್ತಾನೆ ಎನ್ನುವುದಕ್ಕೆ ದೈವರಾತರು ಉದಾಹರಣೆ. ಅವರು ಕುರಾನ್ ಮತ್ತು ಗುರು ಗ್ರಂಥ ಸಾಹಿಬ್‍ಗಳನ್ನು ಓದುತ್ತಿದ್ದರು. ಅವರ ಆಶ್ರಮದಲ್ಲಿ ಜಾತಿ ಮತ್ತು ಧರ್ಮಗಳ ಭೇದ ಇರಲಿಲ್ಲ. ವೇದವನ್ನು ಮಾತ್ರ ನಂಬುತ್ತಿದ್ದ ಮಹರ್ಷಿಗಳು ಪಶು ಯಜ್ಞಾದಿ ಆಡಂಬರದ ಆಚರಣೆಗಳನ್ನು ಖಂಡಿಸುತ್ತಿದ್ದರು. ವೇದವನ್ನು ಒಪ್ಪುವ ಎಲ್ಲ ಭಾರತೀಯರೂ ವೈದಿಕರು ಎಂಬ ವಿಶಾಲ ನಿಲುವು ಅವರದಾಗಿತ್ತು. ಎಂದು ಸಾಮಾನ್ಯರಿಗೆ ತಿಳಿದಿರದ ದೈವರಾತರ ಮೇರು ವ್ಯಕ್ತಿತ್ವವನ್ನು ಅವರು ವಿವರಿಸಿದರು.

RELATED ARTICLES  ಮನೆಯಮೇಲೆ ಕುಸಿದ ಗುಡ್ಡ : ಮನೆಯೊಳಗೆ ಸಿಲುಕಿದ ಮನೆ ಮಂದಿ.

ದೈವರಾತರ ಪುತ್ರ ದೇವಶ್ರವ ಶರ್ಮಾ ಮಾತನಾಡಿ ದೈವರಾತರ ಆದರ್ಶ ಮತ್ತು ಸಿದ್ಧಾಂತಗಳನ್ನು ಇಂದಿನ ಆಧುನಿಕ ಸಮಾಜಕ್ಕೆ ತಲಪಿಸುವ ಅಗತ್ಯ ಇದೆ.ಇದರಿಂದ ಸಮಾಜದಲ್ಲಿ ಸುಪ್ತಾವಸ್ಥೆಯಲ್ಲಿರುವ ಆಧ್ಯಾತ್ಮಿಕ ಗುಣವನ್ನು ಜಾಗೃತಗೊಳಿಸಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಮಹರ್ಷಿ ದೈವರಾತ ವಿರಚಿತ ಗೀತಮಾಲಿಕಾ ಗ್ರಂಥವನ್ನು ದೈವರಾತ ಕುಟುಂಬದವರು ಲೋಕಾರ್ಪಣೆ ಮಾಡಿದರು.
ಸಚಿದೇವಿ ವೇದೇಶ್ವರ, ವೇದಶ್ರವ ಶರ್ಮಾ ಇದ್ದರು.