ಮುಂಬಯಿ : “ದಿ ಮ್ಯಾಕ್ಸಿಮಮ್‌ ಸಿಟಿ’ ಎಂದೇ ಖ್ಯಾತಿ ಪಡೆದಿರುವ ಮುಂಬಯಿ ಇಂದು ಡಿ.25ರ ಕ್ರಿಸ್‌ಮಸ್‌ ದಿನ ಪ್ರಪ್ರಥಮ ಹವಾನಿಯಂತ್ರಿತ (ಎಸಿ) ಲೋಕಲ್‌ ಟ್ರೈನ್‌ ಭಾಗ್ಯವನ್ನು ಪಡೆದಿದೆ.

ಈ ನೂತನ ಎಸಿ ಲೋಕಲ್‌ ಟ್ರೈನ್‌ ಆರಂಭದಲ್ಲಿ ಚರ್ಚ್‌ಗೇಟ್‌ ನಿಂದ ಬೊರಿವಿಲಿ ವರೆಗೆ ಓಡಾಡಲಿದ್ದು ಅನಂತರ ವಿರಾರ್‌ ವರೆಗೂ ತನ್ನ ಒಡಾಟವನ್ನು ವಿಸ್ತರಿಸಲಿದೆ.

ವೆಸ್ಟ್‌ರ್ನ್ ರೈಲ್ವೆ ಇಂದು ಬೆಳಗ್ಗೆ 10.30ಕ್ಕೆ ಬೊರಿವಲಿ-ಚರ್ಚ್‌ಗೇಟ್‌ ಸೇವೆಯ ಮೊದಲ ಎಸಿ ಲೋಕಲ್‌ ಟ್ರೆನ್‌ಗೆ ಹಸಿರು ನಿಶಾನೆ ತೋರಿದೆ.

RELATED ARTICLES  SSLC ಪರೀಕ್ಷೆ ಅಧಿಸೂಚನೆ ಪ್ರಕಟ

2018ರ ಜನವರಿ 1ರಿಂದ ಈ ಮೊದಲ ಎಸಿ ಲೋಕಲ್‌ ಟ್ರೈನ್‌ ತನ್ನ ನಿತ್ಯದ ಓಡಾಟವನ್ನು ಚರ್ಚ್‌ಗೇಟ್‌ನಿಂದ ವಿರಾರ್‌ ತನಕ ವಿಸ್ತರಿಸಲಿದೆ. ದಿನಕ್ಕೆ ಈ ಲೋಕಲ್‌ ಎಸಿ ಟ್ರೈನ್‌ 12 ಬಾರಿ ಓಡಾಟ ಕೈಗೊಳ್ಳಲಿದೆ.

ಚರ್ಚ್‌ಗೇಟ್‌ – ವಿರಾರ್‌ ವರೆಗಿನ ಓಡಾಟದ ಈ ಎಸಿ ಲೋಕಲ್‌ ಟ್ರೈನ್‌ ಈ ಮುಂದಿನ ಸ್ಟೇಶನ್‌ಗಳಲ್ಲಿ ನಿಲುಗಡೆ ಹೊಂದಿದೆ : ಮುಂಬಯಿ ಸೆಂಟ್ರಲ್‌, ದಾದರ್‌, ಬಾಂದ್ರಾ, ಅಂಧೇರಿ, ಬೊಲಿವಲಿ, ಭಯಾಂದರ್‌, ವಸಾಯ್‌ ರೋಡ್‌.

RELATED ARTICLES  ಚುನಾವಣಾ ಸ್ಪರ್ಧೆಯಿಂದೆ ಹಿಂದೆ ಸರಿದ ಕುಂದಾಪುರದ ವಾಜಪೇಯಿ ಖ್ಯಾತಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ.

ಮೂರು ಫಾಸ್ಟ್‌ ಸರ್ವೀಸ್‌ಗಳು ಮುಂಬಯಿ ಸೆಂಟ್ರಲ್‌, ದಾದರ್‌, ಬಾಂದ್ರಾ ಮತ್ತು ಅಂಧೇರಿ ಸ್ಟೇಶನ್‌ಗಳಲ್ಲಿ ಮಾತ್ರ ನಿಲುಗಡೆ ಹೊಂದಿವೆ.

ಲೋಕಲ್‌ ಎಸಿ ಟ್ರೈನ್‌ ಪ್ರಯಾಣ ಶುಲ್ಕ ಸಾಮಾನ್ಯ ಲೋಕಲ್‌ ಟ್ರೈನ್‌ಗಳಿಗಿಂತ 1.3 ಪಟ್ಟು ಹೆಚ್ಚಿದೆ.