ಬೆಂಗಳೂರು: ಮಹದಾಯಿ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಸ್ಪಂದಿಸಬೇಕೆಂದು ಒತ್ತಾಯಿಸಿ ಡಿಸೆಂಬರ್ 27ರಂದು ಉತ್ತರ ಕರ್ನಾಟಕ ಬಂದ್ ಗೆ ಕಳಸಾ ಬಂಡೂರಿ ಹೋರಾಟ ಸಮಿತಿ ಕರೆ ನೀಡಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ಮಹದಾಯಿ ವಿಚಾರದಲ್ಲಿ ಮಾತಿಗೆ ತಪ್ಪಿದ್ದಾರೆ. ಅಲ್ಲದೇ ಬಿಜೆಪಿ, ಕಾಂಗ್ರೆಸ್ ಸರಿಯಾಗಿ ಸ್ಪಂದಿಸುತ್ತಿಲ್ಲ,ಈ ನಿಟ್ಟಿನಲ್ಲಿ ನಮ್ಮ ಹೋರಾಟಕ್ಕೆ ಎಚ್ಚರಿಕೆ ಸಂದೇಶ ರವಾನಿಸುವ ಸಲುವಾಗಿ ಬಂದ್ ಗೆ ಕರೆ ಕೊಟ್ಟಿರುವುದಾಗಿ ಸಮಿತಿ ಹೇಳಿದೆ.

RELATED ARTICLES  ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಕಲೆಯ ಧ್ರುವನಕ್ಷತ್ರ: ರಾಘವೇಶ್ವರ ಶ್ರೀ ಬಣ್ಣನೆ

ಕಳಸಾ ಬಂಡೂರಿ ಹೋರಾಟ ಸಮಿತಿ ಬಂದ್ ಕರೆಗೆ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ನೂರಾರು ಸಂಘಟನೆಗಳು ಬೆಂಬಲ ಸೂಚಿಸಿವೆ. ಡಿಸೆಂಬರ್ 27ರ ಉತ್ತರ ಕರ್ನಾಟಕ ಬಂದ್ ವೇಳೆ ಮುಂದಿನ ಹೋರಾಟದ ರೂಪರೇಷೆ ಬಗ್ಗೆ ಚರ್ಚಿಸುವುದಾಗಿ ತಿಳಿಸಿವೆ.

RELATED ARTICLES  ಕಾಯಿಲೆ ಬಿದ್ದ ಬಾಕ್ಸರ್ ಗೆ ಕಿಂಗ್ ಖಾನ್ ಸಹಾಯ ಹಸ್ತ… ಹೃದಯ ವೈಶಾಲ್ಯತೆ ಮೆರೆದ ಶಾರುಖ್