ಸಾಗರ: ಇಲ್ಲಿನ ವಿಧಾನಸಭಾ ಕ್ಷೇತ್ರಕ್ಕೆ ಬೇಳೂರು  ಗೋಪಾಲಕೃಷ್ಣರಿಗೆ ಟಿಕೆಟ್ ನಿರಾಕರಿಸಲಾಗಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದ್ದಂತೆ ಕುಪಿತಗೊಂಡ ಬೇಳೂರು ಬೆಂಬಲಿಗರು, ಸಾಗರ ಬಿಜೆಪಿ ಯುವಮೋರ್ಚಾ ಆಧ್ಯಕ್ಷ ಗಣೇಶ್ ಗಟ್ಟಿ ಯೆನ್ನುವವರ ಮೇಲೆ ಮಾರಣಾಂತಿಕ ಹಲ್ಲೆ ನೆಡೆಸಿದ ಬಗ್ಗೆ ವರದಿಯಾಗಿದೆ.

ಇದೇ ತಿಂಗಳು 28ರಂದು ಪರಿವರ್ತನಾ ರ್ಯಾಲಿ ಸಾಗರಕ್ಕೆ ಆಗಮಿಸುತ್ತಿದ್ದು, ಗಣೇಶ್ ಗಟ್ಟಿಯವರು ಸಾಗರದಲ್ಲಿ ಬ್ಯಾನರ್ ಬಂಟಿ ಬಂಟಿಗ್ಸ್ ಕಟ್ಟಿಸುತ್ತಿದ್ದರು, ಟಿಕೆಟ್ ನಿರಾಕರಿಸಲಾಗಿದೆಯೆಂಬ ಮಾಹಿತಿ ಸಿಕ್ಕಿದ ಬೇಳೂರು ಬೆಂಬಲಿಗರು ಮೂರು ಕಾರುಗಳಲ್ಲಿ ಆಗಮಿಸಿ , ಯುವಮೋರ್ಚಾ ಅಧ್ಯಕ್ಷರಿಗೆ ವಾಚಾಮಗೋಚರ ಬೈದು, ಹಲ್ಲೆನೆಡೆಸಿದ್ದಾರೆ‌. ಹಲ್ಲೆಕೋರರ ನೇತೃತ್ವವನ್ನು ಸ್ವತಃ ಗೋಪಾಲಕೃಷ್ಣರ ಅಣ್ಣನ ಮಗ ಅಶೊಕ್ ಬೇಳೂರು ವಹಿಸಿದ್ದರುಯೆನ್ನಲಾಗಿದೆ, ಈ ಘಟನೆಯ ಕುರಿತು ಸಾಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೋಲಿಸರು  IPC 323,324,506,149 ಅಡಿಯಲ್ಲಿ  ಎಫ್ ಆಯ್ ಆರ್ ದಾಖಲಿಸಿ, ಪ್ರಕರಣದ ತನಿಖೆ ಮಾಡುತ್ತಿದ್ದಾರೆ, ಆರೋಪಿಗಳ ಪೋಲೀಸರು ಬಂಧಿಸಿದ ಬಗ್ಗೆ ಮಾಹಿತಿ ಸಿಕ್ಕಿರುವುದಿಲ್ಲ.
IMG 20171225 WA0012

RELATED ARTICLES  ಕುಖ್ಯಾತ ಅಂತರ್ ರಾಜ್ಯ ಕಳ್ಳರು ಅಂದರ್ !

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್’ಗಾಗಿ ಹಾಲಪ್ಪ ಹಾಗು ಬೇಳೂರು ನಡುವೆ ತೀವ್ರ ಹಣಾಹಣಿಯಿತ್ತು, ಆದರೆ ಬೇಳೂರುರವರ ಪದೇ ಪದೇ ಪಕ್ಷಾಂತರದ ಹಿನ್ನಲೆ ಹಾಗೂ ಸಾಗರದ ಜನತೆಗೆ ಬೇಳೂರು ಬಗ್ಗೆ ಸದಾಭಿಪ್ರಾಯ ಇಲ್ಲವೆಂಬ ಆಂತರಿಕ ವರದಿ ಹಿನ್ನಲೆಯೇ ಬೇಳೂರು ಬೆಂಬಲಿಗರು ಧಾಂದಲೆ ನೆಡಿಸಿದ್ದಾರೆಯೆಂದು ನಂಬಲರ್ಹ ಮೂಲಗಳು ಸತ್ವಾಧಾರಕ್ಕೆ ತಿಳಿಸಿವೆ.

RELATED ARTICLES  ಕೆನರಾ ಎಜ್ಯುಕೇಶನ್ ಸೊಸೈಟಿಯ ಗಿಬ್ ಇಂಗ್ಲೀಷ್ ಮೀಡಿಯಮ್ ನರ್ಸರಿ ಮತ್ತು ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ.