Satwadhara News

ಕೊಂಕಣದ ಸಿ.ವಿ.ಎಸ್.ಕೆಯಲ್ಲಿ ‘ಓಶಿಯನ್ ಕ್ಲಬ್’ ಉದ್ಘಾಟನೆ

ಕುಮಟಾ: ಇಲ್ಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆ ಹಾಗೂ ಸರಸ್ವತಿ ಪಿ.ಯು. ಕಾಲೇಜ ಆಶ್ರಯದಲ್ಲಿ ವಿಶಿಷ್ಟ ‘ಓಶಿಯನ್ ಕ್ಲಬ್’ನ್ನು ಇತ್ತೀಚಿಗೆ ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಸರಾಂತ ಇಸ್ರೋ ನಿವೃತ್ತ ವಿಜ್ಞಾನಿಗಳಾದ ಶ್ರೀ ಪಿ.ಜೆ.ಭಟ್ಟ, ಸಮುದ್ರ ಸಂಪತ್ತಿನ ಮಹತ್ವ ಮತ್ತು ಅದರ ಸಂರಕ್ಷಣೆ ಕುರಿತು ಮಾತನಾಡಿ, ತದನಂತರ ಉಪಗ್ರಹವನ್ನು ಕಕ್ಷೆಗೆ ಹಾರಿ ಬಿಡುವಾಗ ಕೈಗೊಳ್ಳುವ ಹಲವು ಮಜಲುಗಳು ಹಾಗೂ ಸಂಪರ್ಕ ಉಪಗ್ರಹಗಳ ಮಹತ್ವ ಮತ್ತು ಉಪಯೋಗಗಳ ಕುರಿತು ಪಿ.ಪಿ.ಟಿ ಮೂಲಕ ವಿಸ್ತøತ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜ್ಞಾನಿ ಡಾ| ಎಂ.ಡಿ.ಸುಭಾಷ್‍ಚಂದ್ರನ್ ಹಾಗೂ ಮೀನುಗಾರರ ಸಂಘದ ಕಾರ್ಯದರ್ಶಿಗಳಾದ ಶ್ರೀ ಜೈ ವಿಠ್ಠಲ್ ಕುಬಾಲ್ ಇವರುಗಳು ಮಾತನಾಡಿ, ಮಾನವನ ದುರಾಸೆಯಿಂದ ಇಂದು ನೈಸರ್ಗಿಕ ಸಂಪತ್ತು ಅಳಿವಿನಂಚಿನಲ್ಲಿದೆ ಎಂದೂ, ಕರಾವಳಿ ಭಾಗದಲ್ಲಿರುವ ನಾವು ಅಳಿವಿನಂಚಿನಲ್ಲಿರುವ ಈ ಸಾಗರ ಸಂಪತ್ತನ್ನು ಉಳಿಸಬೇಕಾದ ಗುರುತರ ಜವಾಬ್ದಾರಿಯ ಕುರಿತು ಸವಿಸ್ತಾರವಾಗಿ ವಿವರಿಸಿದರು.
ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಕಾಶೀನಾಥ ನಾಯಕರವರು ಶುಭ ಹಾರೈಸಿದರು. ಮುಖ್ಯಾಧ್ಯಾಪಕಿ ಶ್ರೀಮತಿ ಸುಮಾ ಪ್ರಭು, ಪ್ರಾಚಾರ್ಯೆ ಶ್ರೀಮತಿ ಸುಲೋಚನಾ ರಾವ್, ಶೈಕ್ಷಣಿಕ ಸಲಹೆಗಾರರಾದ ಶ್ರೀ ಆರ್.ಎಚ್.ದೇಶಭಂಡಾರಿ ಹಾಗೂ ಓಶಿಯನ್ ಕ್ಲಬ್‍ನ ವಿದ್ಯಾರ್ಥಿ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಸುಮಾ ಪ್ರಭು ಸ್ವಾಗತಿಸಿದರು, ಶಿಕ್ಷಕ ಭಾಸ್ಕರ ಹೆಗಡೆ ವಂದಿಸಿದರು, ಶಿಕ್ಷಕ ಪ್ರಕಾಶ ಗಾವಡಿ ನಿರೂಪಿಸಿದರು, ನಮೃತಾ ಸಂಗಡಿಗರು ಪ್ರಾರ್ಥನೆ ಹಾಡಿದರು.

Comments

Leave a Reply

Your email address will not be published. Required fields are marked *