Satwadhara News

ಮನೆಗೆ ಅಳವಡಿಸಿದ್ದ ವಿದ್ಯುತ್ ಮಾಪಕವನ್ನು (ಮೀಟರ್ ) ಎಗರಿಸಿದ ಕಳ್ಳರು.

ಯಲ್ಲಾಪುರ : ತಾಲೂಕಿನ ಆನಗೋಡಿನಲ್ಲಿ ಮನೆಗೆ ಅಳವಡಿಸಿದ್ದ ವಿದ್ಯುತ್ ಮಾಪಕವನ್ನು (ಮೀಟರ್ )ಕಳ್ಳರು ಕದ್ದೊಯ್ದ ಘಟನೆ ನಡೆದಿದೆ. ಆನಗೋಡಿನ ಕೃಷಿಕ ಭಾಸ್ಕರ ಭಟ್ಟ ಅವರ ಮನೆಗೆ ಹೆಸ್ಕಾಂ ಇಲಾಖೆಯ ವತಿಯಿಂದ ಅಳವಡಿಸಿದ್ದ ವಿದ್ಯುತ್ ಮಾಪಕವನ್ನು ಕಳ್ಳತನ ಮಾಡಲಾಗಿದೆ. ವಿದ್ಯುತ್ ಮಾಪಕವನ್ನು ಕಳ್ಳತನ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹೆಸ್ಕಾಂ ಶಾಖಾಧಿಕಾರಿ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.