Satwadhara News

Author: satwawriter

  • ನಿಲ್ಲಿಸಿಟ್ಟ ಸ್ಕೂಟರ್ ತೆಗೆಯುವ ವೇಳೆಗೆ ಬಂದು ನಿಂತ ಜವರಾಯ

    ನಿಲ್ಲಿಸಿಟ್ಟ ಸ್ಕೂಟರ್ ತೆಗೆಯುವ ವೇಳೆಗೆ ಬಂದು ನಿಂತ ಜವರಾಯ

    ಭಟ್ಕಳ : ವ್ಯಕ್ತಿಯೊಬ್ಬರು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ತಮ್ಮ ಸ್ಕೂಟರನ್ನು ತೆಗೆಯುತ್ತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಭಟ್ಕಳದಲ್ಲಿ ನಡೆದಿದೆ.

    ನಗರದ ಹಾಶಿಮ್ ಬೇಕರಿ ಸಮೀಪ ಈ ಘಟನೆ ನಡೆದಿದ್ದು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಮೃತ ವ್ಯಕ್ತಿಯನ್ನು ಫಜ್ಯೂ‌ರ್ ರೆಹಮಾನ್ ಶೇಕ್ (54) ಎಂದು ಗುರುತಿಸಲಾಗಿದೆ.

    ಹೋಟಲ್ ನಿಂದ ಹೊರ ಬಂದು ತಾನು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಸ್ಕೂಟರನ್ನು ತೆಗೆಯುತ್ತಿದ್ದ ವೇಳೆ ಹಠಾತ್ ಸ್ಕೂಟರ್ ಸಮೇತ ಅಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ಅಲ್ಲಿದ್ದ ಸಾರ್ವಜನಿಕರು ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದರಾದರೂ, ಆಸ್ಪತ್ರೆಗೆ ಬರುವ ಮುನ್ನವೆ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

  • ವಜ್ರನಾಮ ಜಿತ್ತದತ್ತ ಗೌಡ ನಿಧನ

    ವಜ್ರನಾಮ ಜಿತ್ತದತ್ತ ಗೌಡ ನಿಧನ

    ಹೊನ್ನಾವರ : ಈ ಹಿಂದೆ ಮಂಕಿ ಗ್ರಾ.ಪಂ. ಹಾಗೂ ವ್ಯವಸಾಯ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ, ತಾಲೂಕಿನ ಮಂಕಿ ಚಿತ್ತಾರದ ಸಾಮಾಜಿಕ ಕಾರ್ಯಕರ್ತರಾಗಿದ್ದ ವಜ್ರನಾಮ ಜಿತ್ತದತ್ತ ಗೌಡ (71) ವಯಸ್ಸಿನಲ್ಲಿ ನಿಧನರಾದರು.

    ಇವರು ತಾಲೂಕಿನ ಪ್ರತಿಷ್ಠಿತ ಪಿ.ಎಲ್.ಡಿ ಬ್ಯಾಂಕ್ ನಿರ್ದೆಶಕರಾಗಿ ಸೇವೆ ಸಲ್ಲಿಸಿದ್ದರು. ಇವರು ಮಹಾರಾಷ್ಟ್ರ ಸಾಂಗ್ಲಿಯ ಸಂಬಂಧಿಕರ ಮನೆಯಲ್ಲಿ ಶನಿವಾರ ಮುಂಜಾನೆ ನಿಧನರಾದ್ದಾರೆ.

    ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ, ಸಹೋದರ ಚಂದ್ರ ಗೌಡ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯಸಭಾ ಸದಸ್ಯರು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ.ವಿರೇಂದ್ರ ಹೆಗ್ಗಡೆ ಕುಟುಂಬದವರಿಗೆ ಕರೆ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

  • ಹಾಸ್ಯ ನಟ ಬ್ಯಾಂಕ್ ಜನಾರ್ಧನ ಇನ್ನಿಲ್ಲ.

    ಹಾಸ್ಯ ನಟ ಬ್ಯಾಂಕ್ ಜನಾರ್ಧನ ಇನ್ನಿಲ್ಲ.

    ಬೆಂಗಳೂರು: 500 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಜನರನ್ನು ನಕ್ಕು-ನಲಿಸಿದ ಹಾಸ್ಯ ನಟ ಬ್ಯಾಂಕ್ ಜನಾರ್ಧನ (76) ನಿಧನರಾಗಿದ್ದಾರೆ. ಮಧ್ಯರಾತ್ರಿ 2:30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಟ ಬ್ಯಾಂಕ್ ಜನಾರ್ಧನ್ ನಿಧನರಾಗಿದ್ದಾರೆ.
    ಸುಲ್ತಾನ್ ಪಾಳ್ಯದ ನಿವಾಸದಲ್ಲಿರುವ ಅವರ ನಿವಾಸದಲ್ಲಿ ಪಾರ್ಥೀವ ಶರೀರ ಇಡಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 – 4 ಗಂಟೆ ವೇಳೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    1948ರಲ್ಲಿ ಬ್ಯಾಂಕ್ ಜನಾರ್ಧನ್ ಅವರು ಬೆಂಗಳೂರಿನಲ್ಲಿ ಜನಿಸಿದರು. 1985ರಲ್ಲಿ ಪಿತಾಮಹ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಾಟಕಗಳಿಂದ ಆರಂಭವಾದ ಅವರ ಬದುಕು ನಂತರ ಸಿನಿಮಾಗಳತ್ತ ಹೊರಳಿತು. ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಅವರು ನಂತರ ದಿನಗಳಲ್ಲಿ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಕರ್ನಾಟಕದ ಮನೆ ಮಾತಾದರು. ಅವರು ಕನ್ನಡ ಚಿತ್ರಗಂಗದಲ್ಲಿ ಹಾಸ್ಯ ಹಾಗೂ ಪೋಷಕ ನಟನಾಗಿಯೇ ಗುರುತಿಸಿಕೊಂಡಿದ್ದರು. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟನೆ ಮಾಡಿದ್ದಾರೆ.

    2023ರ ಸೆಪ್ಟಂಬರ್ 26ರಂದು ಹೃದಯಘಾತ ಆಗಿತ್ತು. ಬಳಿಕ ಚಿಕಿತ್ಸೆಯ ಪಡೆದುಕೊಂಡು ಚೇತರಿಸಿಕೊಂಡಿದ್ದರು. ಕನ್ನಡ ಸಿನಿಮಾಗಳಲ್ಲಿ 80, 90ರ ದಶಕದ ಬಹುಬೇಡಿಕೆ ಹೊಂದಿದ್ದ ಹಾಸ್ಯನಟರಲ್ಲಿ ಒಬ್ಬರಾದ ಜನಾರ್ಧನ ಶ್, ತರ್ಲೆ ನನ್ ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಜೀ ಬೂಂಬಾ, ಗಣೇಶ ಸುಬ್ರಮಣ್ಯ, ಕೌರವ ಸೇರಿದಂತೆ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಅಲ್ಲದೇ, ಕಿರುತೆರೆ ಹಾಗೂ ರಂಗಭೂಮಿಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು. ಕಿರುತೆರೆಯಲ್ಲಿ ಪಾಪ ಪಾಂಡು, ಜೋಕಾಲಿ, ರೋಬೋ ಫ್ಯಾಮಿಲಿ, ಮಾಂಗಲ್ಯ ಧಾರಾವಾಹಿಗಳಲ್ಲಿಯೂ ಕೂಡ ಬ್ಯಾಂಕ್ ಜನಾರ್ಧನ ಅವರು ನಟನೆ ಮಾಡಿದ್ದಾರೆ.

  • ಪ್ರವಾಸಕ್ಕೆ ಬಂದಿದ್ದ ಬಸ್ ಪಲ್ಟಿ : ಹಲವರಿಗೆ ಪೆಟ್ಟು

    ಪ್ರವಾಸಕ್ಕೆ ಬಂದಿದ್ದ ಬಸ್ ಪಲ್ಟಿ : ಹಲವರಿಗೆ ಪೆಟ್ಟು

    ಹೊನ್ನಾವರ : ಮಹಾರಾಷ್ಟ್ರ ಮೂಲದ ಪ್ರವಾಸಿಗರು ಮೈಸೂರಿನಿಂದ ಮುರುಡೇಶ್ವರ ಪ್ರವಾಸಕ್ಕೆ ಬಸ್ ಬರುತ್ತಿದ್ದ ಖಾಸಗಿ ಬಸ್ ಪಲ್ಟಿಯಾಗಿ 15ಕ್ಕೂ ಹೆಚ್ಚು ಪ್ರವಾಸಿಗರು ಗಾಯಗೊಂಡ ಘಟನೆ ಗೇರುಸೊಪ್ಪದ ಬಳಿ ನಡೆದಿದೆ.

    ಮೈಸೂರು ಪ್ರವಾಸಕ್ಕೆ ಹೋಗಿದ್ದ ಮಹಾರಾಷ್ಟ್ರ ಮೂಲದ ,51 ಮಂದಿ ಪ್ರವಾಸಿಗರು ಮೈಸೂರು ಪ್ರವಾಸ ಮುಗಿಸಿ ಗೆರಸೊಪ್ಪ ಮಾರ್ಗವಾಗಿ ಮಹಾರಾಷ್ಟ್ರ ಮೂಲದ ಚಾಲಕ ಅಶೋಕ ಚಲಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದಲ್ಲಿ ಪಲ್ಟಿಯಾಗಿದೆ.

    ಇದರಿಂದಾಗಿ 51ಜನ ಪ್ರವಾಸಿಗರ ಪೈಕಿ 14ರಿಂದ 17ಜನರಿಗೆ ಸಣ್ಣಪುಟ್ಟ ಗಾಯವಾಗಿದ್ದು, 13ಜನ ಗಾಯಾಳುಗಳಿಗೆ ಹೊನ್ನಾವರ 108 ವಾಹನದ ಹೊನ್ನಾವರ ಸರಕಾರಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಮುದ್ರ ಸುಳಿಗೆ ಸಿಲುಕಿ ಅಸ್ವಸ್ಥನಾದ ಪ್ರವಾಸಿಗನ ರಕ್ಷಣೆ

    ಸಮುದ್ರ ಸುಳಿಗೆ ಸಿಲುಕಿ ಅಸ್ವಸ್ಥನಾದ ಪ್ರವಾಸಿಗನ ರಕ್ಷಣೆ

    ಗೋಕರ್ಣ : ಕಡಲ ತೀರದಲ್ಲಿ ಈಜುವ ವೇಳೆ ಓರ್ವ ಪ್ರವಾಸಿಗ ಸಮುದ್ರ ಸುಳಿಗೆ ಸಿಲುಕಿ ಅಸ್ವಸ್ಥನಾದ ವೇಳೆ ಕರ್ತವ್ಯದಲ್ಲಿದ ಲೈಫ್ ಸೇಫ್‌ಗಾರ್ಡ್ ಗಳು ರಕ್ಷಸಿದ್ದಾರೆ.

    ಪಂಜಾಬ ಮೂಲದ ದೌಲತ್ ಎನ್ನುವ ಪ್ರವಾಸಿಗ ತನ್ನ ಮೂರುಜನ ಗೆಳೆಯರೊಂದಿಗೆ ಗೋಕರ್ಣ ಪ್ರವಾಸಕ್ಕೆಂದು ಬಂದಿದ್ದ ಸಮಯದಲ್ಲಿ ಶನಿವಾರ ಸಮುದ್ರದಲ್ಲಿ ಈಜುವಾಗ ಸುಳಿಗೆ ಸಿಕ್ಕಿ ಸಹಾಯಕ್ಕಾಗಿ ಅಂಗಲಾಚುತಿದ್ದಾಗ ಗಮನಿಸಿದ ಜೀವ ರಕ್ಷಕ ಸಿಬ್ಬಂದಿಗಳಾದ ಮಂಜುನಾಥ್ ಹರಿಕಂತ್ರ, ನಾಗೇಂದ್ರ ಕುರ್ಲೆ ಮತ್ತು ಪ್ರದೀಪ ಅಂಬಿಗ ಹಾಗೂ ಮೈ ಸ್ಟಿಕ್ ಗೋಕರ್ಣ ಅಡ್ಡೆಂಚರ್ಸ್ ನ ಸಿಬ್ಬಂದಿ ತಕ್ಷಣ ರಕ್ಷಣೆಗೆ ಧಾವಿಸಿ ಪ್ರವಾಸಿಗನನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

  • ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವು.

    ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವು.

    ಶಿರಸಿ : ಇಲ್ಲಿನ ಗಾಂತನಗರದಲ್ಲಿರುವ ಬಾಡಿಗೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

    ರುಕ್ಷಾಭಾಯಿ (68) ಮೃತ ಮಹಿಳೆ. ಈಕೆ ಮಾ.10 ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬಾಡಿಗೆ ಮನೆಯಲ್ಲಿ ಮಲಗಿದ್ದಾಗ ಕಾಟ್ ನಿಂದ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದಳು. ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ್.ಹೆಗಡೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಎ.11 ರಂದು ಸಂಜೆ ಮೃತಪಟ್ಟಿದ್ದಾಳೆ ಎಂದು ಪುತ್ರಿ ಗಾಯತ್ರಿ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  • ಮನೆಗೆ ಕ್ಯೂರಿಂಗ್‌ ಮಾಡುತ್ತಿರುವ ಸಂದರ್ಭದಲ್ಲಿ ವಿದ್ಯುತ್‌ ಶಾಕ್ ತಗುಲಿ ಸಾವು

    ಮನೆಗೆ ಕ್ಯೂರಿಂಗ್‌ ಮಾಡುತ್ತಿರುವ ಸಂದರ್ಭದಲ್ಲಿ ವಿದ್ಯುತ್‌ ಶಾಕ್ ತಗುಲಿ ಸಾವು

    ದಾಂಡೇಲಿ : ನಗರದ ಹಳಿಯಾಳ ರಸ್ತೆಯ ಅಲೈಡ್ ಏರಿಯಾದಲ್ಲಿ ನಿರ್ಮಾಣ ಹಂತದ ಮನೆಗೆ ಕ್ಯೂರಿಂಗ್‌ ಮಾಡುತ್ತಿರುವ ಸಂದರ್ಭದಲ್ಲಿ ವಿದ್ಯುತ್‌ ಶಾಕ್ ತಗುಲಿದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

    ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು ಜಾರ್ಖಂಡ್ ಮೂಲದ ಅಲಿ ಅನ್ಸಾರಿ (40) ಎಂಬಾತ ಸಾವನ್ನಪ್ಪಿದ್ದಾರೆ. ಕಳೆದ ಹತ್ತು ವರ್ಷಗಳಿಂದ ನಗರದಲ್ಲಿ ಟೈಲ್ಸ್ ಫಿಟ್ಟಿಂಗ್ ಗುತ್ತಿಗೆದಾರರಾಗಿರುವ ಅಲಿ ಅನ್ಸಾರಿ ಅಲೈಡ್ ಪ್ರದೇಶದಲ್ಲಿ ನೂತನವಾಗಿ ಮನೆ ನಿರ್ಮಿಸುತ್ತಿದ್ದರು. ಮನೆಗೆ ಕ್ಯೂರಿಂಗ್ ಮಾಡುವ ಸಲುವಾಗಿ ನೀರು ಹಾಕುತ್ತಿರುವಾಗ ಕರೆಂಟ್ ಶಾಕ್ ಹೊಡೆದು ಸ್ಥಳದಲ್ಲೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

    ಸ್ಥಳಕ್ಕೆ ದಾಂಡೇಲಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

  • ಏ.೨೬ ರಂದು ಚುಟುಕು ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ತಿಗಣೇಶ ಮಾಗೋಡ ಆಯ್ಕೆ.

    ಏ.೨೬ ರಂದು ಚುಟುಕು ಸಾಹಿತ್ಯ ಸಮ್ಮೇಳನ: ಸರ್ವಾಧ್ಯಕ್ಷರಾಗಿ ತಿಗಣೇಶ ಮಾಗೋಡ ಆಯ್ಕೆ.

    ಕುಮಟಾ : ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಕುಮಟಾ ಘಟಕದ ಆಶ್ರಯದಲ್ಲಿ ಕುಮಟಾ ತಾಲೂಕಿನ ನಾಲ್ಕನೇ ವರ್ಷದ ಚುಟುಕು ಸಾಹಿತ್ಯ ಸಮ್ಮೇಳನವನ್ನು ಕುಮಟಾ ಪುರಭವನದಲ್ಲಿ ಏ.೨೬ ಶನಿವಾರದಂದು ಬೆಳಿಗ್ಗೆ 10 ಗಂಟೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗಣಪತಿ ಅಡಿಗುಂಡಿ ಪ್ರಕಟಣೆಮೂಲಕ ತಿಳಿಸಿದ್ದಾರೆ.

    ಸಮ್ಮೇಳನದ ಸರ್ವಾಧ್ಯಕ್ಷತೆಗೆ ಹಿರಿಯ ಚುಟುಕು ಸಾಹಿತಿ ಕಲಾವಿದ ತಿಗಣೇಶ ಮಾಗೋಡ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಚುಟುಕು ಬ್ರಹ್ಮ ದಿನಕರ ದೇಸಾಯಿ ಅವರ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಸಮ್ಮೇಳನಕ್ಕೆ ಚುಟುಕು ಸಾಹಿತ್ಯಾಭಿಮಾನಿಗಳು ತಮ್ಮ ಸಹಕಾರ ನೀಡುವಂತೆ ಸಂಘಟಕರು ಕೋರಿದ್ದಾರೆ.

    ಜಿಲ್ಲಾಮಟ್ಟದ ಮುಕ್ತ ಚುಟುಕು ಬರಹ ಸ್ಪರ್ಧೆ

    ಸಮ್ಮೇಳನದ ಅಂಗವಾಗಿ ಜಿಲ್ಲಾಮಟ್ಟದ ಮುಕ್ತ ಚುಟುಕು ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಭಾಗವಹಿಸುವವರು,
    ಚುಟುಕುಗಳೊಂದಿಗೆ ತಮ್ಮ ಸ್ವ ವಿವರ ಮತ್ತು ಭಾವಚಿತ್ರವನ್ನು ಏ.೨೦ರ ಒಳಗೆ ಕಳುಹಿಸಲು ತಿಳಿಸಲಾಗಿದೆ. ನಂತರ ಬಂದ ಚುಟುಕುಗಳನ್ನು ಪರಿಗಣಿಸಲಾಗುವುದಿಲ್ಲ. ಇದು ಮುಕ್ತ ಸ್ಪರ್ಧೆಯಾಗಿದ್ದು, ವಯಸ್ಸಿನ ಯಾವುದೇ ನಿರ್ಬಂಧ ಇರುವುದಿಲ್ಲ. ಒಬ್ಬರು ನಾಲ್ಕು ಚಟುಕುಗಳನ್ನು ಮಾತ್ರ ಕಳುಹಿಸತಕ್ಕದ್ದು. ಇದರಲ್ಲಿ ಎರಡನ್ನು ಮಾತ್ರ ಆಯ್ಕೆ ಮಾಡಿಕೊಂಡು ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಹಾಗೂ ಆಯ್ಕೆಯಾದ ಎರಡು ಚುಟುಕುಗಳನ್ನು ಸಮ್ಮೇಳನದಲ್ಲಿ ವಾಚಿಸಲು ಅವಕಾಶ ನೀಡಲಾಗುವುದು.

    ಕಳುಹಿಸುವ ಚುಟುಕಿನಲ್ಲಿ ಒಂದು ಆಶಯ ಹಾಗೂ ಸಮಾಜಕ್ಕೊಂದು ಸಂದೇಶವಿರಲಿ. ಆಯ್ಕೆಯಾದ ಉತ್ತಮ 3 ಚುಟುಕುಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಬಹುಮಾನ ನೀಡಲಾಗುವುದು. ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣ ಸಂಚಿಕೆಯನ್ನು ನೀಡಲಾಗುವುದು. ಎಂದು ಅವರು ತಿಳಿಸಿದ್ದು, ಚುಟುಕುಗಳನ್ನು ಉದಯ ಎಸ್. ಮಡಿವಾಳ ಪೋಸ್ಟ್ ಹೆಗಡೆ ತಾಲ್ಲೂಕು ಕುಮಟಾ 581330 ಇವರಿಗೆ ಅಂಚೆಯ ಮೂಲಕ ಅಥವಾ 9008810592 ಈ ನಂಬರ್ ಗೆ ವಾಟ್ಸಪ್ ಮಾಡಬಹುದಾಗಿದೆ.

  • ಕಲೆ ನಿಜಕ್ಕೂ ಜಗತ್ತಿಗೆ ಒಂದು ಕೊಡುಗೆ.

    ಕಲೆ ನಿಜಕ್ಕೂ ಜಗತ್ತಿಗೆ ಒಂದು ಕೊಡುಗೆ.

    ಕುಮಟಾ : ಕಲೆ ನಿಜಕ್ಕೂ ಜಗತ್ತಿಗೆ ಒಂದು ಕೊಡುಗೆ. ಮಾನವ ಅನುಭವದಲ್ಲಿ ನಾವು ಬಯಸುವುದು ಅದನ್ನೇ. ಕಲೆ ನಮ್ಮ ಜೀವನಕ್ಕೆ ಅರ್ಥವನ್ನು ನೀಡುತ್ತದೆ ಮತ್ತು ನಮ್ಮ ಜಗತ್ತನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ನಮ್ಮ ಸಂಸ್ಕೃತಿಯ ಅತ್ಯಗತ್ಯ ಭಾಗವಾಗಿದೆ ಎಂದು ರೋಟರಿ ಸರ್ವೀಸ್ ಸೊಸೈಟಿಯ ನಿಕಟಪೂರ್ವ ಅಧ್ಯಕ್ಷ ಅರುಣ ಉಭಯಕರ್ ಹೇಳಿದರು. ನಾದಶ್ರೀ ಕಲಾ ಕೇಂದ್ರದ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

    ಕಲೆ ನಮ್ಮ ಭಾವನೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ನಮ್ಮ ಸ್ವಯಂ ಅರಿವನ್ನು ಹೆಚ್ಚಿಸುತ್ತದೆ ಮತ್ತು ಹೊಸ ಆಲೋಚನೆಗಳು ಮತ್ತು ಅನುಭವಗಳಿಗೆ ನಾವು ಮುಕ್ತರಾಗಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಕಲೆ ನಮ್ಮ ಮನಸ್ಸು ಮತ್ತು ಹೃದಯಗಳನ್ನು ತೆರೆಯುತ್ತಲೇ ಇರುತ್ತದೆ ಅಂತಹ ಕಲೆಯನ್ನು ನಿರಂತರವಾಗಿ ಕಲಿಸುವ ಕಾರ್ಯವನ್ನು ನಾದಶ್ರೀ ಸಂಸ್ಥೆ ಮಾಡುತ್ತಿದೆ ಎಂದರು.

    ರೋಟರಿ ಸರ್ವೀಸ್ ಸೊಸೈಟಿಯ ಅಧ್ಯಕ್ಷ ಸತೀಶ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಕಿರಣ ನಾಯಕ, ಜಿ.ಎಸ್ ಹೆಗಡೆ, ಎಂ.ಬಿ ಪೈ ವೇದಿಕೆಯಲ್ಲಿ ಇದ್ದರು. ವಿದುಷಿ ರೇಷ್ಮಾ ಭಟ್ಟ ಅತಿಥಿ ಕಲಾವಿದರಾಗಿ ಗಾಯನ ಪ್ರಸ್ತುತಪಡಿಸಿದರು. ನಾದಶ್ರೀ ವಿದ್ಯಾರ್ಥಿಗಳು ಗಾಯನ, ವಾದನ, ಭರತನಾಟ್ಯ ಕಾರ್ಯಕ್ರಮ ನೀಡಿದರು.

  • ಪೇಟೆಗೆ ಹೋಗಲು ಸಿದ್ಧನಾಗುತ್ತಿದ್ದವ ಒಮ್ಮೆಲೇ ಹೌಹಾರಿದ.

    ಪೇಟೆಗೆ ಹೋಗಲು ಸಿದ್ಧನಾಗುತ್ತಿದ್ದವ ಒಮ್ಮೆಲೇ ಹೌಹಾರಿದ.

    ಶಿರಸಿ : ಪೇಟೆಗೆ ಹೋಗಲೆಂದು ಅಂಗಿ ತೊಟ್ಟು, ಪ್ಯಾಂಟ್ ತೊಡಲೆಂದು ಪ್ಯಾಂಟ್ ಗೆ ಕೈ ಹಾಕಿದ ಸಂದರ್ಭದಲ್ಲಿ ಹಾವೊಂದು ಸಿಕ್ಕಿ ವ್ಯಕ್ತಿ ಹೌಹಾರಿದ ಘಟನೆ ಶಿರಸಿ ನಾರಾಯಣಗುರು ನಗರದಲ್ಲಿ ನಡೆದಿದೆ.

    ಇಲ್ಲಿಯ ಮಾಂತೇಶ ಅವರು ಶುಕ್ರವಾರ ಸಂಜೆ ಪೇಟೆಗೆ ಹೋಗುವವರಿದ್ದರು. ಅಂಗಿ ಧರಿಸಿದ ಅವರು ಪ್ಯಾಂಟಿಗಾಗಿ ಕೈ ಹಾಕಿದರು. ಆಗ, ಅದರೊಳಗಿದ್ದ ನಾಗರ ಬುಸ್ ಎಂದಿದ್ದು, ಮಾಂತೇಶ್ ಅವರು ಬೆಚ್ಚಿ ಬಿದ್ದಿದ್ದಾರೆ.

    ತಕ್ಷಣ ಆ ಪ್ಯಾಂಟನ್ನು ನೆಲದ ಮೇಲೆ ಎಸೆದು ದೂರ ಸರಿದರು. ಕಂಗಾಲಾದ ಮಾಂತೇಶ ಅವರು ಜೋರಾಗಿ ಬೊಬ್ಬೆ ಹೊಡೆದರು. ಅದನ್ನು ಕೇಳಿ ಅಕ್ಕ-ಪಕ್ಕದವರು ಸಹ ಆಗಮಿಸಿದರು. ಬಳಿಕ ಉರಗತಜ್ಞ ಪ್ರಶಾಂತ ಹುಲೆಕಲ್ ಅವರನ್ನು ಜನ ಸ್ಥಳಕ್ಕೆ ಕರೆಯಿಸಿದರು.

    ಪ್ಯಾಂಟಿನ ಒಳಗೆ ಸಿಲುಕಿಕೊಂಡಿದ್ದ ಹಾವನ್ನು ಪ್ರಶಾಂತ ಹುಲೆಕಲ್ ಹೊರತೆಗೆದರು. ನಂತರ ಅದನ್ನು ಕಾಡಿಗೆ ಬಿಟ್ಟರು. ಮಾಂತೇಶ ಕುಟುಂಬದವರು ಸಹ ಇದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟರು.