Satwadhara News

Author: satwawriter

  • ಗುರುಜಯರಾಘವೇಂದ್ರ ಸ್ವಾಮಿಗಳಿಗೆ ಗೋಕರ್ಣ ಗೌರವ

    ಪ ಪೂ ಶ್ರೀ ಶ್ರೀ ಗುರುಜಯರಾಘವೇಂದ್ರ ಸ್ವಾಮಿಗಳು ಶ್ರೀ ರಾಜಮಾತಂಗೀಶ್ವರಿ ಪೀಠ೦, ಆಂಧ್ರಪ್ರದೇಶ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ವಕೀಲ ಶ್ರೀ ಮಂಗಲಮೂರ್ತಿ ಸಭಾಹಿತ ಇವರು ದೇವಾಲಯದ ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಹಾಗೂ ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

  • ನಾಗರಾಜ ನಾಯಕ ತೊರ್ಕೆ ಯವರಿಂದ ಮನೆ ಮನೆ ಭೇಟಿ.

    ಭಟ್ಕಳ: ಬಿಜೆಪಿಯ ಮುಖಂಡ ನಾಗರಾಜ ನಾಯಕ ತೋರ್ಕೆ ಭಟ್ಕಳ ತಾಲೂಕಿನ ಮಾವಳ್ಳಿಯಲ್ಲಿ ಪಕ್ಷದ ವಿಸ್ತಾರಕರಾಗಿ ಮನೆ‌‌ ಮನೆ‌ ಭೇಟಿ ಮಾಡುವ ಮೂಲಕ ಮಿಂಚಿನ ಸಂಚಲನ ಮೂಡಿಸಿದ್ದರು.

    ನಾಗರಾಜ ತೊರ್ಕೆ ಇಂದು ಭಟ್ಕಳ ತಾಲೂಕಿನ‌ ಮಾವಳ್ಳಿ ಸೇರಿದಂತೆ ವಿವಿಧ ಭಾಗಗಳಿಗೆ ಇಲ್ಲಿನ ಬಿಜೆಪಿ ಕಾರ್ಯಕರ್ತರ ಜೊತೆಗೂಡಿ ಮನೆ‌ ಮನೆ ತೆರಳಿ ಬಿಜೆಪಿಯ ಪರ ಜನರಲ್ಲಿ ಜಾಗೃತಿ ಮೂಡಿಸಿದ್ದರು.

    ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೆ ಏನ್ ಎಲ್ಲಾ ಅಭಿವೃದ್ಧಿ ಕೆಲಸವನ್ನು ದೇಶದಲ್ಲಿ ಮಾಡಿದೆ ಎನ್ನುವ ಬಗ್ಗೆ ಜನತೆಗೆ ಮನದಟ್ಟು ಮಾಡಿದ್ರು. ಜಿಎಸ್ ಟಿ ಇಂದಿ ಬಡವರಿಗೆ ಯಾವೇಲ್ಲಾ ರೀತಿಯಲ್ಲಿ ಅನುಕೂಲವಾಗಲಿದೆ ಎಂದು ತಿಳಿಸಿಕೊಟ್ಟರು. ನಾಗರಾಜ ನಾಯಕ ಅವರ ಪ್ರತಿಯೊಂದು ಮಾತನ್ನು ಆಲಿಸಿದ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ರು.

  • ಕೊಂಕಣದ ಸಿ.ವಿ.ಎಸ್.ಕೆಯಲ್ಲಿ ‘ಓಶಿಯನ್ ಕ್ಲಬ್’ ಉದ್ಘಾಟನೆ

    ಕುಮಟಾ: ಇಲ್ಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆ ಹಾಗೂ ಸರಸ್ವತಿ ಪಿ.ಯು. ಕಾಲೇಜ ಆಶ್ರಯದಲ್ಲಿ ವಿಶಿಷ್ಟ ‘ಓಶಿಯನ್ ಕ್ಲಬ್’ನ್ನು ಇತ್ತೀಚಿಗೆ ಉದ್ಘಾಟಿಸಲಾಯಿತು.
    ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಸರಾಂತ ಇಸ್ರೋ ನಿವೃತ್ತ ವಿಜ್ಞಾನಿಗಳಾದ ಶ್ರೀ ಪಿ.ಜೆ.ಭಟ್ಟ, ಸಮುದ್ರ ಸಂಪತ್ತಿನ ಮಹತ್ವ ಮತ್ತು ಅದರ ಸಂರಕ್ಷಣೆ ಕುರಿತು ಮಾತನಾಡಿ, ತದನಂತರ ಉಪಗ್ರಹವನ್ನು ಕಕ್ಷೆಗೆ ಹಾರಿ ಬಿಡುವಾಗ ಕೈಗೊಳ್ಳುವ ಹಲವು ಮಜಲುಗಳು ಹಾಗೂ ಸಂಪರ್ಕ ಉಪಗ್ರಹಗಳ ಮಹತ್ವ ಮತ್ತು ಉಪಯೋಗಗಳ ಕುರಿತು ಪಿ.ಪಿ.ಟಿ ಮೂಲಕ ವಿಸ್ತøತ ಮಾಹಿತಿ ನೀಡಿದರು.
    ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿಜ್ಞಾನಿ ಡಾ| ಎಂ.ಡಿ.ಸುಭಾಷ್‍ಚಂದ್ರನ್ ಹಾಗೂ ಮೀನುಗಾರರ ಸಂಘದ ಕಾರ್ಯದರ್ಶಿಗಳಾದ ಶ್ರೀ ಜೈ ವಿಠ್ಠಲ್ ಕುಬಾಲ್ ಇವರುಗಳು ಮಾತನಾಡಿ, ಮಾನವನ ದುರಾಸೆಯಿಂದ ಇಂದು ನೈಸರ್ಗಿಕ ಸಂಪತ್ತು ಅಳಿವಿನಂಚಿನಲ್ಲಿದೆ ಎಂದೂ, ಕರಾವಳಿ ಭಾಗದಲ್ಲಿರುವ ನಾವು ಅಳಿವಿನಂಚಿನಲ್ಲಿರುವ ಈ ಸಾಗರ ಸಂಪತ್ತನ್ನು ಉಳಿಸಬೇಕಾದ ಗುರುತರ ಜವಾಬ್ದಾರಿಯ ಕುರಿತು ಸವಿಸ್ತಾರವಾಗಿ ವಿವರಿಸಿದರು.
    ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಕಾಶೀನಾಥ ನಾಯಕರವರು ಶುಭ ಹಾರೈಸಿದರು. ಮುಖ್ಯಾಧ್ಯಾಪಕಿ ಶ್ರೀಮತಿ ಸುಮಾ ಪ್ರಭು, ಪ್ರಾಚಾರ್ಯೆ ಶ್ರೀಮತಿ ಸುಲೋಚನಾ ರಾವ್, ಶೈಕ್ಷಣಿಕ ಸಲಹೆಗಾರರಾದ ಶ್ರೀ ಆರ್.ಎಚ್.ದೇಶಭಂಡಾರಿ ಹಾಗೂ ಓಶಿಯನ್ ಕ್ಲಬ್‍ನ ವಿದ್ಯಾರ್ಥಿ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಸುಮಾ ಪ್ರಭು ಸ್ವಾಗತಿಸಿದರು, ಶಿಕ್ಷಕ ಭಾಸ್ಕರ ಹೆಗಡೆ ವಂದಿಸಿದರು, ಶಿಕ್ಷಕ ಪ್ರಕಾಶ ಗಾವಡಿ ನಿರೂಪಿಸಿದರು, ನಮೃತಾ ಸಂಗಡಿಗರು ಪ್ರಾರ್ಥನೆ ಹಾಡಿದರು.

  • ಕೈಯಲ್ಲೇ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳು

    ಡೈನಿಂಗ್ ಟೇಬಲ್ ಮೇಲೆ ಸ್ಫೂನ್ಸು, ಫೋರ್ಕ್ಸ್ ಬಂದು ಕೈಯಲ್ಲಿ ಭೋಜನ ಸವಿಯುವವರನ್ನು ಅನಾಗರೀಕರ ತರಹ ನೋಡುವ ಕಾಲ ಇದು. ತಿಂಡಿ ಏನೇ ಇದ್ದರೂ ಫೋರ್ಕ್ ಕಡ್ಡಾಯ ಎಂಬಂತಾಗಿದೆ. ಹೋಟೆಲ್‌ನಲ್ಲಿ ಯಾರಾದರೂ ಕೈಯಲ್ಲಿ ಊಟ ಮಾಡುತ್ತಿದ್ದರೆ ಅವರನ್ನು ವಿಚಿತ್ರವಾಗಿ ನೋಡುವ ಮನೋಭಾವ ಇದೆ. ಇನ್ನು ಮನೆಯಲ್ಲೂ ಅಷ್ಟೇ ಮಕ್ಕಳಿಗೆ ಸ್ಫೂನ್ ಅಭ್ಯಾಸ ಮಾಡುತ್ತಿದ್ದಾರೆ ತಂದೆತಾಯಿ. ಅದಕ್ಕೆ ಅವರು ಕೊಡುತ್ತಿರುವ ಮುಖ್ಯ ಕಾರಣ…ಕೈಗಳು ಸ್ವಚ್ಛವಾಗಿರಲ್ಲ ಅನ್ನೋದು. ಆದರೆ ಒಮ್ಮೆ ಕೈಯಲ್ಲಿ ಊಟ ಮಾಡುವುದರಿಂದ ಆಗುವ ವೈಜ್ಞಾನಿಕ ಲಾಭಗಳನ್ನು ನೋಡೋಣ. ಇದನ್ನು ಓದಿದ ಮೇಲೆ ನೀವು ಎಲ್ಲೇ ಇರಿ…? ನೀವು ಮಟ್ಟಸವಾಗಿ ಕೈಯನ್ನು ಉಪಯೋಗಿಸಿ ಭೋಜನ ಮಾಡುತ್ತೀರಿ ಎಂದು ಆಶಿಸುತ್ತೇವೆ.

    ಕೈಯಲ್ಲಿ ಆಹಾರ ತಿನ್ನಿವುದರಿಂದ ಆಗುವ ಪ್ರಯೋಜನಗಳು: ( As Per Science).

    1. ಕೈ ಸ್ಪರ್ಶದಿಂದ ದೇಹದಲ್ಲಿ ಶಕ್ತಿ ಸಂಚಯವಾಗುತ್ತದೆ.

    2. ಕೈಯಲ್ಲಿ ಆಹಾರ ತಿನ್ನುವುದರಿಂದ ಕೆಲವು ಮಿಲಿಯನ್ ನರಗಳು ನಮ್ಮ ಮಿದುಳಿಗೆ ಸಂಕೇತ ಕಳುಹಿಸುತ್ತವಂತೆ.

    3. ಆಹಾರವನ್ನು ಕೈಯಲ್ಲಿ ಸ್ಪರ್ಶಿಸುತ್ತಿದ್ದಂತೆ, ಆಹಾರ ತೆಗೆದುಕೊಳ್ಳುವ ವಿಷಯ ಮಿದುಳು ಉದರಕ್ಕೆ ಸಂಕೇತ ರವಾನಿಸುತ್ತದೆ. ಆಗ ಹೊಟ್ಟೆಯಲ್ಲಿ ಜೀರ್ಣ ರಸಗಳು, ಎಂಜೈಮ್‌ಗಳು ಬಿಡುಗಡೆಯಾಗಿ ಜೀರ್ಣಕ್ರಿಯೆ ಸುಗಮವಾಗಿ ಆಗುತ್ತದೆ.

    4. ಕೈಯಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಆರೋಗ್ಯವಾಗಿರುವುದಷ್ಟೇ ಅಲ್ಲದೆ, ಯಾವುದೇ ಆಲೋಚನೆಗಳು ಬರದೆ ಒಂದೇ ಆಲೋಚನೆಯಲ್ಲಿ ಇರುತ್ತೇವೆ.

    5. ನಮ್ಮ ಆಹಾರದಲ್ಲಿ ಎಣ್ಣೆಯನ್ನು ಹೆಚ್ಚಾಗಿ ಬಳಸುತ್ತೇವೆ. ಹೀಗೆ ತಯಾರಿಸಿದ ಆಹಾರವನ್ನು ಸ್ಫೂನ್ಸ್, ಫೋರ್ಕ್ಸ್‌ನಿಂದ ತಿನ್ನುವುದರಿಂದ ಪ್ರತಿಕ್ರಿಯೆ ಏರ್ಪಟ್ಟು ರುಚಿ ಕೆಡುತ್ತದೆ.

    6. ಕೈ ಬೆರಳಲ್ಲಿ ಆಹಾರವನ್ನು ಕಲೆಸಿಕೊಂಡು, ಒಂದೊಂದೇ ತುತ್ತು ತಿನ್ನುವುದರಿಂದ ರಕ್ತಸಂಚಾರ ಚೆನ್ನಾಗಿ ಆಗುತ್ತದೆ.

    7. ಕೈಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ, ಬೆರಳು ತುಟಿಗೆ ತಾಗುತ್ತಿದ್ದಂತೆ ಬಾಯಲ್ಲಿ ಲಾಲಾರಸ ಉತ್ಪನ್ನವಾಗುತ್ತದೆ.

    8. ಇನ್ನು ಕೈ ಬೆರಳಲ್ಲಿ ಆಹಾರ ತೆಗೆದುಕೊಳ್ಳುವುದರಿಂದ ಅನಾರೋಗ್ಯ ಪಾಲಾಗದೆ, ಆರೋಗ್ಯವಾಗಿರುತ್ತೇವೆ. ಜೀರ್ಣ ಪ್ರಕ್ರಿಯೆ ಚೆನ್ನಾಗಿ ನಡೆಯುತ್ತದೆ. ಇದು ಒಂದು ರೀತಿ ವ್ಯಾಯಾಮದಂತಿರುತ್ತದೆ.

    ಪುರಾಣಗಳ ಪ್ರಕಾರ…

    ಕೈಯಲ್ಲಿರುವ ಒಂದೊಂದು ಬೆರಳು ಒಂದೊಂದು ತತ್ವವನ್ನು ಹೊಂದಿರುತ್ತವೆ.

    ಹೆಬ್ಬೆರಳು: ಅಗ್ನಿತತ್ವ

    ತೋರು ಬೆರಳು: ವಾಯುತತ್ವ

    ಮಧ್ಯ ಬೆರಳು: ಆಕಾಶ

    ಉಂಗುರ ಬೆರಳು: ಭೂಮಿ

    ಕಿರುಬೆರಳು: ಜಲತತ್ವ

    ಈ ಐದು ಬೆರಳುಗಳ ಸ್ಪರ್ಶ ಆಹಾರಕ್ಕೆ ತಾಕಿದಾಗ ಜೀವಶಕ್ತಿ ಉತ್ತೇಜನಗೊಳ್ಳುತ್ತದೆ.

    ಫ್ಯಾಷನ್‌ಗೆ ಕೊಟ್ಟಷ್ಟು ಬೆಲೆ… ಸಂಸ್ಕೃತಿಗೆ ಕೊಟ್ಟರೆ…ಮಾನವ ಜೀವನ ಆರೋಗ್ಯಕರ…..
    ಯೋಚಿಸಿ……
    ಅಲಂಕಾರ ಬೇಕೆ ?
    ಅಥವಾ
    ಆರೋಗ್ಯವೇ ????

  • ಸಂಕಲ್ಪ ಮಾಡುವುದರ ಮಹತ್ವ ಏನೆಂದು ತಿಳಿದುಕೊಳ್ಳಿ

    ಹಿಂದೂ ಧರ್ಮ ಶಾಸ್ತ್ರದಲ್ಲಿ ಸಂಕಲ್ಪ ಮಾಡುವುದರ ಮಹತ್ವ ಏನೆಂದು ತಿಳಿದುಕೊಳ್ಳಿ

    ದೇವಸ್ಥಾನಗಳಲ್ಲಿ ಸಂಕಲ್ಪ ಮಾಡಿಸುವುದು ಮತ್ತು ಯಾವುದೇ ಪೂಜೆ, ಹೋಮ,ಜಪ ಮಾಡಬೇಕಾದರೆ ಮೊದಲು ಮಾಡುವುದೇ ಸಂಕಲ್ಪ.
    ಸಂಕಲ್ಪ ಎಂದರೆ ನಮ್ಮ ಮನಸ್ಸಿನಲ್ಲಿ ಇರುವ ಹಾಸೆ ಮುಖ್ಯವಾದ ಯೋಜನೆ, ಮತ್ತು ಮಾಡಬೇಕಾದ ಕಾರ್ಯಗಳು ನಿರ್ವಿಘ್ನವಾಗಿ ನಡೆಯುವಂತೆ ದೇವರ ಮುಂದೆ ಮನಸ್ಸಿನಲ್ಲಿ ಬೇಡಿ ಕೊಳ್ಳುವುದೇ ಸಂಕಲ್ಪ.

    ಸಂಕಲ್ಪದ ಸಮಯದಲ್ಲಿ ನಮ್ಮ ತಂದೆ ತಾಯಿ ಗುರು ಹಿರಿಯರನ್ನು ನೆನೆಸಿಕೊಂಡು ನಮ್ಮ ಮುಂದಿನ ಕಾರ್ಯ ಅಥವಾ ಮುಂದಿನ ಗುರಿ ಸಾಧಿಸುವುದಕ್ಕೆ ನಮ್ಮ ಅಭೀಷ್ಠ ಸಿದ್ಧಿ ನಿಮಿತ್ತವಾಗಿ ದೇವರ ಮುಂದೆ ಪ್ರಾರ್ಥಿಸಬೇಕು ಮತ್ತು ನಮ್ಮ ಮನೋನಿಶ್ಚಯವನ್ನು ಕಾಯ ವಾಚಾ ಮನಸಾ ಆ ಭಗವಂತನಲ್ಲಿ ಅರ್ಪಣೆ ಮಾಡಿ ಕೊಳ್ಳಬೇಕು.

    ನಮ್ಮ ಸಂಕಲ್ಪವು ಎಷ್ಟು ಶ್ರದ್ದೇ ಭಕ್ತಿ ಪ್ರೀತಿಯಿಂದ ಕೂಡಿರುವುದೋ ಅಷ್ಟೇ ಫಲಿತಾಂಶ ಕೂಡ ಉನ್ನತವಾಗಿಯೇ ಸಿಗುತ್ತದೆ. ಯಾರ ಸಂಕಲ್ಪವು ಸಂಶಯಾತ್ಮಕವಾಗಿರುತ್ತದೆಯೋ ಅವರ ಫಲಿತಾಂಶವು ಕೂಡ ಸಂಶಯವಾಗಿಯೇ ಉಳಿದು ಕೊಳ್ಳುತ್ತದೆ. ಸಂಕಲ್ಪ ಮಾಡಿಸುವುದರಿಂದ ಕೇವಲ ನಮ್ಮ ವಯಕ್ತಿಕವಲ್ಲದೇ ದೇಶ, ಸ್ವಗೃಹ, ವಾಸಸ್ಥಳ, ಸಂವತ್ಸರ, ಋತು, ಮಾಸ, ಪಕ್ಷ, ವಾರ, ತಿಥಿ, ನಕ್ಷತ್ರ, ಯೋಗ, ಕರಣಗಳು ಅಲ್ಲದೆ ವಿಶ್ವಪ್ರಕೃತಿ ಸ್ಥಿತಿ ಕಾಲ ಮುಂತಾದವುಗಳ ಬಗ್ಗೆ ಅರಿವು ಮುಡಿಸಿ ಎಲ್ಲವನ್ನು ಪ್ರೀತಿಸಿ ಗೌರವಿಸುವ ಶಕ್ತಿಯೇ ಸಂಕಲ್ಪ.

    ಒಂದು ನಿರ್ದಿಷ್ಟವಾದ ಮನೋನಿಶ್ಚಯದಿಂದ ಇರುವುದು ಅತ್ಯಗತ್ಯವಾಗುತ್ತದೆ, ನಮ್ಮ ಮನಸ್ಸು ಹಿಡಿತದಲ್ಲಿ ಇಲ್ಲದಿದ್ದರೆ ಯಾವುದೇ ಸಂಕಲ್ಪ, ಪೂಜೆ ಜಪತಪಗಳು ಮಾಡಿದರೂ ಪ್ರಯೋಜನ ಸಿಗುವುದಿಲ್ಲ ನಮ್ಮ ಮನಸ್ಸು ಏಕಾಗ್ರತೆಯಿಂದ ದೃಢನಿಶ್ಚಯದಿಂದಿದ್ದರೆ ಎಲ್ಲಾ ಕಾರ್ಯವು ಒಳ್ಳೆಯದಾಗುತ್ತದೆ, ಯಾವುದೂ ಅಸಾಧ್ಯವಲ್ಲ.

  • ಜನಜಾಗೃತಿ ಸಮಿತಿ ವತಿಯಿಂದ ಮನವಿ

    ಕಾರವಾರ : ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉತ್ತರಕನ್ನಡದ ಕಾರವಾರದಲ್ಲಿ, ಜಿಲ್ಲಾಧಿಕಾರಿಗಳಿಗೆ ಮತ್ತು ಭಟ್ಕಳದಲ್ಲಿ ಸಹಾಯಕ ಕಮಿಷನರ್ ರವರಿಗೆ ಮನವಿಯನ್ನು ನೀಡಲಾಯಿತು.
    ಶರತ ಮಡಿವಾಳ ಹತ್ಯೆ ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಇದುವರೆಗೆ ನಡೆದ ಸರಣಿ ಹಿಂದೂನಾಯಕರ ಹತ್ಯಾಪ್ರಕರಣದ ತನಿಖೆಯನ್ನು “ರಾಷ್ಟ್ರೀಯ ತನಿಖಾದಳ ಕ್ಕೆ” ನೀಡಬೇಕು & ವಿಶೇಷ ತುರ್ತು ಕೋರ್ಟ ಸ್ಥಾಪಿಸಿ, ಪ್ರಕರಣದ ಅಪರಾಧಿಗಳಿಗೆ ಕಠೋರ ಶಿಕ್ಷೆ ನೀಡಬೇಕೆಂದು.

    ಅಮರನಾಥ ಯಾತ್ರಿಕರ ಮೇಲೆ ಭಯೋತ್ಪಾದಕರ ದಾಳಿಯನ್ನು ವಿರೋಧಿಸಿ !

    ರಾಷ್ಷ್ರದ ಗಡಿ ಕಾಯುವ ಸೈನಿಕರಿಗೆ ಬೆಂಬಲಿಸಲು, ಶತ್ರು ದೇಶ ಚೀನಾಕ್ಕೆ ಪಾಠ ಕಲಿಸಲು

    ಚೈನಾ ವಸ್ತುಗಳ ಮಾರಾಟದ ಮೇಲೆ ನಿಷೇಧವನ್ನು ಆಗ್ರಹಿಸಿ.

    ಸಾಧ್ವಿ ಪ್ರಜ್ಞಾಸಿಂಗ್‌ರವರನ್ನು ಹುಸಿ ಆರೋಪದ ಮೇಲೆ ೮ ವರ್ಷ ಕಾರಾಗೃಹದಲ್ಲಿಟ್ಟು ಅವರ ಮೇಲೆ ಭೀಕರ ದೌರ್ಜನ್ಯ ಮಾಡುವ ಪೋಲೀಸ್ ಅಧಿಕಾರಿಗಳ ಹಾಗೂ ಷಡ್ಯಂತ್ರ ರಚಿಸಿದ ಆಡಳಿತಗಾರರ ಮೇಲೆ ಕಾರ್ಯಾಚರಣೆಯನ್ನು ಮಾಡಬೇಕೆಂದು, ಈ ಮನವಿಯನ್ನು ನೀಡಲಾಯಿತು.

  • ಹೊನ್ನಾವರದಲ್ಲಿ ಬಸ್ ಪಲ್ಟಿ ೨೫ ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರ

    ಹೊನ್ನಾವರ : ಚಾಲಕನ ನಿಯತ್ರಣ ತಪ್ಪಿ ಬಸ್ ಪಲ್ಟಿಯಾದ ಪರಿಣಾಮ ೨೫ ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾದ ಘಟನೆ ಹೊನ್ನಾವರದ ಕಡಗೇರಿ ಘಾಟ್ ಬಳಿ ನಡೆದಿದೆ.

    ಹೊನ್ನಾವರದಿಂದ ಮಾವಿನಕುರ್ವಾಗೆ ಹೊರಟ್ಟಿದ್ದ ಬಸ್ ಕಡಗೇರಿ ಘಾಟ್ ಬಳಿ ಅಪಘಾತವಾಗಿದ್ದು ೨೫ ಜನರು ಗಂಭೀರವಾಗಿ ಗಾಯಗೊಡಿದ್ದಾರೆ.  ಗಾಯಾಳುಗಳನ್ನು ಹೊನ್ನಾವರ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಪಿಒಪಿ, ಬಣ್ಣ ಲೇಪಿತ ವಿಗ್ರಹಗಳ ನಿಷೇಧ. ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಸೂಚನೆ

    ಕಾರವಾರ : ಪ್ಲಾಸ್ಟರ್ ಆಫ್ ಪ್ಯಾರಿಸ್ ಪಿಒಪಿ ಮತ್ತು ಬಣ್ಣ ಲೇಪಿತ ವಿಗ್ರಹಗಳನ್ನು ನಿಷೇಧಿಸಲಾಗಿದ್ದು ಮುಂದಿನ ಯಾವುದೇ ಹಬ್ಬಗಳಲ್ಲಿ ಅಂತಹ ವಿಗ್ರಹಗಳ ತಯಾರಿಕೆ, ಮಾರಾಟ ಅಥವಾ ನೀರಿಗೆ ವಿಸರ್ಜಿಸುವುದನ್ನು ನಿಷೇಧಿಸಿರುವುದಾಗಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

    ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ಬಣ್ಣ ಲೇಪಿತ ವಿಗ್ರಹಗಳನ್ನು ಪೂಜಿಸಿ ನೀರಿಗೆ ವಿಸರ್ಜಿಸಿದ ಪರಿಣಾಮ ಪರಿಸರದ ಮೇಲೆ ಭಾರೀ ಅನಾಹುತಗಳ ಸಂಭವಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ಬಣ್ಣ ಲೇಪಿತ ವಿಗ್ರಹಗಳನ್ನು ನಿಷೇಧಿಸಿ ಆದೇಶಿಸಿದ್ದು ಜಿಲ್ಲೆಯಲ್ಲಿ ಅಂತಹ ಪ್ರಕರಣಗಳ ನಡೆಯದಂತೆ ನಿಷೇಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಈ ಜಲ ಮಾಲಿನ್ಯವು ವಿಗ್ರಹಗಳಲ್ಲಿ ಉಪಯೋಗಿಸಿದ ಪ್ಲಾಸ್ಟರ್ ಆಪ್ ಪ್ಯಾರಿಸ್ ನಿಂದ ಮತ್ತು ಬಳಸುವ ರಾಸಾಯನಿಕ ಬಣ್ಣಗಳಿಂದ ಆಗುತಿದ್ದು, ಇದರಿಂದ ಜಲ ಮೂಲಗಳ ಭೌತಿಕ ಮತ್ತು ರಾಸಾಯನಿಕ ಗುಣಗಳು ಮಾರ್ಪಟ್ಟಿರುತ್ತವೆ. ಇದರಿಂದ ಜಲ ಮೂಲಗಳ ಮೇಲೆ ಅವಲಂಭಿತವಾದ ಪಶು ಪಕ್ಷಿ ಪ್ರಾಣ ಗಳು ಮತ್ತು ಇತರೆ ಪ್ರಾಣ ಗಳ ಜೀವಕ್ಕೆ ಅಪಾಯ ಉಂಟಾಗುವುದರಿಂದ ಹಾಗೂ ಪರಿಸರಕ್ಕೆ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ಧಕ್ಕೆಯಾಗುವುದರಿಂದ ಇಂತಹ ಕ್ರಿಯೆಗಳನ್ನು ತಡೆಯುವುದು ಅವಶ್ಯಕವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಯಾವುದೇ ಬಣ್ಣದ ವಿಗ್ರಹಗಳನ್ನು ಮತ್ತು ಪಿ.ಓ.ಪಿ ಗಳಿಂದ ಮಾಡಿದ ವಿಗ್ರಹಗಳನ್ನು (ಗಣೇಶ ಮತ್ತು ಇತರೆ) ತಯಾರಿಸಿ ಜಲ ಮೂಲಗಳಿಗೆ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ಹಬ್ಬ ಹಾಗೂ ಸಮಾರಂಭಗಳಲ್ಲಿ ಬಣ್ಣದ ವಿಗ್ರಹಗಳನ್ನು ಮತ್ತು ಪಿ.ಓ.ಪಿ ಗಳಿಂದ ಮಾಡಿದ ವಿಗ್ರಹಗಳನ್ನು ಪೂಜಿಸಿದ ನಂತರ ಜಲ ಮೂಲಗಳಿಗೆ ವಿಸರ್ಜನೆ ಮಾಡದಂತೆ ತಡೆಯುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದ್ದು ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳು (ಆಯುಕ್ತರು/ ಮುಖ್ಯಾಧಿಕಾರಿಗಳು) ತಮ್ಮ ಕಾರ್ಯವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಪಿಒಪಿ ಅಧವಾ ಬಣ್ಣದ ವಿಗ್ರಹಗಳನ್ನು ತಯಾರಿಸದಂತೆ ಹಾಗೂ ಜಲ ಮೂಲಗಳಲ್ಲಿ ವಿಸರ್ಜನೆಯಾಗದಂತೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.
    ಅಲ್ಲದೆ, ಆಯಾ ಸ್ಥಳೀಯ ಮಟ್ಟದ ಅಧಿಕಾರಿಗಳು ಸಬಂಧಪಟ್ಟವರೊಂದಿಗೆ ಸಭೆಗಳನ್ನು ತುರ್ತಾಗಿ ನಡೆಸಿ ಸದರಿ ಅನುಸೂಚನೆಯನ್ನು ಅನುಷ್ಠಾನಗೊಳಿಸಬೇಕು ಹಾಗೂ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವ ನಿಷೇಧಿತ ವಿಗ್ರಹಗಳನ್ನು ಚೆಕ್ ಪೋಸ್ಟಿನಲ್ಲಿ ತಡೆಗಟ್ಟಲು ಕ್ರಮಕೈಗೊಂಡ ಬಗ್ಗೆ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಮತ್ತು ಪರಿಸರ ಅಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕಾರವಾರ ಇವರಿಗೆ 7 ದಿನಗಳ ಒಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.