Satwadhara News

Author: satwawriter

  • ಬೈಕ್ ಓಡಿಸುವಾಗಲೇ‌ ಹೃದಯಸ್ತಭನ?

    ಬೈಕ್ ಓಡಿಸುವಾಗಲೇ‌ ಹೃದಯಸ್ತಭನ?

    ಶಿರಸಿ : ನಗರದ ದೇವಿಕರೆ ಬಳಿ ಹೃದಯಾಘಾತದಿಂದ ಬೈಕ್ ನಿಂದ ಕುಸಿದು ಬಿದ್ದು ವ್ಯಕ್ತಿ ಓರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಎದೆ ನೋವು ಕಾಣಿಸಿಕೊಂಡ ಕಾರಣ ತಾಯಿಯೊಂದಿಗೆ ಆಸ್ಪತ್ರೆಗೆ ತೆರಳಿ ವೈದ್ಯರಿಂದ ಸಲಹೆ ಪಡೆದು‌ ಬೈಕ್‌‌ ಮೇಲೆ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಹೃದಯಾಘಾತ ಉಂಟಾಗಿ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ.

    ಹನುಮಂತಿಯ ನಿವಾಸಿಯಾಗಿದ್ದ‌ ಪ್ರೇಮಾನಂದ ಗಂಗಾಧರ ತಳಗೇರಿ (25) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಮಧ್ಯಾಹ್ನದ ಸಮಯದಲ್ಲಿ ಎದೆ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ.‌ಬಳಿಕ ಆತ‌ ತಾಯಿ ಬಳಿ ವಿಚಾರವನ್ನ ಹೇಳಿ ಆಸ್ಪತ್ರೆಗೆ ಹೋಗಲು ಹೋರಟಿದ್ದು, ಈ ವೇಳೆ ಮಗನಿಗೆ ಎದೆ‌ ನೋವು ಇರುವ ಕಾರಣ ತಾಯಿ ನಾನು ಸಹ ಜೊತೆಯಲ್ಲೆ ಬರುವುದಾಗಿ ಮಗನಿಗೆ ಹೇಳಿದ್ದಳು ಎನ್ನಲಾಗಿದ್ದು, ಹೀಗಾಗಿ ಆತ ತಾಯಿಯನ್ನು ಸಹ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ.

    ಬಳಿಕ ವೈದ್ಯರನ್ನ ಭೇಟಿ ಯಾದ ಪ್ರೇಮಾನಂದ ಬೈಕ್‌ನಲ್ಲಿ ವಾಪಸ್ ಮನೆಗೆ ಬರುವಾಗ ಏಕಾಏಕಿಯಾಗಿ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಮೃತಪಟ್ಟಿದ್ದಾನೆ.‌ಇನ್ನೂ ಬೈಕ್ ಹಿಂಬದಿಯಲ್ಲಿದ್ದ ಆತನ ತಾಯಿಗೂ ಸಹ ಗಾಯವಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಸ್ಪಷ್ಟ ಮಾಹಿತಿ ತನಿಖೆ ನಂತರ ತಿಳಿದು ಬರಬೇಕಿದೆ.

  • ಪ್ರವಾಸಕ್ಕೆ ಬಂದಾಗ ಹೃದಯಾಘಾತ : ಸಾವು

    ಪ್ರವಾಸಕ್ಕೆ ಬಂದಾಗ ಹೃದಯಾಘಾತ : ಸಾವು

    ಶಿರಸಿ: ಕರ್ನಾಟಕಕ್ಕೆ ಪ್ರವಾಸಕ್ಕೆ ಬಂದಿದ್ದ ನಿವೃತ್ತ ಉದ್ಯೋಗಿ, ಮಹಾರಾಷ್ಟ್ರ ರಾಜ್ಯದ ಚಿಂಚವಾಡಾ ಸಮೀಪದ ಪಾವನಾ ನಗರ ಕಾಲೋನಿಯ ಪ್ರದೀಪ ವಸಂತ ಪ್ರಧಾನ (70) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಹೃದಯ ರೋಗಿಯಾಗಿದ್ದ ಇವರಿಗೆ ಕಳೆದ 15 ವರ್ಷಗಳ ಹಿಂದೆ ಎಂಜಿಯೋಗ್ರಾಫಿ ಮಾಡಿಸಿ 2 ಸ್ಟಂಟ್‌ಗಳನ್ನು ಅಳವಡಿಸಲಾಗಿತ್ತು. ಫೆ.8 ರಂದು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಪ್ರವಾಸಕ್ಕೆ ಬಂದು ಶಿರಸಿ-ಹುಬ್ಬಳ್ಳಿ ರಸ್ತೆಯಲ್ಲಿರುವ ಗ್ರೀನ್ ವರ್ಲ್ಡ ರೆಸಾರ್ಟಿನಲ್ಲಿ ಉಳಿದುಕೊಂಡಿದ್ದರು. ಫೆ. 14 ರಂದು ಕೆಮ್ಮು, ಕಫ ಹೆಚ್ಚಾಗಿದ್ದರಿಂದ ಶಿರಸಿಯ ಟಿ.ಎಸ್. ಎಸ್. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಇಸಿಜಿ ಮಾಡಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಫೆ.15 ರಂದು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಇವರ ಪತ್ನಿ ಸುಲಭಾ ಪ್ರದೀಪ ಪ್ರಧಾನ ಬನವಾಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  • ಶಾಲೆಗೆ ೭ ಲಕ್ಷ ರೂ. ಗಳಿಗೂ ಹೆಚ್ಚು ಮೌಲ್ಯದ ಶೈಕ್ಷಣಿಕ ಉಪಕರಣ ಕೊಡುಗೆ.

    ಶಾಲೆಗೆ ೭ ಲಕ್ಷ ರೂ. ಗಳಿಗೂ ಹೆಚ್ಚು ಮೌಲ್ಯದ ಶೈಕ್ಷಣಿಕ ಉಪಕರಣ ಕೊಡುಗೆ.

    ಕುಮಟಾ : ತಾಲೂಕಿನ ಕರ್ಕಿಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೊವೊ ನೊರ್ಡಿಸ್ಕ ಕಂಪನಿಯ ಸಿಎಸ್‌ಆರ್ ನಿಧಿಯಿಂದ ಕೊಡುಗೆಯಾಗಿ ನೀಡಿದ ೭ ಲಕ್ಷ ರೂ. ಗಳಿಗೂ ಹೆಚ್ಚು ಮೌಲ್ಯದ ವಿಜ್ಞಾನ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಉಪಯುಕ್ತ ಶೈಕ್ಷಣಿಕ ಉಪಕರಣಗಳನ್ನು ಹಸ್ತಾಂತರಿಸಲಾಯಿತು. ಇದೇ ವೇಳೆ ಶಾಲೆಯ ಪ್ರಯೋಗಾಲಯ ಹಾಗೂ ವಾಚನಾಲಯವನ್ನು ನೊವೊ ನೊರ್ಡಿಸ್ಕ ಕಂಪನಿಯ ಮೆನೆಜರ್ ಪ್ರಶಾಂತ ಉದ್ಘಾಟಿಸಿ ಶುಭಹಾರೈಸಿದರು.

    ಶೈಕ್ಷಣಿಕ ಉಪಕರಣಗಳನ್ನು ಶಾಲೆಯ ಪರವಾಗಿ ಸ್ವೀಕರಿಸಿದ ಬಿಇಒ ರಾಜೇಂದ್ರ ಎಲ್. ಭಟ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಕರ್ಕಿಮಕ್ಕಿ ಶಾಲೆ ಸಾಕಷ್ಟು ಶೈಕ್ಷಣಿಕ ಪ್ರಗತಿಯತ್ತ ಸಾಗುವುದಕ್ಕೆ ಇಲ್ಲಿನ ಶಿಕ್ಷಕ ವರ್ಗ, ಎಸ್‌ಡಿಎಂಸಿ ಪ್ರಯತ್ನದಂತೆಯೇ ಹಳೆಯ ವಿದ್ಯಾರ್ಥಿಗಳ ಸಹಯೋಗವೂ ದೊರೆಯತ್ತಿರುವುದು ಶ್ಲಾಘನೀಯವಾಗಿದೆ. ಮೂರೂರು ಕ್ಲಸ್ಟರಿನ ಗ್ರಾಮೀಣ ಪ್ರದೇಶದಲ್ಲಿರುವ ಕರ್ಕಿಮಕ್ಕಿ ಸರ್ಕಾರಿ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿ ಗಣಪತಿ ಮಂಜುನಾಥ ಹೆಗಡೆ ಬಾಳೆಗದ್ದೆ ಇವರು ಬೆಂಗಳೂರಿನಲ್ಲಿ ನೊವೊ ನೊರ್ಡಿಸ್ಕ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ತಾವು ಕಲಿತ ಶಾಲೆಯ ಸ್ಮರಣೆಯಿಟ್ಟು ೭ ಲಕ್ಷರೂ.ಗಳಿಗೂ ಹೆಚ್ಚು ಮೌಲ್ಯದ ವಿಜ್ಞಾನ ಹಾಗೂ ಇತರೆ ಶೈಕ್ಷಣಿಕ ಉಪಕರಣಗಳನ್ನು ಶಾಲೆಗೆ ನೀಡಿದ್ದಾರೆ. ಶಾಲೆಗೆ ಈ ಕೊಡುಗೆ ಲಭ್ಯವಾಗುವಲ್ಲಿ ಶಾಲೆಯ ಮುಖ್ಯ ಶಿಕ್ಷಕ ಹರೀಶ ಪಟಗಾರ, ಎಸ್‌ಡಿಎಂಸಿಯ ಅಧ್ಯಕ್ಷ ರಾಮಚಂದ್ರ ಗೌಡ ಪ್ರಯತ್ನ ಗಮನಾರ್ಹವಾಗಿದೆ. ಕರ್ಕಿಮಕ್ಕಿ ಶಾಲೆಗೆ ಬರುವ ಮಕ್ಕಳಲ್ಲಿ ಬಹುತೇಕ ಕುಟುಂಬಗಳು ಬಡ ಹಾಗೂ ಕೂಲಿಕಾರ್ಮಿಕ ಕುಟುಂಬಗಳಾದರೂ ಪಾಲಕರು ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರು ಈಗಾಗಲೇ ಸುಮಾರು ಒಂದೂವರೆ ಲಕ್ಷ ಮೌಲ್ಯದ ಸೋಲಾರ್ ವ್ಯವಸ್ಥೆ ಮತ್ತು ಡಿಜಿಟಲ್ ಟಿವಿಗಳನ್ನು ಒದಗಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣಕ್ಕೂ ಅನುಕೂಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಹಳೆಯ ವಿದ್ಯಾರ್ಥಿ ಗಣಪತಿ ಮಂಜುನಾಥ ಹೆಗಡೆ ಬಾಳೆಗದ್ದೆ ಇವರ ಸೇವೆಯನ್ನು ಇಲಾಖೆಯು ಸದಾ ಸ್ಮರಿಸಲಿದೆ ಎಂದರು. 

    ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ನಾಯ್ಕ. ಗಣಪತಿ ಮಂಜುನಾಥ ಹೆಗಡೆ ಬಾಳೆಗದ್ದೆ, ಎಸ್‌ಡಿಎಂಸಿ ಅಧ್ಯಕ್ಷ ರಾಮಚಂದ್ರ ಮಾರು ಗೌಡ, ಉಪಾಧ್ಯಕ್ಷೆ ರೇಣುಕಾ ಮಂಜುನಾಥ ನಾಯ್ಕ. ಸಿಆರ್‌ಪಿ ಎಲ್.ಜಿ.ಪಟಗಾರ. ಮುಖ್ಯ ಶಿಕ್ಷಕ ಹರೀಶ ಪಟಗಾರ ಸ್ವಾಗತಿಸಿದರು. ಗಣೇಶ ನಾಯ್ಕ ವಂದಿಸಿದರು. ಮಾಲಿನಿ ಭಟ್ ಮತ್ತು ವಿದ್ಯಾ ಶೆಟ್ಟಿ ನಿರ್ವಹಿಸಿದರು.

  • ಶಿಕ್ಷಕ ಪಿ.ಆ‌ರ್. ನಾಯ್ಕರಿಗೆ ಶಿಶು ಸಂಗಮೇಶ ದತ್ತಿ ಪ್ರಶಸ್ತಿ

    ಶಿಕ್ಷಕ ಪಿ.ಆ‌ರ್. ನಾಯ್ಕರಿಗೆ ಶಿಶು ಸಂಗಮೇಶ ದತ್ತಿ ಪ್ರಶಸ್ತಿ

    ಹೊನ್ನಾವರ: ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ಶಿಶು ಸಂಗಮೇಶ ದತ್ತಿ ಪ್ರಶಸ್ತಿಯು ಶಿಕ್ಷಕ ಪಿ.ಆರ್.ನಾಯ್ಕರವರ ಮಕ್ಕಳ ಕೃತಿ ಪಾಟಿಚೀಲ ಕವನ ಸಂಕಲನಕ್ಕೆ ಸಂದಿವೆ.

    ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ 2023ನೇ ಸಾಲಿನ ದತ್ತಿ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಲಾಗಿತ್ತು. ರಾಜ್ಯ, ದೇಶ ಮತ್ತು ವಿದೇಶಗಳಿಂದಲೂ ನಾಲ್ಕು ಸಾವಿರ ಕೃತಿಗಳು ಬಂದಿದ್ದು ಅವುಗಳಲ್ಲಿ 12 ಜನ ಪರಿಣಿತರ ಸಮಿತಿಯು ದತ್ತಿ ಪ್ರಶಸ್ತಿಯನ್ನು ಆಯ್ಕೆ ಮಾಡಿದೆ. ಕಳೆದ ಮೂರು ದಶಕಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ, ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ, ಯುವಜನ ಸೇವಾ ಕ್ರೀಡಾಧಿಕಾರಿಯಾಗಿ, ಸಾಕ್ಷರತಾ ಸಮನ್ವಾಧಿಕಾರಿಯಾಗಿ ವಿಶಿಷ್ಟ ಸೇವೆ ಸಲ್ಲಿಸಿರುತ್ತಾರೆ. ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಪಿ.ಆ‌ರ್.ನಾಯ್ಕ ಅವರು ಭಟ್ಕಳ ತಾಲೂಕಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ.

    ತಿಮ್ಮು, ಗುಲಗುಂಜಿ, ತಣ್ಣೀರು, ಡಾಕ್ಟರ್ ಮಾಮ, ನಮ್ಮವರು ನಮ್ಮ ಜನಾಂಗ, ಅಕ್ಷರ ಸಂಗಾತಿ, ಸಂಪನ್ನ, ಭಾವಾಭಿನಂದನೆ ಮುಂತಾದ 25 ಕ್ಕೂ ಹೆಚ್ಚು ದೇವಗಿರಿ, ಪಾಟಿ ಚೀಲ, ಪ್ರತಿಭಾ ಕೃತಿಗಳನ್ನು ಪ್ರಕಟಿಸಿದ್ದಾರೆ.

    ಕರೋನಾ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ವಿಶೇಷ ಉತ್ತೇಜನ ನೀಡುರುವುದರಿಂದ ಮಕ್ಕಳ ಹಕ್ಕು ಆಯೋಗದಿಂದ ಪ್ರಶಂಸನ ಪತ್ರ ನೀಡಿ ಅಭಿನಂದಿಸಿರುತ್ತಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಕಾರವಾರ, ಜೋಯಿಡಾ, ಸಿದ್ದಾಪುರ ತಾಲೂಕಿನ ಗ್ರಾಮ ಚರಿತ್ರಾ ಕೋಶದ ಕ್ಷೇತ್ರ ತಜ್ಞರಾಗಿ ನೇಮಕ ಮಾಡಿ ಪುಸ್ತಕ ಪ್ರಕಟಿಸಿರುತ್ತಾರೆ. ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

    ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಯಾಗಿ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಸಾಹಿತಿ ಜಮೀರುಲ್ಲಾ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾಗಿ, ಹಳೆಯ ಪೈಕ ನಾಮಧಾರಿ ಜನಪದ ಸಾಹಿತ್ಯ ಪ್ರಕಟನಾ ಸಮಿತಿ ಸಂಪಾದಕರಾಗಿ, ಸಂಘಟಕರಾಗಿ ಸೇವೆ ಸಲ್ಲಿಸಿ ಅಪಾರ ಅನುಭವ ಪಡೆದಿದ್ದಾರೆ. ರಾಜ್ಯಮಟ್ಟದ ಗುರುಶ್ರೀ, ವಿಜ್ಞಾನ ಮಿತ್ರ ಪ್ರಶಸ್ತಿ, ಉತ್ತಮ ನಾಟಕ ನಿರ್ದೇಶಕ ಪ್ರಶಸ್ತಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ.ಆರ್.ನಾಯ್ಕರ ಮಕ್ಕಳ ಕವನ ಸಂಕಲನಕ್ಕೆ ದತ್ತಿ ಪ್ರಶಸ್ತಿ ಬಂದಿರುವುದು ಶಿಕ್ಷಕರ ಸಮುದಾಯಕ್ಕೆ ಸಂದ ಗೌರವವಾಗಿದೆ. ಅಪಾರ ಶಿಕ್ಷಕ ವೃಂದ, ಹಿತೈಷಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

  • ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ

    ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ

    ಕಾರವಾರ: ಗ್ರಾಮೀಣ ಅಂಚೆ ಸೇವಕರ ನೇಮಕಾತಿಗೆ ಸಂಬಂಧಿಸಿದಂತೆ ಕಾರವಾರ ಅಂಚೆ ವಿಭಾಗದಲ್ಲಿ ಒಟ್ಟೂ 32 ಖಾಲಿ ಇರುವ ಶಾಖಾ ಅಂಚೆ ಪಾಲಕ, ಸಹಾಯಕ ಶಾಖಾ ಅಂಚೆ ಪಾಲಕ ಮತ್ತು ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಯೋಮಿತಿ 18 ರಿಂದ 40 ವರ್ಷಗಳು. ವಿದ್ಯಾರ್ಹತೆ 10ನೇ ತರಗತಿ ತೇರ್ಗಡೆ ಕಡ್ಡಾಯ. ಕನ್ನಡವನ್ನು 10ನೇ ತರಗತಿಯಲ್ಲಿ ಒಂದು ಭಾಷೆಯನ್ನಾಗಿ ಅಧ್ಯಯನ ಮಾಡಿರಬೇಕು. ಬೇರೆ ಯಾವುದೇ ವಿಧಾನದ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

    ಮಧ್ಯವರ್ತಿಗಳ ಮೂಲಕ, ಪರೀಕ್ಷೆ, ಸಂದರ್ಶನ ಇರುವುದಿಲ್ಲ. ಎಸ್.ಎಸ್.ಎಲ್.ಸಿ ಗರಿಷ್ಠ ಅಂಕ ಮಾನದಂಡದಲ್ಲಿ ನೇಮಕಾತಿ ನಡೆಯಲ್ಲಿದ್ದು ಅರ್ಜಿ ಸಲ್ಲಿಸುವ ಮೊದಲು ವೆಬ್‌ಸೈಟ್ https://indiapostgdsonline.gov.in ಆಲೈನ್ ಮೂಲಕ ಅರ್ಜಿಸಲ್ಲಿಸಲು ಮಾ.3 ಕೊನೆಯ ದಿನವಾಗಿದ್ದು, ಆಸಕ್ತರು https://indiapostgdsonline.gov.in ಅರ್ಜಿ ಸಲ್ಲಿಸಬಹುದು. ದೇಶದಾದ್ಯಂತ ಖಾಲಿ ಇರುವ 21413 ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ಏಕಾಕಾಲಕ್ಕೆ ನಡೆಯುತ್ತಿದ್ದು ಅರ್ಹ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕಾರವಾರ ವಿಭಾಗದ ಅಂಚೆ ಅಧೀಕ್ಷಕ ಧನಂಜಯ ಆಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಸಮಾಜ ಅಭಿವೃದ್ಧಿ ಯಾಗಬೇಕಾದರೆ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು.

    ಸಮಾಜ ಅಭಿವೃದ್ಧಿ ಯಾಗಬೇಕಾದರೆ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು.

    ಶಿರಸಿ: ಸಮಾಜ ಅಭಿವೃದ್ಧಿ ಯಾಗಬೇಕಾದರೆ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ತಾಲೂಕಾಡಳಿತ, ನಗರಸಭೆ ಹಾಗೂ ತಾಲೂಕಾ ಪಂಚಾಯತ್ ಶಿರಸಿ ಮತ್ತು ಶಿರಸಿ – ತಾಲೂಕಾ ಸೇವಾಲಾಲ್ ಬಂಜಾರಾ ಸಂಘ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಗರದ ಮಾರಿಕಾಂಬಾ ಕಲ್ಯಾಣ ಮಂಟಪದಲ್ಲಿ ೫. ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ರವರ 286ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಸಂತ ಸೇವಾಲಾಲರು ಸಮಾಜಸುಧಾರಕರು. ಸಮಾಜಕ್ಕೆ ಅನೇಕ ಸಂದೇಶವನ್ನು ನೀಡಿದವರು. ಇಂತವರನ್ನು ಸ್ಮರಿಸಿ ಗೌರವಿಸಬೇಕು ಎಂಬ ಉದ್ದೇಶದಿಂದ ಇದನ್ನು ಸರ್ಕಾರಿ ಕಾರ್ಯ ಕ್ರಮವನ್ನಾಗಿ ಆಚರಿಸುತ್ತಿದ್ದೇವೆ. ಸಮಾಜದ ಬಳ್ಳೆಯನ್ನು ಬಯಸುವುದು ಪ್ರತಿಯೊಬ್ಬರ – ಜವಾಬ್ದಾರಿ ಸಮಾಜದ ಮುತ್ತಖ್ಯ ವಾಹಿನಿಗೆ ಬರಲು ಶಿಕ್ಷಣ ಆತೀ ಮುಖ್ಯವಾಗಿರುತ್ತದೆ. ಶಿಕ್ಷಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು 5 ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಯೋಜನೆಗಳನ್ನು ಸಮಾಜದ ಮಕ್ಕಳು ಜರ ಸದುಪಯೋಗ ಪಡಿಸಿಕೊಂಡು ಉತ್ತಮ ವಿದ್ಯಾವಂತರಾಗಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದರು.

    ಮಾದನಗೇರಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಸಂಘದ ಅಧ್ಯಕ್ಷ ಡಾ.ಕೆ.ಬಿ ಪವಾರ, ಶಿವಾನಂದ ಇದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ.ಎಂ ಕೃಷ್ಣಮೂರ್ತಿ ಸ್ವಾಗತಿಸಿದರು. ರೂಪೇಶ್ ಚೌಹಾಣ್ ನಿರೂಪಿಸಿದರು. ಶನಿವಾರ ಮಾರಿಕಾಂಬಾ ದೇವಸ್ಥಾನದಿಂದ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸೇವಾಲಾಲರ ಭಕ್ತಿಗೀತೆಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

  • ಓಸಿ ಆಡುತ್ತಿದ್ದವರು ಅರೆಸ್ಟ್..!

    ಓಸಿ ಆಡುತ್ತಿದ್ದವರು ಅರೆಸ್ಟ್..!

    ಶಿರಸಿ: ಬನವಾಸಿಯ ಸಾರ್ವಜನಿಕ ಸ್ಥಳವಾದ ಬಸ್ ನಿಲ್ದಾಣ, ಕದಂಬ ಸರ್ಕಲ್‌ ಮತ್ತು ದಾಸನಕೊಪ್ಪ ಸರ್ಕಲ್ ಬಳಿ ಓಸಿ ಆಟ ನಡೆಸುತ್ತಿದ್ದ ನಾಲ್ವರ ಮೇಲೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬನವಾಸಿಯ ಹೊಳೆಮಠದ ಮಾಲತೇಶ ನಾರಾಯಣ ಕನ್ನಿ (60), ಸೊರಬ ರಸ್ತೆಯ ವಿವೇಕಾನಂದ ಆರೇರ (46), ಆದರ್ಶನಗರದ ನಂಜುಂಡ ರಾಜಶೇಖರ (70) ಹಾಗೂ ಹೊಳೆಮಠದ ಪುಟ್ಟಪ್ಪ ಶಿವಪ್ಪ ಕನ್ನಿ (32) ವಿರುದ್ಧ ಕೇಸ್ ದಾಖಲಾಗಿದೆ. ಬನವಾಸಿ ಠಾಣೆ ಪಿಎಸ್‌ಐ ಚಂದ್ರಕಲಾ ಪತ್ತಾರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ, 900 ರೂ. ನಗದು, 2 ಬಾಲ್ ಪೆನ್ನು ವಶಪಡಿಸಿಕೊಂಡಿದ್ದಾರೆ.

  • ಸಾರಿಗೆ ಬಸ್‌ಗೆ ಲಾರಿ ಡಿಕ್ಕಿ

    ಸಾರಿಗೆ ಬಸ್‌ಗೆ ಲಾರಿ ಡಿಕ್ಕಿ

    ಶಿರಸಿ: ತಾಲೂಕಿನ ಸೋಂದಾ ಕ್ರಾಸ್ ಬಳಿಯ ಚೌಡಿಕೆರೆ ಹತ್ತಿರ ಸಾರಿಗೆ ಬಸ್‌ಗೆ ಲಾರಿ ಡಿಕ್ಕಿಯಾದ ಪರಿಣಾಮ ಬಸ್ ಜಕಂಗೊಂಡಿದೆ. ಯಲ್ಲಾಪುರದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್ ಟಿಸಿ ಬಸ್‌ಗೆ ಗುದ್ದಿದ ಲಾರಿಯನ್ನು ಚಾಲಕ ಅಪಘಾತ ಸ್ಥಳದಿಂದ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಆತನ ವಿರುದ್ಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಕಟ್ಟಡದಿಂದ ಬಿದ್ದು ಮಹಿಳೆ ಸಾವು

    ಕಟ್ಟಡದಿಂದ ಬಿದ್ದು ಮಹಿಳೆ ಸಾವು

    ಗೋಕರ್ಣ: ಕಟ್ಟಡದ ಕಾಂಕ್ರಿಟ್ ಕೆಲಸ ಮುಗಿಸಿ ಬರುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕಟ್ಟಡದಿಂದ ಬಿದ್ದು ಮಹಿಳೆ ಸಾವನಪ್ಪಿರುವ ಘಟನೆ ಗೋಕರ್ಣದಲ್ಲಿ ನಡೆದಿದೆ. ಕುಡ್ಲೆ ಬೀಚ್‌ನ ಬಳಿ ಖಾಸಗಿ ವ್ಯಕ್ತಿಯ ಕಟ್ಟಡ ನಿರ್ಮಾಣಕ್ಕೆ ಕಾಂಕ್ರಿಟ್ ಕೆಲಸ ಮುಗಿಸಿ ಬರುತ್ತಿರುವ ವೇಳೆ ಮಂಕಾಳಿ ಗೌಡ ಹೆಗ್ಡೆ ಎಂಬ ಮಹಿಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಸಾವನಪ್ಪಿದ್ದಾಳೆ. ಈ ಬಗ್ಗೆ ಮೃತಳ ತಮ್ಮ ಪೊಲೀಸರಿಗೆ ದೂರನ್ನು ನೀಡಿದ್ದು ಈ ಬಗ್ಗೆ ಗೋಕರ್ಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಫೇ. 20 ರಿಂದ ಹೊನ್ನಾವರ ಉತ್ಸವ

    ಫೇ. 20 ರಿಂದ ಹೊನ್ನಾವರ ಉತ್ಸವ

    ಹೊನ್ನಾವರ: ಫೆಬ್ರವರಿ ೨೦ ರಿಂದ ೨೩ರವರೆಗೆ ಪಟ್ಟಣದ ಸೇಂಟ್ ಅಂತೋನಿ ಮೈದಾನದಲ್ಲಿ ಸಿಂಚನ ಕಲೆ ಮತ್ತು ಗ್ರಾಮೀಣ ಅಭಿವೃದ್ದಿ ಟ್ರಸ್ಟ್ ಹಾಗೂ ಹೊನ್ನಾವರ ಉತ್ಸವ ಸಮಿತಿಯ ಆಶ್ರಯದಲ್ಲಿ ಹೊನ್ನಾವರ ಉತ್ಸವ – ೨೦೨೫ ನಡೆಯಲಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ಕೃಷ್ಣಾನಂದ ಭಟ್ ತಿಳಿಸಿದರು.
    ಪಟ್ಟಣದ ಖಾಸಗಿ ಹೊಟೆಲನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ಹಲವು ವರ್ಷದಿಂದ ಸಾಂಸ್ಕ್ರತಿಕ ಕಾರ್ಯಕ್ರಮದ ಜೊತೆ ಹಲವು ಕಲಾವಿದರನ್ನು ಪೊತ್ಸಾಹಿಸುತ್ತಾ ಬಂದಿರುವ ಸಂಘಟನೆಯು ಈ ಬಾರಿ ಹೊನ್ನಾವರದ ಸ್ಥಳಿಯ ಪ್ರತಿಭೆಗಳಿಗೆ ಪೊತ್ಸಾಹ ನೀಡುವ ಜೊತೆ ನಾಡಿನ ಪ್ರಸಿದ್ದ ಕಲಾವಿದರನ್ನು ಕರೆ ತಂದು ಸಾಂಸ್ಕೃತಿಕ ಹಬ್ಬ ಆಚರಿಸಲು ಸಜ್ಜಾಗಿದೆ. ಲಿಟಲ್ ಕರಾವಳಿ ಫ್ಯಾಶನ್ ಶೋ, ಮಿಸ್ ಕರಾವಳಿ ಸ್ಪರ್ಧೆ, ರಾಜ್ಯ
    ಮಟ್ಟದ ನೃತ್ಯ ಸ್ಪರ್ಧೆ, ಗಾಯನ ಹಾಗೂ ನೃತ್ಯ, ಕಾಮಿಡಿ ಶೋ ಮುಂತಾದವು ನಡೆಯಲಿದ್ದು ಸಿನಿಮಾ ಹಾಗೂ ಧಾರವಾಹಿ ನಟ- ನಟಿಯರು, ಸ್ಥಳೀಯ ಕಲಾವಿದರು ಭಾಗವಹಿಸುವರು ಎಂದು ತಿಳಿಸಿದರು.ವಿವಿಧ ಸಂಘ-ಸಂಸ್ಥೆಗಳ ಸಹಕಾರದ ಮೆರೆಗೆ ನಡೆಯುವ ಕಾರ್ಯಕ್ರಮಕ್ಕೆ ಸಚಿವ ಮಂಕಾಳ ವೈದ್ಯ, ಅವರ
    ಪುತ್ರಿ ಬೀನಾ ವೈದ್ಯ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಮಾಸಪ್ಪ ನಾಯ್ಕ, ಕಾಂಗ್ರೇಸ್ ಮುಖಂಡ ರವಿ
    ಶೆಟ್ಟಿ ಕವಲಕ್ಕಿ, ಪ್ರೊ ರಾಜು ಮಾಳಗಿಮನೆ ಮುಂತಾದವರ ಸಹಕಾರದಲ್ಲಿ ಸಂಘಟಿಸಲಾಗಿದೆ ಎಂದು ತಿಳಿಸಿದರು.
    ರಿಯಾಲಿಟಿ ಶೊ ಖ್ಯಾತಿಯ ಶ್ರೀರಾಮ ಜಾದೂಗಾರ ಮಾತನಾಡಿ ಫೆಬ್ರವರಿ ೨೦ರಂದು ೬-೧೪ ವರ್ಷದ ಮಕ್ಕಳಿಗೆ ಲಿಟಲ್ ಕರಾವಳಿ, ೧೪ವರ್ಷ ಮೇಲ್ಪಟ್ಟವರಿಗೆ ಮಿಸ್ ಕರಾವಳಿ ಫೆಶನ್ ಶೋ ಆಯೋಜಿಸಲಾಗಿದೆ. ನಿರ್ಣಾಯಕರಾಗಿ ಬಿಗ್ ಬಾಸ್ ಖ್ಯಾತಿಯ ಹಂಸ, ನಟಿ ಕಾವ್ಯಾ ಗೌಡ, ಮಾಡೆಲಿಂಗ್ ಹರ್ಷಿತಾ ರಾಠೋಡ, ಧಾರಾವಾಹಿ ನಟಿ ಸ್ವಾತಿ ಪಾಲ್ಗೊಳ್ಳುವರು. ವಿಶೇಷ ಆಹ್ವಾನಿತರಾಗಿ ವಾಗ್ಮಿ ಚೈತ್ರಾ ಕುಂದಾಪುರ ಭಾಗವಹಿಸುವರು. ಮಂಗಳೂರಿನ ಸಮದ್
    ಗಡಿಯಾರ್, ದೀಪ್ತಿ ದಿಲ್ ಸೆ, ರಾಕೇಶ ದಿಲ್ ಸೆ, ಸಾದಿಕ್ ಬಿಂದಾಸ್ ಅವರಿಂದ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದೆ ಎಂದರು.
    ನೃತ್ಯ ಕಾರ್ಯಕ್ರಮದ ಸಂಘಟಕ ನಾಗರಾಜ ಮಾತನಾಡಿ ಫೆಬ್ರವರಿ ೨೧ರಂದು ರಾಜ್ಯ ಮಟ್ಟದ ಆಯ್ದ ತಂಡ ಹಾಗೂ ಜಿಲ್ಲೆಯ ವಿವಿಧ ತಂಡಗಳ ನೃತ್ಯ ಸ್ಪರ್ಧೆ ನಡೆಯಲಿದ್ದು ನಿರ್ಣಾಯಕರಾಗಿ ಕೋರಿಯಾಗ್ರಾಫರ್ ಮುರುಗಾ ಮಾಸ್ಟರ್, ಡಿ.ಕೆ.ಡಿ. ವಿನ್ನರ್ ಬೃಂದಾ ಭಾಗವಹಿಸುವರು. ಸತೀಶ ಹೆಮ್ಮಾಡಿಯವರಿಂದ ಜಾದೂ ಪ್ರದರ್ಶನವಿದೆ ಎಂದು ತಿಳಿಸಿದರು.
    ಫೆಬ್ರವರಿ ೨೨ರಂದು ದ್ವಾಪರ ಹಾಡಿನ ಖ್ಯಾತಿಯ ಜಸ್ಕರನ ಸಿಂಗ್, ದಿವ್ಯಾ ರಾಮಚಂದ್ರ, ಅಶ್ವಿನ್ ಶರ್ಮಾ, ಸಂದೇಶ ನೀರ್ಮಾರ್ಗ ಹಾಗೂ ಶಿವಾನಿ ತಂಡದವರಿಂದ ಮ್ಯೂಸಿಕಲ್ ನೈಟ್ ಹಾಗೂ ಡಾನ್ಸ್ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
    ಕರುನಾಡ ವಿಜಯ ಸೇನೆಯ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ ಮಾತನಾಡಿ ಫೆಬ್ರವರಿ ೨೩ರಂದು ಸಮಾರೋಪ ಸಮಾರಂಭ ನಡೆಯಲಿದ್ದು ರಾತ್ರಿ ೧೦ ಗಂಟೆಗೆ ಶ್ರೀ ಹರ್ಷ, ಸುಪ್ರೀತ ಪಾಲ್ಗುಣ, ನಾದಿರಾ ಬಾನು, ವಾಸುಶ್ರೀ, ದಿಯಾ ಹೆಗಡೆ ತಂಡದವರಿಂದ ಗಾಯನ,
    ಮಿಮಿಕ್ರಿ ಕಿಂಗ್ ಗೋಪಿ, ಮಜಾಭಾರತದ ರಾಘವೇಂದ್ರ, ಸುಶ್ಮಿತಾ, ಹೇಮಾ ತಂಡದವರಿಂದ ಕಾಮಿಡಿ ಶೋ ನಡೆಯಲಿದೆ ಎಂದರು.
    ಉತ್ಸವ ಸಮಿತಿಯ ಗೌರವಾಧ್ಯಕ್ಷ ಮಂಜುನಾಥ ನಾಯ್ಕ ಮಾತನಾಡಿ ತಾಲೂಕಿನಲ್ಲಿ ಮನೊರಂಜನಾ ಕಾರ್ಯಕ್ರಮದ ಜೊತೆ ರಾಜ್ಯ ಮಟ್ಟದ ಕಲಾವಿದರನ್ನು ಆಹ್ವಾನಿಸುವುದರ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು.
    ಸಮಿತಿಯ ಗೌರವಾಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ
    ಮಾತನಾಡಿ ವಿವಿಧ ಸಂಘಟನೆಯ ಸಹಕಾರದ ಮೇರೆಗೆ ಸ್ಥಳಿಯ ಕಲೆ ಹಾಗು ಕಲಾವಿದರಿಗೆ ಪೊತ್ಸಾಹ ನೀಡುವ ನಿಟ್ಟಿನಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದರು.
    ಸಂಘಟನೆಯ ಗೌರವ ಸಲಹೆಗಾರರಾದ ಶಿವರಾಜ ಮೇಸ್ತ, ಉಮೇಶ ಮೇಸ್ತ, ಜಯ ಕರ್ನಾಟಕ ಸಂಘಟನೆಯ ಆರ್.ಕೆ.ಮೇಸ್ತ, ಮೀನುಗಾರ ಸಂಘದ ನಿರ್ದೆಶಕರಾದ ರವಿ ಮೊಗೇರ, ಸಂಘಟಕರಾದ ವಿನಾಯಕ ಶೆಟ್ಟಿ ಸಾಲ್ಕೋಡ, ಮೋಹನ ಅಚಾರ್ಯ, ಮಣಿಕಂಠ ಶೆಟ್ಟಿ, ಶ್ರೀನಿವಾಸ ನಾಯ್ಕ, ಮತ್ತಿತರರು ಇದ್ದರು.
    Show quoted text