Satwadhara News

Category: Health

  • ಹೆಚ್ಚುತ್ತಿದೆ ಚಳಿ : ಸರಕಾರದಿಂದ ಬಂತು ಮಾರ್ಗಸೂಚಿ.

    ಹೆಚ್ಚುತ್ತಿದೆ ಚಳಿ : ಸರಕಾರದಿಂದ ಬಂತು ಮಾರ್ಗಸೂಚಿ.

    ಬೆಂಗಳೂರು: ಕಳೆದ ಮೂರು-ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆ, ಮೈ ನಡುಗಿಸುವ ಚಳಿಗೆ ಬೆಂಗಳೂರಿನಲ್ಲಿ ಅನೇಕ ಮಂದಿ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಕ್ಕಳಲ್ಲಿ ಹೆಚ್ಚಾಗಿ ಕೆಮ್ಮು, ಜ್ವರ, ನೆಗಡಿ ಕಾಣಿಸಿಕೊಳ್ಳುತ್ತಿದೆ. ರಾಜ್ಯದಲ್ಲಿ ಚಳಿಯ ವಾತಾವರಣ ಹಿನ್ನೆಲೆ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸುಲಭವಾಗಿ ಜೀರ್ಣವಾಗುವ, ಬಿಸಿಬಿಸಿ ಆಹಾರ ಸೇವಿಸಬೇಕು. ಯಾವಾಗಲೂ ಸ್ವೆಟರ್‌, ಸಾಕ್ಸ್‌ ಧರಿಸಬೇಕು. ಮನೆಯ ಒಳಗಿರುವಾಗಲೂ ಬೆಚ್ಚಗಿರುವುದು ಉತ್ತಮ ಎಂದು ಸೂಚಿಸಿದೆ.

    ಮಾಂಡೌಸ್‌ ಚಂಡಮಾರುತದಿಂದಾಗಿ ರಾಜ್ಯದಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಮೈ ಕೊರೆಯುವ ಚಳಿ ಶುರುವಾಗಿದೆ. ಇದರಿಂದ ಎದುರಾಗುವ ಆರೋಗ್ಯ ಸಮಸ್ಯೆಯಿಂದ ದೂರ ಇರಲು ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

    ಮುಂಬರುವ ಚಳಗಾಲದ ದಿನಗಳಲ್ಲಿ ಸಾರ್ವಜನಿಕರು, ಮಕ್ಕಳು ( ನವಜಾತ ಶಿಶುಗಳು ಸೇರಿದಂತೆ), ಗರ್ಭಿಣಿಯರು, ವೃದ್ಧರು, ವಿಶೇಷವಾಗಿ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಈ ಕೆಳಗಿನ ಸಲಹೆಗಳನ್ನು ಪಾಲಿಸಬೇಕು.

    ಯಾವಾಗಲೂ ಬೆಚ್ಚಗಿನ ನೀರು ಕುಡಿಯುವುದು. ಸುಲಭವಾಗಿ ಜೀರ್ಣವಾಗುವ ಹಾಗೂ ಆಗತಾನೆ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುವುದು ಯಾವಾಗಲೂ sweater, ಸಾಕ್ಸ್ ಹಾಗೂ ಕೈಗವಸುಗಳನ್ನು ಧರಿಸುವುದು ಹಾಗೂ ಮನೆಯ ಒಳಗಿರುವಾಗಲೂ ಬೆಚ್ಚಗಿರುವುದು ಉತ್ತಮ ಸ್ನಾನಕ್ಕೆ ಬಿಸಿ ನೀರು / ಬೆಚ್ಚಗಿನ ನೀರನ್ನು ಉಪಯೋಗಿಸುವುದು ಅನಗತ್ಯವಾಗಿ ಹೊರ ಸಂಚಾರವನ್ನು ತಪ್ಪಿಸಿ ಕಿವಿಗಳನ್ನು ಹತ್ತಿಯಿಂದ ಮುಚ್ಚಿಕೊಳ್ಳಿ ಅಥವಾ ಸ್ಕಾರ್ಫ್ ಕಟ್ಟಕೊಳ್ಳ ಹಾಗೂ ಹೋಗಲೇಬೇಕಾದಲ್ಲಿ ಮಾಸ್ಕ್ ಧರಿಸಬೇಕು.

    ನೆಗಡಿ, ಕೆಮ್ಮು ಹಾಗೂ ಜ್ವರದ ಲಕ್ಷಣಗಳರುವರಿಂದ ದೂರವಿರಬೇಕು
    ಮೊಣಕೈ ಒಳಗೆ ಸೀನುವುದು, ಕೆಮ್ಮುವುದು, ಅಥವಾ ಸೀನುವಾಗ, ಕೆಮ್ಮುವಾಗ ಟಿಶ್ಯೂ ಅಥವಾ ಕರವಸ್ತ್ರವನ್ನು ಬಳಸಬೇಕು
    ಕೈಗಳನ್ನು ಆಗಾಗ್ಗೆ ನೀರು ಹಾಗೂ ಸೋಪಿನಿಂದ ತೊಳೆಯಬೇಕು
    ಜ್ವರ‌ ಲಕ್ಷಣಗಳು ಅಥವಾ ಇತರೆ ಯಾವುದಾದರೂ ಖಾಯಿಲೆಯ ಲಕ್ಷಣಗಳಿದ್ದಲ್ಲಿ ತಕ್ಷಣವೇ ವೈದ್ಯರ ಸಲಹೆಯನ್ನು ಪಡೆಯುವುದು.
    ಸ್ವಯಂವೈದ್ಯ ಪದ್ಧತಿಗಳನ್ನು ಅನುಸರಿಸಬಾರದು.
    ತಣ್ಣಗಿನ ಪಾನೀಯಗಳು , ಐಸ್ ಕ್ರೀಂಗಳನ್ನು ಸೇವಿಸಬಾರದು.
    ರೆಫ್ರಿಜರೇಟರ್‌ನ ಅಥವಾ ತಣ್ಣಗಿನ ನೀರನ್ನು ಕುಡಿಯಬಾರದು.
    ಮಳೆಯಲ್ಲಿ ನೆನೆಯುವುದನ್ನು ಹಾಗೂ ತಣ್ಣನೆಯ ಶೀತ ಗಾಳಿಗೆ ಮೈ ಒಡ್ಡುವುದನ್ನು ತಪ್ಪಿಸಬೇಕು.


    ಹೊರಾಂಗಣ ಪ್ರವಾಸಗಳನ್ನು ಆದಷ್ಟು ನಿರ್ಭಂಧಿಸಿ ( ವಿಶೇಷವಾಗಿ ಗಿರಿಧಾಮಗಳಿಗೆ ವಾರಾಂತ್ಯದ ಪ್ರವಾಸ ಹೋಗುವುದು ಇತ್ಯಾದಿ).
    ಮಸಾಲಾಯುಕ್ತ ಪದಾರ್ಥಗಳು / ಜಂಕ್ ಫುಡ್‌ಗಳನ್ನು ಸೇವಿಸಬಾರದು ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

  • ಭಾರೀ ಗಾತ್ರದ ಮೂತ್ರಕಲ್ಲು ಹೊರತೆಗೆದ ವೈದ್ಯರು.

    ಭಾರೀ ಗಾತ್ರದ ಮೂತ್ರಕಲ್ಲು ಹೊರತೆಗೆದ ವೈದ್ಯರು.

    ಹೊನ್ನಾವರ: ಮಣಿಪಾಲದ ಕಸ್ತೂರ ಬಾ ಆಸ್ಪತ್ರೆಯಲ್ಲಿ ಮೂತ್ರಶಾಸ್ತ್ರಜ್ಞರ ತಂಡವು ಅತಿದೊಡ್ಡ ಮೂತ್ರಕೋಶದ ಕಲ್ಲು ಹೊರ ತೆಗೆದಿದೆ. ಇದು ವಿಶ್ವದಲ್ಲಿ ಇಲ್ಲಿಯವರೆಗೆ ಮಹಿಳಾ ರೋಗಿಯಲ್ಲಿ ವರದಿಯಾಗಿರುವ ಅತಿ ದೊಡ್ಡ ಮೂತ್ರಕೋಶದ ಕಲ್ಲು ಆಗಿದೆ ಎಂದು ತಿಳಿದು ಬಂದಿದೆ. 60 ವರ್ಷ ವಯಸ್ಸಿನ ಮಹಿಳೆಯು ಕಳೆದ ಆರು ವರ್ಷಗಳಿಂದ ಉರಿ ಮೂತ್ರ ದೂರುಗಳೊಂದಿಗೆ ಸ್ಥಳೀಯ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದರು. ಇತ್ತೀಚೆಗೆ ಕಸ್ತೂರ ಬಸ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದರು. ರೋಗಿಗೆ ಸರಳ ಸಿಟಿ ಸ್ಕ್ಯಾನ್ ಮಾಡಿದಾಗ ಮೂತ್ರಕೋಶದಲ್ಲಿ ಕಲ್ಲು ಇರುವುದು ಪತ್ತೆಯಾಗಿದೆ ಎನ್ನಲಾಗಿದೆ.

    ಮೂತ್ರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಉಪ ವೈದ್ಯಕೀಯ ಅಧೀಕ್ಷಕರಾದ ಡಾ.ಪದ್ಮರಾಜ್ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ 11.5*7.5 ಸೆಂ.ಮೀ. ಅಳತೆಯ 672 ಗ್ರಾಂ ತೂಕದ ಮೂತ್ರಕೋಶದ ಕಲ್ಲನ್ನು ಡಾ.ಅಂಶುಮನ್, ಡಾ.ಕಾಶಿ ವಿಶ್ವನಾಥ್, ಡಾ.ನಿಶಾ, ಡಾ.ವಿವೇಕ್ ಪೈ ಮತ್ತು ಡಾ.ಕೃಷ್ಣ ಅವರ ತಂಡವು ತೆರೆದ ಸಿಸ್ಟೋಲಿಥೋಟಮಿ ಶಸ್ತ್ರಚಿಕಿತ್ಸೆ ನಡೆಸಿ ಕಲ್ಲನ್ನು ಹೊರ ತೆಗೆದಿದ್ದಾರೆ. ಎರಡನೇ ದಿನ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

    ಆರೋಗ್ಯವಂತ ವಯಸ್ಕ ಮಹಿಳೆಯಲ್ಲಿ ಇಂಥ ದೈತ್ಯ ಮೂತ್ರಕೋಶದ ಕಲ್ಲು ಪತ್ತೆಯಾಗಿದ್ದು ನಮ್ಮ ಜ್ಞಾನದ ಪ್ರಕಾರ ಇದು ವಿಶ್ವದಲ್ಲೇ ಮೊದಲು. ಇಲ್ಲಿಯವರೆಗೆ ಅತಿದೊಡ್ಡ ಮೂತ್ರಕೋಶದ ಕಲ್ಲು ಮುಂಬೈನ ಕೆಇಎಂ ಆಸ್ಪತ್ರೆಯಲ್ಲಿ (528 ಗ್ರಾಂ) ಪತ್ತೆಯಾಗಿತ್ತು. ಅಪರೂಪದ ಕ್ಲಿಷ್ಟಕರ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದ ತಂಡವನ್ನು ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅಭಿನಂದಿಸಿದ್ದಾರೆ ಎಂದು ವರದಿಯಾಗಿದೆ.

  • ಒಣಕೆಮ್ಮು ಕಡಿಮೆ ಮಾಡುವ ಸುಲಭ ಮನೆಮದ್ದು

    ಒಣಕೆಮ್ಮು ಕಡಿಮೆ ಮಾಡುವ ಸುಲಭ ಮನೆಮದ್ದು

    ಹವಾಮಾನ ಬದಲಾದಂತೆ ಶೀತ, ಜ್ವರದಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಜನರನ್ನು ಕಾಡುತ್ತವೆ. ಅದರಲ್ಲಿ ಒಣಕೆಮ್ಮು ಕೂಡ ಒಂದು. ಒಂದೊಮ್ಮೆ ಹೆಚ್ಚು ಎಣ್ಣೆಯ ಪದಾರ್ಥಗಳನ್ನು ತಿಂದಾಗ ಕೆಮ್ಮು ಕಾಣಿಸಿಕೊಳ್ಳುತ್ತದೆ, ಆದರೆ ಇದು ದೀರ್ಘಕಾಲದವರೆಗೆ ಮುಂದುವರೆದರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತದೆ.

    ಬದಲಾಗುತ್ತಿರುವ ಋತುವಿನಲ್ಲಿ, ಸೋಂಕಿನ ಅಪಾಯವು ತುಂಬಾ ಹೆಚ್ಚಾಗುತ್ತದೆ, ಇದರಿಂದಾಗಿ ನಾವು ಅನೇಕ ಋತುಮಾನದ ಕಾಯಿಲೆಗಳಿಗೆ ಬಲಿಯಾಗುತ್ತೇವೆ, ಇವುಗಳಲ್ಲಿ ಒಂದಾಗಿದೆ ಒಣ ಕೆಮ್ಮು.

    ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ, ಅನೇಕ ಜನರಿಗೆ ಒಣ ಕೆಮ್ಮು ಇತ್ತು. ಈ ರೋಗದಲ್ಲಿ, ಕಫವು ರೂಪುಗೊಳ್ಳುವುದಿಲ್ಲ ಮತ್ತು ಗಂಟಲಿನಲ್ಲಿ ನೋವು ಕೂಡ ಇರುತ್ತದೆ.

    ಈ ಹವಾಮಾನ ಬದಲಾವಣೆಯ ಸಮಯದಲ್ಲಿ ನಾವು ತುಂಬಾ ಜಾಗರೂಕರಾಗಿರಬೇಕು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಸ್ತುಗಳನ್ನು ಸೇವಿಸುವ ಮೂಲಕ ನಾವು ಪರಿಹಾರವನ್ನು ಪಡೆಯಬಹುದು.

    ಒಣ ಕೆಮ್ಮಿಗೆ ಮನೆಮದ್ದು ನಮ್ಮ ಸುತ್ತಮುತ್ತಲಿನ ಜನರಿಗೂ ಸೋಂಕು ತಗುಲುವ ಅಪಾಯವಿದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಬಿಸಿ ಹಾಲಿನ ಸಹಾಯವನ್ನು ತೆಗೆದುಕೊಳ್ಳಬಹುದು. ಬಿಸಿ ಹಾಲನ್ನು ನಿಧಾನವಾಗಿ ಕುಡಿದರೆ ಒಣ ಕೆಮ್ಮು ನಿವಾರಣೆಯಾಗುತ್ತದೆ. ನೀವು ಅದರಲ್ಲಿ ಕರಿಮೆಣಸಿನ ಪುಡಿಯನ್ನು ಬೆರೆಸಿದರೆ, ಪರಿಣಾಮವು ಹೆಚ್ಚು ಬರಲು ಪ್ರಾರಂಭಿಸುತ್ತದೆ.

    ತುಳಸಿ ಎಲೆಗಳು ತುಳಸಿ ಎಲೆಗಳು ಒಣ ಕಫದ ಶತ್ರು, ಈ ಸಸ್ಯದ ಔಷಧೀಯ ಗುಣಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ, ಹಾಗೆಯೇ ಅಂಗಳದಲ್ಲಿ ಅಥವಾ ಪಾಟ್​ನಲ್ಲಿ ನೆಡುತ್ತೇವೆ, ನೀವು ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ ನಂತರ ಕುಡಿಯುವುದರಿಂದ ನಿಮ್ಮ ಸಮಸ್ಯೆ ಬಗೆಹರಿಯಲಿದೆ.

    ಜೇನುತುಪ್ಪ ಜೇನುತುಪ್ಪವನ್ನು ಸವಿಯದವರಿಲ್ಲ, ಆದರೆ ಜೇನುತುಪ್ಪದಿಂದ ಒಣಕೆಮ್ಮನ್ನು ಹೇಗೆ ಗುಣಪಡಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.

    ಬಿಸಿನೀರಿನೊಂದಿಗೆ ಜೇನುತುಪ್ಪವನ್ನು ಸೇವಿಸುವುದು, ಅಥವಾ ಜೇನುತುಪ್ಪಕ್ಕೆ ಜೀರಿಗೆ ಪುಡಿ, ಕರಿಮೆಣಸಿನ ಪುಡಿಯನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ಒಣಕೆಮ್ಮಿನಿಂದ ಬಿಡುಗಡೆ ಪಡೆಯುತ್ತೀರಿ.

    ನೀವು ಉಗುರುಬೆಚ್ಚಗಿನ ನೀರಿನಿಂದ ಕೂಡ ಪರಿಹಾರವನ್ನು ಪಡೆಯಬಹುದು, ಇದಕ್ಕಾಗಿ, ಒಂದು ಲೋಟ ನೀರನ್ನು ಪಾತ್ರೆಯಲ್ಲಿ ಬಿಸಿ ಮಾಡಿ ನಂತರ ಅದರಲ್ಲಿ ಕಪ್ಪು ಉಪ್ಪಿನೊಂದಿಗೆ ಹಲವಾರು ಬಾರಿ ಗಾರ್ಗ್ಲ್ ಮಾಡಿ, ಅದು ಸಮಸ್ಯೆಯನ್ನು ತೆಗೆದುಹಾಕಲು ಪ್ರಾರಂಭಿಸುತ್ತದೆ.

  • ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿರಿಸಿ ಆರೋಗ್ಯಕರ ಜೀವನ ನಡೆಸಲು ಸಾಧ್..!

    ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿರಿಸಿ ಆರೋಗ್ಯಕರ ಜೀವನ ನಡೆಸಲು ಸಾಧ್..!

    ಮಧುಮೇಹ/ ಸಕ್ಕರೆ ಕಾಯಿಲೆ ಒಮ್ಮೆ ಈ ತೊಂದರೆ ಆರಂಭವಾದರೆ ಜೀವನಪರ್ಯಂತ ಔಷಧ ತೆಗೆದುಕೊಳ್ಳಲೇಬೇಕು. ಇರಿಸಲು ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿ ಇರಿಸಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿದೆ. ಇದರ ನಡುವೆ ಜಗತ್ತಿನ ಹಲವೆಡೆ ಔಷಧ ಸೇವನೆ ಇಲ್ಲದೇ ಮಧುಮೇಹವನ್ನು ನಿಯಂತ್ರಣದಲ್ಲಿರಿಸಿ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂಬ ಪ್ರಚಾರ ಆರಂಭವಾಗಿದೆ. ಇದನ್ನು ‘ಮಧುಮೇಹ ಹಿಂದಿರುಗಿಸುವ ಚಿಕಿತ್ಸಾಲಯ’  ಎಂಬ ಪರಿಕಲ್ಪನೆ ಆರಂಭವಾಗಿದೆ.

    ನಾವು ಅಧಿಕವಾಗಿ ತಿಂದ ಕಾರ್ಬೋಹೈಡ್ರೆಟ್ ನಮ್ಮ ಧೇಹದಲ್ಲಿ ಶೇಖರಣೆಯಾಗುತ್ತಾ ಬೊಜ್ಜಾಗಿ ಪರಿವರ್ತನೆಯಾಗುತ್ತದೆ. ಬ್ಲಡ್ ಕೊಲೆಸ್ಟಾಲ್ ಆಗುತ್ತದೆ. ಇದರಿಂದ ತೂಕ ಅಧಿಕವಾಗುತ್ತದೆ. ಕರುಳಿನ ಸುತ್ತ ಫ್ಯಾಟ್ ಕುಳಿತುಕೊಳ್ಳುತ್ತದೆ. ವ್ಯಾಯಾಮ ಮಾಡಿ ಕರಗಿಸದೇ ಇದ್ದರೆ ಇವೆಲ್ಲ ಕೆಟ್ಟ ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ಇದುವರೆಗೂ ಸಾಮಾನ್ಯವಾಗಿದ್ದ ಭಾವನೆಯೆಂದರೆ ಫ್ಯಾಟ್ ತಿಂದರೆ ಫ್ಯಾಟ್ ಆಗುತ್ತೇವೆ ಎಂಬುದು. ಆದರೆ ಇದು ತಪ್ಪು ತಿಳಿವಳಿಕೆ. ನಾವು ಫ್ಯಾಟ್ ತಿಂದೂ ಜೊತೆಗೆ ಕಾರ್ಬೋಹೈಡ್ರೆಟ್ ಅಂಶವಿರುವ ಪದಾರ್ಥಗಳನ್ನು ಕೂಡ ತಿಂದರೆ ಇನ್ನೂ ಬೊಜ್ಜು ಆಗುವುದು ಖಂಡಿತ. ಫ್ಯಾಟ್ ತಿಂದರೆ ಫ್ಯಾಟ್ ಆಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ನಮ್ಮ ದೇಹಕ್ಕೆ ಪ್ರೊಟೀನ್, ಕೊಬ್ಬಿನ ಅಂಶ ಬೇಕೇಬೇಕು.

    ಒಂದು ಗಮನಿಸಬೇಕಾದ ಅಂಶವೆಂದರೆ ರಾಗಿಮುದ್ದೆ, ಕೆಂಪಕ್ಕಿ ಕುಚ್ಚಲಕ್ಕಿ ಇವುಗಳು ಸಹ ಕಾರ್ಬೋಹೈಡ್ರೆಟ್. ಆದರೆ ಇವುಗಳು ನಿಧಾನವಾಗಿ ಬಿಡುಗಡೆಯಾಗುತ್ತವೆ. ಆದ್ದರಿಂದ ನಾವು ಹೇಳುವ ಡಯೆಟ್ ನಲ್ಲಿ ಎಲ್ಲ ಬಗೆಯ ಕಾರ್ಬೋಹೈಡ್ರೆಟ್ ಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಸಲಹೆ ಮಾಡುತ್ತೇವೆ. ಮಧುಮೇಹ ರೋಗಿಗೆ ವೈದ್ಯರು ಹೇಳುವುದು ಡಯೆಟ್ ಮಾಡಿ, ಇಂತಿಷ್ಟೆ ಅಂಶ ತಿನ್ನಬೇಕು ಎಂದು. ಆದರೆ ಸಾಮಾನ್ಯ ಸಂದರ್ಭಗಳಲ್ಲಿ ಅವುಗಳನ್ನು ಅನುಸರಿಸುವವರು ಕಡಿಮೆ.. ಎಲ್ಲರ ಮನೆಗಳಲ್ಲಿಯೂ ಕಾರ್ಬೋಹೈಡ್ರೆಟ್ ಅಂಶ ಇರುವ ಆಹಾರ ಪದಾರ್ಥಗಳನ್ನೇ ಹೆಚ್ಚಾಗಿ ಮಾಡುತ್ತಾರೆ. ಆದ್ದರಿಂದ ನಾವು ಹೇಳುವ ಡಯೆಟ್ ನಲ್ಲಿ ಶೇಕಡ 75ರಷ್ಟು ಪ್ರಮಾಣದ ಕಾರ್ಬೋಹೈಡ್ರೆಟ್ ಪ್ರಮಾಣವನ್ನು ಶೇಕಡ 20ಕ್ಕೆ ಇಳಿಸುವ ಮಾದರಿಗೆ ಆದ್ಯತೆ ನೀಡುತ್ತೇವೆ.

    ಆರೋಗ್ಯಕರ ಫ್ಯಾಟ್ ಗಳನ್ನು ಸೇವಿಸಲು ಸೂಚಿಸುತ್ತೇವೆ. ತುಪ್ಪ, ಬೆಣ್ಣೆ ಸಹ ಆರೋಗ್ಯಕರ ಫ್ಯಾಟ್ ಗಳು. ಮಾಂಸಹಾರ ಸೇವನೆ ಆರೋಗ್ಯಕ್ಕೆ ಹಾನಿಕರ ಎನ್ನುವ ತಪ್ಪುಭಾವನೆ ಹಲವರಲ್ಲಿದೆ. ಆದರೆ ಮಾಂಸಹಾರ ಸೇವನೆ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಮಾಡುವುದಿಲ್ಲ. ಎಷ್ಟು ಪ್ರಮಾಣದಲ್ಲಿ ತಿನ್ನುತ್ತೇವೆ ಎಂಬುದು ಮುಖ್ಯ. ಅತಿಯಾದರೆ ಯಾವುದು ಸಹ ದೇಹಕ್ಕೆ ಒಳ್ಳೆಯದಲ್ಲ. ಇನ್ನೊಂದು ಅಂಶವೆಂದರೆ ನಾವು ನಾನ್ ವೆಜ್ ಜೊತೆಗೆ ಕಾರ್ಬೋಹೈಡ್ರೆಟ್ ಅಂಶ ಅಧಿಕವಾಗಿರುವ ಮುದ್ದೆ, ಅನ್ನ, ಚಪಾತಿ, ದೋಸೆಗಳನ್ನು ಅಧಿಕ ಪ್ರಮಾಣದಲ್ಲಿ ಸೇವಿಸುತ್ತೇವೆ. ಆಗಷ್ಟೆ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಬಹುದು.

    ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಬೋಹೈಡ್ರೆಟ್ ಅನ್ನು ಗಣನೀಯವಾಗಿ ಕಡಿಮೆ ಮಾಡಲು ಸಲಹೆ ನೀಡುತ್ತೇವೆ. ಈ ರೀತಿ ಮಾಡಿದಾಗ ಇನ್ಸುಲಿನ್ ಅಗತ್ಯತೆ ದೇಹಕ್ಕೆ ಕಡಿಮೆಯಾಗುತ್ತದೆ. ಆಗ ದೇಹ ತನ್ನಲ್ಲಿರುವ ಫ್ಯಾಟ್ ಅನ್ನು ಇಂಧನವಾಗಿ ಬಳಸಲು ಶುರು ಮಾಡುತ್ತದೆ. ಈಗಾಗಲೇ ದೇಹದಲ್ಲಿ ಸಂಗ್ರಹಣೆಯಾಗಿರುವ ಫ್ಯಾಟ್ ಅನ್ನು ಇಂಧನ ಮೂಲವಾಗಿ ಬಳಸಿಕೊಳ್ಳಲು ಶುರು ಮಾಡುತ್ತದೆ. ಆಲ್ಮಂಡ್ ಫ್ಲೋರ್, ಬಳಸಬಹುದು. ಇದಕ್ಕೆ ಅಲ್ಪ ಪ್ರಮಾಣದಲ್ಲಿ ಅಕ್ಕಿಹಿಟ್ಟು ಸೇರಿಸಬಹುದು. ಗೋಧಿಹಿಟ್ಟು ಸೇರಿಸಬಹುದು. ಇವುಗಳಿಂದ ರೊಟ್ಟಿ, ಚಪಾತಿ ಮಾಡಬಹುದು. ಕಾಲಿ ಫ್ಲವರ್ ಬಳಕೆ ಮಾಡಬಹುದು..ಕಿಟ್ ಗಳು ಬಂದಿವೆ. ಅವುಗಳನ್ನು ಬಳಕೆ ಮಾಡಬಹುದು. ಡ್ರೈ ಪ್ರೂಟ್ ಗಳ ಬಳಕೆ ಮಾಡಬಹುದು. ಅವಕಾಡು (ಬಟರ್ ಪ್ರೂಟ್) ಸೇವನೆ ಮಾಡಬಹುದು.

    ಡಯಾಬಿಟಿಕ್ ನಿಂದ ಬಳಲುತ್ತಿರುವವರಲ್ಲಿ ಕೆಲವರಿಗೆ ಕಿಡ್ನಿ ಸಮಸ್ಯೆ ಇರುತ್ತದೆ. ಇಂಥ ಸಂದರ್ಭದಲ್ಲಿ ಅವರಿಗೆ ಸೂಕ್ತವಾಗುವ ಡಯೆಟ್ ಸಲಹೆ ಮಾಡುತ್ತೇವೆ. ಎಲ್ಲರಿಗೂ ಒಂದೇ ರೀತಿಯ ಡಯೆಟ್ ಸಲಹೆ ಮಾಡುವುದಿಲ್ಲ ಎಂಬುದು ಗಮನಾರ್ಹ. ಆರೋಗ್ಯಕರ ಫ್ಯಾಟ್ ಇರುವ ಆಹಾರ ಸೇವನೆ ಮಾಡಿದಾಗ ಬೇಗ ಹಸಿವಾಗುವುದಿಲ್ಲ. ಇದರಿಂದ ತಿನ್ನುವ ಆಹಾರದ ಒಟ್ಟು ಪ್ರಮಾಣ ಕಡಿಮೆಯಾಗುತ್ತದೆ. ಈಗಾಗಲೇ ಸಂಗ್ರಹಣೆ ಆಗಿರುವ ಕೊಬ್ಬಿನ ಅಂಶವನ್ನು ದೇಹ ಬಳಕೆ ಮಾಡುತ್ತದೆ.. ಇದರಿಂದ ಇನ್ಸುಲಿನ್ ನಿರೋಧಕತೆ ಹೆಚ್ಚುತ್ತದೆ. ಬಾಡಿ ತೂಕವೂ ಅನಗತ್ಯವಾಗಿ ಹೆಚ್ಚಾಗುವುದಿಲ್ಲ. ಈಗಾಗಲೇ ಮಧುಮೇಹ ನಿಯಂತ್ರಣಕ್ಕೆ ಔಷಧ ತೆಗೆದುಕೊಳ್ಳುತ್ತಿದ್ದರೆ ಅದರ ಅವಲಂಬನೆಯನ್ನು ನಿಧಾನವಾಗಿ ಹಂತಹಂತವಾಗಿ ಕಡಿಮೆ ಮಾಡುತ್ತಾ ಬರಬಹುದು. ಈಗಾಗಲೇ ಸಾವಿರಕ್ಕೂ ಹೆಚ್ಚು ಮಧುಮೇಹ ರೋಗಿಗಳಿಗೆ ಸಲಹೆ ಮಾಡಿದ್ದೇವೆ. ಇವರಲ್ಲಿ 400 ಮಂದಿ ಈಗಾಗಲೇ ಔಷಧ ಸೇವನೆ ನಿಲ್ಲಿಸಿದ್ದಾರೆ. ಔಷಧವಿಲ್ಲದೇ ದೇಹದ ಹೆಚ್.ಪಿ.ಎಂ.ಸಿ. ಪ್ರಮಾಣ 6ಕ್ಕಿಂತ ಕಡಿಮೆಯಾದರೆ ಅದನ್ನು ರಿವರ್ಸಡ್ ಡಯೆಬಿಟಿಕ್ ಎಂದು ಕರೆಯಬಹುದು.

    ಆರೋಗ್ಯಕರ ಮನುಷ್ಯರಲ್ಲಿ ಆಹಾರ ಸೇವನೆಗಿಂತ ಮೊದಲು ರಕ್ತದಲ್ಲಿನ ಸಕ್ಕರೆ ಅಂಶ 100ಕ್ಕಿಂತ ಕಡಿಮೆಯಿರಬೇಕು. ಆಹಾರ ಸೇವನೆ ಮಾಡಿದ ಎರಡು ಗಂಟೆ ನಂತರ 140ರೊಳಗಿರಬೇಕು. ಇದಕ್ಕಿಂತ ಹೆಚ್ಚಾದಾಗ ಮಧುಮೇಹ ಎಂದು ನಿರ್ಣಯಿಸಲಾಗುತ್ತದೆ. ಇನ್ನೊಂದು ಹೆಚ್ ಪಿ ಎಂ ಸಿ ಯಲ್ಲಿ ಮೂರು ತಿಂಗಳ ಗ್ಲೂಕೋಸ್ ಮೆಮೊರಿ ಟೆಸ್ಟ್ ಅಂಶ 6ಕ್ಕಿಂತ ಕಡಿಮೆ ಇರಬೇಕು. 6 ರಿಂದ 6.5 ಕ್ಕೆ ಬಂದರೆ ಅದು ಬಾರ್ಡರ್ ಲೈನ್ ಡಯಾಬಿಟಿಕ್ ಎಂದು ಕರೆಯಲಾಗುತ್ತದೆ. ಈ ಪರಿಕಲ್ಪನೆಯನ್ನು ಟೈಪ್ 2 ಡಯಾಬಿಟಿಸ್ ನಲ್ಲಿ ಮಾಡಬಹುದು. ಟೈಪ್ ಒನ್ ಡಯಾಬಿಟಿಸ್ ನಲ್ಲಿ ಇನ್ಸುಲಿನ್ ಉತ್ಪಾದನೆಯೇ ಸ್ಥಗಿತವಾಗಿರುತ್ತದೆ. ಅಲ್ಲಿ ಈ ಮಾದರಿ ಕೆಲಸ ಮಾಡುವುದು ಕಷ್ಟ. ನಾವು ಪ್ರತಿಯೊಬ್ಬ ರೋಗಿಯ ದೇಹಸ್ಥಿತಿ, ಆಹಾರ ಸೇವನೆ ಕ್ರಮ, ಪದ್ಧತಿ ಇವುಗಳನ್ನೆಲ್ಲ ಅಧ್ಯಯನ ಮಾಡಿ ಸಲಹೆ ಮಾಡುತ್ತೇವೆ.

    Source : Kannada Prabha Helth Tips

  • ಕಾಣಿಸಿಕೊಂಡಿದೆ ವಿಚಿತ್ರ ಜ್ವರ : ಎಚ್ಚರಿಕೆಯ ಸಂದೇಶ ನೀಡಿದ ವೈದ್ಯರು.

    ಕಾಣಿಸಿಕೊಂಡಿದೆ ವಿಚಿತ್ರ ಜ್ವರ : ಎಚ್ಚರಿಕೆಯ ಸಂದೇಶ ನೀಡಿದ ವೈದ್ಯರು.

    ನವದೆಹಲಿ: ಕಳೆದ ಮೂರು ವರ್ಷಗಳಿಂದ, ವಿವಿಧ ರೀತಿಯ ವೈರಸ್ಗಳು ಮತ್ತು ವಿಚಿತ್ರ ಜ್ವರಗಳೊಂದಿಗೆ ದೇಶದ ಜನತೆ ಸಮಯ ಕಳೆಯುತ್ತಿದ್ದಾರೆ ಒಂದರ ನಂತರ ಒಂದರಂತೆ ಅನೇಕ ಖಾಯಿಲೆಗಳು ಕಾಣಿಸಿಕೊಳ್ಳುತ್ತಿದೆ. ಮನುಷ್ಯ, ಮತ್ತು ದನಕರುಗಳನ್ನು, ಈ ವಿಚಿತ್ರ ಜ್ವರಗಳು ಎಲ್ಲರನ್ನೂ ಕಾಡುತ್ತಿವೆ ಎಂದು ಆಘಾತಕಾರಿ ವರದಿಯೊಂದು ಹೇಳಿದೆ.

    ಸ್ಕ್ರಬ್ ಟೈಫಸ್ ಎಂದು ಕರೆಯಲ್ಪಡುವ ಜ್ವರವು ಈಗ ದೇಶದಲ್ಲಿ ಎಚ್ಚರಿಕೆಯ ಗಂಟೆಗಳನ್ನು ಬಾರಿಸುತ್ತಿದೆ. ಆದರೂ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಇದನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳುತ್ತಾರೆ.

    ಈ ಜ್ವರ ದೀರ್ಘಕಾಲದವರೆಗೆ ಮುಂದುವರಿದರೆ. ಇದು ಬಹು ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಕೆಲವೊಮ್ಮೆ ಇದು ಮಾರಣಾಂತಿಕವಾಗಬಹುದು. ಸ್ಕ್ರಬ್ ಟೈಫೂನ್ ಎಂದು ಕರೆಯಲ್ಪಡುವ ಜ್ವರವು ಒಂದು ನಿರ್ದಿಷ್ಟ ರೀತಿಯ ಕೀಟ (ಟಿಕ್) ಕಡಿತದಿಂದ ಉಂಟಾಗುತ್ತದೆ. ಈ ಸ್ಫೋಟಗಳು ಸಾಮಾನ್ಯವಾಗಿ ಪರ್ವತ ಪ್ರದೇಶಗಳಲ್ಲಿ ಕಂಡುಬರುತ್ತವೆ. ಈ ಜ್ವರದಿಂದ ಬಳಲುತ್ತಿರುವ ಜನರನ್ನು ದೆಹಲಿಯಲ್ಲಿ ಗುರುತಿಸಲಾಗಿದೆ. ಅವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ವಯಸ್ಸಾದವರು ಎಂದು ವೈದ್ಯರು ತಿಳಿಸಿದ್ದಾರೆ.

    ಕೀಟಾಣು ಕಡಿತದಿಂದ ಗೋಚರಿಸುವ ಚಿಹ್ನೆ ಅಥವಾ ಕಲೆಗಳನ್ನು ಎಚ್ಚರಿಕೆಯ ಸಂಕೇತ ಎಂದು ಹೇಳಲಾಗುತ್ತದೆ. ಸ್ಕ್ರಬ್ ಟೈಫಸ್ ಒಂದು ವಿಶಿಷ್ಟ ಕಾಯಿಲೆಯಾಗಿದೆ. ವರದಿಗಳ ಪ್ರಕಾರ. ದ್ವಾರಕಾದಿಂದ ದೆಹಲಿಗೆ ಬಂದಿದ್ದ ಮಗುವೊಂದರಲ್ಲಿ ಜ್ವರ ಕಂಡುಬಂದಿದೆ. ಈ ರೋಗವು ಸಾಮಾನ್ಯವಾಗಿ ಹೆಚ್ಚಿನ ಮಟ್ಟದ ಜ್ವರಕ್ಕೆ ಕಾರಣವಾಗುವುದಿಲ್ಲ. ಆದರೂ ಇದು ಅಪಾಯಕಾರಿಯಾಗಿದೆ. ಅದಕ್ಕಾಗಿಯೇ ನಿಮಗೆ ಈ ರೀತಿಯ ಜ್ವರ ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಬಹಳ ಮುಖ್ಯ. ಇದರ ಕೆಲವು ರೋಗಲಕ್ಷಣಗಳು ಡೆಂಗ್ಯೂಗೆ ಹೋಲುತ್ತವೆ ಎಂದು ತಜ್ಞರು ಹೇಳುತ್ತಾರೆ.

    ಸ್ಕ್ರಬ್ ಟೈಫಸ್ ನ ರೋಗಲಕ್ಷಣಗಳು.

    ಡೆಂಗ್ಯೂವಿನಂತೆ. ಸ್ಕ್ರಬ್ ಟೈಫಸ್ ನಿಂದ ಬಳಲುತ್ತಿರುವ ರೋಗಿಯು ದೇಹದ ಮೇಲೆ ದದ್ದುಗಳನ್ನು ಕಾಣಬಹುದಾಗಿದೆ
    ಜೀರ್ಣಕ್ರಿಯೆ ಸಮಸ್ಯೆಗಳು ಹೆಚ್ಚಾಗುತ್ತವೆ.
    ಈ ಜ್ವರವು ಸಾಮಾನ್ಯವಾಗಿ ಏಳು ದಿನಗಳವರೆಗೆ ಇರುತ್ತದೆ.
    ಕೆಲವು ರೋಗಿಗಳಲ್ಲಿ ಉಸಿರಾಟದ ತೊಂದರೆಯಿಂದಾಗಿ.
    ಬಹು-ಅಂಗಾಂಗ ವೈಫಲ್ಯ ಸಂಭವಿಸುವ ಸಾಧ್ಯತೆಯಿದೆ. ಸಕಾಲದಲ್ಲಿ ಪರಿಹರಿಸದಿದ್ದರೆ, ಜೀವನವನ್ನು ಸಹ ಕಳೆದುಕೊಳ್ಳಬಹುದು.

    Source : News Now Kannada

  • ಸರ್ವಿಕಲ್ ಕ್ಯಾನ್ಸರ್ ಗೆ ಲಸಿಕೆ ; ಇಂದು ಬಿಡುಗಡೆ

    ಸರ್ವಿಕಲ್ ಕ್ಯಾನ್ಸರ್ ಗೆ ಲಸಿಕೆ ; ಇಂದು ಬಿಡುಗಡೆ

    ನವದೆಹಲಿ: ಸರ್ವಿಕಲ್ ಕ್ಯಾನ್ಸರ್ ಗೆ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ(ಎಸ್‌ಐಐ) ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ(ಡಿಬಿಟಿ) ಅಭಿವೃದ್ಧಿಪಡಿಸಿರುವ ದೇಶದ ಮೊದಲ ಲಸಿಕೆ, ಕ್ವಾಡ್ರೈವೆಲೆಂಟ್ ಹ್ಯೂಮನ್ ಪ್ಯಾಪಿಲೋಮವೈರಸ್ ಲಸಿಕೆ (qHPV)ಅನ್ನು ಸೆಪ್ಟೆಂಬರ್ 1 ರಂದು ಬಿಡುಗಡೆ ಮಾಡಲಾಗುತ್ತಿದೆ.

    ಬಹು ನಿರೀಕ್ಷಿತ ಈ ಲಸಿಕೆಯನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಗುರುವಾರ ಬಿಡುಗಡೆ ಮಾಡಲಿದ್ದಾರೆ.

    ಕೋವಿಡ್ ವರ್ಕಿಂಗ್ ಗ್ರೂಪ್‌ನ ಅಧ್ಯಕ್ಷರಾದ ಡಾ ಎನ್ ಕೆ ಅರೋರಾ ಅವರ ಪ್ರಕಾರ, ಇಮ್ಯುನೈಸೇಶನ್‌ನ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು(ಎನ್‌ಟಿಎಜಿಐ) ಭಾರತದಲ್ಲಿ ತಯಾರಿಸಿದ ಲಸಿಕೆಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

    “ಇದು ತುಂಬಾ ಸಂತೋಷದ ವಿಚಾರ ಮತ್ತು ನಮ್ಮ ಹೆಣ್ಣುಮಕ್ಕಳು, ಮೊಮ್ಮಕ್ಕಳು ಈಗ ಈ ಬಹುನಿರೀಕ್ಷಿತ ಲಸಿಕೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ನಾನು ಹೇಳಲೇಬೇಕು” ಎಂದಿದ್ದಾರೆ.

    ಸರ್ವಿಕಲ್ ಕ್ಯಾನ್ಸರ್ ಎಂದರೇನು?
    ಇದೊಂದು ಕ್ಯಾನ್ಸರ್ ಪ್ರಕಾರವಾಗಿದ್ದು ಮಹಿಳೆಯರಲ್ಲಿ ಕಂಡುಬರುತ್ತದೆ. ಮಹಿಳೆಯರ ಗರ್ಭಕೋಶದ ಕೆಳಭಾಗದಲ್ಲಿರುವ ಗರ್ಭನಾಳ ಅಥವಾ ಗರ್ಭಕಂಠದಲ್ಲಿ ಈ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಗರ್ಭಕಂಠವು ಗರ್ಭಕೋಶ ಹಾಗೂ ಯೋನಿಯ ಮಧ್ಯದ ಸಂಪರ್ಕ ಸೇತುವಾಗಿದ್ದು ಈ ಭಾಗದಲ್ಲಿ ಈ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಗರ್ಭಕಂಠವು ಎರಡು ಭಾಗಗಳಿಂದ ಕೂಡಿರುತ್ತದೆ. ಅದರ ಒಳಭಾಗವನ್ನು ಎಂಡೋಸರ್ವಿಕ್ಸ್ ಎಂದು ಕರೆಯುತ್ತಾರೆ. ಇದರಲ್ಲಿ ಒಂದು ರೀತಿಯ ಜೀವಕೋಶಗಳಿರುತ್ತವೆ.

    Source : Kannadaprabha

  • ಉತ್ತರಕನ್ನಡದ ಇಂದಿನ ಕೊರೋನಾ ಅಪ್ಡೇಟ್

    ಉತ್ತರಕನ್ನಡದ ಇಂದಿನ ಕೊರೋನಾ ಅಪ್ಡೇಟ್

    ಕಾರವಾರ : ಉತ್ತರಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ಪ್ರಕಾರ ಇಂದು 133 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ನಾಲ್ವರು ಕೊರೋನಾಗೆ ಬಲಿಯಾಗಿದ್ದಾರೆ.

    ಕಾರವಾರದಲ್ಲಿ 12, ಅಂಕೋಲಾದಲ್ಲಿ 6, ಕುಮಟಾದಲ್ಲಿ 29, ಹೊನ್ನಾವರ 29, ಭಟ್ಕಳದಲ್ಲಿ 8, ಶಿರಸಿಯಲ್ಲಿ 21, ಸಿದ್ದಾಪುರದಲ್ಲಿ 4, ಯಲ್ಲಾಪುರದಲ್ಲಿ 16, ಮುಂಡಗೋಡ 6, ಹಳಿಯಾಳದಲ್ಲಿ 2, ಮತ್ತು ಜೋಯಿಡಾದಲ್ಲಿ 0 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

    ಕುಮಟಾ 1, ಸಿದ್ದಾಪುರ 2, ಮುಂಡಗೋಡ 1 ಸಾವು ಸಂಭವಿಸಿದೆ. ಒಟ್ಟೂ 4 ಸಾವಿನೊಂದಿಗೆ ಜಿಲ್ಲೆಯ ಒಟ್ಟು ಸಾವಿನ ಸಂಖ್ಯೆ 691 ಆಗಿದೆ.

    ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 1358 ಆಗಿದ್ದು, ಅವರಲ್ಲಿ 154 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 1204 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.

    ಕಾರವಾರ 29, ಅಂಕೋಲಾ‌ 9, ಕುಮಟಾ 24, ಹೊನ್ನಾವರ 53, ಭಟ್ಕಳ 21, ಶಿರಸಿ 29, ಸಿದ್ದಾಪುರ 2, ಯಲ್ಲಾಪುರ 17, ಮುಂಡಗೋಡ 21, ಹಳಿಯಾಳ 25, ಜೋಯ್ಡಾ 0 ಜನರು ಕೊರೋನಾ ಗೆದ್ದಿದ್ದಾರೆ. ಅಂದರೆ ಒಟ್ಟೂ 230 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.

    ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಬೇಕಾಬೆಟ್ಟಿ ತಿರುಗಾಡದೇ ನಿಮ್ಮ ಆರೋಗ್ಯದ ಬಗ್ಗೆ ನೀವೆ ಎಚ್ಚರವಹಿಸಿ ಇದುವೇ ಜನತೆಗೆ ನಮ್ಮ ಕಳಕಳಿಯ ಮನವಿ.

    ಜನತೆಗೆ ಗುಡ್ ನ್ಯೂಸ್ 

    ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆಯಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಮುಲೈ ಮುಗಿಲನ್ ರವರು ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆಯಲ್ಲಿ ಕೆಲವು ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಆದೇಶದಲ್ಲಿ ಜಿಲ್ಲೆಯಲ್ಲಿ ಮದುವೆ ಸಮಾರಂಭಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಮನೆಯಲ್ಲಿ 20 ಜನರಿಗೆ ಮೀರದಂತೆ ಸ್ಥಳೀಯ ಆಡಳಿತದ ಅನುಮತಿ ಪಡೆದು ನಡೆಸಬಹುದಾಗಿದೆ.

    ಜಿಲ್ಲೆಯಲ್ಲಿ ಯಾವುದೇ ಪ್ರದೇಶದಲ್ಲಿ ಹತ್ತಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾದಲ್ಲಿ ಇಂತಹ ಪ್ರದೇಶವನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್ ಎಂದು ಪರಿಗಣಿಸಿ ಈ ಪ್ರದೇಶವನ್ನು ಸಂಪೂರ್ಣ ಲಾಕ್ ಡೌನ್ ಮಾಡಲು ಆದೇಶಿಸಲಾಗಿದೆ.

    ಉಳಿದಂತೆ ರಾಜ್ಯ ಹೊರಡಿಸಿದ ಅನ್ ಲಾಕ್ ನಿಯಮದಂತೆ ಜಿಲ್ಲೆಯಲ್ಲಿ ನಿಯಮಗಳು ಜಾರಿ ಇರಲಿದೆ.

  • Business Together To Make Investments

    Business Together To Make Investments

    I am alone, and feel the charm of existence in this spot, which was created for the bliss of souls like mine.

    (more…)
  • But who has any right to find of existence in present

    But who has any right to find of existence in present

    I am alone, and feel the charm of existence in this spot, which was created for the bliss of souls like mine. I am so happy, my dear friend, so absorbed in the exquisite sense of mere tranquil existence, that I neglect my talents.

    (more…)
  • have is days together meat fill for give you’re

    have is days together meat fill for give you’re

    Aenean feugiat purus vitae sollicitudin laoreet. Duis fringilla ligula vel velit lacinia, in mattis felis consectetur. Sed at pretium orci. Ut tempus libero odio, sit amet consequat neque pretium ut. Integer hendrerit mauris nec odio auctor suscipit. Proin porttitor turpis vitae ligula dictum, a sollicitudin purus congue. Nulla viverra nisi ex, ut ornare tellus cursus quis. Nulla posuere tincidunt leo at condimentum. Sed egestas tortor a nisi fringilla, id cursus odio rhoncus.