Satwadhara News

Category: State News

  • ಬಲೆ ಬೀಸಲು ಹೋದ ಯುವಕ ನೀರುಪಾಲು

    ಬಲೆ ಬೀಸಲು ಹೋದ ಯುವಕ ನೀರುಪಾಲು

    ಕೋಟೇಶ್ವರ : ಹಳೆಅಳಿವೆ ಬಳಿ ಯುವಕನೊರ್ವ ಸಮುದ್ರದಲ್ಲಿ ಮರಣಬಲೆ ಬಿಡಲು ಹೋಗಿ ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟ ಘಟನೆ ಫೆ. 25 ರಂದು ಮಂಗಳವಾರ ಬೆಳಿಗ್ಗೆ ಸಂಭವಿಸಿದೆ. ಮೃತಯುವಕ ಬೀಜಾಡಿ ಪೆಟ್ನಿ ಮನೆ ಕುಮಾರ್ ಅವರ ಪುತ್ರ ಮೇಘರಾಜ್ (24) ಎಂದು ಗುರುತಿಸಲಾಗಿದೆ.

    ಮೇಘರಾಜ್ ಅವರು ಬೆಳಿಗ್ಗೆ ಹಳಿಅಳಿವೆ ಬಳಿ ಸಮುದ್ರದಲ್ಲಿ ಮರಣಬಲೆ ಬಿಡಲೆಂದು ಹೋದ ಸಂದರ್ಭ ಸಮುದ್ರದ ಅಲೆಗೆ ಸಿಲುಕಿ ನೀರುಪಾಲಗಿದ್ದು ಸಂಜೆ ವೇಳೆ ಬೀಜಾಡಿ ಸಮೀಪ ಕಡಲ ಎಡಭಾಗದಲ್ಲಿ ಮೃತದೇಹ ದಡ ಸೇರಿರುತ್ತದೆ.

    ತಕ್ಷಣ ಸ್ಥಳಕ್ಕಾಗಮಿಸಿದ ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಮೃತದೇಹವನ್ನು ಪರಿಶೀಲಿಸಿ ಮರಣೋತ್ತರ ಪರೀಕ್ಷೆಗೆ ಕಳಿಸಿದರು.

  • “ತರಂಗ ಫರ್ನಿಚರ್ ಫೆಸ್ಟಿವಲ್” ಪ್ರಾರಂಭವಾಗಿದೆ.

    “ತರಂಗ ಫರ್ನಿಚರ್ ಫೆಸ್ಟಿವಲ್” ಪ್ರಾರಂಭವಾಗಿದೆ.

    ಕುಮಟಾ : ಜನರು ಬಹುವಾಗಿ ಮೆಚ್ಚಿಕೊಂಡ ಹಾಗೂ ಜನರ ಭರವಸೆಗೆ ತಕ್ಕಂತೆ ಗುಣಮಟ್ಟದ ವಸ್ತುಗಳನ್ನು ಒದಗಿಸಿರುವ, ಜಿಲ್ಲೆಯ ಅತಿದೊಡ್ಡ ಶೋರೂಮ್ ತರಂಗ ಎಲೆಕ್ಟ್ರಾನಿಕ್ಸ್ ಆ್ಯಂಡ್ ಫರ್ನಿಚರ್ ನಲ್ಲಿ ಇದೀಗ “ತರಂಗ ಫರ್ನಿಚರ್ ಫೆಸ್ಟಿವಲ್” ಪ್ರಾರಂಭವಾಗಿದೆ. ಶೇಕಡಾ 45ರ ವರೆಗೆ ರಿಯಾಯತಿ, ಫ್ರೀ ಹೋಮ್ ಡಿಲೇವರಿ, ಶೂನ್ಯ ಬಡ್ಡಿದರದಲ್ಲಿ ಸುಲಭ ಕಂತುಗಳು ನಿಮಗಾಗಿ ಕಾದಿವೆ. ಜನವರಿ 14 ರಿಂದ ಜನವರಿ 31ರ ವರೆಗೆ ಈ ತರಂಗ ಫರ್ನಿಚರ್ ಮೇಳ ನಡೆಯಲಿದ್ದು, ಅತ್ಯಾಧುನಿಕ ವೈವಿದ್ಯ ಹೋಮ್ ಡೆಕೋರ್‌ಗಳು, ಇಂಪೋರ್ಟೆಡ್ ಫರ್ನಿಚರ್‌ಗಳ ಬೃಹತ್ ಕಲೆಕ್ಷನ್ ಒಂದೇ ಸೂರಿನಡಿ ಸಿಗಲಿದೆ.

    3+1+1 ವುಡನ್ ಸೋಫಾ ಸೆಟ್‌ಗಳು 18,990 ರಿಂದ ಪ್ರಾರಂಭ, ತ್ರೀ ಸೀಟರ್ ಕುಶನ್ ಸೋಫಾ 4,990 ರಿಂದ ಮತ್ತು ವುಡನ್ Four Chair ಡೈನಿಂಗ್ ಸೆಟ್ 17, 900 ರಿಂದ ಹಾಗು ಕ್ವೀನ್ ಸೈಜ್ ಅಕೇಶಿಯಾ ಕಾಟ್ 8,990 ರಿಂದ ಆರಂಭವಾಗಲಿದೆ. ಆಫೀಸ್ ಟೇಬಲ್ ಜೊತೆಗೆ ಆಫೀಸ್ ಚೇರ್ ಫ್ರೀ, ವಾರ್ಡ್ರೋಬ್ ಕೊಂಡರೆ, ಡ್ರೆಸ್ಸಿಂಗ್ ಟೇಬಲ್ ಉಚಿತ.. ಇನ್ನು ಹತ್ತಾರು ಆಕರ್ಷಕ ಆಫರ್‌ಗಳು ಲಭ್ಯ.

    ವುಡನ್, ಕುಶನ್ ಸೋಪಾ , ಕಾಟ್ ಸೇರಿ ಎಲ್ಲಾ ರೀತಿಯ ಫರ್ನಿಚರ್‌ಗಳನ್ನು ನಿಮ್ಮ ಅಗತ್ಯತೆಗೆ ತಕ್ಕಂತೆ ನಿರ್ಮಿಸಿಕೊಡಲಾಗುವುದು. ವುಡನ್ ಸೋಫಾ, ಕಾಟ್ಸ್ ಮತ್ತು ಡೈನಿಂಗ್ ಮೇಲೆ ಮೇಲೆ 5 ವರ್ಷ ಮತ್ತು ಕಪಾಟು ಮತ್ತು ಡ್ಯೂರೋಪ್ಲೇಕ್ಸ್ ಮ್ಯಾಟ್ರೆಸ್ ಮೇಲೆ 10 ವರ್ಷ ವಾರಂಟಿ ಇದೆ.

    ವಿಶ್ವಾಸಮಾನ್ಯ.. ಸೇವೆ ಅನನ್ಯ, ಇಂದೇ ಭೇಟಿ ನೀಡಿ ತರಂಗ ಎಲೆಕ್ಟ್ರಾನಿಕ್ಸ್, ಕುಮಟಾ ಮತ್ತು ಹೊನ್ನಾವರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8494988555, 8494891222 .

  • ಡಾ. ಮನಮೋಹನ್ ಸಿಂಗ್ ನಿಧನ ಹಿನ್ನೆಲೆ‌ – ನಾಳೆ ಶಾಲಾ ಕಾಲೇಜಿಗೆ ರಜೆ

    ಡಾ. ಮನಮೋಹನ್ ಸಿಂಗ್ ನಿಧನ ಹಿನ್ನೆಲೆ‌ – ನಾಳೆ ಶಾಲಾ ಕಾಲೇಜಿಗೆ ರಜೆ

    ಬೆಂಗಳೂರು : ಮಾಜಿ ಪ್ರಧಾನ ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಶುಕ್ರವಾರ ಕರ್ನಾಟಕ ಸರಕಾರ ರಾಜ್ಯದಲ್ಲಿ ಸರಕಾರಿ ರಜೆ ಘೋಷಿಸಿದೆ. ಶಾಲೆ, ಕಾಲೇಜುಗಳಿಗೆ ಕೂಡ ರಜೆ ನೀಡಲಾಗಿದೆ.

    ಮನಮೋಹನ್ ಸಿಂಗ್ ಅವರು ಗುರುವಾರ ರಾತ್ರಿ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಶುಕ್ರವಾರ ನಡೆಯಬೇಕಿದ್ದ ಎಲ್ಲ ಕಾರ್ಯಕ್ರಮಗಳನ್ನೂ ರದ್ದು ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ತಿಳಿಸಿದ್ದಾರೆ. ನಾಳೆ 10.30ಕ್ಕೆ ಶೃದ್ಧಾಂಜಲಿ ಸಭೆ ನಡೆಸಲಾಗುವುದು. ದೆಹಲಿಯಿಂದ ಬೆಳಗಾವಿಗೆ ಆಗಮಿಸಿರುವ ಎಲ್ಲ ಗಣ್ಯರನ್ನು ಕಳಿಸಲು ಸಕಲ ವ್ಯವಸ್ಥೆ ಮಾಡಲಾಗುವುದು. ನಾನು ಹಾಗೂ ಮುಖ್ಯಮಂತ್ರಿಗಳು ಮತ್ತು ಕೆಲವು ಹಿರಿಯ ಸಚಿವರು ಸಹ ದೆಹಲಿಗೆ ತೆರಳಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

  • ದಿವ್ಯ ಭವ್ಯ ಹವ್ಯ ಲೋಕದ ಅನಾವರಣಕ್ಕೆ ಕ್ಷಣಗಣನೆ

    ದಿವ್ಯ ಭವ್ಯ ಹವ್ಯ ಲೋಕದ ಅನಾವರಣಕ್ಕೆ ಕ್ಷಣಗಣನೆ

    • ತೃತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ನಾಳೆ ಚಾಲನೆ
    • ಕೊನೇ ಹಂತದ ಸಿದ್ಧತೆಗಳ ಪರಿಶೀಲನೆ

    ನಾಳೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಐತಿಹಾಸಿಕ ತೃತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ಚಾಲನೆ ದೊರೆಯಲಿದ್ದು, ನಾಡಿನ ಸಂತಶ್ರೇಷ್ಠರ ಸಾನ್ನಿಧ್ಯದಲ್ಲಿ ಹಾಗೂ ದೇಶವಿದೇಶಗಳ ಗಣ್ಯಮಾನ್ಯರ ಸಮ್ಮುಖದಲ್ಲಿ ವಿಶಿಷ್ಟ ಹವ್ಯಕ ಸಂಸ್ಕೃತಿಯ ಅನಾವರಣ ಬೃಹತ್ ರೂಪದಲ್ಲಿ ನಡೆಯಲಿದೆ.

    ಶ್ರೀ ಅಖಿಲ ಹವ್ಯಕ ಮಹಾಸಭೆಗೆ 81 ವರ್ಷಗಳು ತುಂಬಿದ ಸಂಭ್ರಮದಲ್ಲಿ ಚಾರಿತ್ರಿಕವಾದ ಸಮ್ಮೇಳನವನ್ನು ೨೩೦೦ ಕಿ.ಮೀ ದೂರದ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಅಹಿಚ್ಛತ್ರದಿಂದ ತರಲಾದ ಜ್ಯೋತಿಯಿಂದ ದೀಪವನ್ನು ಬೆಳಗುವುದರ ಮೂಲಕ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ಸಿಗಲಿದೆ. ಉದ್ಘಾಟನೆಗೂ ಮುನ್ನ ಸಂತರು ಹಾಗೂ ಗಣ್ಯರಿಗೆ ವೈಭವದ ಸ್ವಾಗತ ನಡೆಯಲಿದ್ದು, 1081 ಮಾತೆಯರಿಂದ ಪೂರ್ಣಕುಂಭ ಸ್ವಾಗತ, 1081 ಮಕ್ಕಳಿಂದ ಪುಷ್ಪವೃಷ್ಟಿ ಸ್ವಾಗತ ಹಾಗೂ 1081 ಪುರುಷರಿಂದ ವೇದಘೋಷ ಸ್ವಾಗತ ವೈಭವದಿಂದ ನಡೆಯಲಿದೆ.

    ಸಮ್ಮೇಳನದ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿದ್ದು, 1081 ಜನರ ಪ್ರಧಾನ ಸಮಿತಿ ಹಾಗೂ ಸಂಚಾಲನಾ ಸಮಿತಿ ಮೇಲುಸ್ತುವಾರಿ ವಹಿಸಿದ್ದು, ಸಾವಿರಕ್ಕೂ ಅಧಿಕ ಕಾರ್ಯಕರ್ತರ ಪಡೆ ಸಿದ್ದತೆಯಲ್ಲಿ ನಿರತವಾಗಿದೆ. ವೇದಿಕೆ, ಗಾಯತ್ರೀ ಥೀಮ್ ಪಾರ್ಕ, ವಾಣಿಜ್ಯ ಮಳಿಗೆ, ಪಾರಂಪರಿಕ ವಸ್ತುಪ್ರದರ್ಶನ ಸಿದ್ದವಾಗಿದ್ದು, ಪಾಕೋತ್ಸವ, ಆಲೇಮನೆಗಳು ಹವಿಸವಿಯ ಆಹಾರವನ್ನು ಉಣಬಡಿಸಲಿವೆ. ನೂರಾರು ಬಾಣಸಿಗರ ತಂಡ ಬಗೆಬಗೆಯ ತಿನಿಸುಗಳನ್ನು ಉಣಬಡಿಸಲು ಸಿದ್ದವಾಗಿದೆ.

    ಸಮ್ಮೇಳನದ ಗೌರವಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಅಧ್ಯಕ್ಷರಾದ ಡಾ. ಗಿರಿಧರ ಕಜೆ, ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ ಸೇರಿದಂತೆ ಪ್ರಮುಖರು ಕೊನೇ ಕ್ಷಣದ ಸಿದ್ದತೆಗಳನ್ನು ಪರಿಶೀಲಿಸಿದರು.

    ಹವ್ಯಕ ಸಮ್ಮೇಳನವು ಎಲ್ಲಾ ಜಾತಿ ಸಮುದಾಯದವರಿಗೂ ಮುಕ್ತವಾಗಿದ್ದು, ಸಮಷ್ಟಿ ಸಮಾಜದವರು ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಈ ಸಮ್ಮೇಳನದಲ್ಲಿ ೬೦ಕ್ಕೂ ಅಧಿಕ ಜಾತಿ-ಉಪಜಾತಿಯ ಸಂಘಸಂಸ್ಥೆಗಳನ್ನು ಗೌರವಿಸಲಾಗುತ್ತಿದ್ದು, ಸಮಾಜಕ್ಕೆ ಸೌಹಾರ್ಧತೆಯ ಸಂದೇಶವನ್ನು ಸಾರಲಾಗುತ್ತಿದೆ.

    ~~~~~

    ಭವ್ಯ ಸ್ವಾಗತ:
    1081 ಮಾತೆಯರಿಂದ ಪೂರ್ಣಕುಂಭ ಸ್ವಾಗತ
    1081 ಮಕ್ಕಳಿಂದ ಪುಷ್ಪವೃಷ್ಟಿ ಸ್ವಾಗತ
    1081 ಪುರುಷರಿಂದ ವೇದಘೋಷ ಸ್ವಾಗತ

    ದಿವ್ಯ ಸಾನ್ನಿಧ್ಯ:

    • ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು
      ಶ್ರೀರಾಮಚಂದ್ರಾಪುರ ಮಠ

    ★ ಪರಮಪೂಜ್ಯ ಶ್ರೀಶ್ರೀ ಸುಬುಧೇಂದ್ರ ತೀರ್ಥ ಮಹಾಸ್ವಾಮಿಗಳು
    ಶ್ರೀರಾಘವೇಂದ್ರ ಮಠ, ಮಂತ್ರಾಲಯ

    ★ ಪರಮಪೂಜ್ಯ ಶ್ರೀಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ಆದಿಚುಂಚನಗಿರಿ ಮಠ

    ★ ಪರಮಪೂಜ್ಯ ಶ್ರೀಶ್ರೀ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮಿಗಳು
    ಪೇಜಾವರ ಮಠ

    ★ ಪರಮಪೂಜ್ಯ ಶ್ರೀಶ್ರೀ ಯತಿರಾಜ ಜೀಯರ್ ಮಹಾಸ್ವಾಮಿಗಳು
    ಯದುಗಿರಿ ಯತಿರಾಜ ಮಠ

    ★ ಪರಮಪೂಜ್ಯ ಶ್ರೀಶ್ರೀ ವಿದ್ಯಾಪ್ರಸನ್ನ ತೀರ್ಥ ಮಹಾಸ್ವಾಮಿಗಳು
    ಸುಬ್ರಹ್ಮಣ್ಯ ಮಠ

    ಉದ್ಘಾಟನೆ : ಶ್ರೀ ಪ್ರಹ್ಲಾದ್ ಜೋಷಿ – ಕೇಂದ್ರ ಸಚಿವರು

    ಮುಖ್ಯ ಅಭ್ಯಾಗತರು:

    ◆ ಶ್ರೀ ಸದಾನಂದ ಗೌಡ – ಮಾಜಿ ಮುಖ್ಯಮಂತ್ರಿಗಳು
    ◆ ಶ್ರೀ ಮಂಕಾಳು ವೈದ್ಯ – ಸಚಿವರು
    ◆ ಶ್ರೀ ಕೋಟ ಶ್ರೀನಿವಾಸ ಪೂಜಾರಿ – ಮಾಜಿ ಸಚಿವರು, ಸಂಸದರು
    ◆ ಶ್ರೀ ವಿಜಯೇಂದ್ರ – ಶಾಸಕರು
    ◆ ಡಾ. ಅಶ್ವತ್ಥನಾರಾಯಣ – ಮಾಜಿ ಉಪ ಮುಖ್ಯಮಂತ್ರಿಗಳು, ಶಾಸಕರು
    ◆ ಶ್ರೀ ಶಿವರಾಮ ಹೆಬ್ಬಾರ್ – ಮಾಜಿ ಸಚಿವರು, ಶಾಸಕರು
    ◆ ಶ್ರೀ ಭೀಮಣ್ಣ ನಾಯ್ಕ- ಶಾಸಕರು
    ◆ ಶ್ರೀ ಅಸಗೋಡು ಜಯಸಿಂಹ – ಅಧ್ಯಕ್ಷರು, ಬ್ರಾಹ್ಮಣ ಅಭಿವೃದ್ಧಿ ನಿಗಮ
    ◆ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ – ಗೌರವಾಧ್ಯಕ್ಷರು, ತೃತೀಯ ವಿಶ್ವ ಹವ್ಯಕ ಸಮ್ಮೇಳನ

    ವಿಶೇಷತೆಗಳು :

    • ಹವ್ಯಕ ಪಾಕೋತ್ಸವ : ಮಲೆನಾಡು – ಕರಾವಳಿ ಭಾಗಗಳ ಹವ್ಯಕರ ಪಾರಂಪರಿಕ ತಿನಿಸುಗಳ ಉತ್ಸವ
    • ಆಲೆಮನೆ : ರಾಜಧಾನಿಯಲ್ಲಿ ಹಳ್ಳಿ ಸೊಗಡಿನ ಆಲೆಮನೆ.
    • ಅಡಿಕೆ ಸಂಸ್ಕೃತಿಯ ಸಮಗ್ರ ದರ್ಶನ
    • ಪಾರಂಪರಿಕ ವಸ್ತುಗಳ ಪ್ರದರ್ಶನ
    • ನಾಡಿನ ಶ್ರೇಷ್ಠ ವಿದ್ವಾಂಸರುಗಳಿಂದ ಗೋಷ್ಠಿಗಳು
    • ೮೧ ಸಾಧಕರಿಗೆ ಹಾಗೂ ಶ್ರೇಷ್ಠ ಕೃಷಿಕರಿಗೆ ಸನ್ಮಾನ
    • ಕನ್ನಡದ ಪ್ರಥಮ ನಾಟಕ ‘ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ’ ಪ್ರದರ್ಶನ
    • ಖ್ಯಾತ ಕಲಾವಿದರಿಂದ ಸಂಗೀತ ಸಂಗಮ – ಶಾಸ್ತ್ರೀಯ ಸಂಗೀತ
    • ವಿವಿಧ ಸಮಾಜದವರಿಗೆ ಸೌಹಾರ್ಧ ಸನ್ಮಾನ.

    ಮಾಧ್ಯಮ ಸಂಪರ್ಕ: ಸಂದೇಶ ತಲಕಾಲಕೊಪ್ಪ
    8970228945

  • ಮಾಜಿ ಪ್ರಧಾನಿ ಮನ್‌ಮೋಹನ್‌ ಸಿಂಗ್‌ ಇನ್ನಿಲ್ಲ.

    ಮಾಜಿ ಪ್ರಧಾನಿ ಮನ್‌ಮೋಹನ್‌ ಸಿಂಗ್‌ ಇನ್ನಿಲ್ಲ.

    ಮಾಜಿ ಪ್ರಧಾನಿ ಮನ್‌ಮೋಹನ್‌ ಸಿಂಗ್‌ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ವರದಿಗಳು ತಿಳಿಸಿದೆ. ತೀವ್ರ ಆರೋಗ್ಯ ಹದಗೆಟ್ಟ ಹಿನ್ನಲೆಯಲ್ಲಿ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮನ್‌ಮೋಹನ್‌ ಸಿಂಗ್‌ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.

    ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮನ್‌ಮೋಹನ್‌ ಸಿಂಗ್‌ ಕಳೆದ ಕೆಲವು ತಿಂಗಳುಗಳಿಗೆ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆ ಆಗುತ್ತಿದ್ದರು. ಗುರುವಾರ ಸಂಜೆಯ ವೇಳೆಗೆ ಆರೋಗ್ಯದಲ್ಲಿ ತೀವ್ರ ಏರುಪೇರು ಆಗಿದ್ದರಿಂದ ಅವರನ್ನು ಏಮ್ಸ್‌ಗೆ ದಾಖಲು ಮಾಡಲಾಗಿತ್ತು.

    ಈ ಬಗ್ಗೆ ರಾಬರ್ಟ್‌ ವಾದ್ರಾ ಟ್ವೀಟ್ ಮಾಡಿದ್ದು,’ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಬಗ್ಗೆ ತಿಳಿದು ನನಗೆ ತುಂಬಾ ದುಃಖವಾಗಿದೆ. ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಆಳವಾದ ಸಂತಾಪಗಳು. ನಮ್ಮ ದೇಶಕ್ಕೆ ನೀವು ಮಾಡಿದ ಸೇವೆಗೆ ಧನ್ಯವಾದಗಳು. ನಿಮ್ಮ ಆರ್ಥಿಕ ಕ್ರಾಂತಿಗಾಗಿ ನೀವು ಯಾವಾಗಲೂ ನೆನಪಿನಲ್ಲಿರುತ್ತೀರಿ ಮತ್ತು ಪ್ರಗತಿಪರ ಬದಲಾವಣೆಗಳನ್ನು ನೀವು ದೇಶಕ್ಕೆ ತಂದಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.

  • ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಆತ್ಮಹತ್ಯೆ

    ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಆತ್ಮಹತ್ಯೆ

    ಎರಡೊಂದ್ಲಾ ಮೂರು’, ‘ಒಂದ್‌ ಕಥೆ ಹೇಳಾ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಶೋಭಿತಾ ಶಿವಣ್ಣ ನಿಧನರಾಗಿದ್ದಾರೆ. ‘ಬ್ರಹ್ಮಗಂಟು’ ಸೀರಿಯಲ್ ಮೂಲಕ ಅವರು ಖ್ಯಾತಿ ಪಡೆದಿದ್ದ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಹಾಸನ‌‌ ಮೂಲದ ಸಕಲೇಶಪುರದನಟಿ ಶೋಭಿತಾ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಮಾಹಿತಿ ಇದೆ. ಸದ್ಯ ‘ಫಸ್ಟ್ ಡೇ ಫಸ್ಟ್ ಶೋ’ ಸಿನಿಮಾದಲ್ಲಿ ನಟಿಸಿದ್ದ ಶೋಭಿತಾ ಅವರು ಮದುವೆ ಬಳಿಕ ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿತ್ತು.

    ಎರಡು ವರ್ಷಗಳ ಹಿಂದೆ ಮದುವೆಯಾದ ಶೋಭಿತಾ ಅವರು ಹೈದರಾಬಾದ್‌ನಲ್ಲಿ ವಾಸವಾಗಿದ್ದರು. ನಟಿಯ ಆತ್ಮಹತ್ಯೆಗೆ ಕಾರಣ ಏನು ಎಂಬುದು ಗೊತ್ತಾಗಿಲ್ಲ. ಶನಿವಾರ (ನವೆಂಬರ್​ 30) ರಾತ್ರಿ ಘಟನೆ ನಡೆದಿರುವ ಸಾಧ್ಯತೆ ಇದೆ. ಶನಿವಾರವಷ್ಟೇ ಸೋಶಿಯಲ್‌ ಮೀಡಿಯಾದಲ್ಲಿ ಸ್ಟೋರಿ ಶೇರ್ ಮಾಡಿದ್ದರು. ಆ ಬಳಿಕ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದ್ದು ಅಚ್ಚರಿಗೆ ಕಾರಣ ಆಗಿದೆ.

    ಶೋಭಿತಾ ಮದುವೆ ಆದಾಗಿಂದ ಇಂಡಸ್ಟ್ರಿಯಿಂದ‌ ಅಂತರ ಕಾಯ್ದುಕೊಂಡಿದ್ದರು. ಮರಣೋತ್ತರ ಪರೀಕ್ಷೆ ನಂತರ ಬೆಂಗಳೂರಿಗೆ ಮೃತದೇಹ ತರುವ ಸಾಧ್ಯತೆ ಇದೆ. ಅವರ ನಿಧನಕ್ಕೆ ಸಿನಿಮಾ ಮತ್ತು ಸೀರಿಯಲ್ ಸೆಲೆಬ್ರಿಟಿಗಳು ಸಂತಾಪ ಸೂಚಿಸುತ್ತಿದ್ದಾರೆ.

  • ಡಿ. ೨೭ ರಿಂದ ತೃತೀಯ ವಿಶ್ವ ಹವ್ಯಕ ಸಮ್ಮೇಳನ

    ಡಿ. ೨೭ ರಿಂದ ತೃತೀಯ ವಿಶ್ವ ಹವ್ಯಕ ಸಮ್ಮೇಳನ

    ಕುಮಟಾ : ಡಿಸೆಂಬರ್ ೨೭ ರಿಂದ ೨೯ ರವರೆಗೆ ಮೂರುದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಹವ್ಯಕ ಮಹಾಸಭೆಯಿಂದ “ತೃತೀಯ ವಿಶ್ವ ಹವ್ಯಕ ಸಮ್ಮೇಳನ” ವನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷ ಕಾರ್ಯಕ್ರಮಗಳು, ಸಾಧಕ ಸಮ್ಮಾನ, ಹವ್ಯಕರ ಸಂಸ್ಕೃತಿ ಬಿಂಬಿಸುವ ಕಾರ್ಯಗಳು ಸಂಯೋಜನೆಗೊಳ್ಳುತ್ತಿದ್ದು ಸಿದ್ಧತೆ ಪ್ರಾರಂಭವಾಗಿದೆ. ಎಲ್ಲಾ ಹವ್ಯಕರೂ ಹಾಗೂ ಇತರ ಸಮಾಜದ ಹವ್ಯಕ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸುವಂತೆ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ವಿನಂತಿಸಿದರು. ಇಲ್ಲಿನ ಕೊಂಕಣ ಎಜುಕೇಶನ್ ಟ್ರಸ್ಟಿನ ಸರಸ್ವತಿ ವಿದ್ಯಾಕೇಂದ್ರದ ಪ್ರಾಥಮಿಕ ಶಾಲೆಯ ಪ್ರಾರ್ಥನಾ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.

    ಡಿಸೆಂಬರ್ ೨೭ ರಿಂದ ೨೯ ರವರೆಗೆ ಮೂರುದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಖಿಲ ಹವ್ಯಕ ಮಹಾಸಭೆಯಿಂದ “ತೃತೀಯ ವಿಶ್ವ ಹವ್ಯಕ ಸಮ್ಮೇಳನ” ನಡೆಯಲಿದ್ದು, ಹವ್ಯಕ ಮಹಾಸಭೆ ೮೧ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಹಸ್ರಚಂದ್ರದರ್ಶನದ ಸಂಭ್ರಮೋತ್ಸವವಾಗಿಯೂ ಹವ್ಯಕ ಸಮ್ಮೇಳನಕ್ಕೆ ವಿಶೇಷ ಮೆರುಗಿನೊಂದಿಗೆ ಸಕಲ ಸಿದ್ಧತೆಗಳು ನಡೆಯುತ್ತಿದೆ ಎಂದು ಅವರು ವಿವರಿಸಿದರು.

    ೧೯೪೩ ರಲ್ಲಿ ಬ್ರಿಟೀಷರ ಆಳ್ವಿಕೆಯ ಕಾಲದಲ್ಲೇ ನೋಂದಾಯಿತವಾದ ಹವ್ಯಕ ಮಹಾಸಭೆಯು ದೇಶ-ವಿದೇಶಗಳು ಸೇರಿದಂತೆ ಒಟ್ಟಾರೆ 30,000 ಸದಸ್ಯ ಬಲಹೊಂದಿದೆ. ಸಮಾಜಕ್ಕೆ ಕ್ರಿಯೆಗಳನ್ನು ಅರ್ಥವಾಗಿಸುವ ದೃಷ್ಟಿಯಲ್ಲಿ, ಕೊಡಬೇಕಾದ ಪ್ರಾಮುಖ್ಯತೆಯ ಹಿನ್ನಲೆಯಲ್ಲಿ ಹವ್ಯಕ ಎಂದೂ ಹಿಂದೆ ಬಿದ್ದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಹವ್ಯಕರ ಸಾಂಸ್ಕೃತಿಕ ಬದುಕನ್ನು ಸಮೃದ್ಧವಾಗಿ, ಸುಂದರವಾಗಿ ಕಟ್ಟಿಕೊಡುತ್ತಿರುವ ಯಶಸ್ಸು ಹವ್ಯಕಕ್ಕೆ ಸಲ್ಲುತ್ತದೆ. ನೆಲ ಸಂಸ್ಕೃತಿಯನ್ನು ಪೋಷಿಸುವ, ಹೊಸ ಹೊಸ ಸಾಧ್ಯತೆಯನ್ನು ಹುಡುಕುವ, ಸೃಜನಶೀಲ ಕಾರ್ಯಕ್ರಮಗಳ ಮೂಲಕ ಅಪಾರ ಜನಪ್ರಿಯತೆಯೊಂದಿಗೆ ಹೊಸ ಹೆಜ್ಜೆ ಇಟ್ಟಿದೆ. ಸಂಸ್ಕೃತಿಯನ್ನು ಉಳಿಸುವಲ್ಲಿ ಹಾಗೂ ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ವೈವಿಧ್ಯಮಯ ಸಂಸ್ಕಾರಗಳ ಬಾಗಿಲುಗಳನ್ನು ತೆರೆಯುತ್ತಾ, ಹವ್ಯಕತನವನ್ನು ಉಳಿಸುತ್ತಾ ಸಾಗಿರುವ ಒಂದೊಂದು ಕಾರ್ಯಕ್ರಮಗಳೂ ಹವ್ಯಕದ ಮೈಲುಗಲ್ಲುಗಳಾಗಿವೆ.

    ಇಂತಹ ಕಾರ್ಯಕ್ರಮಗಳು ಇಂದು ಯುವಜನತೆಯನ್ನು ಹವ್ಯಕದ ಕಡೆ ವಿಶೇಷವಾಗಿ ಆಕರ್ಷಿಸುತ್ತದೆ. ಶೇಕಡಾ 80ಕ್ಕಿಂತಲೂ ಹೆಚ್ಚು ಉತ್ಸಾಹಿ ಕ್ರಿಯಾಶೀಲ ಯುವಕರು ಮಹಾಸಭೆಯೊಂದಿಗಿರುವುದು ಕಟ್ಟಿಕೊಂಡ ಸಂಘಟನೆಗೆ ಆನೆ ಬಲ ಬಂದಂತಾಗಿದೆ. ನಿಜವಾಗಲೂ ಸಂಸ್ಥೆಯ ಭವಿಷ್ಯದ ದೃಷ್ಟಿಯಿಂದ ಇದೊಂದು ಅರೋಗ್ಯಕರ ಬೆಳವಣಿಗೆ.

    ಸಂಖ್ಯಾಬಲದಲ್ಲಿ ತೀರಾ ಕಡಿಮೆ ಇದ್ದರೂ ತನ್ನ ಪರಂಪರೆ, ಸಂಸ್ಕೃತಿ, ಸಂಪ್ರದಾಯ, ಭಾಷೆ ಹಾಗೂ ಬೌದ್ಧಿಕ ಪ್ರಬುದ್ಧತೆಯಿಂದ ವಿಶ್ವದೆಲ್ಲೆಡೆ ವಿಶೇಷವಾಗಿ ಗುರುತಿಸಿಕೊಂಡಿರುವ ಹವ್ಯಕ ಸಮುದಾಯದ ಸಾಧನೆ ಮತ್ತು ಸವಾಲುಗಳಿಗೆ ಸಮ್ಮೇಳನ ವೇದಿಕೆಯಾಗಲಿದೆ. ಈ ಸಮ್ಮೇಳನ ಹವ್ಯಕರಿಗೆ ಸೇರಿದ್ದಾದರೂ ಮೂರೂ ದಿನದ ಸಮಾರಂಭದಲ್ಲಿ ನಾಡಿನ ಎಲ್ಲ ಸಮುದಾಯದವರು ಪಾಲ್ಗೊಳ್ಳುವಂತೆ ಮುಕ್ತವಾಗಿ ಸಂಘಟಿಸಲಾಗಿದೆ. ಎಲ್ಲರೂ ಸೇರಿ ಹವ್ಯಕ ಹಬ್ಬ ಆಚರಿಸುವುದು ಹಾಗೂ ಇದೊಂದು ನಾಡಿನಹಬ್ಬವಾಗಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ. ಈ ಬಾರಿ ಸಮ್ಮೇಳನದಲ್ಲಿ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

    ಸ್ಪರ್ಧೆಗಳು ಮತ್ತು ಸಾಧಕರಿಗೆ ಪ್ರಶಸ್ತಿ.

    ಮಕ್ಕಳಿಗಾಗಿ ಹವ್ಯಕ ಸಂಸ್ಕೃತಿಯ ಚಿತ್ರ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಹೂಕುಂಡ-ಇಕಬಾನ ಕಲಾಸ್ಪರ್ಧೆ, ಹವ್ಯಕ ಆಹಾರ ಸ್ಪರ್ಧೆ, ಹವ್ಯಕ ಸಂಪ್ರದಾಯ ಚಿತ್ರಕಲಾ ಸ್ಪರ್ಧೆ, ಕರಕುಶಲ ವಸ್ತು ಪ್ರದರ್ಶನ ಸ್ಪರ್ಧೆ, ಪಾರಂಪರಿಕ ವಸ್ತು ಪ್ರದರ್ಶನ ಸ್ಪರ್ಧೆಗಳು ಇರಲಿದೆ. ಸಾಧಕರಿಗೆ ಸಾಧಕರತ್ನ, ವೇದಮೂರ್ತಿಗಳಿಗೆ ವೇದರತ್ನ, ಶಿಕ್ಷಕರಿಗೆ ಶಿಕ್ಷಕರತ್ನ. ಕೃಷಿಕರಿಗೆ ಕೃಷಿರತ್ನ, ಸೈನಿಕರಿಗೆ ದೇಶರತ್ನ, ವಿದ್ಯಾರ್ಥಿಗಳಿಗೆ ವಿದ್ಯಾರತ್ನ, ಸಮಾಜಕ್ಕೆ ಸ್ಫೂರ್ತಿಯದವರಿಗೆ ಸ್ಫೂರ್ತಿ ರತ್ನ ಪ್ರಶಸ್ತಿಯಂತೆ ಪ್ರತಿವಿಭಾಗದಲ್ಲಿ ೮೧ ಜನರಂತೆ ಒಟ್ಟೂ ೫೬೭ ಜನರಿಗೆ ಪ್ರಶಸ್ತಿ ಸಹಿತ ಸನ್ಮಾನಿಸಲಾಗುವುದು.

    ಕಾರ್ಯಕ್ರಮ ವೈವಿಧ್ಯಗಳು :

    • ೮ ವಿಚಾರಗೋಷ್ಠಿಗಳು,
    • ಸ್ಮರಣ ಸಂಚಿಕೆ-ಕೃತಿಗಳ ಲೋಕಾರ್ಪಣೆ.
    • ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ೩೦೦ ಕ್ಕೂ ಅಧಿಕ ಪ್ರಸಿದ್ಧ ಕಲಾವಿದರು ಭಾಗಿ.
    • ದಕ್ಷಿಣೋತ್ತರ ತಿಟ್ಟುಗಳ ಮೇರು ಕಲಾವಿದರ ಸಂಗಮದಲ್ಲಿ ಯಕ್ಷಗಾನ.
    • ೧೦೮ ಸಾಂಸ್ಕೃತಿಕ ಕಾರ್ಯಕ್ರಮಗಳು.
    • ಪ್ರತಿನಿತ್ಯ ಹೋಮಹವನಾದಿಗಳು, ಭಗವದ್ಗೀತೆ ಪಠಣ, ಮಾತೆಯರಿಂದ ಭಕ್ತಿಭಜನೆ,
    • ಸಾವಿರಾರು ಜನರಿಂದ ವಾಕಥಾನ್, ಅಹಿಚ್ಛತ್ರದಿಂದ ಜ್ಯೋತಿಯ ಆಗಮನ, ರಕ್ತದಾನ, ವಸ್ತುಪ್ರದರ್ಶನ,
    • ೬೦೦೦ಕ್ಕೂ ಹೆಚ್ಚು ಹವ್ಯಕ ಪುಸ್ತಕ ಪ್ರದರ್ಶನ, ಪಾಕೋತ್ಸವದಲ್ಲಿ ಹವ್ಯಕ ಅಡುಗೆ-ತಿಂಡಿಗಳ ವೈವಿಧ್ಯ, ಬೈಕ್ ರ್‍ಯಾಲಿ, ಗಾಯತ್ರೀ ಥೀಮ್ ಪಾರ್ಕ, ದೇಶೀ ಗೋಲೋಕ, ಯಕ್ಷಕಿರೀಟ ವೇಷಭೂಷಣ ಪ್ರದರ್ಶನ, ಛಾಯಾ ಚಿತ್ರ ಪ್ರದರ್ಶನ, ಯಾಗ ಮಂಡಲಗಳ ಪ್ರದರ್ಶನ.
    • ೧೦೮ ವರ್ಷಗಳ ಪಂಚಾಂಗ ದರ್ಶನ ಮತ್ತು ಪೂಜಾ ವೈವಿಧ್ಯ, ಅಡಕೆ ಪ್ರಪಂಚ, ಕಬ್ಬಿನ ಆಲೆಮನೆ, ಗೊಂಬೆಗಳ ಆಟ.
    • ಆನೆ-ಕುದುರೆ-ಒಂಟೆ ಸವಾರಿ, ಹವ್ಯಕ ನಾಟಕ, ಸಂಗೀತ ಸಂಗಮ, ನಾಟ್ಯೋತ್ಸವ, ವಾದ್ಯ ವೈಭವ, ಗಾನಾಮೃತ, ಜಾದೂ ಪ್ರದರ್ಶನ, ವಾಣಿಜ್ಯ ಮಳಿಗೆಗಳಕೋಟ್

    ಮಹಾಸಭೆಯ ನಿರ್ದೇಶಕ ಅರುಣ ಹೆಗಡೆ ಸ್ವಾಗತಿಸಿದರು. ಮಹಾಸಭೆಯ ಉಪಾಧ್ಯಕ್ಷ ಶ್ರೀಧರ ಭಟ್, ಕೋಶಾಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿಗಳಾದ ಪ್ರಶಾಂತ ಭಟ್ಟ ಯಲ್ಲಾಪುರ, ಆದಿತ್ಯ ಹೆಗಡೆ ಕಲಗಾರ, ನಿರ್ದೇಶಕ ಆರ್. ಜಿ. ಹೆಗಡೆ ಇನ್ನಿತರರು ಇದ್ದರು.

  • ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾದ ನಟ, ನಿರ್ದೇಶಕ

    ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾದ ನಟ, ನಿರ್ದೇಶಕ

    ನ್ಯೂಸ್ ಬ್ಯೂರೋ : ನಟ, ನಿರ್ದೇಶಕ ಗುರುಪ್ರಸಾದ್‌ ಅವರು ಮಾದನಾಯಕಹಳ್ಳಿ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಫ್ಯಾನಿಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿದೆ. ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ನಿರ್ದೇಶಕ ಗುರುಪ್ರಸಾದ್‌ (52) ಅವರು 3 ದಿನಗಳ ಹಿಂದೆ ನೇಣಿಗೆ ಶರಣಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಅವರ ಮೃತದೇಹ ಅಪಾರ್ಟ್‌ಮೆಂಟ್‌ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ನವೆಂಬರ್‌ 2ರಂದು ಗುರುಪ್ರಸಾದ್‌ ಹುಟ್ಟುಹಬ್ಬ. ಈ ಬೆನ್ನಲ್ಲೇ ಅವರ ಸಾವಿನ ಸುದ್ದಿ ಚಿತ್ರರಂಗದ ಮಂದಿಗೆ ಶಾಕ್‌ ಕೊಟ್ಟಿದೆ. ಮೂರು ದಿನಗಳ ಹಿಂದೆ ಗುರುಪ್ರಸಾದ್‌ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆಯಿಂದ ಸ್ಥಳೀಯ ನಿವಾಸಿಗಳಿಗೆ ವಾಸನೆ ಬರತೊಡಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಬಾಗಿಲನ್ನು ತೆರೆಯಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ಈಗ ಲಭ್ಯವಾಗಿದೆ.

  • ಭಾಗವತ್ ಆಸ್ಪತ್ರೆಯಲ್ಲಿ ಸೇವೆ ಪ್ರಾರಂಭಿಸುತ್ತಿರುವ ಡಾ. ಸುಮಂತ್ ಬಳಗಂಡಿ

    ಭಾಗವತ್ ಆಸ್ಪತ್ರೆಯಲ್ಲಿ ಸೇವೆ ಪ್ರಾರಂಭಿಸುತ್ತಿರುವ ಡಾ. ಸುಮಂತ್ ಬಳಗಂಡಿ

    ಕುಮಟಾ : ‘ಬೆಳೆಯ ಸಿರಿ ಮೊಳಕೆಯಲ್ಲಿ’ ಎಂಬ ಉಕ್ತಿಯಂತೆ ಚಿಕ್ಕಂದಿನಿಂದಲೂ ಪ್ರತಿಭಾವಂತರಾಗಿ, ಈಗ ಪ್ರಖ್ಯಾತ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆ (ನಿಮ್ಹ್ಯಾನ್ಸ್) ನಲ್ಲಿ ಡಿ.ಎಮ್.ನ್ಯುರೋಲೊಜಿ ಅಧ್ಯಯನವನ್ನು ಯಶಸ್ವಿಯಾಗಿ ಪೂರೈಸಿರುವ ಡಾ. ಸುಮಂತ್ ಬಳಗಂಡಿ ಅವರು ಮೆದುಳು ಮತ್ತು ನರ ರೋಗ ತಜ್ಙರಾಗಿ ಶಿವಮೊಗ್ಗಾ ಜಿಲ್ಲೆಯ ಸಾಗರದ ಪ್ರಸಿದ್ಧ ಭಾಗವತ್ ಆಸ್ಪತ್ರೆಯಲ್ಲಿಂದು ತಮ್ಮ ಸೇವೆಯನ್ನು ಆರಂಭಿಸುತ್ತಿದ್ದಾರೆ.

    ಎಮ್.ಬಿ.ಬಿ.ಎಸ್.ಪದವಿ ಹಾಗೂ ಎಮ್.ಡಿ.(ಜನರಲ್ ಮೆಡಿಸಿನ್) ಅಧ್ಯಯನವನ್ನು ರಾಜ್ಯದ ಪ್ರತಿಷ್ಠಿತ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಪೂರೈಸಿರುವ ಇವರು ರಾಷ್ಟ್ರ ಮಟ್ಟದ ಡಿ.ಎನ್.ಬಿ.(ಜನರಲ್ ಮೆಡಿಸಿನ್) ಪದವಿಯನ್ನೂ ಪಡೆದವರಾಗಿದ್ದಾರೆ.
    ಏಷ್ಯಾದಲ್ಲೇ ನಂ.೧ ಸಂಸ್ಥೆಯೆಂದು ಹೆಸರು ವಾಸಿಯಾದ ನಿಮ್ಹ್ಯಾನ್ಸ್ ಸಂಸ್ಥೆ ನಡೆಸಿದ ರಾಷ್ಟ್ರ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಯತ್ನದಲ್ಲೇ ರಾಷ್ಟ್ರಕ್ಕೆ ಪ್ರಥಮ ಸ್ಥಾನ ಗಳಿಸಿ ಡಿ.ಎಮ್.ಪದವಿ ಕೋರ್ಸ್ ಗೆ ಆಯ್ಕೆಯಾಗಿ, ಮೂರು ವರ್ಷದ ‘ಸೂಪರ್ ಸ್ಪೆಶಲೈಸೇಶನ್’ ಕೋರ್ಸನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ‘ನ್ಯುರೋಲೊಜಿಸ್ಟ್’ ಆಗಿದ್ದಾರೆ.

    ನ್ಯುರೋಲೊಜಿ ಗೆ ಸಂಬಂಧಿಸಿದಂತೆ ರಾಷ್ಟ್ರ ಮಟ್ಟದ ಹಲವಾರು ಕ್ವಿಜ್ ಮತ್ತು ಸೆಮಿನಾರ್ ಗಳಲ್ಲಿ ಭಾಗವಹಿಸಿ ಅಗ್ರ ಶ್ರೇಯಾಂಕಗಳಿಸಿ ನಾಡಿಗೆ ಕೀರ್ತಿ ತಂದಿರುತ್ತಾರೆ. ಇವರ ಪತ್ನಿ ಡಾ.ಶ್ರೀಯಾ ಆರ್.ಭಾಗವತ್ ಅವರು ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರಾಗಿ ಭಾಗವತ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

    ಕುಮಟಾ ನಿವಾಸಿಗಳಾಗಿರುವ ಶಿರಸಿ ತಾಲೂಕಿನ ಮುಂಡಿಗೇಸರದ ಸ್ವಾತಿ ಮತ್ತು ಜಯದೇವ ಬಳಗಂಡಿ ಇವರ ಸುಪುತ್ರ ಡಾ.ಸುಮಂತ್ ಬಳಗಂಡಿ ಅವರು ನ್ಯುರೋಲೊಜಿಸ್ಟ್ ಆಗಿ ಸಾಗರದ ಭಾಗವತ್ ಆಸ್ಪತ್ರೆಯಲ್ಲಿ ತಮ್ಮ ಸೇವೆ ಆರಂಭಿಸುತ್ತಿದ್ದು, ಪ್ರತಿದಿನ ಇವರು ಆಸ್ಪತ್ರೆಯಲ್ಲಿ ಲಭ್ಯವಾಗಲಿದ್ದಾರೆ‌. ಇವರ ಮುಂದಿನ ಯಶಸ್ಸಿಗಾಗಿ ಈ ಸಂದರ್ಭದಲ್ಲಿ ಹಿತೈಷಿಗಳು ಶುಭ ಕೋರಿದ್ದಾರೆ.

  • ಆರೋಗ್ಯವಿದ್ದರೆ ಜೀವನ, ಜೀವನವಿದ್ದರೆ ಸಾಧನೆ : ಬನ್ನೇರುಘಟ್ಟ ಬೇಸ್ ಕಾಲೇಜಿನ ‘ಆರಂಭ-24’ ಸಮಾರಂಭದಲ್ಲಿ ಡಾ.ಶಶಿಧರ ಬುಗ್ಗಿ

    ಆರೋಗ್ಯವಿದ್ದರೆ ಜೀವನ, ಜೀವನವಿದ್ದರೆ ಸಾಧನೆ : ಬನ್ನೇರುಘಟ್ಟ ಬೇಸ್ ಕಾಲೇಜಿನ ‘ಆರಂಭ-24’ ಸಮಾರಂಭದಲ್ಲಿ ಡಾ.ಶಶಿಧರ ಬುಗ್ಗಿ

    ಬೆಂಗಳೂರು : ಜೀವನದಲ್ಲಿ ಸಾಧನೆಯ ಹಾದಿಯಲ್ಲಿ ಸಾಗುವಾಗ ಅನೇಕ ರೀತಿಯ ಒತ್ತಡಗಳು ಎದುರಾಗುತ್ತವೆ. ಆ ಒತ್ತಡದಲ್ಲಿ ನಾವು ಸಿಲುಕಿದರೆ ಗುರಿ ತಲುಪುವುದು ಕಷ್ಟ. ಹಾಗಾಗಿ ಒತ್ತಡಕ್ಕೆ ಒಳಗಾಗದೆ ಸಾಧಿಸಲು, ತಮ್ಮ ಪ್ರಯತ್ನದ ಕುರಿತು ಗಮನಹರಿಸಬೇಕೇ ಹೊರತು, ಅದರ ಫಲದ ಕುರಿತಲ್ಲ ಎಂದು ಶ್ವಾಸಕೋಶ ತಜ್ಞ, ರಾಜೀವ್ ಗಾಂಧಿ ಇನ್ಸ್ಟ್ಯೂಟ್ ಆಫ್ ಚೆಸ್ಟ್ ಡಿಸೀಸ್ ಮಾಜಿ ಸಂಸ್ಥಾಪಕ ನಿರ್ದೇಶಕ ಡಾ.ಶಶಿಧರ್ ಬುಗ್ಗಿ ಹೇಳಿದರು.

    ಅವರು ಕೋಣನಕುಂಟೆಯ ಪ್ರೆಸ್ಟಿಜ್ ಶ್ರೀಹರಿ ಖೊಡೆ ಸೆಂಟರ್ ಲಿ ಬನ್ನೇರಘಟ್ಟ ಬೇಸ್ ಪಿಯು ಕಾಲೇಜ್ ಟ್ರಾನ್ಸೆಂಡ್ ಬೇಸ್ ಕಾಲೇಜಿನ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ಧ, ‘ಆರಂಭ್-24’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

    ಸಾಧಿಸಲು ಪ್ರಯತ್ನ ಬೇಕು‌. ಅನೇಕರು ಪ್ರಯತ್ನ ಪಡುತ್ತಾರೆ. ಆದರೆ ಅದರಲ್ಲಿ ನಿರಂತರತೆ ಇರುವುದಿಲ್ಲ. ಹಾಗಾಗಿ ಗುರಿಯನ್ನು ಅವರು ತಲುಪುವುದಿಲ್ಲ‌ ಎಂದ ಅವರು ಸಾಧನೆಯ ಜೊತೆಗೆ ಆರೋಗ್ಯದ ಕುರಿತು ಮಕ್ಕಳು ಗಮನ ಹರಿಸಬೇಕು‌. ಆರೋಗ್ಯವಿದ್ದರೆ, ಜೀವನ. ಜೀವನವಿದ್ದರೆ ಸಾಧನೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಆರೋಗ್ಯದ ಕುರಿತು ಕಾಳಜಿ ವಹಿಸಬೇಕು ಎಂದು ನುಡಿದರು.

    ಟ್ರಾನ್ಸೆಂಡ್ ಗ್ರೂಪ್ ಆಫ್ ಇನ್ಸಿಟ್ಯೂಷನ್ ನ ಸಂಸ್ಥಾಪಕಾಧ್ಯಕ್ಷ ಸಿದ್ಧಾರ್ಥ ಕೆಟಿ ಸಾಧಿಸಲು ಇರಬೇಕಾದ ಲಕ್ಷಣಗಳನ್ನು ತಿಳಿಸಿ, ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಬೇಸ್ ಸಂಸ್ಥೆಯ ಸಿ.ಇ.ಒ ಅನಂತ‌ ಕುಲಕರ್ಣಿ ಸಭೆಯ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳ ಭವಿಷ್ಯದ ಕುರಿತು ಸಲಹೆ‌ ನೀಡಿದರು.

    ಬನ್ನೇರಘಟ್ಟ ಬೇಸ್ ಕಾಲೇಜು ಪ್ರಿನ್ಸಿಪಾಲ್ ಆರ್ ಪಿ ಉಮಾಶಂಕರ್ ಸ್ವಾಗತಿಸಿದರು‌. ಟ್ರಾನ್ಸೆಂಡ್ ಕಾಲೇಜ್ ಪ್ರಿನ್ಸಿಪಾಲ್ ರವಿಕಿರಣ್ ವಂದಿಸಿದರು. ಕಾಲೇಜು ಶೈಕ್ಷಣಿಕ ಮುಖ್ಯಸ್ಥ ಆದಿಲ್ ಖಾನ್ ಪ್ರಾಸ್ತಾವಿಕ ಭಾಷಣ ಮಾಡಿದರು‌. ಫಾಝಿಲಾ ಸುಲ್ತಾನಾ ನಿರೂಪಿಸಿದರು.

    ಸಿಇಟಿ, ಜೆಇಇ, ನೀಟ್ ಮುಂತಾದ ಪರೀಕ್ಷದಗಳಲ್ಲಿ ರ್ಯಾಂಕ್ ಪಡೆದ‌ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
    ಅದ್ಭುತ ನೃತ್ಯವನ್ನು ಪ್ರದರ್ಶಿಸಿದರು. ವಿದ್ಯಾರ್ಥಿ ಓಜಸ್ವಿ ಮತ್ತು ತಂಡ ಪ್ರಾರ್ಥನಾ ಗೀತೆಯನ್ನು ಹಾಡಿದರೆ, ಸ್ತುತಿ‌ ಮತ್ತು ತಂಡ ಸ್ವಾಗತನೃತ್ಯವನ್ನು ಪ್ರದರ್ಶಿಸಿದರು. ಈ ಶೈಕ್ಷಣಿಕ ವರ್ಷದಲ್ಲಿ ಸೇರಿದ ನವ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು. ಕಲಾನಿಧಿ ನೃತ್ಯ ಮಂದಿರ ತಂಡದಿಂದ ಅದ್ಭುತ ನೃತ್ಯಪ್ರದರ್ಶನ ನಡೆಯಿತು.