Satwadhara News

Category: State News

  • ನಟ ರಜನಿಕಾಂತ್‌ ಅವರು ಬಿಜೆಪಿಗೆ ಸೇರುತ್ತಾರೆ?

            ನಟ ರಜನಿಕಾಂತ್‌ ಅವರು ಬಿಜೆಪಿಗೆ ಸೇರುತ್ತಾರೆ, ಮೋದಿ ಅವರನ್ನು ಭೇಟಿ ಆಗುತ್ತಾರೆ ಎಂಬುದರ ಕುರಿತು ನನಗೆ ಮಾಹಿತಿ ಇಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಜನೀಕಾಂತ್ ದೊಡ್ಡ ನಟ, ಮೋದಿ ಅವರು ಬಹುದೊಡ್ಡ ನಾಯಕ, ಒಂದು ವೇಳೆ ಅವರು ಭೇಟಿ ಮಾಡಲು ಬಯಸಿದರೇ ಅದರಲ್ಲಿ ಯಾವುದೇ ತೊಂದರೆಯಿಲ್ಲ ಎಂದು ಹೇಳಿದ್ದಾರೆ.ತಮಿಳುನಾಡಿನಲ್ಲಿ ದಿನಕ್ಕೊಂದು ರಾಜಕೀಯ ವಿದ್ಯಮಾನ ನಡೆಯುತ್ತಿದೆ. ಅಲ್ಲಿನ ರಾಜಕೀಯದಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ಸಚಿವ ವೆಂಕಯ್ಯ ನಾಯ್ಡು ಹೇಳಿದರು.
             ಬಿಜೆಪಿ ತಮಿಳುನಾಡಿನಲ್ಲಿ ಹವಾ ಸೃಷ್ಟಿಸಲು ಪ್ರಯತ್ನಿಸುತ್ತಿದೆ. ಎಐಎಡಿಎಂಕೆ ಪಕ್ಷ ವಿಭಜನೆಯಲ್ಲಿ ಬಿಜೆಪಿ ಪಾತ್ರದ ಬಗ್ಗೆ  ಭಾರಿ ಚರ್ಚೆ ನಡೆದು ತಣ್ಣಗಾಗಿತ್ತು. ಈ ನಡುವೆ ಪಕ್ಷದ ಒಂದು ಬಣದ ನಾಯಕ, ಮಾಜಿ ಸಿಎಂ ಪನ್ನೀರ್ ಸೆಲ್ವಂ ಅವರು ನರೇಂದ್ರ ಮೋದಿ, ಅವರನ್ನು ಭೇಟಿ ಮಾಡಿ ಮಾತುಕತೆ  ನಡೆಸಿದ್ದು ಮುಂದಿನ ಸ್ಥಳೀಯ ಚುನಾವಣೆಯಲ್ಲಿ  ಬಿಜೆಪಿ ಜತೆ ಮಾತನಾಡಿದ್ದು ಕುತೂಹಲ ಕೆರಳಿಸಿದೆ.
  • ಆಂಬುಲೆನ್ಸ್‌ಗೆ ದಾರಿ

    ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಯಾಣಕ್ಕಾಗಿ ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಿದ್ದ ರಸ್ತೆಯಲ್ಲೇ ಆಂಬುಲೆನ್ಸ್‌ ಸಂಚರಿಸಲು ಪೊಲೀಸರು ಅನುಕೂಲ ಮಾಡಿಕೊಟ್ಟಿದ್ದಾರೆ.ಭಾನುವಾರ ಸಂಜೆ 5 ಗಂಟೆ ವೇಳೆಗೆ ಕಾರ್ಯಕ್ರಮ ಪ್ರಯುಕ್ತ ಬೇರೆ ಜಿಲ್ಲೆಗೆ ಹೋಗಿದ್ದ ಸಿದ್ದರಾಮಯ್ಯ, ಅಲ್ಲಿಂದ ಎಚ್‌ಎಎಲ್‌ ನಿಲ್ದಾಣಕ್ಕೆ ಮಧ್ಯಾಹ್ನ  ಬಂದಿಳಿದಿದ್ದರು. ತದನಂತರ ಅವರು ಕಾರಿನಲ್ಲಿ ನಿವಾಸಕ್ಕೆ ಹೊರಟಿದ್ದರು. ಆ ಕಾರಿಗೆ ದಾರಿ ಮಾಡಿಕೊಡುವಂತೆ  ಬೆಂಗಾವಲು ಪಡೆ ಸಿಬ್ಬಂದಿ ಸಂಚಾರ ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಕಾರು ಹೊರಡುತ್ತಿದ್ದಂತೆ ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲೆಲ್ಲಾ ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಅದೇ ವೇಳೆ ಹಾಸ್ಮಟ್‌ ಆಸ್ಪತ್ರೆಯ ಆಂಬುಲೆನ್ಸ್‌ ಹೋಗುತ್ತಿತ್ತು.ಅದನ್ನು ಗಮನಿಸಿದ ಸಂಚಾರ ಪೊಲೀಸರು, ಬೆಂಗಾವಲು ಪಡೆ  ಸಿಬ್ಬಂದಿಗೆ ಮಾಹಿತಿ ನೀಡಿದಾರಿ ಮಾಡಿಕೊಡುವಂತೆ ಹೇಳಿದ್ದರು. ಬಳಿಕ ಮುಖ್ಯಮಂತ್ರಿ ಅವರ ಕಾರಿನ ಜತೆಗೆ ಹಿಂದೆ–ಮುಂದೆ ಇದ್ದ ಎಲ್ಲ ವಾಹನಗಳು, ಆಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟವು. ನಿರ್ಬಂಧಿತ ರಸ್ತೆಯಲ್ಲೇ ಆಂಬುಲೆನ್ಸ್‌  ಸಂಚರಿಸಿ ನಿಗದಿತ ಸಮಯಕ್ಕೆ ಆಸ್ಪತ್ರೆ ತಲುಪಿತು.