Satwadhara News

Category: ANKOLA

ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ಕೈಗಾ ಅಣು ವಿದ್ಯುತ್ ನಿಗಮದಲ್ಲಿ ಕೆಲಸ ಕೊಡಿಸೋದಾಗಿ ನಂಬಿಸಿ ವಂಚನೆ.

    ಕೈಗಾ ಅಣು ವಿದ್ಯುತ್ ನಿಗಮದಲ್ಲಿ ಕೆಲಸ ಕೊಡಿಸೋದಾಗಿ ನಂಬಿಸಿ ವಂಚನೆ.

    ಕಾರವಾರ: ಕೈಗಾ ಅಣು ವಿದ್ಯುತ್ ನಿಗಮದಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಕೆಲವು ಅಪರಿಚಿತ ವ್ಯಕ್ತಿಗಳು ಅಮಾಯಕರಿಂದ ಹಣ ಪಡೆದು ವಂಚಿಸುತ್ತಿರುವುದು ಸಂಸ್ಥೆಯ ಗಮನಕ್ಕೆ ಬಂದಿರುತ್ತದೆ. ಕೈಗಾ ಅಣು ವಿದ್ಯುತ್ ನಿಗಮವು ಕೇಂದ್ರ ಸರ್ಕಾರದ ಸಂಸ್ಥೆಯಾಗಿದ್ದು, ಸಂಸ್ಥೆಯಲ್ಲಿ ಪ್ರಸ್ತುತ ಕೆಲವು ವಿಭಾಗದಲ್ಲಿ ಉದ್ಯೋಗ ನೇಮಕ ಕುರಿತ ಪ್ರಕ್ರಿಯೆಗಳು ನಡೆಯುತ್ತಿದ್ದು, ಎಲ್ಲಾ ಪ್ರಕ್ರಿಯೆಗಳು ಕೇಂದ್ರ ಮಾರ್ಗಸೂಚಿಯಂತೆ ಸರ್ಕಾರದ ಮತ್ತು ಸಂಸ್ಥೆಯ ಮಾರ್ಗಸೂಚಿಯಂತೆ ಅತ್ಯಂತ ಪಾರದರ್ಶಕವಾಗಿ ವಿಶೇಷ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳಡಿಯಲ್ಲಿ ಮೆರಿಟ್ ಆಧಾರದಲ್ಲಿ ನಡೆಯುತ್ತಿದ್ದು, ಈ ಬಗ್ಗೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಆದ್ದರಿಂದ ಸಾರ್ವಜನಿಕರು ಯಾವುದೇ ಅಪರಿಚಿತ ವ್ಯಕ್ತಿಗಳಿಂದ ಕೈಗಾದಲ್ಲಿ ಉದ್ಯೋಗ ಪಡೆಯಲು ಹಣ ನೀಡಿ ವಂಚನೆಗೊಳಗಾಗದೆ ಎಚ್ಚರಿಕೆಯಿಂದ ಇರುವಂತೆ ತಿಳಿಸುತ್ತಾ, ಈ ರೀತಿಯ ವಂಚನೆಗೆ ಒಳಗಾಗಿ ಹಣ ಕಳೆದುಕೊಂಡ ಅದಕ್ಕೆ ಕೈಗಾ ಸಂಸ್ಥೆ ಜವಾಬ್ದಾರಿಯಲ್ಲ ಎಂದು ಕೈಗಾದ ಸೈಟ್‌ ಡೈರೆಕ್ಟರ್ ಪ್ರಮೋದ್ ಜಿ ರಾಯಚೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ವ್ಯಕ್ತಿ ನಾಪತ್ತೆ : ದಾಖಲಾಯ್ತು ದೂರು.

    ವ್ಯಕ್ತಿ ನಾಪತ್ತೆ : ದಾಖಲಾಯ್ತು ದೂರು.

    ಕಾರವಾರ: ವಿನಾಯಕ ಆನಂದು ಜೋಗಳೇಕರ (34), ಅಂಕೋಲಾ, ತೋಡುರ ಕಾಲೋನಿ, ತೋಡುರ ಇವರು ನ.14 ರಂದು ಬೆಳಗ್ಗೆ 10.30 ಗಂಟೆಗೆ ಕಾರವಾರಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೋದವನು ಈ ವರೆಗೂ ಮನೆಗೆ ಮರಳಿ ಬಾರದೇ ಸಂಬಂಧಿಕರ ಮನೆಗೆ ಹೋಗದೇ ಎಲ್ಲಿಯೊ ಹೋಗಿ ಕಾಣೆಯಾಗಿದ್ದಾರೆ. ಈತ ಕೋಲು ಮುಖ, ಗೋಧಿ ಮೈ ಬಣ್ಣ, ಮೈಯಿಂದ ಸಧೃಡ, 5.8 ಅಡಿ ಎತ್ತರ, ಕನ್ನಡಕೊಂಕಣಿ ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ, ಕೆಂಪು ಬಣ್ಣದ ಹಾಪ್ ಶರ್ಟ್, ಕಾಕಿ ಬಣ್ಣದ ಹಾಪ್ ಪ್ಯಾಂಟ್ ಧರಿಸಿರುತ್ತಾನೆ.

    ಈ ವ್ಯಕ್ತಿಯ ಬಗ್ಗೆ ಸಾರ್ವಜನಿಕರಿಗೆ ತಿಳಿದುಬಂದಲ್ಲಿ ಕಾರವಾರ ಗ್ರಾಮೀಣ ಪೋಲಿಸ್ ಠಾಣೆದೂರವಾಣಿ ಸಂಖ್ಯೆ: 08382-222443, 9480805262 ಅಥವಾ ಉತ್ತರಕನ್ನಡ ನಿಯಂತ್ರಣ ಪೊಲೀಸ್ ಕೊಠಡಿ ದೂ. ಸಂಖ್ಯೆ: 08382-226550 ಸಂಪರ್ಕಿಸಬಹುದು ಎಂದು ಕಾರವಾರ ಗ್ರಾಮೀಣ ಪೊಲೀಸ್ ಠಾಣಾಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಅನಂತಮೂರ್ತಿ ಹೆಗಡೆಯನ್ನು ಮೊಮ್ಮಗನಂತೆ ಮುದ್ದು ಮಾಡಿ, ಆಶೀರ್ವದಿಸಿದ ಸುಕ್ರಜ್ಜಿ : ಪಾದಯಾತ್ರೆಯಲ್ಲಿ ಭಾಗಿ

    ಅನಂತಮೂರ್ತಿ ಹೆಗಡೆಯನ್ನು ಮೊಮ್ಮಗನಂತೆ ಮುದ್ದು ಮಾಡಿ, ಆಶೀರ್ವದಿಸಿದ ಸುಕ್ರಜ್ಜಿ : ಪಾದಯಾತ್ರೆಯಲ್ಲಿ ಭಾಗಿ

    ಅಂಕೋಲಾ:- ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಅಗ್ರಹಿಸಿ ಹಮ್ಮಿಕೊಂಡ ಪಾದಯಾತ್ರೆಯೂ ಇಂದು ಅಂಕೋಲಾ ನಗರವನ್ನು ತಲುಪಿದ್ದು, ಪಾದಯಾತ್ರೆಯ ರೂವಾರಿಯಾದ ಅನಂತಮೂರ್ತಿ ಹೆಗಡೆಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಜಾನಪದ ಕೋಗಿಲೆ ,ನಾಡೋಜ ಸುಕ್ರಿ ಬೊಮ್ಮ ಗೌಡ ಅವರು ಮೊಮ್ಮಗನಂತೆ ಮುದ್ದು ಮಾಡಿ ನಿನಗೆ ಜಯವಾಗಲಿ ಎಂದು ಆಶೀರ್ವದಿಸಿದ್ದಾರೆ. ಇಂದು ಶಿರಸಿಯ ಸಮಾಜ ಸೇವಕ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗೆ ಅಗ್ರಹಿಸಿ ಹಮ್ಮಿಕೊಂಡ ಪಾದಯಾತ್ರೆಯ ಆರನೇ ದಿನವಾದ ಇಂದು ಅಂಕೋಲಾ ನಗರವನ್ನು ಪ್ರವೇಶಿಸಿದ್ದು, ಪಾದಯಾತ್ರೆಗೆ ಬೆಂಬಲ ನೀಡಲು ಬಂದ ಪದ್ಮಶ್ರೀ ಪುರಸ್ಕೃತ, ಜಾನಪದ ಕೋಗಿಲೆ, ನಾಡೋಜ ಸುಕ್ರಿ ಬೊಮ್ಮ ಗೌಡ ಅವರು ಅನಂತಮೂರ್ತಿ ಅವರನ್ನು ಮೊಮ್ಮಗನಂತೆ ಮುತ್ತು ನೀಡಿ ಮುದ್ದು ಮಾಡಿ, ಅವರಿಗೆ ನಿಮ್ಮ ಈ ಹೋರಾಟ ಜಯವಾಗಲಿ, ನೀನು ಜಯಶಾಲಿಯಾಗು ಎಂದು ಹೇಳಿ ಆಶೀರ್ವದಿಸಿ ಬೆಂಬಲ ನೀಡಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು ಅನಂತಮೂರ್ತಿ ಹೆಗಡೆ ಅವರು ಶಿರಸಿಯಿಂದ ಪಾದಯಾತ್ರೆ ಮಾಡಿಕೊಂಡು ಬಂದಿದ್ದಾರೆ. ಜಿಲ್ಲೆಯಲ್ಲಿ ಕೂಡಲೇ ಆಸ್ಪತ್ರೆ ಆಗಬೇಕು, ನಾನು ಮೋದಿಯವರಿಗೆ ಅಗ್ರಹಿಸುತ್ತೇನೆ. ಜಿಲ್ಲೆಯ ನಮ್ಮ ಮಕ್ಕಳು ( ಜನರು) ಬೇಜಾರಾಗಿದ್ದಾರೆ. ಇಲ್ಲಿ ದೇವರ ಅನುಗ್ರಹದಿಂದ ಒಂದು ಆಸ್ಪತ್ರೆಯಾದರೆ ಎಲ್ಲರಿಗೂ ಅನೂಕೂಲವಾಗುತ್ತದೆ ಎಂದರು.

    ಪಾದಯಾತ್ರೆ ಸ್ಥಳಕ್ಕೆ ಆಗಮಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಜಾನಪದ ಕೋಗಿಲೆ, ನಾಡೋಜ ಸುಕ್ರಜ್ಜಿ ಅವರನ್ನು ಪಾದಯಾತ್ರೆಯ ರೂವಾರಿ ಅನಂತಮೂರ್ತಿ ಹೆಗಡೆ ನಮಸ್ಕರಿಸಿ, ಅವರನ್ನು ಸನ್ಮಾನಿಸಿದರು ನಿಮ್ಮ ಈ ಬೆಂಬಲಕ್ಕೆ ನಾನೆಂದು ಚಿರೃಣಿಯಾಗಿತುತ್ತೇನೆ. ಮೋದಿ ಅವರಂತೆ ನನಗೂ ನಿಮ್ಮ ಆಶೀರ್ವಾದ ಇರಲಿ ಎಂದು ನಮಸ್ಕರಿಸಿದರು. ಪಾದಯಾತ್ರೆಯೂ ಅಂಕೋಲಾ ಅವರ್ಸಾ ಮೂಲಕ ಕಾರವಾರ ತಾಲೂಕಿನ ಅಮದಳ್ಳಿ ತಲುಪಿ ಅಲ್ಲೆ ವಾಸ್ತವ್ಯ ಮಾಡಿದ್ದಾರೆ.

    ಅಂಕೋಲಾದಲ್ಲಿ ವಿವಿಧ ಮುಂಖಡರುಗಳ ಬೆಂಬಲ
    ಸಮಾಜ ಸೇವಕ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಿಂದ ಕಾರವಾರದವರೆಗೆ ಹಮ್ಮಿಕೊಂಡ ಪಾದಯಾತ್ರೆಯ 6 ದಿನವಾದ ಇಂದು ಅಂಕೋಲಾ ನಗರವನ್ನು ತಲುಪಿದ್ದು, ಸ್ಥಳೀಯ ಮುಖಂಡರು ಹಾಗೂ ಅನೇಕ ರಿಕ್ಷಾ ಚಾಲಕರು ಭವ್ಯ ಸ್ಥಾಗತ ನೀಡಿ ಪಾದಯಾತ್ರೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು.‌ ಅಂಕೋಲಾದ ವಕೀಲರಾದ ಉಮೇಶ ನಾಯ್ಕ, ಬಿ. ಡಿ. ನಾಯ್ಕ, ಸಮಾಜ ಸೇವಕರಾದ ವಿಜಯಕುಮಾರ ನಾಯ್ಕ, ಸುಬ್ರಮಣ್ಯ ರೇವಣಕರ್, ಪ್ರವೀಣ ನಾಯ್ಕ, ಅಟೋ ಚಾಲಕರಾದ ಬಾಷಾ ಶೇಖ್ , ಅಟೋ ಚಾಲಕರ ಜಿಲ್ಲಾ ಉಪಾಧ್ಯಕ್ಷರಾದ ವಿಶ್ವಗೌಡ, ಕರವೇ ಜನಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಉಮೇಶ್ ಹರಿಕಂತ್ರ , ಬಾವೀಕೇರಿಯ ರಾಮಕೃಷ್ಣ ನಾಯ್ಕ, ರಾಜಶೇಖರ ನಾಯಕ ಸೇರಿದಂತೆ ಇನ್ನಿತರರು ಹಾಗೂ ಊರ ನಾಗರಿಕರು ಬೆಂಬಲಿಸಿ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು.

  • ಶ್ರೀನಾಗ ಹಾಗೂ ರಜತ ನಾಯಕ ಜಿಲ್ಲಾ ಮಟ್ಟಕ್ಕೆ ಆಯ್ಕೆ.

    ಶ್ರೀನಾಗ ಹಾಗೂ ರಜತ ನಾಯಕ ಜಿಲ್ಲಾ ಮಟ್ಟಕ್ಕೆ ಆಯ್ಕೆ.

    ಕುಮಟಾ : ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಛೇರಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉತ್ತರಕನ್ನಡ, ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಕುಮಟಾ ಇವರ ಸಂಯುಕ್ತಾಶ್ರಯದಲ್ಲಿ ನಡೆದ ೨೦೨೩-೨೪ನೇ ಸಾಲಿನ ವಿಶ್ವ ಸೊಳ್ಳೆ ನಿಯಂತ್ರಣ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಂದ ಸೊಳ್ಳೆ ನಿಯಂತ್ರಣ ವಿಧಾನಗಳ ಮಾದರಿ ಪ್ರದರ್ಶನ ಸ್ಪರ್ಧೆಯಲ್ಲಿ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನ ೯ ನೇ ತರಗತಿ ವಿದ್ಯಾರ್ಥಿ ಎನ್.ವಿ ಶ್ರೀನಾಗ ಹಿರೇಗುತ್ತಿ ಹಾಗೂ ರಜತ ನಾಗರಾಜ ನಾಯಕ  ಮೊಗಟಾ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿರುತ್ತಾರೆ. 

    ಕುಮಟಾ ತಾಲೂಕಿಗೆ ಪ್ರಥಮಸ್ಥಾನ ಪಡೆದ ವಿದ್ಯಾರ್ಥಿ ಎನ್.ವಿ ಶ್ರೀನಾಗ ಹಾಗೂ ರಜತ ನಾಗರಾಜ ನಾಯಕ ಹಾಗೂ ಮಾರ್ಗದರ್ಶನ ನೀಡಿದ ಶಿಕ್ಷಕ ಮಹಾದೇವ ಬಿ ಗೌಡರವರಿಗೆ ಮಹಾತ್ಮಗಾಂಧೀ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೊನ್ನಪ್ಪ ಎನ್ ನಾಯಕ, ಉಪಾಧ್ಯಕ್ಷ ಶ್ರೀಕಾಂತ ನಾಯಕ ಕಾರ್ಯದರ್ಶಿ ಮೋಹನ ಬಿ ಕೆರೆಮನೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ ಹಾಗೂ ಶಿಕ್ಷಕವೃಂದ ಮತ್ತು ಹಿರೇಗುತ್ತಿ, ಗ್ರಾಮ ಪಂಚಾಯತ ಅಧ್ಯಕ್ಷ ಶಾಂತಾ ಎನ್ ನಾಯಕ ಹಾಗೂ ಸದಸ್ಯರು, ಆಶ್ರಯ ಪೌಂಡೇಶನ್‌ನ ರಾಜೀವ ಗಾಂವಕರ, ಸುನೀಲ್ ಪೈ ಮಾದನಗೇರಿ, ಬ್ರಹ್ಮ ಜಟಕ ಯುವಕ ಸಂಘ ಅಧ್ಯಕ್ಷ ಸಣ್ಣಪ್ಪ ಮಾರುತಿ ನಾಯಕ ಹಾಗೂ ಸದಸ್ಯರು, ಊರಿನ ನಾಗರಿಕರು ಅಭಿನಂದಿಸಿ ಮುಂದಿನ ಹಂತಕ್ಕೆ ಶುಭ ಕೋರಿದ್ದಾರೆ.

  • ಕಠಿಣ ಪರಿಶ್ರಮ ಹಾಗೂ ಕ್ರಮಬದ್ಧ ಯೋಜನೆ ಯಶಸ್ಸನ್ನು  ನೀಡುತ್ತದೆ : ರಾಮ ನಾಯಕ.

    ಕಠಿಣ ಪರಿಶ್ರಮ ಹಾಗೂ ಕ್ರಮಬದ್ಧ ಯೋಜನೆ ಯಶಸ್ಸನ್ನು  ನೀಡುತ್ತದೆ : ರಾಮ ನಾಯಕ.

    ಕುಮಟಾ : ಸವಿ ಪೌಂಡೇಶನ್ ಮೂಡಬಿದ್ರೆ ಇವರು ಉತ್ತರಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಯೋಗ, ಮೌಲ್ಯಾಧಾರಿತ ಕೃಷಿ ಹಾಗೂ ಸಾಧಕರನ್ನು ಗುರುತಿಸಿ ಸನ್ಮಾನಿಸುವ  ಕಾರ್ಯಕ್ರಮಗಳನ್ನು ಕಳೆದ ಒಂದು ವರ್ಷದಿಂದ ಹಮ್ಮಿಕೊಂಡಿದೆ. ಪ್ರಸ್ತುತ ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಸಿವಿಲ್ ಇಂಜೀನೀಯರಿಂಗ್ ಮತ್ತು ಆರ್ಕಿಟೆಕ್ಟ್  ವಿಭಾಗದಲ್ಲಿ ತಮ್ಮದೇ ಖ್ಯಾತಿ ಪಡೆದ ಆರ್ಕಿಟೆಕ್ಟ್ ರಾಮ ನಾಯಕರನ್ನು ಅವರ ವೃತ್ತಿನಿಷ್ಠೆ ಸಾಮಾಜಿಕ ಮೌಲ್ಯಗಳನ್ನು ಗುರುತಿಸಿ ಬೆಂಗಳೂರಿನ ಅವರ ಸ್ವಗ್ರಹದಲ್ಲಿ ಸನ್ಮಾನಿಸಲಾಯಿತು. 

    ಈ ಸಂದರ್ಭದಲ್ಲಿ  ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಮ ನಾಯಕರು ಕಠಿಣ ಪರಿಶ್ರಮ ಹಾಗೂ ಕ್ರಮಬದ್ಧ ಯೋಜನೆಯಿಂದ ಯಶಸ್ಸನ್ನು ಪಡೆಯಬಹುದು ಎಂದರು. ಸಿವಿಲ್ ಇಂಜೀನಿಯರಿಂಗ್ ವಿಭಾಗದಲ್ಲಿ ಜನರನ್ನು ಸಮಾಜ ಅವರ ಕಾರ್ಯದಿಂದ ಗುರುತಿಸಿದ್ದು ಸಿವಿಲ್‌ಗೆ ಉತ್ತಮ ಅವಕಾಶಗಳು ಇದೆ ಎಂದು ಹೇಳಿದರು.

    ಸವಿ ಫೌಂಡೇಶನ್ ಅಧ್ಯಕರಾದ ಡಾ. ಸಂದೀಪ ನಾಯಕ ಹಾಗೂ ಟ್ರಸ್ಟೀ ಇಂಜೀನಿಯರ್ ತೇಜಸ ನಾಯಕ, ರಾಮ ನಾಯಕರನ್ನು ಸನ್ಮಾನಿಸಿದರು. ಈ ಸಂರ್ದಧದಲ್ಲಿ ರಾಮ ನಾಯಕ ಧರ್ಮಪತ್ನಿ ಶೈಲಜಾ ನಾಯಕ, ಮಕ್ಕಳಾದ ಮಹಾನ್, ಮಯೂರ್ ಹಾಗೂ ಬಿಲ್ಡರ್ ಜಯಪ್ರಕಾಶ ನಾಯಕ ಉಪಸ್ಥಿತರಿದ್ದರು.

  • ಗೋಕರ್ಣದ ಅಭಿವೃದ್ಧಿಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಆರ್.ವಿ.ಡಿ.

    ಗೋಕರ್ಣದ ಅಭಿವೃದ್ಧಿಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಆರ್.ವಿ.ಡಿ.

    ಕುಮಟಾ : ಹಿರಿಯ ರಾಜಕಾರಣಿ ಹಳಿಯಾಳ ಶಾಸಕ ಆರ್.ವಿ ದೇಶಪಾಂಡೆ ಗೋಕರ್ಣಕ್ಕೆ‌ ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ದಿ. ಗೋದಾವರಿ ಹೊಟೇಲ್ ನಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗೋಕರ್ಣದ ಅಭಿವೃದ್ಧಿ, ರಸ್ತೆ, ಒಳಚರಂಡಿ ಹಾಗೂ ಮಾದನಗೇರಿಯಲ್ಲಿ ಮುಖ್ಯ ದ್ವಾರ ನಿರ್ಮಾಣದ ಕುರಿತಾಗಿ ಪತ್ರಕರ್ತರು ಅವರನ್ನು ಪ್ರಶ್ನಿಸಿದರು.

    ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಆರ್.ವಿ ದೇಶಪಾಂಡೆ ಅವರು ನಾನು ಸಚಿವನಾಗಿದ್ದ ಕಾಲದಲ್ಲಿ ಗೋಕರ್ಣದ ಅಭಿವೃದ್ಧಿಗೆ ಸಾಕಷ್ಟು ಶ್ರಮ ವಹಿಸಿದ್ದೇನೆ, ಅನುದಾನವನ್ನು ಬಿಡುಗಡೆ ಮಾಡಿದ್ದೇನೆ. ಇದೀಗ ಗೋಕರ್ಣದಲ್ಲಿ ಆಗಬೇಕಾಗಿರುವ ಅಭಿವೃದ್ಧಿಗಳ ಕಾರ್ಯದ ಕುರಿತಾಗಿ ಸೂಕ್ತ ವಿವರಗಳೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸಿದರೆ, ಆ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಕಾರ್ಯ ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್, ಕಾಂಗ್ರೆಸ್ ಪ್ರಮುಖರುಗಳಾದ ಪ್ರದೀಪ ನಾಯಕ, ರಾಘವೇಂದ್ರ ನಾಯಕ, ಹೊನ್ನಪ್ಪ ನಾಯಕ, ರತ್ನಾಕರ ನಾಯ್ಕ, ಶಿವಾನಂದ ನಾಯಕ, ನಾಗರಾಜ ನಾಯ್ಕ, ತೇಜಸ್ವಿ ನಾಯ್ಕ, ಅರುಣ ಗೌಡ, ಮನೋಹರ ಗೌಡ,ಇಬ್ರಾಹಿಂ ಸಾಬ ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

  • ಬಲವಂತವಾಗಿ ಯುವತಿಯನ್ನು ಕರೆತಂದು ವೇಶ್ಯಾವಾಟಿಕೆಗೆ ಯತ್ನ – ಪೊಲೀಸ್ ದಾಳಿ : ಯುವತಿಯ ರಕ್ಷಣೆ – ಹೊನ್ನಾವರ ಮೂಲದ ಓರ್ವ ಸೇರಿ ಇಬ್ಬರು ಅರೆಸ್ಟ್.

    ಬಲವಂತವಾಗಿ ಯುವತಿಯನ್ನು ಕರೆತಂದು ವೇಶ್ಯಾವಾಟಿಕೆಗೆ ಯತ್ನ – ಪೊಲೀಸ್ ದಾಳಿ : ಯುವತಿಯ ರಕ್ಷಣೆ – ಹೊನ್ನಾವರ ಮೂಲದ ಓರ್ವ ಸೇರಿ ಇಬ್ಬರು ಅರೆಸ್ಟ್.

    ಅಂಕೋಲಾ : ವೇಶ್ಯಾವಾಟಿಕೆ ನಡೆಸುವ ಉದ್ದೇಶದಿಂದ ಬೆಂಗಳೂರು ಮೂಲಕ 26 ವರ್ಷದ ಮಹಿಳೆಯನ್ನು ತಾವು ವಾಸವಾಗಿರುವ ಬಾಡಿಗೆ ಮನೆಗೆ ಕರೆಯಿಸಿಕೊಂಡು ಹೆಚ್ಚಿನ ಹಣದ ಆಸೆ ತೋರಿಸಿ, ಅವಳ ಇಚ್ಚೆಗೆ ವಿರುದ್ಧವಾಗಿ ವೇಶ್ಯಾವಾಟಿಕೆ ದಂಧೆಗೆ ತೊಡಗಿಸಲು ಒಪ್ಪಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಮಹಿಳೆಯನ್ನು ರಕ್ಷಿಸಿ ಇಬ್ಬರು ಗಿರಾಕಿಗಳನ್ನು ರಕ್ಷಿಸಿದ ಘಟನೆ ವರದಿಯಾಗಿದೆ.

    ತಾಲೂಕಿನ ಬೇಲೆಕೇರಿಯಲ್ಲಿ ಈ ವೇಶ್ಯಾವಾಟಿಕೆ ನಡೆಯುತ್ತಿತ್ತೆಂಬ ಆರೋಪ ಕೇಳಿಬಂದಿದ್ದು, ಈ ಆರೋಪದಡಿ, ಬಳ್ಳಾರಿ ರಸ್ತೆಯ ಗುರುಬವನ ಆಶ್ರಯ ಕಾಲನಿ ಹಿಂದುಗಡೆಯ ಓರ್ವ ಮಹಿಳೆ ಹಾಗೂ ಮತ್ತು ಹೊನ್ನಾವರ ಮೂಲದ ಅಟೋಚಾಲಕ ನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

    ಇವರು ತಮ್ಮ ಲಾಭಕ್ಕೋಸ್ಕರ ಬೆಲೇಕೇರಿಯ ಬಾಡಿಗೆ ಮನೆಗೆ ಯುವತಿಯನ್ನು ಕರೆಸಿ ಬಲವಂತವಾಗಿ ವೇಶ್ಯಾವಾಟಿಕೆಗೆ ತೊಡಗಿಸುತ್ತಿದ್ದರು ಎನ್ನಲಾಗಿದೆ. ಅಂಕೋಲಾ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಸಂತೋಷ ಶೆಟ್ಟಿ ರವರ ತಂಡ ದಾಳಿ ನಡೆಸಿ ಪ್ರಕರಣ ಬೇಧಿಸಿದ್ದಾರೆ.

    ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಮುಂದುವರಿಸಿದ್ದಾರೆ. ಬೆಂಗಳೂರು ಮೂಲದ ಸಂತ್ರಸ್ತ ಯುವತಿಯನ್ನು ರಕ್ಷಿಸಿದ್ದಾರೆ.

  • ಕಾಡುಹಂದಿ ಬೇಟೆಯಾಡಿದ ಆರೋಪಿ ಅರೆಸ್ಟ್

    ಕಾಡುಹಂದಿ ಬೇಟೆಯಾಡಿದ ಆರೋಪಿ ಅರೆಸ್ಟ್

    ಅಂಕೋಲಾ: ಕಾಡುಹಂದಿಯನ್ನು ಬೇಟೆಯಾಡಿ ಕೆಲ ಭಾಗಗಳನ್ನು ಹುದುಗಿಟ್ಟ ಆರೋಪದಡಿ ಅರಣ್ಯ ಇಲಾಖೆ ಅಧಿಕಾರಿಗಳು ಓರ್ವನನ್ನು ಹೆಬ್ಬುಳದಲ್ಲಿ ಬಂಧಿಸಿದ್ದಾರೆ. ಹೆಬ್ಬುಳದ ರಾಜೇಶ ಪಡ್ತಿ (29) ಬಂಧಿತ ಆರೋಪಿ ಮತ್ತೊಬ್ಬ ಆರೋಪಿ ಹೆಬ್ಬುಳದ ಸಂತೋಷ ಪಡ್ತಿ ಪರಾರಿಯಾಗಿದ್ದಾನೆ. ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ ಕೆ.ಸಿ. ಮಾರ್ಗದರ್ಶನದಲ್ಲಿ ಅಂಕೋಲಾ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣಯ್ಯ ಗೌಡ ಮತ್ತು ಮಾಸ್ತಿಕಟ್ಟಾ ವಲಯ ಅರಣ್ಯಾಧಿಕಾರಿ ವಿನಾಯಕ ಪಿ. ನಾಯ್ಕ, ಹೆಬ್ಬುಳ ವಲಯ ಅರಣ್ಯಾಧಿಕಾರಿ ಅರುಣ ನಡಕಟ್ಟಿನ, ಹೆಬ್ಬುಳ ಅರಣ್ಯ ಗಸ್ತು ಪಾಲಕ ಚನ್ನಪ್ಪ ಲಮಾಣಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಕಾಡು ಹಂದಿಯನ್ನು ಬೇಟೆಯಾಡಿದವರಲ್ಲಿ ಒಬ್ಬನನ್ನು ಬಂಧಿಸಿದ್ದಾರೆ.

    ಅಲ್ಲದೆ, ಪಕ್ಕದ ತೋಟದಲ್ಲಿ ಹುದುಗಿಟ್ಟಿದ್ದ ಕಾಡು ಹಂದಿಯ ತಲೆ, ಕರುಳು ಮತ್ತು ಕಾಲುಗಳನ್ನು ವಶಕ್ಕೆ ಪಡೆದು ಮಹಜರು ನಡೆಸಿದ್ದಾರೆ. ಆರೋಪಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಪ್ರಕಾರ ಪ್ರಕರಣ ದಾಖಲಾಗಿದೆ.

  • ಪ್ರಣವಾನಂದ ಸ್ವಾಮೀಜಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಾವು ಸಹಿಸುವುದಿಲ್ಲ: ಅಂತಹ ಸಂದರ್ಭ ಬಂದರೆ ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ – ರಾಜೇಂದ್ರ

    ಪ್ರಣವಾನಂದ ಸ್ವಾಮೀಜಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಾವು ಸಹಿಸುವುದಿಲ್ಲ: ಅಂತಹ ಸಂದರ್ಭ ಬಂದರೆ ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ – ರಾಜೇಂದ್ರ

    ಅಂಕೋಲಾ: ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಶ್ರೀನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಾವು ಸಹಿಸುವುದಿಲ್ಲ. ಅಂತಹ ಸಂದರ್ಭ ಬಂದರೆ ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ವಿ.ನಾಯ್ಕ ಎಚ್ಚರಿಕೆ ನೀಡಿದರು.

    ಬೆಂಗಳೂರಿನಲ್ಲಿ ಪೂರ್ವಭಾವಿ ಸಭೆಯ ನಂತರ ಪ್ರೀಡಂ ಪಾರ್ಕ್ನಲ್ಲಿ ಪಂಜಿನ ಮೆರವಣಿಗೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪ್ರಣವಾನಂದ ಸ್ವಾಮೀಜಿಯವರು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆ ಮಾಡುತ್ತಿದ್ದು, ಮಂಗಳೂರಿನಿ0ದ ಬೆಂಗಳೂರಿಗೆ 750 ಕಿ.ಮೀ. ನಡೆದು ಇತಿಹಾಸ ನಿರ್ಮಿಸಿದ್ದಾರೆ. ಇದರ ಪರಿಣಾಮವಾಗಿ ನಿಗಮ ಮಂಡಳಿ ಘೋಷಣೆಯಾಯಿತು. ಆದರೆ ಈಗಿನ ಸರಕಾರ ನಿಗಮ ಮಂಡಳಿಗೆ ಹಣ ನೀಡಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದರೆ ನಮ್ಮ ಸಮುದಾಯದವರನ್ನೇ ಎತ್ತಿ ಕಟ್ಟುವ ಪ್ರಯತ್ನ ನಡೆಯುತ್ತಿದೆ. ನಾವು ಎಂತಹ ಪರಿಸ್ಥಿತಿ ಬಂದರೂ ಕೂಡ ನಾವು ಸ್ವಾಮೀಜಿಗಳ ಪರವಾಗಿ ಹೋರಾಟಕ್ಕೆ ಸದಾ ಸಿದ್ಧರಿದ್ದೇವೆ ಎಂದರು.

    ಈ ಸಂದರ್ಭದಲ್ಲಿ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಷ್ಟ್ರೀಯ ಕಾರ್ಯದರ್ಶಿ ಡಾ. ಮಂಚೇಗೌಡ ಬಿ.ಎಚ್., ರಾಜ್ಯಾಧ್ಯಕ್ಷ ಸಂತೋಷಕುಮಾರ, ಗೌರವಾಧ್ಯಕ್ಷ ಸತೀಶ ಗುತ್ತೆದಾರ, ಹೆಚ್.ವೈ.ಆನಂದ, ರಾಜ್ಯ ಕಾರ್ಯದರ್ಶಿ ಜಿತೇಂದ್ರ ಸುವರ್ಣ, ವೆಂಕಟೇಶ ಗುಂಡನೂರು, ಮಹಾದೇವಪ್ಪ ಮೈಸೂರು, ವಸಂತಕುಮಾರ, ಉ.ಕ. ಜಿಲ್ಲಾ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಗೌರವಾಧ್ಯಕ್ಷ ಡಾ.ನಾಗೇಶ ನಾಯ್ಕ, ಅಂಕೋಲಾ ತಾಲೂಕು ಅಧ್ಯಕ್ಷ ದಾಮೋದರ ಜಿ. ನಾಯ್ಕ, ಉಪಾಧ್ಯಕ್ಷ ರಮೇಶ ಎನ್. ನಾಯ್ಕ, ಖಜಾಂಚಿ ಶ್ರೀಪಾದ ನಾಯ್ಕ, ಪ್ರಧಾನ ಕಾರ್ಯದರ್ಶಿ ನಾಗರಾಜ ಮಂಜಗುಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

  • ಮಂಗಳಮುಖಿಯಂತೆ ವೇಷತೊಟ್ಟು ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕ : ಅಸಲಿ ಮಂಗಳಮುಖಿಯರಿಂದ ಧರ್ಮದೇಟು

    ಮಂಗಳಮುಖಿಯಂತೆ ವೇಷತೊಟ್ಟು ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕ : ಅಸಲಿ ಮಂಗಳಮುಖಿಯರಿಂದ ಧರ್ಮದೇಟು

    ಅಂಕೋಲಾ: ಯುವತಿಯಂತೆ ವೇಷ ಹಾಕಿಕೊಂಡು, ಜನರ ಮೈ ಮುಟ್ಟಿ, ಅಸಭ್ಯವಾಗಿ ವರ್ತಿಸಿ ಹಣ ಕೇಳುತ್ತಿದ್ದ ವ್ಯಕ್ತಿಯನ್ನು ಅಸಲಿ ಮಂಗಳಮುಖಿಯರು ಹಿಡಿದು ಬಟ್ಟೆ ಬಿಚ್ಚಿಸಿ ಧರ್ಮದೇಟು ನೀಡಿದ ಘಟನೆ ಅಂಕೋಲಾದಲ್ಲಿ ನಡೆದಿದೆ.

    ಕಾರವಾರ ಹಾಗೂ ಅಂಕೋಲಾ ಪಟ್ಟಣದಲ್ಲಿ ವ್ಯಕ್ತಿ ಮಂಗಳಮುಖೀ ವೇಷ ಧರಿಸಿ ಭಿಕ್ಷೆ ಬೇಡುತ್ತಾ ಹಣ ವಸೂಲಿ ಮಾಡುತ್ತಿದ್ದ. ಈ ವಿಷಯವನ್ನು ಅಸಲಿ ಮಂಗಳಮುಖಿಯರ ಅಂತರಂಗ ಸಂಘಟನೆ ಸದಸ್ಯೆ ಆಯಿಷಾ ಹೊನ್ನಾವರ ಅವರ ಗಮನಕ್ಕೆ ಸಾರ್ವಜನಿಕರು ತಂದಿದ್ದರು.

    ಕೂಡಲೇ ಅಂಕೋಲಾ ಹಾಗೂ ಕಾರವಾರದಲ್ಲಿ ಕಾರ್ಯಾಚರಣೆಗೆ ಇಳಿದ ಮಂಗಳಮುಖಿಯರಾದ ಸಂಧ್ಯಾ ಉಡುಪಿ, ಉ.ಕ. ಅಂತರಂಗ ಸಂಘಟನೆ ಉಪಾಧ್ಯಕ್ಷೆ ಆಯಿಷಾ ಹೊನ್ನಾವರ, ಸುಹಾನಾ ಹಾಗೂ ಪಾರ್ವತಿ ಅವರು ಮಂಗಳಮುಖಿ ವೇಷದಲ್ಲಿದ್ದ ಪುರುಷನನ್ನು ಹಿಡಿದಿದ್ದಾರೆ.