ಕಾರವಾರ : ಅನಂತಮೂರ್ತಿ ಹೆಗಡೆ ಮುಂದಾಳತ್ವದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಸ್ಥಾಪನೆಗಾಗಿ ನಾಳೆ ನವೆಂಬರ್ 02 ರಿಂದ 9ರ ವರೆಗೆ ಶಿರಸಿಯಿಂದ ಕಾರವಾರದ ತನಕ ನಡೆಯಲಿರವ ಪಾದಯಾತ್ರೆಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿರುವ ಕಾಶಿನಾಥ ಮೂಡಿ ಅವರು ಚಾಲನೆ ನೀಡಲಿದ್ದಾರೆ.
ಅನಂತಮೂರ್ತಿ ಹೆಗಡೆ ಅವರ ಮುಂದಾಳತ್ವದಲ್ಲಿ ಈ ಪಾದಯಾತ್ರೆ ಆರಂಭವಾಗಲಿದೆ. ಮಲನಾಡಿನ ಹೆಬ್ಬಾಗಿಲು ಶಿರಸಿಯಲ್ಲಿ ಪಾದಯಾತ್ರೆಗೆ ಚಾಲನೆ ಸಿಗಲಿದ್ದು, ಶಿರಸಿಯಿಂದ ಕುಮಟಾ ತಲುಪಲಿದ್ದು, ನಂತರದಲ್ಲಿ ಕುಮಟಾದಿಂದ ದೀವಗಿ, ಮಿರ್ಜಾನ, ಬರ್ಗಿ, ಹಿರೇಗುತ್ತಿ, ಮಾದನಗೇರಿ ಮಾರ್ಗವಾಗಿ ಪಾದಯಾತ್ರೆ ಕಾರವಾರ ತಲುಪಲಿದೆ.
ಪಾದಯಾತ್ರೆ ಉದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಜಿಲ್ಲೆಯ ಜ್ವಲಂತ ಸಮಸ್ಯೆಯಾಗಿರುವ ಮೆಡಿಕಲ್ ಆಸ್ಪತ್ರೆ ಕುರಿತಾಗಿ ಪಾದಯಾತ್ರೆ ಉದ್ದಕ್ಕೂ ಹೋರಾಟಗಾರು, ನ್ಯಾಯವಾದಿಗಳು, ಪತ್ರಕರ್ತರು,ರಾಜಕೀಯ ಪಕ್ಷದ ಮುಖಂಡರು ಹೆಜ್ಜೆ ಹಾಕಲಿದ್ದು,ಮೆಡಿಕಲ್ ಕಾಲೇಜು ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕುರಿತಾಗಿ ಸರಕಾರದ ಗಮನ ಸೆಳೆಯಲಿದ್ದಾರೆ.
ಕುಮಟಾ-ಶಿರಸಿ ಮಾರ್ಗದಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಎಳು ತಿಂಗಳ ಕಾಲ ಬಂದ್ ಮಾಡುವಂತೆ ಜಿಲ್ಲಾದಿಕಾರಿಗಳು ನೀಡಿದ ಆದೇಶವನ್ನು ಸಚಿವ ಮಂಕಾಳ ವೈದ್ಯ ಅವರು ಸೂಚನೆ ನೀಡಿದ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಆದೇಶ ಹಿಂದಕ್ಕೆ ಪಡೆದಿದ್ದಾರೆ. ಮತ್ತು ಸೇತುವೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಬಂದ್ ಮಾಡಲಾಗುವದೆಂದು ತಿಳಿಸಿದ್ದಾರೆ. ಇದರೊಂದಿಗೆ ನ,೧ ರಿಂದ ಘಟ್ಟದ ಕೆಳಗೆ ಬಸ್ ಸೇರಿದಂತೆ ಯಾವುದೇ ವಾಹನಗಳ ಸಂಚಾರವಿಲ್ಲವೆಂದು ತಲೆಕೆಡಿಸಿಕೊಂಡಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಕಾರವಾರ : ತಾಲೂಕಿನ ಹೈಚರ್ಚ ರಸ್ತೆಯ ಡಾಲ್ಪಿನ್ ಹೋಟಲ್ ಬಳಿ ಎರಡು ಗುಂಪುಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಗಲಾಟೆಯಲ್ಲಿ ನಡುರಸ್ತೆಯಲ್ಲೆ ಯುವಕನಿಂದ ಇಬ್ಬರಿಗೆ ಚಾಕು ಇರಿತವಾದ ಘಟನೆ ನಡೆದಿದೆ. ಕಾರವಾರದ ಕಳಸವಾಡ ಹಾಗೂ ಶಿರವಾಡದ ಯುವಕರ ಭಾಗಿಯಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಯುವಕನೋರ್ವ ಇಬ್ಬರಿಗೆ ಚಾಕು ಇರಿದಿದ್ದು ಪೊಲೀಸರು ಸ್ಥಳಕ್ಕೆ ಬರುವ ವೇಳೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಚಾಕು ಇರಿತಕ್ಕೊಳಗಾದ ಇಬ್ಬರು ಯುವಕರನ್ನು ಕಾರವಾರದ ಸರ್ಕಾರಿ ಆಸ್ಪತ್ರೆಗೆ ಪೊಲೀಸರು ದಾಖಲು ಮಾಡಿದ್ದು ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವ ಕಾರಣಕ್ಕೆ ಈ ಘಟನೆ ಸಂಭವಿಸಿದೆ ಎನ್ನುವುದು ಪೊಲೀಸ್ ತನಿಖೆಯ ನಂತರ ತಿಳಿದು ಬರಬೇಕಿದೆ.
ಕಾರವಾರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಕಾರ್ಯ ಮಾಡಿದ್ದರು ಎನ್ನುವ ಕುರಿತಾಗಿ ಅಭ್ಯರ್ಥಿಗಳ ದೂರಿನನ್ವಯ ಪಕ್ಷದ ಶಿಸ್ತು ಸಮಿತಿ ಹಲವರನ್ನು ಅವರ ಪದಾಧಿಕಾರಿ ಜವಬ್ದಾರಿಯಿಂದ ಮುಕ್ತಿಗೊಳಿಸಿ ಕ್ರಮ ಕೈಗೊಂಡಿತ್ತು. ಆದರೇ ಇದೀಗ ರಾಜ್ಯ ಸಮಿತಿ ನಿರ್ದೇಶನದ ಮೇಲೆ ಮರು ನೇಮಕವನ್ನು ಉತ್ತರ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕರವರು ಯಲ್ಲಾಪುರ ಹಾಗೂ ಭಟ್ಕಳ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳನ್ನು ಮರು ನೇಮಕ ಮಾಡಿ ಆದೇಶ ಹೊರಡಿಸುವ ಮೂಲಕ ಬಿಜೆಪಿಯಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರುವ ವಿಷಯ ಮುನ್ನಲೆಯಲ್ಲೇ ಇದೇ .ಈ ಮಧ್ಯೆ ಪಕ್ಷದವರೇ ತನ್ನ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಕೆಲಸ ಮಾಡಿದ್ದು ಇದರಿಂದಾಗಿ ಹೆಚ್ಚು ಮತದಲ್ಲಿ ಗೆಲ್ಲಬೇಕಾದ ತಾನು ಅಲ್ಪ ಮತದಲ್ಲಿ ಗೆಲ್ಲುವಂತಾಯ್ತು ಹೀಗಾಗಿ ತನಗೆ ದ್ರೋಹ ಮಾಡಿದ ಪಕ್ಷದ ಹಲವು ವ್ಯಕ್ತಿಗಳ ಮೇಲೆ ಮುನಿಸಿಕೊಂಡು ಹೈಕಮಾಂಡ್ ಗೆ ಅವರು ದೂರು ನೀಡಿದ್ದರು. ಇದರ ಜೊತೆ ಸೋತ ಎಲ್ಲಾ ಬಿಜೆಪಿ ಅಭ್ಯರ್ಥಿಗಳು ಸಹ ದೂರು ನೀಡಿದ್ದರು.
ಯಲ್ಲಾಪುರದಲ್ಲಿ ಮರು ನೇಮಕ ಗೊಂಡವರು ಹಾಲಿ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ಇದ್ದವರಾದರೇ ಭಟ್ಕಳದಲ್ಲೂ ಸಹ ಸುನೀಲ್ ನಾಯ್ಕರನ್ನು ವಿರೋಧಿಸುವ ಹಾಗೂ ಸಂಸದ ಅನಂತಕುಮಾರ್ ಹೆಗಡೆ ಬೆಂಬಲಿಗರಾಗಿದ್ದಾರೆ. ಇನ್ನು ಕೇವಲ ಯಲ್ಲಾಪುರ ಮತ್ತು ಭಟ್ಕಳಕ್ಕೆ ಮಾತ್ರ ಸೀಮಿತವಾಗಿ ಮರು ನೇಮಕ ಆಗಿದೆ.
ಮರು ನೇಮಕ ಆದವರು ಇವರು.
ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ,
1) ಶ್ರೀಮತಿ ಕಲ್ಪನಾ ಗಜಾನನ ನಾಯ್ಕ (ಜಿಲ್ಲಾ ಉಪಾಧ್ಯಕ್ಷರು) 2) ಬಾಬು ಬಾಂದೇಕರ (ಶಕ್ತಿಕೇಂದ್ರ ಪ್ರಮುಖರು ಸಬಗೇರಿ) 3) ಶ್ರೀ ಕೆ ಟಿ ಹೆಗಡೆ (ತಾಲೂಕಾ ಮಾಧ್ಯಮ ಪ್ರಕೋಷ್ಠದ ಸಂಚಾಲಕರು) 4) ಶ್ರೀ ವಿಠಲ ಜಾನು ಪಾಂಡ್ರಮಿಶ (ತಾಲೂಕಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ) 5) ಶ್ರೀ ಗಣಪತಿ ಆರ್ ಗಾಂವರ್, ಮಾನಿಗದ್ದೆ (ಜಿಲ್ಲಾ ವಿಶೇಷ ಆಮಂತ್ರಿತರು)
ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ,
1) ಶ್ರೀ ರವಿ ನಾಯ್ಕ (ಅಧ್ಯಕ್ಷರು ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾ) 2) ಶ್ರೀ ಸುರೇಶ ತಿಮ್ಮಪ್ಪ ನಾಯ್ಕ (ಸಂಚಾಲಕರು ಜಿಲ್ಲಾ ಕಾನೂನು ಪ್ರಕೋಷ್ಠ) 3) ಶ್ರೀ ವಿಷ್ಣುಮೂರ್ತಿ ಹೆಗಡೆ (ಪ್ರ. ಕಾರ್ಯದರ್ಶಿ ಜಿಲ್ಲಾ ರೈತ ಮೋರ್ಚಾ) 4) ಶ್ರೀ ಮುಕುಂದ ಮಂಜುನಾಥ ನಾಯ್ಕ (ಸಂಚಾಲಕರು ಜಿಲ್ಲಾ ಕಾರ್ಮಿಕ ಪ್ರಕೋಷ್ಠ) 5) ಶ್ರೀ ಈಶ್ವರ ನಾರಾಯಣ ನಾಯ್ಕ (ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾ ಪ್ರಭಾರಿ)
ಕಾರವಾರ : ಸಾಗರಮಾಲಾ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ- ಕುಮಟಾ ಭಾಗದ ರಾಷ್ಟ್ರೀಯ ಹೆದ್ದಾರಿ 766(E) ಅಗಲೀಕರಣ ಕಾಮಗಾರಿಯನ್ನು ಶೀಘ್ರ ಮುಗಿಸುವ ಹಿನ್ನಲೆಯಲ್ಲಿ ನವೆಂಬರ್ 1 ರಿಂದ ಮೇ 31ವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗುವುದು ಎಂದು ಶಿರಸಿಯ ಸಹಾಯಕ ಆಯುಕ್ತ ಆರ್.ದೇವರಾಜ ಹೇಳಿದರು.
ಇಂದು ಮಾಧ್ಯಮಗಳೊಂದಿಗೆ ಶಿರಸಿ ಯಲ್ಲಿ ಮಾತನಾಡಿದ ಅವರು ಹೆದ್ದಾರಿ ಅಗಲೀಕರಣಕ್ಕೆ ಆರ್.ಎನ್.ಎಸ್.ಕಂಪನಿಗೆ ಗುತ್ತಿಗೆ ನೀಡಲಾಗಿದೆ. 2020 ರಲ್ಲೇ ಕಾಮಗಾರಿ ನಡೆಯುವ ಸ್ಥಳದಲ್ಲಿ ವಾಹನ ನಿರ್ಬಂಧಕ್ಕೆ ಅಂದಿನ ಜಿಲ್ಲಾಧಿಕಾರಿ ಆದೇಶ ನೀಡಿದ್ದರು.ಇದೀಗ ಹೆದ್ದಾರಿ ಪ್ರಾಧಿಕಾರವು ಸಹ ಸಂಚಾರ ದಟ್ಟಣೆ ಕಡಿಮೆ ಮಾಡಿ ಕಾಮಗಾರಿ ಮುಗಿಸಲು ವಾಹನ ಸಂಚಾರ ನಿರ್ಬಂಧಿಸುವಂತೆ ಕೋರಿದೆ.ಈಗಾಗಲೇ ಅಗಲೀಕರಣದ 33ಕಿಲೋಮೀಟರ್ ವ್ಯಾಪ್ತಿಯಲ್ಲಿ 26 ಕಿಲೋಮೀಟರ್ ವರೆಗೂ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ವಾಹನಗಳಿಗೆ ನಿರ್ಬಂಧಿಸುತಿದ್ದೇವೆ ಎಂದಿದ್ದಾರೆ.
ಇನ್ನು ವಾಹನ ಸವಾರರಿಗೆ ಬದಲಿ ವ್ಯವಸ್ಥೆ ಕಲ್ಪಿಸಿದ್ದು ಕುಮಟಾ-ದೊಡ್ಮನೆ-ಸಿದ್ದಾಪುರ-ಶಿರಸಿ ಮಾರ್ಗದಲ್ಲಿ ಲಘು ಗಾತ್ರದ ವಾಹನಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಹೊನ್ನಾವರ-ಮಾವಿನಗುಂಡಿ, ಸಿದ್ದಾಪುರ, ಶಿರಸಿ ಮಾರ್ಗದಲ್ಲಿ ಎಲ್ಲ ತರದ ವಾಹನಗಳಿಗೆ ಅವಕಾಶ ಮಾಡಿಕೊಟ್ಟಿದ್ದು ಶಿರಸಿ-ಯಾಣ-ವಡ್ಡಿ-ಕುಮಟಾ ಮಾರ್ಗದಲ್ಲಿ ಲಘು ಗಾತ್ರದ ವಾಹನಗಳಿಗೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ ,ಶಿರಸಿ ಯಿಂದ ಯಲ್ಲಾಪುರ ಮಾರ್ಗವಾಗಿ ಅಂಕೋಲಾ ಮಾರ್ಗದಲ್ಲಿ ಎಲ್ಲ ತರದ ಭಾರಿ ವಾಹನಗಳ ಸಹಿತ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ .ಆದ್ರೆ ಘಟ್ಟ ಭಾಗದ ಯಾಣ ಮತ್ತು ದೊಡ್ಮನೆ ಮಾರ್ಗದಲ್ಲಿ ಲಘು ವಾಹನಕ್ಕೆ ಮಾತ್ರ ಅವಕಾಶ ನೀಡಿದೆ ಎಂದು ಶಿರಸಿಯ ಸಹಾಯಕ ಆಯುಕ್ತ ಆರ್.ದೇವರಾಜ್ ಮಾಹಿತಿ ನೀಡಿದರು.
1ಕುಮಟಾ ಮಾರ್ಗದಿಂದ ದೊಡ್ಮನೆ ಘಟ್ಟ ಭಾಗದಿಂದ ಸಿದ್ದಾಪುರ ಮಾರ್ಗವಾಗಿ ಶಿರಸಿ ಮಾರ್ಗದಲ್ಲಿ ಲಘು ಗಾತ್ರದ ವಾಹನಗಳಿಗೆ ಅವಕಾಶ.
ಹೊನ್ನಾವರ ಮೂಲಕ ಮಾವಿನಗುಂಡಿ ಘಟ್ಟ ಭಾಗದಿಂದ ಸಿದ್ದಾಪುರ ಮಾರ್ಗವಾಗಿ ಶಿರಸಿ ಮಾರ್ಗದಲ್ಲಿ ಎಲ್ಲಾ ತರದ ವಾಹನಗಳಿಗೆ ಅವಕಾಶ.
ಶಿರಸಿ ಮಾರ್ಗವಾಗಿ ಯಾಣ ದಿಂದ ವಡ್ಡಿ ಮಾರ್ಗವಾಗಿ ಕುಮಟಾ ಕ್ಕೆ ಸೇರುವ ಮಾರ್ಗದಲ್ಲಿ ಲಘು ಗಾತ್ರದ ವಾಹನಗಳಿಗೆ ಮಾತ್ರ ಅವಕಾಶ.
ಶಿರಸಿ ಯಿಂದ ಯಲ್ಲಾಪುರ ಮಾರ್ಗವಾಗಿ ಅಂಕೋಲಾ ಮಾರ್ಗದಲ್ಲಿ ಎಲ್ಲ ತರದ ವಾಹನಗಳ ಸಂಚಾರಕ್ಕೆ ಅವಕಾಶ.
ಯಾಣ ಮತ್ತು ದೊಡ್ಮನೆ ಮಾರ್ಗದಲ್ಲಿ ಲಘು ವಾಹನಕ್ಕೆ ಮಾತ್ರ ಅವಕಾಶ
ಕಾರವಾರ : ಗಾಂಜಾ ಸಾಗಾಟ ಪ್ರಕರಣದಲ್ಲಿ ಭಾಗಿಯಾಗಿ ಕಳೆದ 8 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿ ಕೊಂಡಿದ್ದ ಆರೋಪಿಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸದಾಶಿವಗಡ ನಿವಾಸಿ ಪ್ರಶಾಂತ ನಾಯರ್ ಬಂಧಿತ ಆರೋಪಿ.
ಈತನ ಮೇಲೆ ಗಾಂಜಾ ಸಾಗಾಟಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ 2013ರಲ್ಲಿ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣದಲ್ಲಿ ಬಂಧನದ ವಾರೆಂಟ್ ಕೂಡ ಜಾರಿಯಾಗಿತ್ತು. ಈತ ನ್ಯಾಯಾಲಯಕ್ಕೆ ಹಾಜರಾಗದೇ ಪೊಲೀಸರಿಗೂ ಸಿಗದೇ ತಪ್ಪಿಸಿಕೊಂಡು ಓಡಾಡಿಕೊಂಡಿದ್ದ ಎನ್ನಲಾಗಿದೆ.
ಆರೋಪಿಯನ್ನು ಸದಾಶಿವಗಡದ ರಾಜಕೇನಿಭಾಗದಲ್ಲಿ ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಡಿವೈಎಸ್‌ಪಿ ವೆಲೆಂಟೈನ್ ಡಿಸೋಜಾ ನಿರ್ದೇಶನದಂತೆ ನಗರ ಠಾಣೆ ಪೊಲೀಸ್ ನಿರೀಕ್ಷಕ ರಮೇಶ್ ಹೂಗಾರ್ ಮಾರ್ಗದರ್ಶನದಲ್ಲಿ ಪಿಎಸ್‌ಐ ವಿಶ್ವನಾಥ ನಿಂಗೊಳ್ಳಿ ನೇತೃತ್ವದ ಸೂರಜ್ ಕೊಠಾರಕರ್, ರಾಜೇಶ್ ನಾಯಕ್, ಗಿರೀಶಯ್ಯ, ವಿಕಾಸ್ ನಾಂದ್ರೆ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.