Satwadhara News

Category: SIRSI

ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ಉತ್ತರ ಕನ್ನಡ ಜಿಲ್ಲೆಯ ಮೆಡಿಕಲ್ ಕಾಲೇಜು – ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಲ್ಲಿ ಧರಣಿ ಮತ್ತು ಬೆಳಗಾವಿಯಲ್ಲಿ ಮುಖ್ಯ ಮಂತ್ರಿ ಯವರಿಗೆ ಮನವಿ ಸಲ್ಲಿಕೆ : ಅನಂತಮೂರ್ತಿ ಹೆಗಡೆ.

    ಉತ್ತರ ಕನ್ನಡ ಜಿಲ್ಲೆಯ ಮೆಡಿಕಲ್ ಕಾಲೇಜು – ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಲ್ಲಿ ಧರಣಿ ಮತ್ತು ಬೆಳಗಾವಿಯಲ್ಲಿ ಮುಖ್ಯ ಮಂತ್ರಿ ಯವರಿಗೆ ಮನವಿ ಸಲ್ಲಿಕೆ : ಅನಂತಮೂರ್ತಿ ಹೆಗಡೆ.

    ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಮೆಡಿಕಲ್ ಕಾಲೇಜು – ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಶಿರಸಿಯಲ್ಲಿ ಧರಣಿ ಮತ್ತು ಬೆಳಗಾವಿಯಲ್ಲಿ ಮುಖ್ಯ ಮಂತ್ರಿ ಯವರಿಗೆ ಮನವಿ ಸಲ್ಲಿಕೆಗೆ ಅನಂತಮೂರ್ತಿ ಹೆಗಡೆ ಮುಂದಾಗಿದ್ದಾರೆ. ಹೋರಾಟ ಮುಂದುವರೆಸಿರುವ ಅವರು ಇದೀಗ ರಾಜ್ಯದ ಮುಖ್ಯಮಂತ್ರಿಗಳ ಗಮನ ಸೆಳೆಯಲು ಮುಂದಾಗಿದ್ದಾರೆ.

    ಅನಂತಮೂರ್ತಿ ಹೇಳೋದೇನು?

    ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ಕೊಡಿಸಲೂ ಮೂರು ಗಂಟೆ ಪ್ರಯಾಣ ಮಾಡಬೇಕಾಗಿದೆ. ಏಷ್ಟೋ ಬಾರಿ ಮಾರ್ಗ ಮಧ್ಯೆ ಸಾವು ಸಂಭವಿಸುತ್ತಿದೆ ಇದನ್ನ ಕಣ್ಣಾರೆ ಕಂಡರೂ ಸಹ ಸುಮ್ಮನಿದ್ದರೆ ಏನು ಅರ್ಥ?

    ಮಂಗಳೂರಿನಲ್ಲಿ ಭಾಗದಲ್ಲಿ 8 ಮೆಡಿಕಲ್ ಕಾಲೇಜು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇದೆ ,
    ನಮ್ಮ ಶಿರಸಿ ಕುಮಟಾ ಭಾಗದಲ್ಲಿ ಒಂದೂ ಇಲ್ಲ ನಮಗೆ ಯಾಕೆ ಶಾಪ ?

    ಕ್ಯಾನ್ಸರ್, ಕಿಡ್ನಿ, ಹೃದಯ ಹೀಗೇ ಹಲವಾರು ಖಾಯಿಲೆಗಳಿಗೆ ದಿನಕ್ಕೆ ನಮ್ಮ ಊರಿನ ಸುಮಾರು 500 ಜನ ದೂರದ ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಆಸ್ಪತ್ರೆಗೆ ಹೋಗುತ್ತಿದ್ದಾರೆ , ಹೋಗುವ ಅನಿವಾರ್ಯತೆ ಇದೆ , ನಮಗೆ ಶಾಪದ ಮುಕ್ತಿ ಯಾವಾಗ?

    ಇನ್ನೂ ಯಾಕೆ ಸುಮ್ಮನಿರಬೇಕು?

    ನಮ್ಮ ಜಿಲ್ಲೆಯು ಸಮಸ್ಯೆಗಳ ತಾಣ ವಾಗಿದೆ,ಉತ್ತರವೇ ಕಾಣದ ಉತ್ತರ ಕನ್ನಡ ವಾಗಿದೆ, ಇದಕ್ಕೆ ಕಾರಣ ಜನ ಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ, ಅಸಡ್ಡೆ, ಹಾಗೂ ನಮ್ಮಂತಹ ಪ್ರಜೆಗಳ ಆಲಸ್ಯ, ನಮಗೆ ಸ್ವಾಭಿಮಾನ ಇದ್ದರೆ ಈಗಲಾದರೂ ಹೋರಾಡಲೆ ಬೇಕು,

    ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಹುಮುಖ್ಯ ತಕ್ಷಣ ಆಗಲೇ ಬೇಕು, ಒಂದು ಕುಮಟಾ ಭಾಗದಲ್ಲಿ, ಇನ್ನೊಂದು ಶಿರಸಿ ಭಾಗದಲ್ಲಿ , ಇದಕ್ಕಾಗಿ ನಾವು ಶಿರಸಿ ಯಿಂದ ಪಾದಯಾತ್ರೆ ಮೂಲಕ ಕಾರವಾರ ತಲುಪಿ ಮನವಿ ನೀಡಿದ್ದೇವೆ, ಸರಕಾರದ ಪ್ರತಿಕ್ರಿಯೆ ಇಲ್ಲ, ಇಷ್ಟೊಂದು ಬೇಜವಾಬ್ದಾರಿ ಸಹಿಸಲು ಸಾಧ್ಯವಿಲ್ಲ, ದಿನಾಂಕ 27.11.2023 ಸೋಮವಾರ ಬೆಳಿಗ್ಗೆ 9 ಘಂಟೆಗೆ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಮಿನಿ ವಿಧನಸೌಧಕ್ಕೆ ಬಂದು, ಅಲ್ಲೇ ಕುಳಿತು ಕೊಂಡು, ಪ್ರತಿನಿತ್ಯ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30 ವರೆಗೆ ನಿರಂತರ ಹೋರಾಟ ಮಾಡಲಾಗುವುದು , ಪ್ರತೀ ಪಂಚಾಯತಿ, ಸಹಕಾರಿ ಸಂಘಗಳು,ಮಹಿಳಾ ಮಂಡಳ, ಸಾಮಾಜಿಕ ಸಂಘಟನೆ ಗಳು ಒಂದೊಂದು ದಿನ ಆಗಮಿಸಿ ಹೋರಾಟ ದಲ್ಲಿ ಭಾಗ ವಹಿಸ ಬೇಕು ಎಂಬುದಾಗಿ ವಿನಂತಿ ಮಾಡಿಕೊಳ್ಳುತ್ತೇನೆ ,

    ಸತತ 7 ದಿನ ಹೋರಾಟದ ನಂತರ ದಿನಾಂಕ 04.12.2023 ಸೋಮವಾರ ಬೆಳಗಾವಿಗೆ ಪ್ರಯಾಣ ಮಾಡಿ ವಿಧಾನ ಸೌಧ ದಲ್ಲಿ ಚಳಿಗಾಲದ ಅಧಿವೇಶದಲ್ಲಿ ಧರಣಿ ಸತ್ಯಾಗ್ರಹ ಮಾಡಿ ನೇರವಾಗಿ ಮುಖ್ಯ ಮಂತ್ರಿಯವರಿಗೆ ಮನವಿ ನೀಡಲಾಗುವುದು , ನಮ್ಮ ಹೊರಟ ನಿರಂತರ

    27.11.2023 ಸೋಮವಾರ ಬೆಳಿಗ್ಗೆ 9.30 ಘಂಟೆಗೆ ಶ್ರೀ ಮಾರಿಕಾಂಬಾ ದೇವಸ್ಥಾನ ಹತ್ತಿರ ಎಲ್ಲರೂ ಆಗಮಿಸಿ ಹೋರಾಟವನ್ನು ಯಶಸ್ವಿ ಗೊಳಿಸಬೇಕಾಗಿ ವಿನಂತಿ
    ಇಂತಿ ಅನಂತ ಮೂರ್ತಿ ಹೆಗಡೆ

    ಮೆಡಿಕಲ್ ಕಾಲೇಜು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹೋರಾಟ ಸಮಿತಿ ರಚಿಸಲಾಗುವುದು,

    ಪ್ರತೀ ಪಂಚಾಯತಿ ಮಟ್ಟದಲ್ಲಿ ಕೆಲವರನ್ನ ನಮ್ಮ ಹೋರಾಟ ಸಮಿತಿಯ ಸದಸ್ಯರಾಗಿ ಸೇರಿಸಿ ಕೊಳ್ಳಲಾಗುವುದು , ಪದಾಧಿಕಾರಿಗಳ ರಚನೆ ಮಾಡಲಾಗುವುದು , ಹೋರಾಟದಲ್ಲಿ ಆಸಕ್ತಿ ಇದ್ದವರು ನಮ್ಮನ್ನ ಸಂಪರ್ಕಿಸಿ,
    ಈ ಹೋರಾಟ ಅನಿರ್ದಿಷ್ಟ ಅವಧಿಯ ವರೆಗೆ, ಸದ್ಯ ಶಾಂತಿಯುತ ಹೋರಾಟ, ಇದಕ್ಕೆ ಜನಪ್ರತಿನಿಧಿಗಳು ಕಿಮ್ಮತ್ತು ಕೊಡದೇ ಅಸಡ್ಡೆ ಮಾಡಿದರೆ, ನಮ್ಮ ಹೋರಾಟಕ್ಕೆ ಯಾವುದೇ ಪುರಸ್ಕಾರ ನೀಡದೆ ಹೋದರೆ ಉಗ್ರ ಹೋರಾಟ, ಉಪವಾಸ ಸತ್ಯಾಗ್ರಹ, ಮುಂದೆ ಅಮರಣಾಂತ ಉಪವಾಸ,

    ಇಷ್ಟು ವರ್ಷದ ಹೋರಾಟದ ಲೆಕ್ಕವೇ ಬೇರೆ , ಇನ್ನು ಮುಂದಿನ ಹೋರಾಟದ ಲೆಕ್ಕವೇ ಬೇರೆ ಸ್ವಾಭಿಮಾನಿ ಹೋರಾಟಗಾರರ ಎಚ್ಚರಿಕೆ ಎಂದು ಪ್ರಕಟಿಸಿದರು.

    ಸಂಪರ್ಕಿಸಿ
    ಶ್ರೀ ಅನಂತ ಮೂರ್ತಿ ಹೆಗಡೆ
    9448317709

    ಶ್ರಿ ಉಮೇಶ್ ಹರಿಕಾಂತ್
    9481633324

    ಶ್ರೀ ಸಂತೋಷ್ ನಾಯ್ಕ್
    9449995439

    ಶ್ರೀ ಅಹೀಶ್ ಹೆಗಡೆ

    9482306468

  • ಕೊನೆಗೌಡರಿಗೆ ಉಚಿತ 10 ಲಕ್ಷ ರೂಪಾಯಿಗಳ ಇನ್ಶುರೆನ್ಸ್ ಸೌಲಭ್ಯ, ಸನ್ಮಾನ ಕಾರ್ಯಕ್ರಮ ಮತ್ತು ಔತಣಕೂಟ : ಅನಂತಮೂರ್ತಿ ಹೆಗಡೆ

    ಕೊನೆಗೌಡರಿಗೆ ಉಚಿತ 10 ಲಕ್ಷ ರೂಪಾಯಿಗಳ ಇನ್ಶುರೆನ್ಸ್ ಸೌಲಭ್ಯ, ಸನ್ಮಾನ ಕಾರ್ಯಕ್ರಮ ಮತ್ತು ಔತಣಕೂಟ : ಅನಂತಮೂರ್ತಿ ಹೆಗಡೆ

    ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಂತ ಮೂರ್ತಿ ಹೆಗಡೆ ಯವರು ಹಲವಾರು ಸಾಮಾಜಿಕ ಕಾರ್ಯ, ಶಾಲೆಗಳಿಗೆ, ಬಸ್ ಸ್ಟ್ಯಾಂಡ್, ಅಸ್ಪತ್ರೆ ಗಳಿಗೆ ಶುದ್ಧ ಕುಡಿಯುವ ನೀರು ಘಟಕ, ಜಿಲ್ಲೆ ರಿಕ್ಷಾ ಚಾಲಕರಿಗೆ ಸಮವಸ್ತ್ರ ಪಾಸಿಂಗ್ ಯೋಜನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ – ಮೆಡಿಕಲ್ ಕಾಲೇಜು ಸಲುವಾಗಿ ಹೋರಾಟ ದಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆ ಮಾತಾಗಿರುವ ಅನಂತ ಮೂರ್ತಿ ಹೆಗಡೆ ಯವರು ಈಗ ಜಿಲ್ಲೆಯ ಕೊನೆ ಗೌಡರ ಸೇವೆ ಹೊಸ ಯೋಜನೆ ಪ್ರಾರಂಭಿಸು ತ್ತಿದ್ದಾರೆ

    ಅಡಿಕೆಯು ಬೆಳೆ ನಮ್ಮ ಜಿಲ್ಲೆಯ ಜೀವನಾಡಿ, ಕೊನೆ ಗೌಡರು ಕೊನೆ ಕೊಯ್ಯುವಾಗ, ಮದ್ದನ್ನು ಸಿಂಪಡಿಸುವಾಗ, ಮರದಿಂದ ಬಿದ್ದು ಪ್ರಾಣಕಳೆದುಕೊಳ್ಳುತ್ತಿರುವ ಪ್ರಸಂಗಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಹಾಗಾಗಿ ಇಂಥಾ ಸೇವಕರ ರಕ್ಷಣೆಗೆ ನಿಲ್ಲುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅನಾಹುತವನ್ನು ತಡೆಯುವುದು ಅಸಾಧ್ಯವಾದರೂ, ಅದರ ಪರಿಣಾಮವನ್ನು ಸಾಧ್ಯವದಷ್ಟು ಸಹ್ಯ ಮಾಡುವುದು ನನ್ನ ಉದ್ದೇಶವಾಗಿದೆ.
    ಅನಂತಮೂರ್ತಿ ಹೆಗಡೆ ಟ್ರಸ್ಟ್ ವತಿಯಿಂದ, “ಇಂಡಿಯನ್ ಪೋಸ್ಟ್ ಆಫೀಸ್” ನ ಯೋಜನೆಯಾದ “ಗ್ರೂಪ್ ಆಕ್ಸಿಡೆಂಟ್ ಗಾರ್ಡ್ ಪಾಲಿಸಿ”ಯನ್ನು ಎಲ್ಲ ಕೊನೆಗೌಡರಿಗೂ ಮಾಡಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದ್ದೇನೆ. ಈ ಆಕ್ಸಿಡೆಂಟ್ ಗಾರ್ಡ್ ಪಾಲಿಸಿಯು, ಅಪಘಾತದಿಂದ ಮರಣ /ಶಾಶ್ವತ ಅಂಗವೈಕಲ್ಯ /ಭಾಗಶಃ ಅಂಗವೈಕಲ್ಯಕ್ಕೆ 10,00,000 ರೂಪಾಯಿಗಳ ಕವರೇಜ್ ಹೊಂದಿದೆ. ಮತ್ತು ಈ ಪಾಲಿಸಿಯಡಿಯಲ್ಲಿ ರೂ 60,000 ವರೆಗೆ ಒಳರೋಗಿ ವೆಚ್ಚ, ರೂ 30,000 ವರೆಗೆ ಹೊರರೋಗಿ ವೆಚ್ಚ, 10 ದಿನಗಳವರೆಗೆ ರೂ 1,000 ದೈನಂದಿನ ಆಸ್ಪತ್ರೆ ನಗದು ನೆರವು, ಮೃತರ 2 ಮಕ್ಕಳಿಗೆ 1 ಲಕ್ಷ ರೂಪಾಯಿ ಶೈಕ್ಷಣಿಕ ನೆರವು, ರೂ 25,000 ವರೆಗೆ ಕುಟುಂಬ ಸಾರಿಗೆ ಪ್ರಯೋಜನ ಮತ್ತು ರೂ 5000 ವರೆಗೆ ಅಂತಿಮ ಸಂಸ್ಕಾರದ ನೆರವಿನ ಸೌಲಭ್ಯವನ್ನು ಹೊಂದಿದೆ. ಜಿಲ್ಲೆಯಾದ್ಯಂತ ಎಲ್ಲ ಕೊನೆಗೌಡರಿಗೆ ಈ ಪಾಲಿಸಿಯನ್ನು ಮಾಡಿಸುವ ಸಂಕಲ್ಪ ಮಾಡಿದ್ದೇನೆ.


    ನಮ್ಮ ಸಂಸ್ಥೆ, ಜಿಲ್ಲೆಯ ಎಲ್ಲ ಸಹಕಾರಿ ಸೇವಾ ಸಂಘ ಮತ್ತು ಪಂಚಾಯತಿಗಳಿಗೆ ತಲುಪಿ, ಸ್ಥಳೀಯ ಕೊನೆಗೌಡರ ವಿವರಗಳನ್ನು ಸಂಗ್ರಹಿಸಿ ಕೊಡುವಂತೆ ಮನವಿಯನ್ನು ಸಲ್ಲಿಸುತ್ತದೆ. ಜಿಲ್ಲೆಯ ಅಡಿಕೆ ತೋಟದ ಮಾಲೀಕರು, ನಿಮ್ಮ ಮನೆಗೆ ಬರುವ ಕೊನೆಗೌಡರಿಗೆ ಈ ಸೌಲಭ್ಯದ ವಿಚಾರವನ್ನು ತಿಳಿಸಿ, ಅವರ ವಿವರಗಳನ್ನು ಸ್ಥಳೀಯ ಪಂಚಾಯತಿ ಅಥವಾ ಸೇವಾಸಹಕಾರಿ ಸಂಘಕ್ಕೆ ತಲುಪಿಸಬೇಕಾಗಿ ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ನಂತರ ನಮ್ಮ ಸಂಸ್ಥೆಯ ಸಿಬ್ಬಂದಿ ಮತ್ತು ಪೋಸ್ಟ್ ಆಫೀಸ್ ಸಿಬ್ಬಂದಿಗಳು ಅಲ್ಲಿಗೆ ಬಂದು, ಸಂಗ್ರಹಿಸಿದ ವಿವರಗಳನ್ನು ಸ್ವೀಕರಿಸಿ, ಪಾಲಿಸಿಯನ್ನು ಮಾಡಿಸುತ್ತಾರೆ. ಪಾಲಿಸಿ ಬಾಂಡ್ ಬಂದ ನಂತರ, ಎಲ್ಲ ಕೊನೆಗೌಡರಿಗೆ, ಔತಣಕೂಟ ಏರ್ಪಡಿಸಿ, ಗೌರವಿಸಿ, ಪಾಲಿಸಿ ಬಾಂಡನ್ನು ಹಸ್ತಾಂತರಿಸುತ್ತೇವೆ. ಮತ್ತು, ದಶಕಗಳಿಂದ ಸೇವೆ ಸಲ್ಲಿಸಿರುವ, ಹಿರಿಯ ಕೊನೆಗೌಡರನ್ನು ಗುರುತಿಸಿ, ಅವರ ಜೀವಮಾನದ ಸಾಧನೆಗಾಗಿ, ಸನ್ಮಾನ ಕಾರ್ಯಕ್ರಮವನ್ನೂ ನಡೆಸಲಿದ್ದೇವೆ ಎಂದು ಅನಂತಮೂರ್ತಿ ಹೆಗಡೆಯವರು ಪ್ರಕಟಿಸಿದ್ದಾರೆ.

    ಸಂಪರ್ಕಿಸಿ

    87623 27713, 9448317709, 9449995439, 9482306468

  • ಕಸ್ತೂರಿ ರಂಗನ್ ವಿರೋಧಿಸಲು ಜಿಲ್ಲೆಯಲ್ಲಿ ಪ್ರಬಲ ಹೋರಾಟ ಅವಶ್ಯ – ರವೀಂದ್ರ ನಾಯ್ಕ.

    ಕಸ್ತೂರಿ ರಂಗನ್ ವಿರೋಧಿಸಲು ಜಿಲ್ಲೆಯಲ್ಲಿ ಪ್ರಬಲ ಹೋರಾಟ ಅವಶ್ಯ – ರವೀಂದ್ರ ನಾಯ್ಕ.

    ಕುಮಟಾ : ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿಯಿಂದ ಮಲೆನಾಡು ಮತ್ತು ಕರಾವಳಿ ಜನ ಜೀವನ ವ್ಯವಸ್ಥೆ ಮೇಲೆ ವ್ಯತಿರಿಕ್ತವಾಗಿ ಪ್ರಭಾವ ಬೀರುವುದರಿಂದ ಕಸ್ತೂರಿ ರಂಗನ್ ವರದಿಯನ್ನ ಸಂಪೂರ್ಣವಾಗಿ ವಿರೋಧಿಸಲು ಜಿಲ್ಲೆಯಲ್ಲಿ ಪ್ರಬಲ ಹೋರಾಟ ಅವಶ್ಯ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದರು. ಅವರು ಮಂಗಳವಾರ  ಕಸ್ತೂರಿ ರಂಗನ್ ವರದಿಯಲ್ಲಿ ಸೂಕ್ಷ್ಮ ಪ್ರದೇಶವೆಂದು ಉಲ್ಲೇಖಿಸಿಲ್ಪಟ್ಟ, ತಾಲೂಕಿನ ಸೊಪ್ಪಿನ ಹೊಸಳ್ಳಿ ಗ್ರಾಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

    ಇದನ್ನೂ ಓದಿ – ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕುಮಟಾದ ವಿಕಲಚೇತನರು.

    ಕಸ್ತೂರಿ ರಂಗನ್ ವರದಿಯನ್ನು ತೀರಸ್ಕರಿಸುವಲ್ಲಿ ರಾಜ್ಯ ಸರಕಾರವು ಇಚ್ಛಾಶಕ್ತಿಯನ್ನು ವ್ಯಕ್ತಪಡಿಸಬೇಕಾಗಿದ್ದು, ಕೇಂದ್ರ ಸರಕಾರವು ಜನರ ಭಾವನೆಯನ್ನು ಹಾಗೂ ವರದಿಯಿಂದ ಉಂಟಾಗುವ ಪರಿಣಾಮವನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳಬೇಕೆಂದು ಅವರು ಹೇಳಿದರು.

    ಕಸ್ತೂರಿ ರಂಗನ್ ವರದಿಯಿಂದ ಉಂಟಾಗುವ ಪರಿಣಾಮದ ಕುರಿತು ಜಿಲ್ಲಾದ್ಯಂತ ಇನ್ನೂರಕ್ಕೂ ಮಿಕ್ಕಿ ಪ್ರದೇಶಗಳಲ್ಲಿ ಕಸ್ತೂರಿ ರಂಗನ್ ವಿರೋಧ ಜಾಗೃತಿ ಸಭೆಗಳನ್ನು ಸಂಘಟಿಸಲಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

    ಸಭೆಯಲ್ಲಿ ಬೀರಾ ಗೌಡ, ಗಣಪತಿ ಮರಾಠಿ, ಮಹಾದೇವ ನಾಯ್ಕ, ಕೃಷ್ಣ ದೇವಪ್ಪ ನಾಯ್ಕ, ತಿಮ್ಮ ಶಿವಪ್ಪ ನಾಯ್ಕ, ಪ್ರಕಾಶ ರಾಮಚಂದ್ರ ಹೆಗಡೆ, ನಾರಾಯಣ ರಾಮಾ ಗೌಡ ಮುಂತಾದವರು ಉಪಸ್ಥಿತರಿದ್ದರು. ಫಿರೋಜ್ ಸಾಬ್ ಸ್ವಾಗತಿಸಿ, ವಂದಿಸಿದರು.

  • ನ. ೧೮ ಅರಣ್ಯಾಧಿಕಾರಿಯೊಂದಿಗೆ ಅರಣ್ಯವಾಸಿಗಳ ಚರ್ಚೆ.

    ನ. ೧೮ ಅರಣ್ಯಾಧಿಕಾರಿಯೊಂದಿಗೆ ಅರಣ್ಯವಾಸಿಗಳ ಚರ್ಚೆ.

    ಕುಮಟಾ : ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಕತಗಾಲ ವಲಯ ಅರಣ್ಯಾಧಿಕಾರಿಯೊಂದಿಗೆ ಚರ್ಚೆ ಹಾಗೂ ಕಸ್ತೂರಿ ರಂಗನ್ ವರದಿ ವಿರೋಧ ಆಕ್ಷೇಪಣಾ ಪತ್ರ ಸಲ್ಲಿಸುವ ಕುರಿತು ಕುಮಟಾ ತಾಲೂಕಿನ ಅಳಕೋಡ(ಕತಗಾಲ್) ಗ್ರಾಮ ಪಂಚಾಯತದಲ್ಲಿ ನ. ೧೮ ರ ಮಧ್ಯಾಹ್ನ ೨:೩೦ ಕ್ಕೆ ಸಭೆ ಕರೆಯಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಕಸ್ತೂರಿ ರಂಗನ್ ವರದಿಗೆ ಆಕ್ಷೇಪಣೆ ಸಲ್ಲಿಸುವಂತಹ ಹಾಗೂ ಅರಣ್ಯವಾಸಿಗಳ ಸಮಸ್ಯೆಗಳ ಬಗ್ಗೆ ಆಸಕ್ತಿ ಇರುವಂತಹ ಅರಣ್ಯವಾಸಿಗಳು ಈ ಸಮಯದಲ್ಲಿ ಕತಗಾಲ ಗಣೇಶೋತ್ಸವ ಸಭಾಂಗಣದಲ್ಲಿ ಹಾಜರಿರಲು ಅವರು ಕೋರಿದ್ದಾರೆ. ಜೊತೆಗೆ ಗುರುತಿನ ಪತ್ರ ಹೊಂದಿರುವವರು ಗುರುತಿನ ಪತ್ರ ಧರಿಸಿ ಬರಬೇಕೆಂದೂ ಅವರು ತಿಳಿಸಿದ್ದಾರೆ. 

  • ದೇಶಪಾಂಡೆ ಸಾಹೇಬರು ಸ್ವಂತ ಖರ್ಚಿನಿಂದ ಮೆಡಿಕಲ್ ಕಾಲೇಜು, ಆಸ್ಪತ್ರೆ ನಿರ್ಮಿಸಲಿ ಅನಂತಮೂರ್ತಿ ಹೆಗಡೆ ವಿನಂತಿ.

    ದೇಶಪಾಂಡೆ ಸಾಹೇಬರು ಸ್ವಂತ ಖರ್ಚಿನಿಂದ ಮೆಡಿಕಲ್ ಕಾಲೇಜು, ಆಸ್ಪತ್ರೆ ನಿರ್ಮಿಸಲಿ ಅನಂತಮೂರ್ತಿ ಹೆಗಡೆ ವಿನಂತಿ.

    ಶಿರಸಿ: ಮೆಡಿಕಲ್‌ ಕಾಲೇಜು, ಹೈಟೆಕ್ ಆಸ್ಪತ್ರೆ, ಜಿಲ್ಲೆಯ ಜನರ ನಿರುದ್ಯೋಗ ನಿವಾರಣೆ ಕೆಲಸ ಬಹುಕಾಲ ರಾಜ್ಯ ಭಾರ‌ ಮಾಡಿದ ರಾಜಕಾರಣಿಗಳ ಕರ್ತವ್ಯ. ಅದರಲ್ಲೂ ಹೆಚ್ಚು ಬಾರಿ ಜಿಲ್ಲೆಯಲ್ಲಿ ಅಧಿಕಾರ ಮಾಡಿದ ದೇಶಪಾಂಡೆ ಸಾಹೇಬರು ಮಾಡಬೇಕಿತ್ತು ಎಂದು ಹೇಳಿದರೆ, ಜಿಲ್ಲಾ‌ ಕಾಂಗ್ರೆಸ್ ನಾಯಕರೆಲ್ಲ ನನ್ನ‌ ಮೇಲೆ ವಾಗ್ದಾಳಿ ಮಾಡುತ್ತಾರೆ ಎಂದರೆ ಅದರರ್ಥ ಏನು? ಸತ್ಯ ಹೇಳಿದರೆ ಸಹಿಸಲು ಆಗುವುದಿಲ್ಲ ಎಂದೇ ಅಲ್ಲವೇ? ನಮ್ಮ ಪಕ್ಕದ ಜಿಲ್ಲೆಯಾದ ದಕ್ಷಿಣ ಕನ್ನಡವನ್ನು ನೋಡಿ ಕಲಿಯಬೇಕು, ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ಒಂದಾಗುತ್ತಾರೆ, ಹೈಟೆಕ್ ಆಸ್ಪತ್ರೆ ಆದರೆ ನಿಮ್ಮ ಕುಟುಂಬಕ್ಕೂ ಅನುಕೂಲ ಆಗತ್ತೆ ಅಲ್ಲವೇ ಎಂದು ಅನಂತಮೂರ್ತಿ ಹೆಗಡೆ ಪ್ರಶ್ನಿಸಿದ್ದಾರೆ.

    ನಾನು ವೈಯಕ್ತಿಕವಾಗಿ ಏನೂ, ಯಾರ ಬಗ್ಗೆ, ಯಾವ ಪಕ್ಷದ ಬಗ್ಗೆ ಹೇಳಿಲ್ಲ, ಸಾಹೇಬರು ಐದು ಬಾರಿ ಮಂತ್ರಿ , ಬೃಹತ ಕೈಗಾರಿಕೆ ಮಂತ್ರಿ, ಸುಮಾರು 25 ವರ್ಷ ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಇವತ್ತಿಗೂ ನಮ್ಮಂತಹ ಯುವಕರು ಆಸ್ಪತ್ರೆ ಕೊಡಿಸಿ, ಜೀವ ಉಳಿಸಿ ಎಂದು ಬೀದಿಯಲ್ಲಿ ನಿಂತು ಹೋರಾಟ ಮಾಡಬೇಕೆಂದರೆ ಅದಕ್ಕೆ ಯಾರು ಹೊಣೆ? ಎಂದು ಕೇಳಿದ ಅನಂತಮೂರ್ತಿ ಹೆಗಡೆ, ಉದ್ಯೋಗವಿಲ್ಲದೆ ನಮ್ಮ -ನಿಮ್ಮ ಮನೆ ಮಕ್ಕಳು ದೂರದ ಗೋವಾಕ್ಕೆ , ಬೆಂಗಳೂರಿಗೆ, ಮುಂಬೈಗೆ ಕೆಲಸಕ್ಕೆ ಹೋಗುವ ಪರಿಸ್ಥಿತಿ ಇದೆ , ಪಾಪ ತಿಂಗಳಿಗೆ ಕೇವಲ 10 -12 ಸಾವಿರಕ್ಕೆ ಬೇಕರಿ, ಹೋಟೆಲ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ನೆನೆಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತದೆ, ನಮ್ಮ ಜಿಲ್ಲೆಯಲ್ಲಿ ಒಂದೇ ಒಂದು ಫ್ಯಾಕ್ಟರಿ ಇಲ್ಲ. ನಿಜವಾಗಿಯೂ ನಾಚಿಕೆ ಆಗಬೇಕು. ಕೊನೆ ಕಾಲದಲ್ಲಿ ಮಕ್ಕಳು ತಂದೆ ತಾಯಿಯನ್ನ ಬಿಟ್ಟು ಯಾವುದೋ ಊರಿನಲ್ಲಿ ಪರದೇಸಿಗಳಾಗಿ ಬದುಕುವ ಪರಿಸ್ಥಿತಿ ಎದುರಾಗಿದೆ, ಇಲ್ಲಿ ಅಪ್ಪ ಅಮ್ಮನಿಗೆ ಹುಷಾರಿಲ್ಲ ಎಂದರೂ ಚಿಕಿತ್ಸೆ ಕೊಡಿಸಲು ಅಸ್ಪತ್ರೆ ಇಲ್ಲ , ಆರೈಕೆ ಮಾಡಲು ಮಕ್ಕಳಿಲ್ಲ,
    ಅಪ್ಪ ಅಮ್ಮ ಹಾಕುವ ಕಣ್ಣೀರು ಹೃದಯ ತಟ್ಟುವದಿಲ್ಲವೇ ಎಂದೂ ಕೇಳಿದ್ದಾರೆ.

    ಕುಮಟಾ ಭಾಗದ ಹಿರೆಗುತ್ತಿಯಲ್ಲಿ 1800 ಏಕರೆ KIADB ಜಾಗ ಇದೆ , ಮೂರೂರು ಗುಡ್ಡ ಸುಮಾರು 3 -5 ಸಾವಿರ ಎಕರೆ ಇದೆ , ಒಂದೇ ಒಂದು ಮರವನ್ನ ಕಡಿಯದೆ ನಮ್ಮ ಜಿಲ್ಲೆಯಲ್ಲಿ ಹಲವಾರು ಕೈಗಾರಿಕೆ ಮಾಡುವ ಜಾಗ ಪ್ರತಿ ತಾಲೂಕಿನಲ್ಲಿದೆ. ಏಷ್ಟೋ ಲಕ್ಷ ನಮ್ಮ ಜಿಲ್ಲೆ ಜನರಿಗೆ ಉದ್ಯೋಗ ನೀಡಬಹುದಿತ್ತು. ಆದರೆ ಕೈಗಾರಿಕೆ ಮಾಡುವ ಇಚ್ಛಾಶಕ್ತಿ ಇಲ್ಲ ಅಷ್ಟೇ ಎಂದ ಅವರು ಪಕ್ಷದ ವಿಚಾರ ಬಿಡಿ , ಆಸ್ಪತ್ರೆ ವಿಚಾರ ಬಂದಾಗ ಎಲ್ಲ ವಿಷಯ ಬದಿಗಿಟ್ಟು ಹೋರಾಟ ಮಾಡೋಣ, ಒಂದು ವೇಳೆ ಆಸ್ಪತ್ರೆ ಆದರೆ ನಮಗೆ ಒಳ್ಳೇದು ಅಲ್ಲವೇ?

    ದೇಶಪಾಂಡೆ ಸಾಹೇಬರ ಹತ್ತಿರ ಟೊಯೊಟಾ, ಹೊಂಡ ಅಂತಹ ಕಂಪನಿಯಲ್ಲಿ ಪಾಲುದಾರಿಕೆ, ನೂರಾರು ಎಕರೆ ಜಾಗ, ಸಾವಿರಾರು ಕೋಟಿ ರೂಪಾಯಿ ಆಸ್ತಿ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ.

    ಅವರು ಮನಸ್ಸು ಮಾಡಿದರೆ 100 ಅಸ್ಪತ್ರೆ ಕಟ್ಟಿಸುವ ಶಕ್ತಿ ಅವರಿಗಿದೆ ಎಂಬುದು ಕೂಡ ನಮ್ಮ ಜಿಲ್ಲೆ ಜನರಿಗೆ ಗೊತ್ತಿದೆ.

    ಸಾಹೇಬರಿಗೆ ನಮ್ಮ ಜಿಲ್ಲೆ ಅಸ್ತಿತ್ವ, ಅಧಿಕಾರ, ಗೌರವ ಎಲ್ಲವನ್ನೂ ಕೂಡ ಕೊಟ್ಟಿದೆ. ಸಾಹೇಬರು ಜಿಲ್ಲೆಯ ಜನರಿಗೆ ಸಹಾಯ ಮಾಡಲಿ ಎಂಬುದಾಗಿ ಅವರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಹೇಳಿದ ಅವರು, ಶಿರಸಿ ಅಥವಾ ಕುಮಟಾ ಭಾಗದಲ್ಲಿ ಕೆ.ಎಸ್. ಹೆಗ್ಡೆ ತರಹದ ಒಂದು ಒಳ್ಳೆಯ ಅಸ್ಪತ್ರೆ , ಮೆಡಿಕಲ್ ಕಾಲೇಜು ಅವರ ತಂದೆಯವರಾದ ವಿ.ಆರ್.ದೇಶಪಾಂಡೆ ಅವರ ಹೆಸರಿನಲ್ಲಿ ನಿರ್ಮಿಸಲಿ, ಅವರೇ ಸ್ವಂತ ಖರ್ಚಿನಿಂದ ನಿರ್ಮಿಸಲಿ, ನಾವೆಲ್ಲರೂ ಅವರನ್ನ ನಮ್ಮ ಜೀವನ ಪರ್ಯಂತ ನಮಿಸೋಣ.

    ನಾನು ವೈಯಕ್ತಿಕವಾಗಿ ದೇಶಪಾಂಡೆ ಸಾಹೇಬರ ಅಭಿಮಾನಿ, ಅವರ ಬಗ್ಗೆ ಅಪಾರ ಗೌರವವಿದೆ ಎಂದೂ ಹೇಳಿದ್ದಾರೆ.

  • ಜಿಂಕೆಯನ್ನು ಬೇಟೆಯಾಡಿದ ಚಿರತೆ.

    ಜಿಂಕೆಯನ್ನು ಬೇಟೆಯಾಡಿದ ಚಿರತೆ.

    ಶಿರಸಿ: ತಾಲೂಕಿನ ಎಕ್ಕಂಬಿ ಅರಣ್ಯ ವ್ಯಾಪ್ತಿಗೆ ಬರುವ ಮಳಲಗಾಂವನಲ್ಲಿ ಬೆಳಗಿನ ಜಾವದಲ್ಲಿ ಚಿರತೆಯೊಂದು ಜಿಂಕೆಯನ್ನು ಬೇಟೆಯಾಡಿ, ಸುತ್ತಮುತ್ತಲ ಜನರಲ್ಲಿ ಭಯವನ್ನುಂಟುಮಾಡಿದೆ. ಮಳಲಗಾಂವಿನ ಹನುಮಂತ ಚಾಯಾ ನಾಯ್ಕ ಮನೆಯ ಹಿತ್ತಲಿನ ಕಾಡಿನಲ್ಲಿ ಈ ಘಟನೆ ನಡೆದಿದೆ. ಬೆಳಗಿನ ಜಾವ ಸುಮಾರು ನಾಲ್ಕು ಗಂಟೆಗೆ ಮನೆಯ ಹಿತ್ತಲಲ್ಲಿ ಚಿರತೆ ಘರ್ಜನೆ ಕೇಳಿ ಹೊರಗೆ ಬಂದು ನೋಡುವಾಗಲೇ ಜಿಂಕೆ ಬಿಟ್ಟು ಚಿರತೆ ಓಡಿಹೋಗಿದೆ ಎನ್ನಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

  • ಭೀಕರ ಅಪಘಾತ : ಐವರಿಗೆ ಮಾರಣಾಂತಿಕ ಪೆಟ್ಟು.

    ಭೀಕರ ಅಪಘಾತ : ಐವರಿಗೆ ಮಾರಣಾಂತಿಕ ಪೆಟ್ಟು.

    ಶಿರಸಿ : ಶಿರಸಿ-ಸಿದ್ದಾಪುರ ರಾಜ್ಯ ಹೆದ್ದಾರಿಯ ಯಡಹಳ್ಳಿ ಸಮೀಪದ ಕಲ್ಲಕೈ ಬಳಿ ಕಾರು ಹಾಗು ಆಟೋರಿಕ್ಷಾ ನಡುವೆ ಭೀಕರ ಅಪಘಾತ ಮಂಗಳವಾರ ಸಂಜೆ ಸಂಭವಿಸಿದೆ. ಶಿರಸಿ ಕಡೆ ಸಾಗುತ್ತಿದ್ದ ಆಟೋರಿಕ್ಷಾ ಹಾಗು ಎದುರಿನಿಂದ ಬಂದ ಕಾರ್ ನಡುವೆ ಡಿಕ್ಕಿ ಸಂಭವಿಸಿದ್ದು, ಗಾಯಾಳುಗಳು ಒಂದೇ ಕುಟುಂಬದವರು ಎನ್ನಲಾಗಿದೆ. ನಗರದ ನಿಲೇಕಣಿಯ ಶಿರಾಲಿ ಕುಟುಂಬದವರು ಎನ್ನಲಾಗಿದೆ.

    ಐದು ಜನರಿಗೆ ಗಂಭೀರ ಸ್ವರೂಪದಲ್ಲಿ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ. ಅಟೋದಲ್ಲಿದ್ದ ಆಶೋಕ ಶಿರಾಲಿ (೫೨) ನಿಲೇಕಣಿ,ವಿಶಾಲಾಕ್ಷ್ಮೀ (೫೫) ಅಂಭಾಗಿರಿ,ತ್ರೀಶಾ ಅಶೋಕ ಶಿರಾಲಿ (೯),ಅನಿತಾ ಅಶೋಕ ಶಿರಾಲಿ (೪೦) ,ಆದರ್ಶ ಅಶೋಕ ಶಿರಾಲಿ (೧೮) ಹಾಗು ಅಪರಂಜಿತ (೪೫) ಮಾರಣಾಂತಿಕವಾಗಿ ಗಾಯಗೊಂಡವರು ಎನ್ನಲಾಗಿದೆ.

  • ಮನೆ ಮಗನ ಸಾವು ಸಹಿಸದ ತಾಯಿ ಹಾಗೂ ಸಹೋದರಿ ನೇಣಿಗೆ ಶರಣು.

    ಮನೆ ಮಗನ ಸಾವು ಸಹಿಸದ ತಾಯಿ ಹಾಗೂ ಸಹೋದರಿ ನೇಣಿಗೆ ಶರಣು.

    ಶಿರಸಿ : ದೀಪಾವಳಿಯ ಸಂಭ್ರಮದಲ್ಲಿ ಕುಣಿದು ನಲಿದು ಇರಬೇಕಾದ ಕುಟುಂಬ, ಮೂವರನ್ನು ಕಳೆದುಕೊಂಡು ಅನಾಥವಾಗಿದೆ. ಹಬ್ಬದ ದಿನವೇ ಮನೆಯ ಮೂರು ದೀಪಗಳು ಆರಿ ಹೋದಂತಾಗಿದ್ದು, ಊರಿಗೆ ಊರೇ ಶೋಕದಲ್ಲಿದೆ. ಅನಾರೋಗ್ಯ ಪೀಡಿತನಾಗಿದ್ದ ಮಗ ಸಾವುಕಂಡ ಬೆನ್ನಲ್ಲೆ ನೋವು ತಾಳಲಾರದೆ ತಾಯಿ ಮತ್ತು ಅಕ್ಕ ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆ ಶಿರಸಿಯ ಮಾತಳ್ಳಿಯಲ್ಲಿ ನಡೆದಿದೆ.

    ತಾಲೂಕಿನ ಸದಾಶಿವಳ್ಳಿ ಪಂಚಾಯ್ತಿ ವ್ಯಾಪ್ತಿಯ ಮಾತ್ನಳ್ಳಿ ಗ್ರಾಮದ ನರ್ಮದಾ ಬಾಲಚಂದ್ರ ಹೆಗಡೆ ಮತ್ತು ಅವರ ಮಗಳು ದಿವ್ಯಾ ಬಾಲಚಂದ್ರ ಹೆಗಡೆ ಮೃತಪಟ್ಟವರು ಎಂದು ತಿಳಿದುಬಂದಿದೆ. ನರ್ಮದಾ ಅವರ ಮಗ ಉದಯ ಬಾಲಚಂದ್ರ ಹೆಗಡೆ ಸೋಮವಾರ ಸಾವನ್ನಪ್ಪಿದ್ದ. ಇದರಿಂದ ತೀವ್ರವಾಗಿ ನೊಂದಿದ್ದ ತಾಯಿ ಹಾಗು ಸೋದರಿ ಮನೆಯಲ್ಲೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ.

    ಉದಯ ಬಾಲಚಂದ್ರ ಹೆಗಡೆ ಎಂಬ ಯುವಕ ಇತ್ತೀಚೆಗೆ ಅಸ್ವಸ್ಥನಾಗಿದ್ದು, ಬಳಿಕ ಚಿಕಿತ್ಸೆ ನೀಡಿದರೂ ಆರೋಗ್ಯ ಸುಧಾರಿಸದೆ ಸಾವನ್ನಪ್ಪಿದ್ದ. ಇದರಿಂದ ತಾಯಿ ಮತ್ತು ತಂಗಿ ತೀವ್ರವಾಗಿ ನೊಂದಿದ್ದರು. ಹೀಗಾಗಿ ತಾಯಿ- ಹಾಗೂ ಸೋದರಿ ಕೂಡಾ ಪ್ರಾಣ ಕಳೆದುಕೊಳ್ಳುವ ನಿರ್ಧಾರ ತೆಗೆದುಕೊಂಡು, ರಾತ್ರಿ ನೇಣುಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ.

  • ನದಿಯಲ್ಲಿ ಸ್ನಾನಕ್ಕೆ ತೆರಳಿದ ವೇಳೆ ಅವಘಡ : ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು.

    ನದಿಯಲ್ಲಿ ಸ್ನಾನಕ್ಕೆ ತೆರಳಿದ ವೇಳೆ ಅವಘಡ : ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು.

    ಶಿರಸಿ ತಾಲೂಕಿನ ಸೋಂದಾ ಶಾಲ್ಮಲಾ ನದಿಯಲ್ಲಿ ವಿದ್ಯಾರ್ಥಿಯೊಬ್ಬ ಸ್ನಾನಕ್ಕೆ ತೆರಳಿದ್ದ ವೇಳೆ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಯಲ್ಲಾಪುರ ಚಂದಗುಳಿಯ ಗಿರೀಶ್ ಭಟ್ಟ ಮೃತ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಸೋಂದಾದಲ್ಲಿ ಉಳಿದು ಅಂತಿಮ ವರ್ಷದ ವಿದ್ವತ್ ಓದುತ್ತಿದ್ದ ವಿದ್ಯಾರ್ಥಿ ಭೀಮನಪಾದ ಬಳಿ ಸ್ನಾನಕ್ಕೆ ತೆರಳಿದ ವೇಳೆ ಈ ಘಟನೆ ಸಂಭವಿಸಿದೆ.

  • ಅನಂತಮೂರ್ತಿ ಹೆಗಡೆ ನೇತೃತ್ವದ ಪಾದಯಾತ್ರೆಗೆ ಅಪಾರ ಜನಬೆಂಬಲ : ನಾಳೆ ಕುಮಟಾದಲ್ಲಿ ಬೃಹತ್ ಸಭೆ

    ಅನಂತಮೂರ್ತಿ ಹೆಗಡೆ ನೇತೃತ್ವದ ಪಾದಯಾತ್ರೆಗೆ ಅಪಾರ ಜನಬೆಂಬಲ : ನಾಳೆ ಕುಮಟಾದಲ್ಲಿ ಬೃಹತ್ ಸಭೆ

    ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಬೇಕು ಎಂದು ಆಗ್ರಹಿಸಿ ಸಾಮಾಜಿಕ ಮುಖಂಡ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಶಿರಸಿಯಿಂದ ಕಾರವಾರದವರೆಗೆ ನಡೆಯುತ್ತಿರುವ ಪಾದಯಾತ್ರೆಯೂ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಪಾದಯಾತ್ರೆಯ ಮಾರ್ಗದ ಉದ್ದಕ್ಕೂ ಸ್ಥಳೀಯರ ಅಪಾರ ಜನಬೆಂಬಲ ವ್ಯಕ್ತವಾಗಿದೆ.

    ಇದು ಜನಪರ ಉದ್ದೇಶದ ಪಾದಯಾತ್ರೆಯಾಗಿದೆ. ಜಿಲ್ಲೆಯ ಜನರಿಗಾಗಿ ಸರ್ಕಾರವು ಜಿಲ್ಲೆಯಲ್ಲಿ ಎರಡು ಮೆಡಿಕಲ್ ಕಾಲೇಜು ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಬೇಕು. ಇದು ಜನರ ಹಿತಕ್ಕಾಗಿ ಮತ್ತು ಜನಪರ ಉದ್ದೇಶಕ್ಕಾಗಿ ನಡೆಯುತ್ತಿರುವ ಪಾದಯಾತ್ರೆಯಾಗಿದೆ ಎಂದು ಅನಂತಮೂರ್ತಿ ಹೆಗಡೆ ತಿಳಿಸಿದರು.

    ಇಂದು ಪಾದಯಾತ್ರೆಯ ಮೂರನೇ ದಿನವಾಗಿದ್ದು, ಇಂದು ದೇವಿಮನೆಯಿಂದ, ಕತಗಾಲ, ಹಾಗೂ ಅಂತ್ರವಳ್ಳಿ ಮೂಲಕ ದಿವಗಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಪಾದಯಾತ್ರೆಯು ಸಾಗುವ ಮಾರ್ಗದ ಎಲ್ಲಾ ಊರುಗಳಲ್ಲಿ ಜನರು ಪಾದಯಾತ್ರೆಯನ್ನು ಆತ್ಮೀಯವಾಗಿ ಬರಮಾಡಿಕೊಂಡು ತಮ್ಮ ಬೆಂವಲ‌ ನೀಡುತ್ತಿದ್ದಾರೆ. ವಿವಿಧ ಸಂಘಟನೆಗಳ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು ಅನಂತಮೂರ್ತಿಯವರ ಪಾದಯಾತ್ರೆಗೆ ಬೆಂಬಲ ಸೂಚಿಸಿ ಅವರೊಂದಿಗೆ ಪಾದಯಾತ್ರೆಯಲ್ಲಿ ಸಾಗುತ್ತಿದ್ದಾರೆ.
    ಶನಿವಾರ ದೇವಿಮನೆಯಿಂದ ಪ್ರಾರಂಭವಾದ ಪಾದಯಾತ್ರೆಯೂ ಮಧ್ಯಾಹ್ನದ ವೇಳೆಗೆ ಕುಮಟಾ ತಾಲೂಕಿನ ಕತಗಾಲಕ್ಕೆ ಬಂದಿದ್ದು, ಇಲ್ಲಿನ ಗ್ರಾಮಸ್ಥರು ಭವ್ಯವಾಗಿ ಸ್ವಾಗತ ನೀಡಿ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ.

    ಪಾದಯಾತ್ರೆಗೆ ಮುಖಂಡರುಗಳ ಸಾಥ
    ಇಂದು ದೇವಿಮನೆಯಿಂದ ಪ್ರಾರಂಭವಾದ ಪಾದಯಾತ್ರೆಗೆ ದೇವಿಮನೆಯಲ್ಲಿ ಕೆಡಿಸಿಸಿ ಬ್ಯಾಂಕ್ ನಿಧೇರ್ಶಕ ಶಿವಾನಂದ ಹೆಗಡೆ ಕಡತೋಕಾ, ಮನುವಿಕಾಸ ಸಂಸ್ಥೆಯ ನಿದೇರ್ಶಕ ಗಣಪತಿ ಭಟ್ ಅನಂತಮೂರ್ತಿ ಹೆಗಡೆ ಸಾಥ ನೀಡಿದರೆ, ನಂತರ ಸಾಗಿದ ಪಾದಯಾತ್ರೆಯೂ ಮಧ್ಯಾಹ್ನದ ವೇಳೆಗೆ ಕುಮಟಾ ತಾಲೂಕಿನ ಕತಗಾಲ ತಲುಪಿದ್ದು, ಇಲ್ಲಿ ಕೆಡಿಸಿಸಿ ಬ್ಯಾಂಕ್ ನಿದೇರ್ಶಕ ಗಜಾನನ ಪೈ, ಕತಗಾಲ್ ಪಂಚಾಯತ್ ಅಧ್ಯಕ್ಷ ದೇವು ಗೌಡ, ಪಂಚಾಯತ್ ಸದಸ್ಯರಾದ ಮಹೇಶ್ ದೇಶಭಂಡಾರಿ, ರಾಜೀವ ಭಟ್ ಸೇರಿದಂತೆ ನೂರಾರು ಜನರು ಬೆಂಬಲ ಸೂಚಿಸಿ ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು.

    ಕುಮಟಾದಲ್ಲಿ ಬೃಹತ್ ಸಭೆ ಶಾಸಕ ದಿನಕರ ಶೇಟ್ಟಿ‌ ಭಾಗಿ

    ನಾಳೆ ರವಿವಾರ ಬೆಳಿಗ್ಗೆ ಪಾದಯಾತ್ರೆಯೂ ಕುಮಟಾದ ಬಸ್ ನಿಲ್ದಾಣ ಮುಂಭಾಗ ತಲುಪಲಿದ್ದು, ಬೆಳಿಗ್ಗೆ 8 ಘಂಟೆಗೆ ಸಾರ್ವಜನಿಕರನ್ನುದ್ದೇಶಿಸಿ ಬೃಹತ್ ಪ್ರತಿಭಟನಾ ಸಭೆ ನಡೆಯಲಿದೆ. ಸಭೆಗೆ ಹೊನ್ನಾವರ – ಕುಮಟಾ ಕ್ಷೇತ್ರದ ಶಾಸಕ ದಿನಕರ್ ಶೇಟ್ಟಿಯವರು ಸೇರಿದಂತೆ ಅನೇಕ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಪಾದಯಾತ್ರೆಯ ರೂವಾರಿ ಅನಂತಮೂರ್ತಿ ಹೆಗಡೆ ತಿಳಿಸಿದ್ದಾರೆ.