Satwadhara News

Category: SIRSI

ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ಓಸಿ ಆಡುತ್ತಿದ್ದವರು ಅರೆಸ್ಟ್..!

    ಓಸಿ ಆಡುತ್ತಿದ್ದವರು ಅರೆಸ್ಟ್..!

    ಶಿರಸಿ: ಬನವಾಸಿಯ ಸಾರ್ವಜನಿಕ ಸ್ಥಳವಾದ ಬಸ್ ನಿಲ್ದಾಣ, ಕದಂಬ ಸರ್ಕಲ್‌ ಮತ್ತು ದಾಸನಕೊಪ್ಪ ಸರ್ಕಲ್ ಬಳಿ ಓಸಿ ಆಟ ನಡೆಸುತ್ತಿದ್ದ ನಾಲ್ವರ ಮೇಲೆ ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬನವಾಸಿಯ ಹೊಳೆಮಠದ ಮಾಲತೇಶ ನಾರಾಯಣ ಕನ್ನಿ (60), ಸೊರಬ ರಸ್ತೆಯ ವಿವೇಕಾನಂದ ಆರೇರ (46), ಆದರ್ಶನಗರದ ನಂಜುಂಡ ರಾಜಶೇಖರ (70) ಹಾಗೂ ಹೊಳೆಮಠದ ಪುಟ್ಟಪ್ಪ ಶಿವಪ್ಪ ಕನ್ನಿ (32) ವಿರುದ್ಧ ಕೇಸ್ ದಾಖಲಾಗಿದೆ. ಬನವಾಸಿ ಠಾಣೆ ಪಿಎಸ್‌ಐ ಚಂದ್ರಕಲಾ ಪತ್ತಾರ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿ, 900 ರೂ. ನಗದು, 2 ಬಾಲ್ ಪೆನ್ನು ವಶಪಡಿಸಿಕೊಂಡಿದ್ದಾರೆ.

  • ಸಾರಿಗೆ ಬಸ್‌ಗೆ ಲಾರಿ ಡಿಕ್ಕಿ

    ಸಾರಿಗೆ ಬಸ್‌ಗೆ ಲಾರಿ ಡಿಕ್ಕಿ

    ಶಿರಸಿ: ತಾಲೂಕಿನ ಸೋಂದಾ ಕ್ರಾಸ್ ಬಳಿಯ ಚೌಡಿಕೆರೆ ಹತ್ತಿರ ಸಾರಿಗೆ ಬಸ್‌ಗೆ ಲಾರಿ ಡಿಕ್ಕಿಯಾದ ಪರಿಣಾಮ ಬಸ್ ಜಕಂಗೊಂಡಿದೆ. ಯಲ್ಲಾಪುರದಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್ ಟಿಸಿ ಬಸ್‌ಗೆ ಗುದ್ದಿದ ಲಾರಿಯನ್ನು ಚಾಲಕ ಅಪಘಾತ ಸ್ಥಳದಿಂದ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಆತನ ವಿರುದ್ಧ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಸಂಸದ ಕಾಗೇರಿಯವರ ಮನೆ ಸಮೀಪ ಚಿರತೆ ಪ್ರತ್ಯಕ್ಷ.

    ಸಂಸದ ಕಾಗೇರಿಯವರ ಮನೆ ಸಮೀಪ ಚಿರತೆ ಪ್ರತ್ಯಕ್ಷ.

    ಶಿರಸಿ : ಉತ್ತರಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಮನೆಯ ಅಂಗಳದಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡಿರುವ ಘಟನೆ ನಡೆದಿದೆ.

    ಚಿರತೆ ಬಂದಿರುವುದನ್ನ ಗಮನಿಸಿದ ಕಾಗೇರಿ ಅವರ ಮನೆಯ ಸಾಕು ನಾಯಿ ಚಿರತೆಯನ್ನ ಅಟ್ಟಿಸಿಕೊಂಡು ಹೋಗಿದೆ. ಚಿರತೆ ಬಂದಿರುವ ದೃಶ್ಯ ವಿಶ್ವೇಶ್ವರ ಮನೆಯಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಚಿರತೆ ಬಂದಿರುವುದು ಮೂರು ಪ್ರತ್ಯೇಕ ಕ್ಯಾಮರದಲ್ಲಿ ಸೆರೆಯಾಗಿದೆ. ಇದು ಸಂಸದ ಕಾಗೇರಿಯವರು ಸೇರಿದಂತೆ ಕಾಗೇರಿ ಗ್ರಾಮದ ಜನರನ್ನು ಬೆಚ್ಚಿ ಬಿಳಿಸುವಂತೆ ಮಾಡಿದೆ.

    ಶಿರಸಿ ತಾಲೂಕಿನ ಸುತ್ತಮುತ್ತ ಚಿರತೆ ಆಗಾಗ ಪ್ರತ್ಯಕ್ಷವಾಗುತ್ತಿದ್ದು ಇವು ನರಬಲಿ ಪಡೆಯುವ ಮುನ್ನವೇ ಅರಣ್ಯ ಇಲಾಖೆಯವರು ಮುಂಜಾಗ್ರತೆ ಕ್ರಮವಹಿಸಬೇಕಾಗಿದೆ.

  • ಬೈಕ್ ಮುಖಾಮುಖಿ ಡಿಕ್ಕಿ : ಇಬ್ಬರಿಗೆ ಗಾಯ

    ಬೈಕ್ ಮುಖಾಮುಖಿ ಡಿಕ್ಕಿ : ಇಬ್ಬರಿಗೆ ಗಾಯ

    ಶಿರಸಿ: ತಾಲೂಕಿನ ಕಲಗಾರ ಒಡ್ಡು ಬಳಿ ಬೈಕ್‌ಗಳ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸವಾರರು ಗಾಯಗೊಂಡಿದ್ದಾರೆ. ಕಲಗಾರಿನ ಮಂಜುನಾಥ ಗಣಪತಿ ಭಟ್ಟ ಹಾಗೂ ಇನ್ನೊಂದು ಬೈಕ್‌ ಸವಾರ ಕಡಬಾಳ ಸಮೀಪದ ಆಲದಮನೆಯ ಮಂಜುನಾಥ ನಾರಾಯಣ ಗೌಡ ಗಾಯಗೊಂಡವರಾಗಿದ್ದಾರೆ. ಹುಲೇಕಲ್ ಕಡೆಯಿಂದ ಶಿರಸಿ ಕಡೆಗೆ ಮಂಜುನಾಥ ಗಣಪತಿ ಭಟ್ ಬೈಕ್‌ನ್ನು ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸುತ್ತಿರುವಾಗ ಅದೇ ವೇಳೆ ಇನ್ನೊಂದು ಬೈಕ್ ಸವಾರ ಮಂಜುನಾಥ ನಾರಾಯಣ ಗೌಡ ಶಿರಸಿ ಕಡೆಯಿಂದ ಹುಲೇಕಲ್ ಕಡೆಗೆ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ, ಶಿರಸಿ-ಹುಲೇಕಲ್ ರಸ್ತೆಯ ಕಲಗಾರ ಒಡ್ಡು ಬಳಿ ಮುಖಾಮುಖಿ ಡಿಕ್ಕಿಪಡಿಸಿಕೊಂಡಿದ್ದಾರೆ. ಅಪಘಾತಕ್ಕೆ ಕಾರಣರಾದ ಇಬ್ಬರೂ ಬೈಕ್ ಸವಾರರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ದೀಪಕ ಮಂಜು ಮುಕ್ರಿ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ

  • ಹೃದಯಾಘಾತದಿಂದ ಕೊನೆಯುಸಿರೆಳೆದ ಶಿರಸಿ ಮಾರಿಕಾಂಬಾ ಶಾಲೆಯ ಉಪ ಪ್ರಾಂಶುಪಾಲ ಯಜ್ಞೇಶ್ವರ ನಾಯ್ಕ

    ಹೃದಯಾಘಾತದಿಂದ ಕೊನೆಯುಸಿರೆಳೆದ ಶಿರಸಿ ಮಾರಿಕಾಂಬಾ ಶಾಲೆಯ ಉಪ ಪ್ರಾಂಶುಪಾಲ ಯಜ್ಞೇಶ್ವರ ನಾಯ್ಕ

    ಶಿರಸಿ: ಇಲ್ಲಿನ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಯಜ್ಞೇಶ್ವರ ಆರ್ ನಾಯ್ಕ (56)ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

    ಮೃತರು ಪತ್ನಿ ಈರ್ವರು ಪುತ್ರಿಯರು ಮತ್ತು ಅಪಾರ ವಿದ್ಯಾರ್ಥಿ ಸಮೂಹ ಮತ್ತು ಶಿಕ್ಷಕ ವೃಂದದವರನ್ನು ಬಂದು ಬಳಗ ಅಗಲಿದ್ದಾರೆ.

    ಮೂಲತಃ ಸಿದ್ದಾಪುರ ತಾಲೂಕಿನ ಬೇಡ್ಕಣಿಯವರಾಗಿದ್ದ ಅವರು ಹಾವೇರಿಯಲ್ಲಿ ಮುಖ್ಯೋಪಧ್ಯಾಯರಾಗಿ ಸೇವೆ ಸಲ್ಲಿಸಿದ ಬಳಿಕ ಶಿರಸಿ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ಉಪ ಪ್ರಾಂಶುಪಾಲರಾಗಿ ಕಳೆದ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು.

    ಮೃತ ದೇಹವನ್ನು ಮಾರಿಕಾಂಬಾ ಶಾಲೆಗೆ ತಂದು ಬಳಿಕ ಅವರ ಹೂಟ್ಟೂರಿಗೆ ಸಾಗಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ನೆಚ್ಚಿನ ಉಪ ಪ್ರಾಂಶುಪಾಲರಿಗೆ ಕಣ್ಣೀರಿನಲ್ಲಿ ಅಂತಿಮ ದರ್ಶನ ಪಡೆದರು. ಯಜ್ಞೇಶ್ವರ ನಾಯ್ಕ ಇನ್ನಿಲ್ಲ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಭೀಮಣ್ಣ ನಾಯ್ಕ ಅವರು ಟಿ ಎಸ್ ಎಸ್ ಆಸ್ಪತ್ರಗೆ ತೆರಳಿ ಅಂತಿಮ ದರ್ಶನ ಪಡೆದು ಯಜ್ಞೇಶ್ವರ ನಾಯ್ಕ ಮಾರಿಕಾಂಬಾ ಶಾಲೆಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.

  • ಬಂದ್ ಆಗಲಿದೆ ಕುಮಟಾ ಶಿರಸಿ ರಸ್ತೆ.

    ಬಂದ್ ಆಗಲಿದೆ ಕುಮಟಾ ಶಿರಸಿ ರಸ್ತೆ.

    ಕುಮಟಾ : ತಾಲೂಕಿನಿಂದ ಶಿರಸಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಕಾಮಗಾರಿಗೆ ವೇಗ ನೀಡುವ ನಿಟ್ಟಿನಲ್ಲಿ ಡಿ. 2 ರಿಂದ 2025 ರ ಫೇ. 25 ವರೆಗೆ ಬಂದ್ ಆಗಲಿದ್ದು ಬದಲಿ ಮಾರ್ಗ ಸೂಚಿಸಲಾಗಿದೆ.

    ಹಿಂದೆಯೂ ಕೆಲವು ಬಾರಿ ಇಲ್ಲಿಯ ರಸ್ತೆ ಬಂದ್ ಮಾಡುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿ, ಮತ್ತೆ ನಿರ್ಣಯ ಬದಲಿಸಲಾಗಿತ್ತು ಇದೀಗ ಮತ್ತೊಮ್ಮೆ ಪ್ರಕಟಣೆ ಹೊರಬಿದ್ದಿದೆ.

    ಬದಲಿ ಮಾರ್ಗ ಯಾವುದು?

    1. ಕುಮಟಾ-ಶಿರಸಿ ಮೂಲಕ ಸಿದ್ದಾಪುರ ರಾಷ್ಟ್ರೀಯ ಹೆದ್ದಾರಿ 766-ಇ ಲಘು ವಾಹನಗಳು ಸಂಚರಿಸಬಹುದು.2. ಅಂಕೋಲಾ-ಶಿರಸಿ ಮೂಲಕ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63 ಮತ್ತು ರಾಜ್ಯ ಹೆದ್ದಾರಿ-93 ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಬಹುದು.
    2. ಅಂಕೋಲಾ-ಶಿರಸಿ ಮೂಲಕ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿ 63 ಮತ್ತು ರಾಜ್ಯ ಹೆದ್ದಾರಿ-93 ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಬಹುದು.
    3. ಮಂಗಳೂರು-ಹೊನ್ನಾವರ-ಶಿರಸಿ ಮೂಲಕ ಸಿದ್ದಾಪುರ-ಮಾವಿನಗುಂಡಿ ಮಾರ್ಗವಾಗಿ ಎಲ್ಲಾ ವಿಧದ ವಾಹನಗಳು ಸಂಚರಿಸಬಹುದು.

    ರಾಷ್ಟ್ರೀಯ ಹೆದ್ದಾರಿ-766 ಇ ಕುಮಟಾ-ಶಿರಸಿ ರಸ್ತೆಯಲ್ಲಿ ಉನ್ನತೀಕರಣ ಕಾಮಗಾರಿ ಸಮಯದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಸೂಚಿಸಿರುವ ಬದಲಿ ಮಾರ್ಗದಲ್ಲಿ ಸಂಚರಿಸಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ತೋಟ ಗದ್ದೆಗಳಿಗೆ ನುಗ್ಗಿದ ಕಾಡಾನೆಯ ಡಂಡು : ಪೈರು ಬರುತ್ತಿರುವ ಭತ್ತದಗದ್ದೆ,ಅಡಿಕೆ-ಬಾಳೆಗಿಡ ನಾಶ.

    ತೋಟ ಗದ್ದೆಗಳಿಗೆ ನುಗ್ಗಿದ ಕಾಡಾನೆಯ ಡಂಡು : ಪೈರು ಬರುತ್ತಿರುವ ಭತ್ತದಗದ್ದೆ,ಅಡಿಕೆ-ಬಾಳೆಗಿಡ ನಾಶ.

    ಶಿರಸಿ : ತಾಲೂಕಿನ ಬಿಸಲಕೊಪ್ಪ ಸಮೀಪದ ಶಿರಸಿ-ಹುಬ್ಬಳ್ಳಿ ರಸ್ತೆಯ ಪಕ್ಕದಲ್ಲಿರುವ ವಡಗೇರಿ ಗ್ರಾಮಕ್ಕೆ 5-6 ಕಾಡಾನೆಗಳುಳ್ಳ ಹಿಂಡೊಂದು ಹಠಾತ್ ನುಗ್ಗಿ ಬಂದು ಕೃಷಿ ಜಮೀನಿನಲ್ಲಿ ರಾತ್ರಿಯಿಡೀ ಲೂಟಿಗೈದು, ಬೆಳೆದು ನಿಂತ ಭತ್ತದ ಗದ್ದೆ ಹಾಗೂ ಅಡಿಕೆ ತೋಟದಲ್ಲಿನ ಅಡಿಕೆ ಗಿಡ,ಬಾಳೆ ಮರಗಳನ್ನು ನಾಶ ಪಡಿಸಿದ ಹೃದಯವಿದ್ರಾವಕ ದುರ್ಘಟನೆ ಶುಕ್ರವಾರ ಸಂಜೆ ಜರುಗಿದೆ.

    ಸಮೀಪದ ಅರಣ್ಯ ಪ್ರದೇಶದಲ್ಲಿ ಕಂಡು ಬಂದ ಆನೆಗಳ ಗುಂಪೊಂದನ್ನು ಚದುರಿಸುವ ಪ್ರಯತ್ನ ನಡೆಸಿದ್ದರಿಂದ
    ಈ ಆನೆಗಳು ಎಲ್ಲೆಂದರಲ್ಲಿ ಓಡಲು ಪ್ರಾರಂಭಿಸಿ, ಪಟಾಕಿ-ಗರ್ನಾಲು ಶಬ್ದ ಕೇಳಿದಕೂಡಲೇ ತಮ್ಮ ರಕ್ಷಣೆಗೋಸ್ಕರ ಕೃಷಿತೋಟಕ್ಕೆ ನುಗ್ಗಿರಬಹುದೆಂದೂ,
    ಆನೆಗಳು ತೋಟಕ್ಕೆ ನುಗ್ಗಿದ್ದನ್ನು ಕಂಡು ಅವನ್ನು ಚದುರಿಸುತ್ತ ಬಂದವರು ಅಲ್ಲಿಂದ ಕಾಲ್ಕಿತ್ತಿರಬಹುದಾಗಿಯೂ ಶಂಕಿಸಲಾಗಿದೆ.

    ನುಗ್ಗಿದ ಈ ಆನೆಗಳು ರಾತ್ರಿಯಿಡಿ ಭತ್ತದ ಗದ್ದೆಯಲ್ಲಿ ಹೊರಳಾಡಿ ಗದ್ದೆಯನ್ನು ಕೆರೆಯಂತೆ ಮಾಡಿ ಬೆಳೆ ನಾಶಪಡಿಸಿರುವ ದೃಶ್ಯಾವಳಿ ಹಾಗೂ
    ತೋಟದಲ್ಲಿ ಬೆಳೆದು ನಿಂತ ಅಡಿಕೆ ಗಿಡಗಳು,ಬಾಳೆ ಮರಗಳನ್ನು ಈ ಮದಗಜಗಳು ನಾಶಪಡಿಸಿರುವ ದೃಶ್ಯಾವಳಿಯ ವಿಡಿಯೋ ತುಣುಕುಗಳು ವೈರಲ್ ಆಗಿವೆ.
    ಈ ವಿಡಿಯೋವು ಕೃಷಿಕರ ಸಂಕಟಗಳನ್ನು ಹೆಚ್ಚಿಸುತ್ತಿದ್ದು,ಇತರ ನೋಡುಗರ ಮನಗಳನ್ನೂ ಕರಗಿಸುವಂತಿದೆ.

    ಕಾಡಾನೆಗಳ ಹಾವಳಿ ಕುರಿತು ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಕೂಡಲೇ ಜೀವ ಹಾಗೂ ಬೆಳೆ ರಕ್ಷಣೆ ಬಗ್ಗೆ ಮುಂಜಾಗೃತಾ ಕ್ರಮಕೈಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕೃಷಿಕರಿಗಾದ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಿ,ಸಾಂತ್ವಾನ ನೀಡಬೇಕಾಗಿಯೂ ನೊಂದ ಸ್ಥಳೀಯ ಕೃಷಿಕ ಮಹೇಂದ್ರ ಎಸ್.ಹೆಗಡೆ ಬಳಗಂಡಿ ಸರಕಾರವನ್ನು ಆಗ್ರಹಿಸಿದ್ದಾರೆ.

  • ಬಹುಬಗೆಯ ಆರಾಧನೆಯೊಂದಿಗೆ ದೊಡ್ಡಬ್ಬ ಸಂಪನ್ನ.

    ಬಹುಬಗೆಯ ಆರಾಧನೆಯೊಂದಿಗೆ ದೊಡ್ಡಬ್ಬ ಸಂಪನ್ನ.

    ಕುಮಟಾ : ಬೆಳಕಿನ ಹಬ್ಬ ದೀಪಾವಳಿ ಹಲವು ವೈಶಿಷ್ಟ್ಯಗಳನ್ನು ಕಟ್ಟಿಕೊಡುತ್ತದೆ. ಮೂರು ದಿನಗಳ ಕಾಲ ಅತ್ಯಂತ ವಿಜ್ರಂಬಣೆಯಿಂದ ನಡೆದ ದೀಪಾವಳಿ ಹಬ್ಬವು ಸಂಪನ್ನವಾಗಿದ್ದು, ಬಲಿಂದ್ರನನ್ನು ಕಳುಹಿಸಿ ಕೊಡುವುದರ ಮೂಲಕ ಹಬ್ಬಕ್ಕೆ ಮಂಗಲ ಹಾಡಲಾಯಿತು.

    ಇನ್ನು ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ತುಂಬಾ ಮಹತ್ವವಿದ್ದು. ಹಬ್ಬದಲ್ಲಿ ಮರೆಯದೇ ಗೋವನ್ನು ಪೂಜಿಸುವ ಸಂಪ್ರದಾಯವಿದೆ. ಅಂತೆಯೇ ಹಬ್ಬದ ಪಾಡ್ಯದ ದಿನದಂದು ಬಹು ವಿಶೇಷವಾಗಿ ಗೋ ಪೂಜೆ ಸಂಪನ್ನಗೊಂಡಿತು. ಗೋವುಗಳಿಗೆ ವಿಶೇಷ ಅಲಂಕಾರ ಮಾಡಿ, ಪೂಜಿಸಿ, ದನಗಳನ್ನು ಬೆಚ್ಚಿಸುವ ಪಾರಂಪರಿಕ ಆಚರಣೆಗಳೂ ಬಹು ವಿಶೇಷವಾಗಿ ನಡೆದವು.

    ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳ ಜೊತೆಯಲ್ಲಿ ಹಬ್ಬದ ಅಡುಗೆ ಮಾಡಿ ಸಂಭ್ರಮಿಸುವ ಜೊತೆಗೆ, ಯುವಕರು ಹಾಗೂ ಹುಡುಗರು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು.

    ಒಟ್ಟಿನಲ್ಲಿ ದೀಪಾವಳಿಯ ಹಬ್ಬವು ಬಹು ವಿಶೇಷವಾಗಿ ನಡೆದಿದ್ದು, ತಾಲೂಕಿನಲ್ಲಿ ಅತ್ಯಂತ ವಿಜ್ರಂಭಣೆಯಿಂದ ಮೂರು ದಿನಗಳ ಕಾಲ ಹಬ್ಬ ಆಚರಿಸಲ್ಪಟ್ಟಿತು. ಊರಿನ ಹಾಗೂ ಪರ ಊರಿನ ಅನೇಕರು ವಿವಿಧ ಸಂಪ್ರದಾಯಗಳು, ಪೂಜೆ ಪುನಸ್ಕಾರದಲ್ಲಿ ಭಾಗವಹಿಸಿ ಹಬ್ಬದೂಟವನ್ನು ಸವಿದು ಸಂತಸ ಪಟ್ಟರು.

  • ನಿಲ್ಲಿಸಿದ್ದ ಬೊಲೆರೊ ವಾಹನಕ್ಕೆ ಬೈಕ್ ಡಿಕ್ಕಿ

    ನಿಲ್ಲಿಸಿದ್ದ ಬೊಲೆರೊ ವಾಹನಕ್ಕೆ ಬೈಕ್ ಡಿಕ್ಕಿ

    ಯಲ್ಲಾಪುರ: ನಿಲ್ಲಿಸಿದ್ದ ಬೊಲೆರೊ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಸಬಗೇರಿ ಬಳಿ ನಡೆದಿದೆ. ಕಾಳಮ್ಮನಗರದ ಇಮಾಮ್ ಖಾಸೀಂ ಮೆಹಬೂಬಲಿ ಮುಲ್ಲಾನವರ ಗಾಯಗೊಂಡ ಸವಾರ. ಈತ ಯಲ್ಲಾಪುರದಿಂದ ಅಂಕೋಲಾ ಕಡೆಗೆ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಸಬಗೇರಿ ಬಳಿ ಮನೆಯ ಎದುರು ನಿಲ್ಲಿಸಿಟ್ಟಿದ್ದ ಬುಲೆರೊಗೆ ಡಿಕ್ಕಿ ಹೊಡೆದಿದೆ. ಎರಡೂ ವಾಹನಗಳು ಜಖಂಗೊಂಡಿದ್ದು, ಬೈಕ್ ಸವಾರ ಗಾಯಗೊಂಡಿದ್ದಾನೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಆಗಸ್ಟ 10 ರಂದು ಹೆಗಡೆಕಟ್ಟಾದಲ್ಲಿ “ಕೈ ಚಕ್ಕುಲಿ ಕಂಬಳ” ವಿವಿಧ ಸ್ಪರ್ಧೆ, ಪ್ರದರ್ಶನ ಆಯೋಜನೆ

    ಆಗಸ್ಟ 10 ರಂದು ಹೆಗಡೆಕಟ್ಟಾದಲ್ಲಿ “ಕೈ ಚಕ್ಕುಲಿ ಕಂಬಳ” ವಿವಿಧ ಸ್ಪರ್ಧೆ, ಪ್ರದರ್ಶನ ಆಯೋಜನೆ

    ಶಿರಸಿ: ಸ್ಥಳೀಯ ಸಾಂಪ್ರದಾಯಿಕ ಪದ್ಧತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿರಸಿ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆಗಸ್ಟ 10 ಮದ್ಯಾಹ್ನ 3.30 ಕ್ಕೆ ಸ್ಥಳೀಯ ಸಾರ್ವಜನಿಕರ ಸಹಕಾರ, ಸಹಯೋಗದೊಂದಿಗೆ ಕೈ ಚಕ್ಕುಲಿ ಕಂಬಳ ಆಯೋಜಿಸಲಾಗಿದೆ. ನಮ್ಮ ಸಂಪ್ರದಾಯಗಳು ನಶಿಸಿಹೋಗುತ್ತಿವೆ, ಗಣೇಶ ಚೌತಿ ಹತ್ತಿರ ಬಂತೆAದರೆ ಊರವರೆಲ್ಲ ಒಂದುಗೂಡಿ ಕೈಯಲ್ಲಿಯೇ ಚಕ್ಕುಲಿ ಸುತ್ತಿ ಹಬ್ಬವನ್ನು ಸಂಭ್ರಮದಿAದ ಆಚರಿಸುತ್ತಿದ್ದರು. ಕೈಯಲ್ಲಿ ಸುತ್ತಿದ ಚಕ್ಕುಲಿ ಕೇವಲ ರುಚಿ ಅಷ್ಟೇ ಅಲ್ಲ ಹೆಚ್ಚು ದಿನ ಇಟ್ಟುಕೊಂಡು ತಿನ್ನಲೂ ಸಾಧ್ಯವಿದೆ. ಈಗೀಗ ಕಡಿಮೆಯಾಗುತ್ತಿರುವ ಹೆಮ್ಮೆಯ ಸಂಪ್ರದಾಯ ಪ್ರೋತ್ಸಾಹಿಸುವ ಸಲುವಾಗಿ ಚಕ್ಕುಲಿ ಕಂಬಳ ಇದೇ ಪ್ರಥಮ ಬಾರಿಗೆ ಗ್ರಾಮೀಣ ಭಾಗದ ಹೆಗಡೆಕಟ್ಟಾ ಸೊಸೈಟಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

    ವಿವಿಧ ಸ್ಪರ್ಧೆ, ಕರಕುಶಲ, ಚಿತ್ರಕಲಾ ಪ್ರದರ್ಶನ ಆಯೋಜನೆ

    ನವೀನ ಆಕರ್ಷಣೆಯಾಗಿ ಯಾವುದೇ ಭಾಗದ ಸಾರ್ವಜನಿಕರು, ಊರವರಿಗೆ ಕೈ ಚಕ್ಕುಲಿ ತಿನ್ನುವ, ಕೈ ಚಕ್ಕುಲಿ ಸುತ್ತುವ ಸ್ಪರ್ಧೆ ಆಯೋಜಿಸಲಾಗಿದ್ದು ಅಲ್ಟಾçಟೆಕ್ ಸಿಮೆಂಟ್ ವತಿಯಿಂದ ಆಕರ್ಷಕÀ ಬಹುಮಾನ ಇದೆ. ಅಮರ ಟೀ ಪ್ರೆöÊ ಲಿ ಅವರಿಂದ ದಿನಪೂರ್ತಿ ಉಚಿತ ಚಹಾ ವ್ಯವಸ್ಥೆಯಿದೆ. ಅಲ್ಲದೇ ಸ್ಥಳಿಯ ಮಹಿಳೆಯರ ಕರಕುಶಲತೆ ಆರತಿ ತಾಟು, ಮೊಗ್ಗಿನ ಜಡೆ, ಇನ್ನಿತರ ಕಲಾಪ್ರದರ್ಶನ ನಡೆಯಲಿದೆ. ಕು. ಹಿಮಾಂಕ ಹೆಗಡೆ, ಶಶಾಂಕ ನಾಯ್ಕ ಇನ್ನಿತರ ವಿದ್ಯಾರ್ಥಿಗಳ ಚಿತ್ರಕಲಾ ಪ್ರದರ್ಶನ ಕೂಡ ಇರಲಿದೆ. 

    ವಿಶೇಷ ಆಕರ್ಷಣೆಯಾಗಿ ಅತಿ ದೊಡ್ಡ “ಕೈ ಚಕ್ಕುಲಿ” ಮತ್ತು “ತೇರಿನ ಆರತಿ”

    ಗೋಳಿಕೊಪ್ಪದ ಶರ್ವಾಣಿ ಭಟ್ಟ ಅವರು ವಿವಿಧ ತರಕಾರಿ ಬೀಜ, ಪಿಸ್ತಾ ಸಿಪ್ಪೆಗಳಿಂದಲೇ ತಯಾರಿಸಿದ “ತೇರಿನ ಆರತಿ” ಪ್ರದರ್ಶನವಾಗಲಿದೆ. ಇಪ್ಪತ್ತಕ್ಕೂ ಹೆಚ್ಚು ಊರವರು ಆಗಮಿಸಿ ಕೈ ಚಕ್ಕುಲಿ ತಾಜಾ ಎಣ್ಣೆಯಿಂದ ಮಾಡಲಿದ್ದು, ಕೈಯಲ್ಲಿ ಸುತ್ತಿದ ಅತಿ ದೊಡ್ಡ ಚಕ್ಕುಲಿ ಪ್ರದರ್ಶನವಾಗಲಿದೆ. ಅಂದು ಕೈಯಲ್ಲಿ ಮಾಡಿದ ಚಕ್ಕುಲಿ ಮಾರಾಟ ಕೂಡ ಇದ್ದು ಅಲ್ಲಿಯೆ ತಿನ್ನಲು ಮತ್ತು ಖರೀದಿಸಿ ಒಯ್ಯಲು ಅವಕಾಶವಿದೆ. ಉತ್ತರಕನ್ನಡ ಸೇರಿದಂತೆ ಶಿರಸಿ ಸುತ್ತಲಿನ ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಲು ಸಂಘಟಕರಾದ ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷರು, ಆಡಳಿತ ಮಂಡಳಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಊರ ಸಾರ್ವಜನಿಕರು ಕೋರಿದ್ದಾರೆ. ಹೆಚ್ಚಿನ ಮಾಹಿಗೆ ಸ್ಪರ್ಧೆ ಮತ್ತು ಪ್ರದರ್ಶನಕ್ಕೆ ಹೆಸರು ನೋಂದಾಯಿಸಿಕೊಳ್ಳುವವರು 9972382333 ಮೊಬೈಲ ಸಂಖ್ಯೆಗೆ ಕರೆ ಮಾಡಬಹುದು.