ಕುಮಟಾ : ಎಡಬಿಡದೆ ಸುರಿಯುತ್ತಿರುವ ಮಳೆಗೆ ತಾಲೂಕಿನ ಅಲ್ಲಲ್ಲಿ ಗುಡ್ಡಕುಸಿತ ಮುಂದುವರಿದಿದೆ. ಅಂಕೋಲಾದ ಶಿರೂರು, ಕುಮಟಾದ ಬರ್ಗಿ ಬಳಿಕ ಇದೀಗ ಸಿದ್ದಾಪುರ ಕುಮಟಾ ಮಾರ್ಗದ ಉಳ್ಳೂರಮಠ ಕ್ರಾಸ್ ಬಳಿ ಬೃಹತ್ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ.
ಸುಮಾರು ಮುಕ್ಕಾಲು ಕಿಲೋಮಿಟರ್ ದೂರದಿಂದ ಗುಡ್ಡ ಕುಸಿದು ಬಂದು ರಸ್ತೆಯ ಮೇಲೆ ಬಿದ್ದಿದೆ. ಹಾಗೂ ಮತ್ತು ಗುಡ್ಡ ಕುಸಿಯುತ್ತಲೇ ಇದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಸುಮಾರು ಒಂದು ಎಕರೆಗೂ ಅಧಿಕ ಜಾಗದಲ್ಲಿ ಗುಡ್ಡಕುಸಿತವಾಗಿದ್ದು, ಇದರಿಂದ ಕುಮಟಾ-ಸಿದ್ದಾಪುರ ರಸ್ತೆ ಸಂಚಾರ ಸ್ಥಗಿತವಾಗಿದೆ. ಬೃಹತ್ ಪ್ರಮಾಣದಲ್ಲಿ ಮರಗಳು ರಸ್ತೆಯಲ್ಲಿ ಮೇಲೆ ಬಂದು ಬಿದ್ದಿದೆ. ಘಟನೆಯಿಂದ ಸುತ್ತಲ ಜನರು ಆತಂಕಗೊಂಡಿದ್ದಾರೆ.
ಶಿರಸಿ: ತಾಲೂಕಿನ ಶಿರಸಿ – ಕುಮಟಾ ರಾಷ್ಟ್ರೀಯ ಹೆದ್ದಾರಿಯ ರಾಗಿಹೊಸಳ್ಳಿ ಸಮೀಪದಲ್ಲಿ ಮಂಗಳವಾರ ನಸುಕಿನಲ್ಲಿ ಧರೆ ಕುಸಿದ ಪರಿಣಾಮ ರಸ್ತೆ ಸಂಚಾರ ಬಂದಾಗಿದೆ. ಋಹತ್ ಪ್ರಮಾಣದಲ್ಲಿ ಮಣ್ಣು ರಸ್ತೆ ಮೇಲೆ ಕುಸಿದ ಪರಿಣಾಮ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ಕೆಲಸದಲ್ಲಿ ನಿರತವಾಗಿರುವ ಅಧಿಕಾರಿಗಳ ಮಾಹಿತಿಯಂತೆ ಬೆಳಿಗ್ಗೆ 11 ಗಂಟೆಯೊಳಗೆ ರಸ್ತೆ ಸಂಚಾರಕ್ಕೆ ಕಲ್ಪಿಸುವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಕಳೆದ 3 ವರ್ಷಗಳ ಹಿಂದೆಯೂ ಇದೇ ಸ್ಥಳದಲ್ಲಿ ಧರೆ ಕುಸಿದ ವರದಿ ದೊರೆತಿದೆ. ಕತಗಾಲಿನಲ್ಲಿಯೂ ಸಹ ರಸ್ತೆಯಲ್ಲಿ ನೀರು ತುಂಬಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಶಿರಸಿ: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಟಿಎಸ್ಎಸ್ ಪ್ರಕರಣಕ್ಕೆ ಹೈಕೋರ್ಟ್ ಬಿಗ್ ಟ್ವಿಸ್ಟ್ ನೀಡಿದ್ದು, ಸಂಸ್ಥೆಗೆ ಆಡಳಿತಾಧಿಕಾರಿ ನೇಮಿಸಿ ಡಿಆರ್ ಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಬೆಳಗಾವಿ ಜೆಆರ್ ನ್ಯಾಯಾಲಯ ಈ ಹಿಂದೆ ತಡೆ ನೀಡಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆಯ ಕೆಲ ಶೇರು ಸದಸ್ಯರು ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದರು. ಗುರುವಾರ ಸುದೀರ್ಘ ಮೂರೂವರೆ ಘಂಟೆಗಳ ಕಾಲ ವಾದ-ಪ್ರತಿವಾದಗಳನ್ನು ಆಲಿಸಿದ ಧಾರವಾಡದ ಉಚ್ಛ ನ್ಯಾಯಾಲಯ, ಬೆಳಗಾವಿ ಜೆಆರ್ ನೀಡಿದ್ದ ತಡೆಯಾಜ್ಞೆಗೆ ತಡೆ ನೀಡಿದ್ದು, ಆ ಮೂಲಕ ಉತ್ತರ ಕನ್ನಡ ಜಿಲ್ಲಾ ಡಿಆರ್ ಕೋರ್ಟ್ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ ಎಂದು ಸುದ್ದಿಯಾಗಿದೆ.
ಸಹಕಾರಿ ಸಂಘಗಳ ಕಾಯ್ದೆಯ ಕೆಲ ಕಾನೂನು ಉಲ್ಲಂಘಿಸುವುದರ ಮೂಲಕ ಅಧಿಕಾರಕ್ಕೇರಿದ್ದಾರೆ ಎಂದು ಆರೋಪಿಸಲಾಗಿರುವ ಗೋಪಾಲಕೃಷ್ಣ ವೈದ್ಯ ಮತ್ತೀಘಟ್ಟ ನೇತೃತ್ವದ ಹೊಸ ಆಡಳಿತ ಮಂಡಳಿಗೆ ಇದು ಹಿನ್ನಡೆಯಾಗಿದ್ದು, ಇದೇ ತಿಂಗಳದಲ್ಲಿಯೇ ವಿಚಾರಣಾ ದಿನಾಂಕವನ್ನು ನೀಡಿ ಹೈಕೋರ್ಟ್ ಆದೇಶ ನೀಡಿದೆ ಎನ್ನಲಾಗಿದೆ.
ಶಿರಸಿ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮತ್ತು ಪರಿಸರ ಸಂಘ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಶಿರಸಿಯ ಶ್ರೀ ಮಾರಿಕಾಂಬಾ ಪ್ರೌಢ ಶಾಲೆಯ ಹತ್ತನೇ ವರ್ಗದ ವಿದ್ಯಾರ್ಥಿನಿ ಜಿ.ಎನ್. ಸಾದ್ವಿ ಆಂಗ್ಲ ಭಾಷಾ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಬೆಂಗಳೂರಿನಲ್ಲಿ ಜೂನ್ ೮ರಂದು ಬಹುಮಾನ ಪ್ರದಾನ ಸಮಾರಂಭ ನಡೆಯಲಿದೆ. ಪ್ರತಿಭಾವಂತ ವಿದ್ಯಾರ್ಥಿನಿಯಾಗಿರುವ ಈಕೆ ಶಿಕ್ಷಕ ದಂಪತಿಗಳಾದ ನಾಗರಾಜ ಎಂ ಮಡಿವಾಳ ಹಾಗೂ ಸೀಮಾ ಮಡಿವಾಳ ಅವರ ಪುತ್ರಿ.
ಸಿದ್ದಾಪುರ: ಸಿದ್ದಾಪುರ ಸಾಗರ ರಾಜ್ಯ ಹೆದ್ದಾರಿಯ ಅರೆಂದೂರು ಸಮೀಪ ಸಾರಿಗೆ ಬಸ್ ಹಾಗೂ ಪಿಕ್ಅಪ್ ವಾಹನದ ನಡುವೆ ಡಿಕ್ಕಿ ಸಂಭವಿಸಿ ಪಿಕ್ಅಪ್ ವಾಹನ ಚಾಲಕನಿಗೆ ತೀವ್ರತರನಾದ ಗಾಯಗಳಾದ ಘಟನೆ ಸಂಭವಿಸಿದೆ. ಶಿರಸಿಯಿಂದ ಸಾಗರಕ್ಕೆ ಹೋಗುತ್ತಿದ್ದ ಸಾರಿಗೆ ಬಸ್ ಹಾಗೂ ಸಾಗರ ಕಡೆಯಿಂದ ಸಿದ್ದಾಪುರ ಕಡೆಗೆ ಪಿಕ್ಅಪ್ ವಾಹನ ಬರುತ್ತಿತ್ತು ಎನ್ನಲಾಗಿದ್ದು, ಗಾಯಾಳುಗಳನ್ನು ಸಾಗರ ಆಸ್ಪತ್ರೆಗೆ ರವಾನಿಸಲಾಗಿದೆ. ಪಿಕ್ಅಪ್ ವಾಹನ ಸಾಗರದ್ದೆಂದು ಹೇಳಲಾಗಿದ್ದು, ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕುಮಟಾ: ಲೋಕಸಭಾ ಚುನಾವಣಾ ಮತ ಎಣಿಕೆ ಜಿಲ್ಲಾ ಮತ ಎಣಿಕೆಯ ಕೇಂದ್ರ ಕುಮಟಾದಲ್ಲಿ ಅಂತಿಮ ಹಂತಕ್ಕೆ ಬಂದಿದ್ದು, ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಅಂತರದಲ್ಲಿ ಮುನ್ನಡೆ ಇರುವ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಗೆಲುವಿನ ನಗೆ ಬೀರಿದ್ದಾರೆ. ಕಾಂಗ್ರೆಸ್ ನ ಅಂಜಲಿ ನಿಂಬಾಳ್ಕರ್ ಹಿನ್ನೆಡೆ ಅನುಭವಿಸಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಕಾಗೇರಿ ಗೆಲುವಿನ ನಗು ಬೀರಿದ್ದಾರೆ.
ಶಿರಸಿ : ಟಿಎಸ್ಎಸ್ ಗೆ ಆಡಳಿತಾಧಿಕಾರಿ ನೇಮಿಸಿ ಜಿಲ್ಲಾ ಸಹಕಾರ ನ್ಯಾಯಾಲಯ ಹೊರಡಿಸಿದ್ದ ಆದೇಶಕ್ಕೆ ಜಂಟೀ ರಿಜಿಸ್ಟ್ರಾರ್ ತಡೆಯಾಜ್ಞೆ ನೀಡಿದ್ದಾರೆ. ಇದರಿಂದಾಗಿ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯರ ಬಣದ ಕೈ ಮೇಲಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ ಎಂದೇ ಹೇಳಲಾಗಿದೆ.
ಟಿಎಸ್ಎಸ್ ಎದುರು ಸಾರ್ವಜನಿಕರು ಜಮಾಯಿಸಿದ್ದು, ಚಟುವಟಿಕೆಗಳ ಕೇಂದ್ರ ಸ್ಥಾನವಾಗಿದೆ. ಇದೀಗ ಹಲವು ದಿನಗಳಿಂದ ಟಿಎಸ್ಎಸ್ ಸುದ್ದಿಯಾಗುತ್ತಿದ್ದು, ಹಿಂದಿನ ಆಡಳಿತ ಮಂಡಳಿ ಹಾಗೂ ಈಗಿನ ಆಡಳಿತ ಮಂಡಳಿಯ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದೆ.
ಶಿರಸಿ : ವ್ಯಕ್ತಿಯೊಬ್ಬರು ಕಾಣೆಯಾದ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ಗಾಂಧಿನಗರದ ಹುಲಿಯಪ್ಪನಗುಡ್ಡದ ಶಿವರಾಯ ಹನುಮಂತಪ್ಪ ದೇಸಾಯಿ (42) ಕಾಣೆಯಾದ ವ್ಯಕ್ತಿಯಾಗಿದ್ದಾರೆ. ಇವರು. ಮೇ 15 ರಂದು ತನ್ನ ಮಗನನ್ನು ಬೈಕ್‌ನಿಂದ ನಗರದ ಡೈವರ್‌ಕಟ್ಟೆಯ ಬಳಿ ಇಳಿಸಿ, ಇಲ್ಲಿಯೇ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವರು, ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ ಎಂದು ಪತ್ನಿ ನಾಗರತ್ನ ಶಿವರಾಯ ದೇಸಾಯಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
ಶಿರಸಿ: ತಾಲೂಕಿನ ಕೆಂಗ್ರೆಹೊಳೆ ಬಳಿ ನೀರಿನ ಮಟ್ಟ ಪರಿಶೀಲನೆ ಮಾಡುತ್ತಿರುವ ಸಂದರ್ಭದಲ್ಲಿ ಶಾಸಕ ಭೀಮಣ್ಣ ನಾಯ್ಕ ಹಾಗೂ ನಗರಸಭೆ ಪೌರಾಯುಕ್ತ ಕಾಂತರಾಜ ಹಾಗೂ ನಗರಸಭೆ ಸದಸ್ಯ ಖಾದರ ಆನವಟ್ಟಿ ಮೇಲೆ ಏಕಾಏಕಿ ಜೇನು ಹುಳುಗಳು ದಾಳಿ ನಡೆಸಿವೆ. ಜೇನು ದಾಳಿಯಿಂದ ಮೂವರೂ ಸಣ್ಣಪುಟ್ಟ ಗಾಯಗೊಂಡಿದ್ದು, ತಕ್ಷಣ ಅವರನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದ್ದು, ಯಾರೂ ಆತಂಕಪಡುವ ಅವಶ್ಯಕತೆಯಿಲ್ಲ. ಎಲ್ಲರೂ ಆರೋಗ್ಯದಿಂದ ಇದ್ದಾರೆ ಎಂಬ ಮಾಹಿತಿ ಲಭಿಸಿದೆ.
ಕುಮಟಾ : ಮಂಗಳೂರು ಹಾಗೂ ಕರ್ನಾಟಕದ ಪ್ರಮುಖ ನಗರಗಳಲ್ಲಿ ಈಗಾಗಲೇ ಅತ್ಯುತ್ತಮ ಶಿಕ್ಷಣ ನೀಡುತ್ತಿರುವ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತರಬೇತಿ ಪಡೆಯಲು ವಿದ್ಯಾರ್ಥಿಗಳಿಗೆ ಮೊದಲ ಆಯ್ಕೆ ಎಂಬಂತೆ ಗುರುತಿಸಿಕೊಂಡಿರುವ ವಿಧಾತ್ರಿ ಅಕಾಡೆಮಿ ಕಳೆದ ಐದು ವರ್ಷಗಳಿಂದ ಕುಮಟಾದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ.ಕೆ ಭಂಡಾರ್ಕರ್ಸ ‘ಸರಸ್ವತಿ ಪಿ.ಯು ಕಾಲೇಜಿನ’ ಮೂಲಕ ಉತ್ತರ ಕನ್ನಡದಲ್ಲಿಯೇ ಹೊಸ ಸಂಚಲನ ಮೂಡಿಸುವ ಜೊತೆಗೆ, ನಿರಂತರ ಸಾಧನೆಯ ಮೂಲಕವೂ ಹೆಸರುಗಳಿಸಿದೆ. ಹೀಗಾಗಿ ಕೊಂಕಣ ಎಜ್ಯುಕೇಶನ್ ಹಾಗೂ ವಿಧಾತ್ರಿ ಅಕಾಡೆಮಿ ಸಹಭಾಗಿತ್ವದಲ್ಲಿ ನಿರಂತರ ಸಾಧನೆಯ ಮೂಲಕ, ವಿದ್ಯಾಗಿರಿಯನ್ನು ನಿಜಾರ್ಥದಲ್ಲಿ ಜ್ಞಾನ ಶಿಖರವಾಗಿಸಿದೆ “ಸರಸ್ವತಿ ಪಿ.ಯು ಕಾಲೇಜು”.
KCET, JEE (Mains), NEET, NATA, NDA, AGRI ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಳೆದ ನಾಲ್ಕೈದು ವರ್ಷದಿಂದ, ಕರೋನಾ ಸಂಕಷ್ಟದ ಸಮಯದಲ್ಲಿಯೂ ಆನ್ಲೈನ್ ಮೂಲಕ ಅತ್ಯುತ್ತಮ ಮಾರ್ಗದರ್ಶನ ನೀಡಿ ಸೈ ಎನಿಸಿಕೊಂಡಿರುವ ಸಂಸ್ಥೆ ಇದಾಗಿದೆ. ವಿದ್ಯಾರ್ಥಿಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ಅಗತ್ಯ ಮಾರ್ಗದರ್ಶನ ಮಾಡುತ್ತ, ಅವರಿಗೆ ಅಗತ್ಯವಾದ ಶೈಕ್ಷಣಿಕ ಪರಿಕರ ಹಾಗೂ ಪ್ರಾಯೋಗಿಕ ತರಗತಿ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ.
ಕಳೆದ ನಾಲ್ಕು ವರ್ಷಗಳಿಂದ 100%ದ ಸಾಧನೆ ಮಾಡುತ್ತಿರುವ ಸಂಸ್ಥೆ ಇದಾಗಿದೆ. ೨೦೨೩-೨೪ನೇ ಸಾಲಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳಿಸಿ ರಾಜ್ಯ ಮಟ್ಟದಲ್ಲಿ ನಾಲ್ಕು ಸ್ಥಾನವನ್ನು ಪಡೆದು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಶ್ರಾವ್ಯ ಭಟ್ಟ 594 ಅಂಕಗಳಿಸಿ ರಾಜ್ಯ ಮಟ್ಟದಲ್ಲಿ 5 ನೇ ಸ್ಥಾನ, ಜಿಲ್ಲೆಗೆ ಮೊದಲ ಸ್ಥಾನ ಪಡೆದು ಕಾಲೇಜಿಗೆ ಪ್ರಥಮಳಾಗಿ ಹೊರಹೊಮ್ಮಿದ್ದಾಳೆ. ತಿಲಕ ಕುಮಟಾ ಹಾಗೂ ಶ್ರೀಕೃಷ್ಣ ಶಾನಭಾಗ 589 ಅಂಕಗಳಿಸಿ ರಾಜ್ಯ ಮಟ್ಟದಲ್ಲಿ 10 ನೇ ಸ್ಥಾನ ಗಳಿಸುವುದರೊಂದಿಗೆ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ರಾಘವೇಂದ್ರ ಎನ್. ಹಾಗೂ ಪೂರ್ಣ ಶೇಟ್ 584 ಅಂಕಗಳಿಸಿ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 193 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 139 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುವದು ಸಂಸ್ಥೆಯ ಸಾಧನೆಗೆ ಹಿಡಿದ ಕೈಗನ್ನಡಿಯಂತಿದೆ.
ಅತ್ಯುತ್ತಮ ಪ್ರಾಧ್ಯಾಪಕ ವೃಂದ :
ಮಂಗಳೂರು-ಬೆಂಗಳೂರು ಹುಬ್ಬಳ್ಳಿ-ಧಾರವಾಡಗಳಲ್ಲಿ ಸರಿ ಸುಮಾರು 10ರಿಂದ 20 ವರ್ಷ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಪ್ರಾಧ್ಯಾಪಕರು ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಅನುಭವದ ಧಾರೆ ಎರೆಯುತ್ತಿದ್ದಾರೆ. ಪ್ರಾಯೋಗಿಕ ತರಗತಿಗಳು ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಾದ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ರೂಪಿಸಲು ತಮ್ಮ ಪರಿಪೂರ್ಣ ಶ್ರಮ ವಹಿಸುತ್ತಿರುವುದು ಶ್ಲಾಘನೀಯ ಎಂದು ಪಾಲಕರು ಈಗಾಗಲೇ ಮೆಚ್ಚುಗೆ ಸೂಚಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಪ್ರತೀ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಗಮನ :
ಪ್ರತಿ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಉಪನ್ಯಾಸಕರು ಪ್ರತ್ಯೇಕ ಗಮನ ನೀಡುತ್ತಿದ್ದು ಇದರ ಜೊತೆಗೆ ಅತ್ಯುತ್ತಮವಾದ ಯೋಜನೆಗಳೊಂದಿಗೆ ರಿವಿಸನ್ ಟೆಸ್ಟ್ ಗಳು ನಡೆಯಲಿದೆ.
ಸುಸಜ್ಜಿತವಾದ ಲ್ಯಾಬೋರೇಟರಿ :
ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಗತಿಗಳನ್ನು ನಡೆಸಲು ಸುಸಜ್ಜಿತವಾದ ಲ್ಯಾಬೋರೇಟರಿ ಗಳನ್ನು ಸಂಸ್ಥೆ ಒಳಗೊಂಡಿದ್ದು ಯಾವೆಲ್ಲಾ ಅವಶ್ಯಕತೆಗಳ ಅಗತ್ಯತೆ ಇದೆಯೋ ಅವುಗಳನ್ನು ನಿರಂತರವಾಗಿ ವಿದ್ಯಾರ್ಥಿಗಳಿಗೆ ಪೂರೈಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ವಿದ್ಯಾರ್ಥಿಗಳನ್ನು ಕ್ರಿಯಾತ್ಮಕವಾಗಿ ರೂಪಿಸುವ ದೃಷ್ಟಿಯಿಂದ ಸ್ಟೇಟ್ ಆಫ್ ಆರ್ಟ್ ಲ್ಯಾಬೋರೇಟರಿ ಗಳು ಬಳಕೆಯಲ್ಲಿದೆ.
ಬಸ್ ಹಾಗೂ ಊಟದ ವ್ಯವಸ್ಥೆ :
27 ವರ್ಷಗಳಿಂದ ಶಿಕ್ಷಣದಲ್ಲಿ ವೈವಿದ್ಯತೆಯ ಮೂಲಕ ಹೆಸರುಗಳಿಸಿರುವ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ವಿದ್ಯಾರ್ಥಿಗಳಿಗೆ ಗೋಕರ್ಣ, ಹೊನ್ನಾವರ, ಅಂಕೋಲಾ ದಂತಹ ಪಟ್ಟಣದ ಪ್ರದೇಶಗಳಿಗೆ ಹಾಗೂ ಬಾಡ, ಚಂದಾವರ, ನವಿಲಗೋಣನಂತಹ ಹಳ್ಳಿಗಳಿಗೆ ಸುಸಜ್ಜಿತ ಶಾಲಾ ಬಸ್ ವ್ಯವಸ್ಥೆ ಕಲ್ಪಿಸಿದೆ. ತನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಶುದ್ಧ, ಹಾಗೂ ಸ್ವಾದಿಷ್ಟ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಿರುವ ಮೂಲಕ ಜನ ಮೆಚ್ಚುಗೆ ಗಳಿಸಿದೆ. ವಿಶಾಲ ಕ್ರೀಡಾಂಗಣ, ಸ್ಮಾರ್ಟ ಕ್ಲಾಸ್, ಕ್ರೀಡೋಪಕರಣಗಳು, ವಿಜ್ಞಾನ ಲ್ಯಾಬ್‍ಗಳನ್ನು ಒದಗಿಸಿರುವ ಕೊಂಕಣ ಎಜ್ಯುಕೇಶನ್ ವಿಧಾತ್ರಿ ಅಕಾಡೆಮಿ ಜೊತೆಗೆ ಸೇರಿ ಅತ್ಯುನ್ನತ ಕಾಲೇಜು ಶಿಕ್ಷಣ ನೀಡುತ್ತಿದೆ.
ಹಾಸ್ಟೇಲ್ ವ್ಯವಸ್ಥೆ :
ಕುಮಟಾ ಹಾಗೂ ಸುತ್ತಮುತ್ತಲ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಹೊರ ಜಿಲ್ಲೆ ಹಾಗೂ ಬೇರೆ ಬೇರೆ ಕಡೆಗಳಿಂದ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಗಂಡುಮಕ್ಕಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಹಾಗೂ ಈ ವರ್ಷದಿಂದ ಶಾಖಾಹಾರಿಗಳಿಗೆ ಪ್ರತ್ಯೇಕ ಊಟ, ತಿಂಡಿ, ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ.
ನಿರಂತರ ಪಾಲಕರ ಸಭೆ :
ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಪಾಲಕರ ಜೊತೆಗೆ ನಿರಂತರ ಸಂವಹನವನ್ನು ಕಾಲೇಜು ನಡೆಸಲಿದ್ದು, ನಿರಂತರವಾಗಿ ಪಾಲಕರ ಸಭೆ ಮಾಹಿತಿ ವಿನಿಮಯ ಕಾರ್ಯಕ್ರಮ ಹಾಗೂ ವಿವಿಧ ನುರಿತ ಉಪನ್ಯಾಸಕರಿಂದ ಉಪನ್ಯಾಸ ಕಾರ್ಯಕ್ರಮ ಇವುಗಳನ್ನು ಏರ್ಪಡಿಸುವ ಮೂಲಕ ವಿದ್ಯಾರ್ಥಿಗಳ ಹೆಜ್ಜೆ ಹೆಜ್ಜೆಯನ್ನೂ ಗಮನಿಸಿ ಅವರ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿದೆ.
ಶೈಕ್ಷಣಿಕ ಪರಿಕರಗಳು :
ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದ ಅಗತ್ಯವಾದ ಶೈಕ್ಷಣಿಕ ಪರಿಕರಗಳು ಪಠ್ಯಪುಸ್ತಕಗಳು ಹಾಗೂ ಬೇರೆ ಬೇರೆ ಕಡೆಗಳಲ್ಲಿ ಬಳಕೆಯಾಗುತ್ತಿರುವ ಜ್ಞಾನದ ಅಭಿವೃದ್ಧಿಯ ದೃಷ್ಟಿಯಿಂದ ಉಪಯುಕ್ತ ಪರಿಕರಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರು ನೋಂದಾವಣೆ, ದಾಖಲಾತಿ ಪ್ರಕ್ರಿಯೆಗಳಿಗಾಗಿ www.vidhatriacademy.org ಗೆ ಭೇಟಿ ನೀಡಿ ಅಥವಾ 9972663855 / 9972664155 ಸಂಪರ್ಕಿಸಿ.