Satwadhara News

Category: YELLAPUR

ಉತ್ತರಕನ್ನಡ ಜಿಲ್ಲೆಯ ಯೆಲ್ಲಾಪುರ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ವಿದ್ಯುತ್ ಲೈನ್ ಮೇಲೆ ಬಿದ್ದ ಬೃಹತ್ ಮರ.

    ವಿದ್ಯುತ್ ಲೈನ್ ಮೇಲೆ ಬಿದ್ದ ಬೃಹತ್ ಮರ.

    ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಹುಬ್ನಳ್ಳಿಯ ಸೊರಟೆಗಾಳಿ ಬಳಿ ಬೃಹತ್ ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಯಿತು. ಮರ ರಸ್ತೆಯ ಮೇಲೆ ಬಿದ್ದಿರುವುದರಿಂದ ವಾಹನಗಳ ಸಂಚಾರಕ್ಕೂ ತೊಂದರೆಯಾಯಿತು. ಹುಬ್ನಳ್ಳಿಯ ಶೌರ್ಯ ತಂಡದವರು ಮರವನ್ನು ತೆರವುಗೊಳಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಲೈನ್ ಸರಿಪಡಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಿದರು. ಶೌರ್ಯ ತಂಡದ ಚರಣ ನಾಯ್ಕ, ಸಚಿನ್ ನಾಯ್ಕ, ಚಂದ್ರಕಾಂತ ನಾಯ್ಕ, ಗ್ರಾಮಸ್ಥರಾದ ಆನಂದ, ನಾರಾಯಣ, ಮಹಾಬಲೇಶ್ವರ, ಅನಂತ ನಾಯ್ಕ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

  • ಕಠಿಣ ಪರಿಶ್ರಮ ಹಾಗೂ ಕ್ರಮಬದ್ಧ ಯೋಜನೆ ಯಶಸ್ಸನ್ನು  ನೀಡುತ್ತದೆ : ರಾಮ ನಾಯಕ.

    ಕಠಿಣ ಪರಿಶ್ರಮ ಹಾಗೂ ಕ್ರಮಬದ್ಧ ಯೋಜನೆ ಯಶಸ್ಸನ್ನು  ನೀಡುತ್ತದೆ : ರಾಮ ನಾಯಕ.

    ಕುಮಟಾ : ಸವಿ ಪೌಂಡೇಶನ್ ಮೂಡಬಿದ್ರೆ ಇವರು ಉತ್ತರಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಯೋಗ, ಮೌಲ್ಯಾಧಾರಿತ ಕೃಷಿ ಹಾಗೂ ಸಾಧಕರನ್ನು ಗುರುತಿಸಿ ಸನ್ಮಾನಿಸುವ  ಕಾರ್ಯಕ್ರಮಗಳನ್ನು ಕಳೆದ ಒಂದು ವರ್ಷದಿಂದ ಹಮ್ಮಿಕೊಂಡಿದೆ. ಪ್ರಸ್ತುತ ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಸಿವಿಲ್ ಇಂಜೀನೀಯರಿಂಗ್ ಮತ್ತು ಆರ್ಕಿಟೆಕ್ಟ್  ವಿಭಾಗದಲ್ಲಿ ತಮ್ಮದೇ ಖ್ಯಾತಿ ಪಡೆದ ಆರ್ಕಿಟೆಕ್ಟ್ ರಾಮ ನಾಯಕರನ್ನು ಅವರ ವೃತ್ತಿನಿಷ್ಠೆ ಸಾಮಾಜಿಕ ಮೌಲ್ಯಗಳನ್ನು ಗುರುತಿಸಿ ಬೆಂಗಳೂರಿನ ಅವರ ಸ್ವಗ್ರಹದಲ್ಲಿ ಸನ್ಮಾನಿಸಲಾಯಿತು. 

    ಈ ಸಂದರ್ಭದಲ್ಲಿ  ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಮ ನಾಯಕರು ಕಠಿಣ ಪರಿಶ್ರಮ ಹಾಗೂ ಕ್ರಮಬದ್ಧ ಯೋಜನೆಯಿಂದ ಯಶಸ್ಸನ್ನು ಪಡೆಯಬಹುದು ಎಂದರು. ಸಿವಿಲ್ ಇಂಜೀನಿಯರಿಂಗ್ ವಿಭಾಗದಲ್ಲಿ ಜನರನ್ನು ಸಮಾಜ ಅವರ ಕಾರ್ಯದಿಂದ ಗುರುತಿಸಿದ್ದು ಸಿವಿಲ್‌ಗೆ ಉತ್ತಮ ಅವಕಾಶಗಳು ಇದೆ ಎಂದು ಹೇಳಿದರು.

    ಸವಿ ಫೌಂಡೇಶನ್ ಅಧ್ಯಕರಾದ ಡಾ. ಸಂದೀಪ ನಾಯಕ ಹಾಗೂ ಟ್ರಸ್ಟೀ ಇಂಜೀನಿಯರ್ ತೇಜಸ ನಾಯಕ, ರಾಮ ನಾಯಕರನ್ನು ಸನ್ಮಾನಿಸಿದರು. ಈ ಸಂರ್ದಧದಲ್ಲಿ ರಾಮ ನಾಯಕ ಧರ್ಮಪತ್ನಿ ಶೈಲಜಾ ನಾಯಕ, ಮಕ್ಕಳಾದ ಮಹಾನ್, ಮಯೂರ್ ಹಾಗೂ ಬಿಲ್ಡರ್ ಜಯಪ್ರಕಾಶ ನಾಯಕ ಉಪಸ್ಥಿತರಿದ್ದರು.

  • ಅಕ್ರಮವಾಗಿ ಗೋವಾ ಸಾರಾಯಿ ಸಾಗಾಟ : ಓರ್ವ ಅರೆಸ್ಟ್..!

    ಅಕ್ರಮವಾಗಿ ಗೋವಾ ಸಾರಾಯಿ ಸಾಗಾಟ : ಓರ್ವ ಅರೆಸ್ಟ್..!

    ಜೋಯಿಡಾ : ತಾಲೂಕಿನ ಅನಮೋಡ ಚೆಕ್ ಪೋಸ್ಟ ಹತ್ತಿರ ಖಚಿತ ಮಾಹಿತಿ ಆಧಾರದ ಮೇರೆಗೆ ಅಕ್ರಮವಾಗಿ ಗೋವಾ ಸರಾಯಿ ಸಾಗಿಸುತ್ತಿದ್ದ ವೇಳೆ ಬೈಕ್ ಮತ್ತು ಸರಾಯಿಯನ್ನು ಅನಮೋಡ ಅಬಕಾರಿ ಪೋಲಿಸರು ವಶಪಡಿಸಿಕೊಂಡ ಘಟನೆ ನಡೆದಿದೆ.

    ನೆದರಲ್ಲಿ ಅಬ್ಬಾಸ್ ಅಲಿ ಮ್ಯಾಗಿನ ಮಟ್ಟಿ ಹಾವೇರಿ ತಾಲೂಕು ಎನ್ನುವವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಾಹನ ಸಂಖ್ಯೆ KA 27EK 1046 ರಲ್ಲಿ ಸುಮಾರು 54 ಲೀ ಅಂದಾಜು ಮೌಲ್ಯ 8640 ಹಾಗೂ ವಾಹನ ಸೇರಿ ಒಟ್ಟೂ ಅಂದಾಜು ಮೌಲ್ಯ 50000 ರೂ ಗಳಾಗಿದೆ.

    ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಆಯುಕ್ತರು ಉತ್ತರಕನ್ನಡ ಜಿಲ್ಲೆ ಹಾಗೂ ಅಬಕಾರಿ ಉಪ ಅಧಿಕ್ಷಕರು ಅವರ ಮಾರ್ಗದರ್ಶನದಲ್ಲಿ ಅಬಕಾರಿ ಉಪನಿರೀಕ್ಷಕರು ಮಂಜುಕುಮಾರ ನಾಯ್ಕ, ಅನಮೋಡ ಅಬಕಾರಿ ಪಿ.ಎಸ್.ಐ ಟಿ.ಬಿ.ಮಲ್ಲಣ್ಣನವರ ಸಿಬ್ಬಂದಿಗಳಾದ ಸದಾಶಿವ ರಾಥೋಡ,ಈರಣ್ಣ ಕುರುಬೇಟ್, ಆರ್,ಎನ್ ನಾಯಕ, ಪಾಲ್ಗೊಂಡಿದ್ದರು.

  • ಜವಾಬ್ದಾರಿಯಿಂದ ಮುಕ್ತರಾದ ಬಿಜೆಪಿ ಪ್ರಮುಖರ ಮರು ನೇಮಕ : ಹೆಬ್ಬಾರ್ ಹಾಗೂ ಸುನೀಲ್ ನಾಯ್ಕ ಗೆ ಹಿನ್ನೆಡೆ : ಹೆಬ್ಬಾರ್ ಮುಂದಿನ ನಡೆ ಕಾಂಗ್ರೆಸ್ ಕಡೆ?

    ಜವಾಬ್ದಾರಿಯಿಂದ ಮುಕ್ತರಾದ ಬಿಜೆಪಿ ಪ್ರಮುಖರ ಮರು ನೇಮಕ : ಹೆಬ್ಬಾರ್ ಹಾಗೂ ಸುನೀಲ್ ನಾಯ್ಕ ಗೆ ಹಿನ್ನೆಡೆ : ಹೆಬ್ಬಾರ್ ಮುಂದಿನ ನಡೆ ಕಾಂಗ್ರೆಸ್ ಕಡೆ?

    ಕಾರವಾರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಕಾರ್ಯ ಮಾಡಿದ್ದರು ಎನ್ನುವ ಕುರಿತಾಗಿ ಅಭ್ಯರ್ಥಿಗಳ ದೂರಿನನ್ವಯ ಪಕ್ಷದ ಶಿಸ್ತು ಸಮಿತಿ ಹಲವರನ್ನು ಅವರ ಪದಾಧಿಕಾರಿ ಜವಬ್ದಾರಿಯಿಂದ ಮುಕ್ತಿಗೊಳಿಸಿ ಕ್ರಮ ಕೈಗೊಂಡಿತ್ತು. ಆದರೇ ಇದೀಗ ರಾಜ್ಯ ಸಮಿತಿ ನಿರ್ದೇಶನದ ಮೇಲೆ ಮರು ನೇಮಕವನ್ನು ಉತ್ತರ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕರವರು ಯಲ್ಲಾಪುರ ಹಾಗೂ ಭಟ್ಕಳ ವಿಧಾನಸಭಾ ಕ್ಷೇತ್ರದ ಪದಾಧಿಕಾರಿಗಳನ್ನು ಮರು ನೇಮಕ ಮಾಡಿ ಆದೇಶ ಹೊರಡಿಸುವ ಮೂಲಕ ಬಿಜೆಪಿಯಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ.

    ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರುವ ವಿಷಯ ಮುನ್ನಲೆಯಲ್ಲೇ ಇದೇ .ಈ ಮಧ್ಯೆ ಪಕ್ಷದವರೇ ತನ್ನ ವಿರುದ್ಧ ವಿಧಾನಸಭಾ ಚುನಾವಣೆಯಲ್ಲಿ ಕೆಲಸ ಮಾಡಿದ್ದು ಇದರಿಂದಾಗಿ ಹೆಚ್ಚು ಮತದಲ್ಲಿ ಗೆಲ್ಲಬೇಕಾದ ತಾನು ಅಲ್ಪ ಮತದಲ್ಲಿ ಗೆಲ್ಲುವಂತಾಯ್ತು ಹೀಗಾಗಿ ತನಗೆ ದ್ರೋಹ ಮಾಡಿದ ಪಕ್ಷದ ಹಲವು ವ್ಯಕ್ತಿಗಳ ಮೇಲೆ ಮುನಿಸಿಕೊಂಡು ಹೈಕಮಾಂಡ್ ಗೆ ಅವರು ದೂರು ನೀಡಿದ್ದರು. ಇದರ ಜೊತೆ ಸೋತ ಎಲ್ಲಾ ಬಿಜೆಪಿ ಅಭ್ಯರ್ಥಿಗಳು ಸಹ ದೂರು ನೀಡಿದ್ದರು.

    ಯಲ್ಲಾಪುರದಲ್ಲಿ ಮರು ನೇಮಕ ಗೊಂಡವರು ಹಾಲಿ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ಇದ್ದವರಾದರೇ ಭಟ್ಕಳದಲ್ಲೂ ಸಹ ಸುನೀಲ್ ನಾಯ್ಕರನ್ನು ವಿರೋಧಿಸುವ ಹಾಗೂ ಸಂಸದ ಅನಂತಕುಮಾರ್ ಹೆಗಡೆ ಬೆಂಬಲಿಗರಾಗಿದ್ದಾರೆ. ಇನ್ನು ಕೇವಲ ಯಲ್ಲಾಪುರ ಮತ್ತು ಭಟ್ಕಳಕ್ಕೆ ಮಾತ್ರ ಸೀಮಿತವಾಗಿ ಮರು ನೇಮಕ ಆಗಿದೆ.

    ಮರು ನೇಮಕ ಆದವರು ಇವರು.

    ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ,

    1) ಶ್ರೀಮತಿ ಕಲ್ಪನಾ ಗಜಾನನ ನಾಯ್ಕ (ಜಿಲ್ಲಾ ಉಪಾಧ್ಯಕ್ಷರು)
    2) ಬಾಬು ಬಾಂದೇಕರ (ಶಕ್ತಿಕೇಂದ್ರ ಪ್ರಮುಖರು ಸಬಗೇರಿ)
    3) ಶ್ರೀ ಕೆ ಟಿ ಹೆಗಡೆ (ತಾಲೂಕಾ ಮಾಧ್ಯಮ ಪ್ರಕೋಷ್ಠದ ಸಂಚಾಲಕರು)
    4) ಶ್ರೀ ವಿಠಲ ಜಾನು ಪಾಂಡ್ರಮಿಶ (ತಾಲೂಕಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ)
    5) ಶ್ರೀ ಗಣಪತಿ ಆರ್ ಗಾಂವರ್, ಮಾನಿಗದ್ದೆ (ಜಿಲ್ಲಾ ವಿಶೇಷ ಆಮಂತ್ರಿತರು)

    ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ,

    1) ಶ್ರೀ ರವಿ ನಾಯ್ಕ (ಅಧ್ಯಕ್ಷರು ಜಿಲ್ಲಾ ಹಿಂದುಳಿದ ವರ್ಗ ಮೋರ್ಚಾ)
    2) ಶ್ರೀ ಸುರೇಶ ತಿಮ್ಮಪ್ಪ ನಾಯ್ಕ (ಸಂಚಾಲಕರು ಜಿಲ್ಲಾ ಕಾನೂನು ಪ್ರಕೋಷ್ಠ) 3) ಶ್ರೀ ವಿಷ್ಣುಮೂರ್ತಿ ಹೆಗಡೆ (ಪ್ರ. ಕಾರ್ಯದರ್ಶಿ ಜಿಲ್ಲಾ ರೈತ ಮೋರ್ಚಾ)
    4) ಶ್ರೀ ಮುಕುಂದ ಮಂಜುನಾಥ ನಾಯ್ಕ (ಸಂಚಾಲಕರು ಜಿಲ್ಲಾ ಕಾರ್ಮಿಕ ಪ್ರಕೋಷ್ಠ)
    5) ಶ್ರೀ ಈಶ್ವರ ನಾರಾಯಣ ನಾಯ್ಕ (ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾ ಪ್ರಭಾರಿ)

  • ರೋಟರಾಕ್ಟ್ ಅಂತರ್ ಜಿಲ್ಲಾ ಡೆಕ್ಸ್ಟೆರಿಯಸ್ ಲೀಗ್’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಾಧನೆ.

    ರೋಟರಾಕ್ಟ್ ಅಂತರ್ ಜಿಲ್ಲಾ ಡೆಕ್ಸ್ಟೆರಿಯಸ್ ಲೀಗ್’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಾಧನೆ.

    ಭಟ್ಕಳ : ಕೊಯಮತ್ತೂರಿನಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಟ್ಟದ ‘ರೋಟರಾಕ್ಟ್ ಅಂತರ್ ಜಿಲ್ಲಾ ಡೆಕ್ಸ್ಟೆರಿಯಸ್ ಲೀಗ್’ ಕ್ರಿಕೆಟ್ ಪಂದ್ಯಾವಳಿಯಲ್ಲಿ ತಾಲೂಕಿನ ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದ ರೋಟರಾಕ್ಟ್ ಸದಸ್ಯರನ್ನೊಳಗೊಂಡ ರೋಟರಾಕ್ಟ್ ಜಿಲ್ಲೆ ೩೧೭೦ರ ತಂಡ ಉಪಾಂತ ವಿಜಯಿಯಾಗುವುದರ ಜೊತೆಗೆ ತಂಡದ ಸದಸ್ಯರುಗಳಾದ ಕಾರ್ತಿಕ್ ಮೊಗೇರ್, ಅಲಂಕಾರ್ ಮೊರೆ, ಮತ್ತು ಶಿವಂ ಗಾವಡೆ ತಲಾ ೩ ಪಂದ್ಯ ಶ್ರೇಷ್ಠ ಪ್ರಶಸ್ತಿಗಳನ್ನು ಹಾಗೂ ಕಾರ್ತಿಕ್ ಮೊಗೇರ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿರುತ್ತಾರೆ.


    ಇವರ ಈ ಸಾಧನೆಗೆ ಭಟ್ಕಳ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ವಿ ನಾಯಕ್, ಟ್ರಸ್ಟೀ ಮ್ಯಾನೇಜರ್ ರಾಜೇಶ್ ನಾಯಕ್, ಭಟ್ಕಳ ರೋಟರಿ ಕ್ಲಬ್ ಅಧ್ಯಕ್ಷ ಡಾ. ಎ೦.ಎ ಭಾವಿಕಟ್ಟಿ, ಕಾರ್ಯದರ್ಶಿ ಶ್ರೀನಾಥ್ ಪೈ, ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ಪ್ರಾಂಜಲ್ ಮರಾಠೆ, ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ವಿನಾಯಕ್ ನಾಯ್ಕ್, ರೋಟರಾಕ್ಟ್ ಕ್ಲಬ್ ಅಧ್ಯಕ್ಷೆ ವೈಷ್ಣವಿ ನಾಯ್ಕ್, ಕಾರ್ಯದರ್ಶಿ ಪ್ರಜ್ಞಾ ಗೋಲಿ, ರೋಟರಾಕ್ಟ್ ಜಿಲ್ಲಾ ಕ್ರೀಡಾ ವಿಭಾಗದ ಪ್ರಮುಖರಾದ ಸೃಷ್ಟಿ ನಾಯ್ಕ್, ಸೋಹಾಲಿ ನಾಗ್ವೇನ್ಕರ್ ಮತ್ತು ತಂಡದ ನಾಯಕ ಅಕ್ಷಯ ಮಾಯೆಕರ್ ಹರ್ಷ ವ್ಯಕ್ತಪಡಿಸಿರುತ್ತಾರೆ.

  • ಕಾಡುಹಂದಿ ಬೇಟೆಯಾಡಿದ ಆರೋಪಿ ಅರೆಸ್ಟ್

    ಕಾಡುಹಂದಿ ಬೇಟೆಯಾಡಿದ ಆರೋಪಿ ಅರೆಸ್ಟ್

    ಅಂಕೋಲಾ: ಕಾಡುಹಂದಿಯನ್ನು ಬೇಟೆಯಾಡಿ ಕೆಲ ಭಾಗಗಳನ್ನು ಹುದುಗಿಟ್ಟ ಆರೋಪದಡಿ ಅರಣ್ಯ ಇಲಾಖೆ ಅಧಿಕಾರಿಗಳು ಓರ್ವನನ್ನು ಹೆಬ್ಬುಳದಲ್ಲಿ ಬಂಧಿಸಿದ್ದಾರೆ. ಹೆಬ್ಬುಳದ ರಾಜೇಶ ಪಡ್ತಿ (29) ಬಂಧಿತ ಆರೋಪಿ ಮತ್ತೊಬ್ಬ ಆರೋಪಿ ಹೆಬ್ಬುಳದ ಸಂತೋಷ ಪಡ್ತಿ ಪರಾರಿಯಾಗಿದ್ದಾನೆ. ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ ಕೆ.ಸಿ. ಮಾರ್ಗದರ್ಶನದಲ್ಲಿ ಅಂಕೋಲಾ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣಯ್ಯ ಗೌಡ ಮತ್ತು ಮಾಸ್ತಿಕಟ್ಟಾ ವಲಯ ಅರಣ್ಯಾಧಿಕಾರಿ ವಿನಾಯಕ ಪಿ. ನಾಯ್ಕ, ಹೆಬ್ಬುಳ ವಲಯ ಅರಣ್ಯಾಧಿಕಾರಿ ಅರುಣ ನಡಕಟ್ಟಿನ, ಹೆಬ್ಬುಳ ಅರಣ್ಯ ಗಸ್ತು ಪಾಲಕ ಚನ್ನಪ್ಪ ಲಮಾಣಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಕಾಡು ಹಂದಿಯನ್ನು ಬೇಟೆಯಾಡಿದವರಲ್ಲಿ ಒಬ್ಬನನ್ನು ಬಂಧಿಸಿದ್ದಾರೆ.

    ಅಲ್ಲದೆ, ಪಕ್ಕದ ತೋಟದಲ್ಲಿ ಹುದುಗಿಟ್ಟಿದ್ದ ಕಾಡು ಹಂದಿಯ ತಲೆ, ಕರುಳು ಮತ್ತು ಕಾಲುಗಳನ್ನು ವಶಕ್ಕೆ ಪಡೆದು ಮಹಜರು ನಡೆಸಿದ್ದಾರೆ. ಆರೋಪಿತರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಪ್ರಕಾರ ಪ್ರಕರಣ ದಾಖಲಾಗಿದೆ.