Satwadhara News

Category: BHATKAL

ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ನಿಲ್ಲಿಸಿಟ್ಟ ಸ್ಕೂಟರ್ ತೆಗೆಯುವ ವೇಳೆಗೆ ಬಂದು ನಿಂತ ಜವರಾಯ

    ನಿಲ್ಲಿಸಿಟ್ಟ ಸ್ಕೂಟರ್ ತೆಗೆಯುವ ವೇಳೆಗೆ ಬಂದು ನಿಂತ ಜವರಾಯ

    ಭಟ್ಕಳ : ವ್ಯಕ್ತಿಯೊಬ್ಬರು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ತಮ್ಮ ಸ್ಕೂಟರನ್ನು ತೆಗೆಯುತ್ತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಭಟ್ಕಳದಲ್ಲಿ ನಡೆದಿದೆ.

    ನಗರದ ಹಾಶಿಮ್ ಬೇಕರಿ ಸಮೀಪ ಈ ಘಟನೆ ನಡೆದಿದ್ದು ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಮೃತ ವ್ಯಕ್ತಿಯನ್ನು ಫಜ್ಯೂ‌ರ್ ರೆಹಮಾನ್ ಶೇಕ್ (54) ಎಂದು ಗುರುತಿಸಲಾಗಿದೆ.

    ಹೋಟಲ್ ನಿಂದ ಹೊರ ಬಂದು ತಾನು ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಸ್ಕೂಟರನ್ನು ತೆಗೆಯುತ್ತಿದ್ದ ವೇಳೆ ಹಠಾತ್ ಸ್ಕೂಟರ್ ಸಮೇತ ಅಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ಅಲ್ಲಿದ್ದ ಸಾರ್ವಜನಿಕರು ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿದ್ದರಾದರೂ, ಆಸ್ಪತ್ರೆಗೆ ಬರುವ ಮುನ್ನವೆ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

  • AITM ಕೋಡ್‌ಫೆಸ್ಟ್ – ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ AITM ಭಟ್ಕಳದಲ್ಲಿ ಉದ್ಘಾಟನೆ

    AITM ಕೋಡ್‌ಫೆಸ್ಟ್ – ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ AITM ಭಟ್ಕಳದಲ್ಲಿ ಉದ್ಘಾಟನೆ

    AITM ಕೋಡ್‌ಫೆಸ್ಟ್ – ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಇಂದು ಭಟ್ಕಳದ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (AITM) ನಲ್ಲಿ ಉದ್ಘಾಟನೆಗೊಂಡಿತು. ಮುಖ್ಯ ಅತಿಥಿಯಾಗಿ, AITM ನ ಹಳೆಯ ವಿದ್ಯಾರ್ಥಿ ಮತ್ತು ವಿನ್‌ಟೀಮ್ ಗ್ಲೋಬಲ್‌ನ ಸಂಸ್ಥಾಪಕ ಮತ್ತು ನಿರ್ದೇಶಕರಾದ ವಸೀಮ್ ಅಹ್ಮದ್, ಕ್ಯಾಂಪಸ್‌ನಿಂದ ಉದ್ಯಮಶೀಲತೆಯತ್ತ ತಮ್ಮ ಪ್ರಯಾಣದಿಂದ ಭಾಗವಹಿಸುವವರಿಗೆ ಸ್ಫೂರ್ತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು AITM ನ ಕಾರ್ಯದರ್ಶಿ ಮೊಹಿದ್ದೀನ್ ರುಕ್ನುದ್ದೀನ್ ಅವರು ವಹಿಸಿದ್ದರು. ಪ್ರಾಂಶುಪಾಲ ಡಾ. ಕೆ. ಫಜ್ಲುರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರುರಿ, CSE ಮುಖ್ಯಸ್ಥ ಡಾ. ಅನ್ವರ್ ಶತಿಕ್ ಮತ್ತು ಸಂಯೋಜಕರಾದ ಪ್ರೊ. ಸಯೀದ್ ನೂರೈನ್ ಮತ್ತು ಪ್ರೊ. ಶ್ರೀಶೈಲ್ ಭಟ್ ಸಹ ಉಪಸ್ಥಿತರಿದ್ದರು, ನಾವೀನ್ಯತೆ ಮತ್ತು ಸಹಯೋಗದ ಮನೋಭಾವವನ್ನು ಪ್ರೋತ್ಸಾಹಿಸಿದರು.

    ದೇಶಾದ್ಯಂತ ಒಟ್ಟು 30 ತಂಡಗಳು ಈ 24 ಗಂಟೆಗಳ ಕೋಡಿಂಗ್ ಮ್ಯಾರಥಾನ್‌ನಲ್ಲಿ ಭಾಗವಹಿಸುತ್ತಿದ್ದು, ಅಲ್ಲಿ ಯುವ ಮನಸ್ಸುಗಳು ತಂತ್ರಜ್ಞಾನ-ಚಾಲಿತ ಪರಿಹಾರಗಳೊಂದಿಗೆ ನೈಜ-ಪ್ರಪಂಚದ ಸವಾಲುಗಳನ್ನು ಎದುರಿಸುತ್ತವೆ.

    ಈ ಕಾರ್ಯಕ್ರಮದ ಶೀರ್ಷಿಕೆ ಪಾಲುದಾರರಾಗಿ ನೀವಿಯಸ್ ಸೊಲ್ಯೂಷನ್ಸ್ ವಹಿಸಿತ್ತು. ಸಂಘಟನಾ ಪಾಲುದಾರರಾಗಿ ಡಿಜಿಸ್ಕ್ರಿಪ್ಟ್ ಟೆಕ್ನಾಲಜೀಸ್, ಸಹ ಪಾಲುದಾರರಾಗಿ ಮೊಹ್ತಿಶಮ್ ಬಿಲ್ಡರ್ಸ್, ಸ್ಪ್ರೌಟ್‌ಎಕ್ಸ್‌ಪಿ, ಐಟೆಕ್ಸ್ ಸೊಲ್ಯೂಷನ್ಸ್, ಎಮರ್ಟೆಕ್ಸ್ ಟೆಕ್ನಾಲಜೀಸ್, ತಹೂರ ಮತ್ತು ವಿಂಟೀಮ್ ಗ್ಲೋಬಲ್ ಇವರು ಸಹಕರಿಸಿದರು.

    ಒಟ್ಟು ಬಹುಮಾನ ಮೊತ್ತ ₹2 ಲಕ್ಷ ಆಗಿದ್ದು, ಮೊದಲ ಬಹುಮಾನ ₹60,000, ಎರಡನೇ ಬಹುಮಾನ ₹30,000 ಮತ್ತು ಮೂರನೇ ಬಹುಮಾನ ₹15,000. ನಾಳೆ ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ ಮತ್ತು ಬಹುಮಾನ ನೀಡಲಾಗುತ್ತದೆ.

  • ಟೆಂಪೋಗೆ ಹಿಂದಿನಿಂದ ಬಂದು ಗುದ್ದಿದ ಲಾರಿ – ಓರ್ವನಿಗೆ ಪೆಟ್ಟು

    ಟೆಂಪೋಗೆ ಹಿಂದಿನಿಂದ ಬಂದು ಗುದ್ದಿದ ಲಾರಿ – ಓರ್ವನಿಗೆ ಪೆಟ್ಟು

    ಭಟ್ಕಳ : ಭಟ್ಕಳದಿಂದ ಹೊನ್ನಾವರ ಕಡೆ ಚಲಿಸುತ್ತಿದ್ದ ಟೆಂಪೋಗೆ ಹಿಂದಿನಿoದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಟೆಂಪೊದಲ್ಲಿದ್ದ ಪ್ರಯಾಣಿಕನೋರ್ವ ಗಾಯಗೊಂಡಿರುವ ಘಟನೆ ಬೈಲೂರು ಕ್ರಾಸಿನ ಬಳಿ ನಡೆದಿದೆ.

    ಹೊನ್ನಾವರ ಮಂಕಿಯ ಸಿಂಗಾಣಿ ಹಿತ್ಲುವಿನ ಅಣ್ಣಪ್ಪ ನಾಯ್ಕ ಅವರು ಫೆ ೨೫ರಂದು ತಮ್ಮ ಟೆಂಪೋ ಓಡಿಸುತ್ತಿದ್ದರು. ಭಟ್ಕಳದಿಂದ ಹೊನ್ನಾವರ ಕಡೆ ಬರುತ್ತಿದ್ದ ಟೆಂಪೋ ಬೈಲೂರು ಕ್ರಾಸಿನ ಬಳಿ ನಿಂತಿತು. ಅಲ್ಲಿ ಇಳಿಯಬೇಕಾದ ಪ್ರಯಾಣಿಕರು ಇಳಿದಿದ್ದರು. ಟೆಂಪೋ ಹತ್ತುವ ಪ್ರಯಾಣಿಕರು ಕಾಯುತ್ತಿದ್ದರು.

    ಈ ವೇಳೆ ಕೇರಳದ ಲಾರಿ ರಸ್ತೆ ಅಂಚಿನಲ್ಲಿ ನಿಂತಿದ್ದ ಟೆಂಪೋಗೆ ಹಿಂದಿನಿಂದ ಡಿಕ್ಕಿ ಹೊಡೆದರು. ಪರಿಣಾಮ ಟೆಂಪೊದಲ್ಲಿದ್ದ ಹೊನ್ನಾವರ ಮಂಕಿಯ ನರೇಂದ್ರ ಗೌಡ ಗಾಯಗೊಂಡಿದ್ದು, ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

  • ಸೋಡಿಗದ್ದೆ ಶ್ರೀ ಮಹಾಸತಿ ಅಮ್ಮನವರ ಭಕ್ತಿಗೀತೆ ಅಲ್ಬಮ್ ಬಿಡುಗಡೆ

    ಸೋಡಿಗದ್ದೆ ಶ್ರೀ ಮಹಾಸತಿ ಅಮ್ಮನವರ ಭಕ್ತಿಗೀತೆ ಅಲ್ಬಮ್ ಬಿಡುಗಡೆ


    ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಭಟ್ಕಳದ ಸೋಡಿಗದ್ದೆ ಮಹಾಸತಿ ಜಾತ್ರೆಯ ಮೊದಲ ದಿನ ಗುರುವಾರ ರಾತ್ರಿ ಶ್ರೀ ಮಹಾಸತಿ ಅಮ್ಮನವರ ಭಕ್ತಿಗೀತೆ ಅಲ್ಬಮ್ ಬಿಡುಗಡೆಗೊಂಡಿತು.
    ಶ್ರೀ ಶರಣು ದುರ್ಗಾ ಕ್ರಿಯೇಷನ್ಸ್ ಭಟ್ಕಳ ಅವರು ಈ ಭಕ್ತಿಗೀತೆ ಅಲ್ಬಮ್ ನಿರ್ಮಾಣ ಮಾಡಿದ್ದು.
    ರಾಜ್ಯ ಪ್ರಶಸ್ತಿ ಪುರಸ್ಕೃತ ಜಿಲ್ಲೆಯ ಸುಗಮಸಂಗೀತ ಗಾಯಕ ಭಾವಕವಿ ಉಮೇಶ ಮುಂಡಳ್ಳಿ ಅವರು ಸಾಹಿತ್ಯ ಬರೆದು ಸ್ವರಸಂಯೋಜಿಸಿ ತಾವೇ ಹಾಡಿರುತ್ತಾರೆ.


    “ಬೆಳಗಿಹುದು ಬೆಳಗಿಹುದು ಬೆಳಗಿಹುದು ಜ್ಯೋತಿ ,ಸೋಡಿಗದ್ದೆಯ ತಾಯಿ ಮಹಾಸತಿಯ ಖ್ಯಾತಿ ” ಎನ್ನುವ ಈ ಸುಮಧುರ ಗೀತೆಗೆ ಕೀಬೋರ್ಡ್ ನಲ್ಲಿ ವಿಘ್ನೇಶ್ ಗೌಡ ಹಾಗೂ ತಬಲ ದಲ್ಲಿ ಆದಿತ್ಯ ದೇವಾಡಿಗ ಸಹಕರಿಸಿದ್ದಾರೆ.
    ತಾಯಿ ಶ್ರೀ ಮಹಾಸತಿ ದೇವಿಯ ಎದುರಿನಲ್ಲಿ ಭಕ್ತಜನರ ಸಮ್ಮುಖದಲ್ಲಿ ಈ ಅಲ್ಬಮ್ ಬಿಡುಗಡೆಗೊಂಡಿದ್ದು. ಈ ಸಂದರ್ಭದಲ್ಲಿ ಯಲ್ವಡಿಕವೂರ ಪಂಚಾಯತ ಸದಸ್ಯರು ಊರಿನ ಪ್ರಮುಖರಾದ ನಾರಾಯಣ ನಾಯ್ಕ, ಗಾಯಕ ಉಮೇಶ ಮುಂಡಳ್ಳಿ, ಕವಯಿತ್ರಿ ರೇಷ್ಮಾ ಉಮೇಶ, ನಿನಾದ ಹಾಗೂ ಉತ್ಥಾನ ಹಾಜರಿದ್ದರು.

  • ಅಂಜುಮನ್ ಕಾಲೇಜಿನಲ್ಲಿ MBA ವಿದ್ಯಾರ್ಥಿಗಳ ಪದವಿ ದಿನದ ಸಮಾರಂಭ

    ಅಂಜುಮನ್ ಕಾಲೇಜಿನಲ್ಲಿ MBA ವಿದ್ಯಾರ್ಥಿಗಳ ಪದವಿ ದಿನದ ಸಮಾರಂಭ

    ಭಟ್ಕಳ: ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (AITM) ನ 2022-24ರ ಬ್ಯಾಚ್ MBA ವಿದ್ಯಾರ್ಥಿಗಳ ಪದವಿ ದಿನದ ಸಮಾರಂಭವು ಜ. 21ರಂದು PG ಬ್ಲಾಕ್‌ನಲ್ಲಿ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಂಜುಮನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯೂನಸ್ ಕಾಜಿಯಾ ಮಾತನಾಡಿ, ತಮ್ಮ ಅಧ್ಯಾಪಕರನ್ನು ಸದಾ ಗೌರವಿಸುವಂತೆ ಮತ್ತು ಉನ್ನತ ಗುರಿಗಳನ್ನು ಹೊಂದಲು ಕಠಿಣ ಪರಿಶ್ರಮ ಪಡುವಂತೆ ಕರೆ ನೀಡಿದರು.

    ಮುಖ್ಯ ಅತಿಥಿ ಸಾದ್ ದಾಮುದಿ ಅವರು ತಮ್ಮ ಉದ್ಯಮಶೀಲತೆಯ ಕುರಿತು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು. ಬದುಕಿನಲ್ಲಿ ಯಶಸ್ಸನ್ನು ಹೇಗೆ ಪಡೆಯಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಪ್ರಾಂಶುಪಾಲ ಡಾ. ಫಝಲುರ್ ರಹಮಾನ್ ಕೆ ಅವರು ಬಾಹ್ಯ ಜಗತ್ತಿನ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ತಮ್ಮ ವೃತ್ತಿಪರ ಜೀವನವನ್ನು ರೂಪಿಸಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    MBA ವಿಭಾಗದ ಮುಖ್ಯಸ್ಥ ಪ್ರೊ. ಜಾಹಿದ್ ಹಸನ್ ಖರೂರಿ ಅವರ ನೇತೃತ್ವದಲ್ಲಿ ಪ್ರಮಾಣ ವಚನ ಸ್ವೀಕಾರ ನಡೆಯಿತು. ಈ ವೇಳೆ MBA ಪದವೀಧರರು ನೈತಿಕತೆ, ಸಮಗ್ರತೆ ಮತ್ತು ಶ್ರೇಷ್ಠತೆಯ ಮೌಲ್ಯಗಳನ್ನು ಅನುಸರಿಸುವುದಾಗಿ ಪ್ರತಿಜ್ಞೆ ಗೈದರು. ನಿಮ್ರಾ ಮತ್ತು ಸಮನ್ ಕಾರ್ಯಕ್ರಮ ನಿರ್ವಹಿಸಿದರು.

    ಉದ್ಘಾಟನಾ ಕಾರ್ಯಕ್ರಮದಲ್ಲಿ ಅಂಜುಮನ್ ಹಮಿ-ಎ-ಮುಸ್ಲಿಮೀನ್ ಉಪಾಧ್ಯಕ್ಷ ಡಾ. ಜುಬೈರ್ ಕೋಲಾ, ಪ್ರಧಾನ ಕಾರ್ಯದರ್ಶಿ ಇಸಾಕ್ ಶಾಬಂದ್ರಿ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಜುಕಾಕು, ಕಾಲೇಜು ಕಾರ್ಯದರ್ಶಿ ಮೊಹಿದ್ದೀನ್ ರುಕ್ನುದ್ದೀನ್ ಉಪಸ್ಥಿತರಿದ್ದರು.

  • STEM/ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ

    STEM/ ಪದವಿ ಪೂರ್ವ ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ

    ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ STEM-2024 (SCIENCE, TECHNOLOGY, ENGINEERING, MATHS) ಕಾರ್ಯಕ್ರಮ ಡಿಸೇಂಬರ್ 21 ರಂದು ವಿಜೃಂಭಣೆ ಯಿಂದ ನಡೆಯಿತು. ರಾಜ್ಯದ ವಿವಿಧ ಕಡೆಯಿಂದ ಸುಮಾರು 450 ಪಿ. ಯು ವಿದ್ಯಾರ್ಥಿಗಳು ಆಗಮಿಸಿದ್ದರು. STEM ಕಾರ್ಯಕ್ರಮ ವು PUC ವಿದ್ಯಾರ್ಥಿಗಳಿಗಾಗಿ ಆಯೋಜಿಸಲ್ಪಟ್ಟಿದ್ದು , Bugged out, Electrivia, Evolvance, Sparkore, ModelXpo,ಈ event ಗಳನ್ನು ಹೊಂದಿದ್ದು, ಸ್ಪರ್ಧೆ ವಿಜೇತರಿಗೆ ಸರಿಸುಮಾರು 80000 ಬೆಲೆಯ prizes ಇದೆ.ಸಭಾ ಕಾರ್ಯಕ್ರಮ ಕುರಾನ್ ಪಟನೆಯಿಂದ ಪ್ರಾರಂಭ ವಾಯ್ತು. ಮುಖ್ಯ ಅತಿಥಿ ಯಾಗಿ ನೌಮನ್ ಪಟೇಲ್ ಶಾಬಂದರಿ ಭಾಗವಹಿಸಿದ್ದರು. .AITM ಪ್ರಾಂಶುಪಾಲ ಡಾ. ಕೆ ಫಜ್ಲೂರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ, mechanical ವಿಭಾಗ ಮುಖ್ಯಸ್ಥ ಡಾ. ಅನಂತಮೂರ್ತಿ ಶಾಸ್ತ್ರಿ ವೇದಿಕೆಯ ಮೇಲಿದ್ದರು. ಪ್ರೊಫೆಸರ್ ಕ್ವಾರತಲಿನ್ ಎಲ್ಲರನ್ನೂ ಸ್ವಾಗತಿಸಿದರು.
    ಪ್ರೊಫೆಸರ್ ಶ್ರೀಶೈಲ ಭಟ್ ವಂದಿಸಿದರು. STEM ಇದು AITM ನ ಅತ್ಯುತ್ತಮ ಕಾರ್ಯಕ್ರಮ ವಾಗಿ ಹೊರಹಮ್ಮಿತು.

  • AITM ನಲ್ಲಿ AICTE-ATAL ಪ್ರಾಯೋಜಿತ ಆರು ದಿನಗಳ ಆನ್‌ಲೈನ್ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ

    AITM ನಲ್ಲಿ AICTE-ATAL ಪ್ರಾಯೋಜಿತ ಆರು ದಿನಗಳ ಆನ್‌ಲೈನ್ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ

    ಭಟ್ಕಳದ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್ (ಎಐಟಿಎಂ) ನಲ್ಲಿರುವ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗವು (ಸಿಎಸ್‌ಇ) AICTE-ATAL ಪ್ರಾಯೋಜಿತ ಆರು ದಿನಗಳ ಆನ್‌ಲೈನ್ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ (FDP) ಅನ್ನು ಡಿಸೆಂಬರ್ 2 ರಿಂದ 7, 2024 ರವರೆಗೆ ಹಮ್ಮಿಕೊಂಡಿತು.

    “ಜನರೇಟಿವ್ AI ಅನಾವರಣ: ಪರಿಕಲ್ಪನೆಗಳು, ಮಾದರಿಗಳು ಮತ್ತು ನೈಜ-ಪ್ರಪಂಚದ ಅಪ್ಲಿಕೇಶನ್‌ಗಳು” ಈ ವಿಷಯ ಕುರಿತು 298 ಉತ್ಸಾಹಿ ಬೋಧನಾ ವಿಭಾಗದ ಸದಸ್ಯರು ಮತ್ತು ಜನರೇಟಿವ್ ಎಐ ಪ್ರಪಂಚವನ್ನು ಅಧ್ಯಯನ ಮಾಡಲು ಉತ್ಸುಕರಾಗಿರುವ ಸಂಶೋಧಕರ ಭಾಗವಹಿಸುವಿಕೆಯನ್ನು FDP ಕಂಡಿತು. FDP ಅನ್ನು Ms. Renisha P.S ಅವರು ಮತ್ತು ಡಾ. ಡೇನಿಯಲ್ ಸೆಲ್ವರಾಜ್, AITM ನಲ್ಲಿ CSE ವಿಭಾಗದ ಗೌರವಾನ್ವಿತ ಅಧ್ಯಾಪಕರು
    ಸಂಯೋಜಿಸಿದ್ದಾರೆ. ಕಾರ್ಯಕ್ರಮವು online mode ನಲ್ಲಿದ್ದವು.

    ಕಾರ್ಯಕ್ರಮವು ಶೈಕ್ಷಣಿಕ ಮತ್ತು ಉದ್ಯಮದ ಹೆಸರಾಂತ ತಜ್ಞರನ್ನು ಒಳಗೊಂಡಿತ್ತು, ಅವರು ಜನರೇಟಿವ್ AI ನ ವಿವಿಧ ಅಂಶಗಳ ಕುರಿತು ಒಳನೋಟವುಳ್ಳ ವಿವರಣೆ ನೀಡಿದರು. AITM ನ ಈ FDP ಯ ಯಶಸ್ವಿ ಕಾರ್ಯಗತಗೊಳಿಸುವಿಕೆಯು ತನ್ನ ಅಧ್ಯಾಪಕ ಸದಸ್ಯರಿಗೆ ತಂತ್ರಜ್ಞಾನದ ಜೊತೆ ಇರಲು ಅತ್ಯಾಧುನಿಕ ಜ್ಞಾನ ಮತ್ತು ಕೌಶಲ್ಯಗಳನ್ನು ಒದಗಿಸುವ ಸಂಸ್ಥೆಯ ಬದ್ಧತೆಯನ್ನು ಇದು ಪ್ರದರ್ಶಿಸುತ್ತದೆ. .AITM ಪ್ರಾಂಶುಪಾಲ ಡಾ. ಕೆ ಫಜ್ಲೂರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ, ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ. ಜೆ. ಅನ್ವರ್ ಶಾತಿಕ್ ಹಾಗೂ ಉಳಿದ ಅಧ್ಯಾಪಕರು ಈ ONLINE FDP ಕಾರ್ಯಕ್ರಮವ ನ್ನು ಅಭಿನಂದಿಸಿದರು.

  • ಭಟ್ಕಳದಲ್ಲಿ ಗಾಂಜಾ ಭೇಟೆ : ಮೂವರು ಪೊಲೀಸ್ ವಶಕ್ಕೆ

    ಭಟ್ಕಳದಲ್ಲಿ ಗಾಂಜಾ ಭೇಟೆ : ಮೂವರು ಪೊಲೀಸ್ ವಶಕ್ಕೆ

    ಭಟ್ಕಳ : ಭಟ್ಕಳ ನಗರ ಠಾಣೆ ಪೊಲೀಸರು ಇಂದು (ಭಾನುವಾರ) ಭರ್ಜರಿ ಗಾಂಜಾ ಭೇಟೆ ನಡೆಸಿದ್ದು 4,50,000 ಮೊತ್ತದ ಗಾಂಜಾ ಸಹಿತ ಮೂವರನ್ನು ವಶಕ್ಕೆ ಪಡೆದಿದ್ದಾರೆ.

    ಇವತ್ತು (ಭಾನುವಾರ, 10/11/2024) ಸಂಜೆ 5.30ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ತೆಂಗಿನಗುಡಿ ಕ್ರಾಸ್ ಬಳಿ ಹುಂಡೈ ಕಂಪನಿಯ ಬಿಳಿ ಬಣ್ಣದ ಎಸೆಂಟ್ ಕಾರಿನಲ್ಲಿ 9 ಕೆ.ಜಿ. 170 ಗ್ರಾಂ ತೂಕದ ನಿಷೇಧಿತ ಗಾಂಜಾ ಸಾಗಿಸಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಪಡೆದ ಭಟ್ಕಳ ನಗರ ಪೊಲೀಸರು ಕಾರು, ಗಾಂಜಾ ಸಹಿತ ಮೂವರನ್ನು ವಶಕ್ಕೆ ಪಡೆದು ಕೋರ್ಟಿಗೆ ಹಾಜರು ಪಡಿಸಿದ್ದಾರೆ.

    ವಶ ಪಡಿಸಿಕೊಂಡ 9 ಕೆ.ಜಿ. 170 ಗ್ರಾಂ ಗಾಂಜಾ ಬೆಲೆ 4,50,000 ರೂಪಾಯಿ ಮತ್ತು ವಶ ಪಡಿಸಿಕೊಂಡ ಕಾರಿನ ಬೆಲೆ 6 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

    ಸಯ್ಯದ್ ಅಕ್ರಂ (24), ಅಬ್ದುಲ್ ರೆಹಮಾನ್ (27), ಅಜರುದ್ದೀನ್ (41) ಇವರು ಬಂಧಿತ ಆರೋಪಿಗಳಾಗಿದ್ದಾರೆ. ಇವರ ಜೊತಗಿದ್ದ ಖಾಸಿಂ ಎನ್ನುವಾತ ತಪ್ಪಿಸಿಕೊಂಡಿದ್ದು, ಈತನನ್ನು ವಶಕ್ಕೆ ಪಡೆಯಲು ಪೊಲೀಸರು ಬಲೆ ಬೀಸಿದ್ದಾರೆ.

    ಭಟ್ಕಳ ಪೊಲೀಸರ ಈ ಕಾರ್ಯಾಚರಣೆಯನ್ನು ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಎಂ. ನಾರಾಯಣ ಅವರು ಶ್ಲಾಘಿಸಿ, ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

  • ಅಂಜುಮನ್ ಇನ್ಸ್ಟಿಟ್ಯೂಟ್ ನಲ್ಲಿ ಹ್ಯಾಕಥಾನ್, “Sustainathon ’24”

    ಅಂಜುಮನ್ ಇನ್ಸ್ಟಿಟ್ಯೂಟ್ ನಲ್ಲಿ ಹ್ಯಾಕಥಾನ್, “Sustainathon ’24”

    ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗವು ಒಂದು ದಿನದ ಹ್ಯಾಕಥಾನ್, “Sustainathon ’24” ಅನ್ನು Hack2Skill ಸಹಯೋಗದೊಂದಿಗೆ ನಡೆಸಿತು. ಈ ಕಾರ್ಯಕ್ರಮದ ಸಂಯೋಜನೆಯನ್ನು ಪ್ರೊ. ರೆನಿಶಾ ಪಿ.ಎಸ್ ಅವರು, ಡಾ. ಡೇನಿಯಲ್ ಸೆಲ್ವರಾಜ್ ಮತ್ತು ಪ್ರೊ. ಸಾದಿಯಾ ಅಫ್ರೀನ್ ಅವರ ಸಹಯೋಗದೊಂದಿಗೆ ವಹಿಸಿದ್ದರು. 137 ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಸ್ವಚ್ಛ ಮತ್ತು ನವೀಕರಿಸಬಹುದಾದ ಇಂಧನ, ಆರೋಗ್ಯ, ತ್ಯಾಜ್ಯ ನಿರ್ವಹಣೆ, ಸಾರಿಗೆ ಮತ್ತು ಲಾಜಿಸ್ಟಿಕ್ಸ್, ಕೃಷಿ ಮತ್ತು ಸ್ಮಾರ್ಟ್ ಶಿಕ್ಷಣ ಕ್ಷೇತ್ರಗಳಲ್ಲಿ ಸಮಸ್ಯೆ ಹೇಳಿಕೆಗಳಿಗೆ ಪರಿಹಾರಗಳನ್ನು ವಿದ್ಯಾರ್ಥಿಗಳು ಮಂಡಿಸಿದರು. ಪ್ರಾಂಶುಪಾಲ ಡಾ. ಕೆ ಫಜ್ಲೂರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಜೆ. ಅನ್ವರ್ ಶಾಥಿಕ್ ಅವರು ಪದಕ ಮತ್ತು ಸ್ಮರಣಿಕೆಗಳನ್ನು ನೀಡಿದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ತಮ್ಮ ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ಕೊಡುಗೆ ನೀಡಲು ವೇದಿಕೆಯಾಗಿ ಕಾರ್ಯನಿರ್ವಹಿಸಿತು.

  • ಕಿರಣ ಶಾನಭಾಗ ಅವರಿಗೆ phD

    ಕಿರಣ ಶಾನಭಾಗ ಅವರಿಗೆ phD

    ಭಟ್ಕಳದ ಅಂಜುಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ (ಎಐಟಿಎಂ) ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಕಿರಣ್ ವಿನಾಯಕ ಶಾನಭಾಗ್ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿಯನ್ನು ಪಡೆದಿದ್ದಾರೆ. ಅವರು ಮಂಗಳೂರಿನ ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಥರಾದ ಡಾ. ದಯಾಕ್ಷಿಣಿ ಎಸ್. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “5G ಉಪಯುಕ್ತತೆ ಕಡೆಗೆ ಬಹುವಾಹಕ ಸಮನ್ವಯತೆ ಯೋಜನೆಗಳಲ್ಲಿ ಸಂಭಾವ್ಯ ವರ್ಧನೆಗಳು” (“Potential Enhancements in Multicarrier Modulation Schemes Towards 5G Applications”) ಎಂಬ ಪ್ರಬಂಧವನ್ನು ಮನ್ನಿಸಿ ಜುಲೈ 18, 2024 ರಂದು ಬೆಳಗಾವಿಯಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 24 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಅವರಿಗೆ ಡಾಕ್ಟರೇಟ್ ಪದವಿಯನ್ನು ನೀಡಲಾಗಿದೆ.

    ಹೊನ್ನಾವರದ ವಿನಾಯಕ ಶಾನಭಾಗ್ ಹಾಗೂ ವಿನಯಾ ಶಾನಭಾಗ್ ಅವರ ಪುತ್ರರಾದ ಕಿರಣ್ ಅವರು ಎಐಟಿಎಂನಲ್ಲಿ ಇಂಜಿನಿಯರಿಂಗ್ ಶಿಕ್ಷಣವನ್ನು ಮುಗಿಸಿ ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ) ದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. 2005 ರಿಂದ ಎಐಟಿಎಂನಲ್ಲಿ ಸೇವೆ ಸಲ್ಲಿಸುತ್ತಿರುವ ಅವರು ಆಗಸ್ಟ್ 2023 ರಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದಾರೆ.

    ಈ ಮಹತ್ವದ ಸಾಧನೆಗಾಗಿ ಎಐಟಿಎಂನ ಆಡಳಿತ ಮಂಡಳಿ, ಪ್ರಾಂಶುಪಾಲ ಡಾ. ಕೆ. ಫಜಲುರ್ ರೆಹಮಾನ್, ರಿಜಿಸ್ಟ್ರಾರ್ ಪ್ರೊ. ಜಾಹಿದ್ ಖರೂರಿ, ಉಪನ್ಯಾಸಕ ಹಾಗೂ ಸಿಬ್ಬಂದಿವರ್ಗ ಡಾ. ಕಿರಣ್ ಶಾನಭಾಗ್ ಅವರನ್ನು ಅಭಿನಂದಿಸಿದ್ದಾರೆ.