ಭಟ್ಕಳ: ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಭಟ್ಕಳ ಇದರ 44 ನೇ ಕಾಲೇಜು ವಾರ್ಷಿಕೋತ್ಸವ ಮತ್ತು 40 ನೇ ಪದವಿ ದಿನಾಚರಣೆ ರವಿವಾರದಂದು ನಡೆಯಿತು. ಈ ಕಾಲೇಜು 44 ವರ್ಷಗಳಿಂದ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದು. ಎ.ಐ ಎಂ.ಎಲ್ ಡಾಟಾ ಸೈನ್ಸ್, ರೋಬಿಟಿಕ್ ಸೇರಿದಂತೆ ಹೊಸ ಹೊಸ ಶಾಖೆಗಳಿಂದ ಕಂಗೊಳಿಸುತ್ತಿದೆ. ಅದೇ ರೀತಿ ಪ್ರತಿಷ್ಠಿತ ಕಂಪನಿಗಳನ್ನು ತಮ್ಮತ್ತ ಆಕರ್ಷಿಸುವಂತೆ ಮಾಡಿದ್ದು, ಪ್ಲೇಸ್ ಮೆಂಟ್, ಕ್ಯಾ0ಪಸ್ ಸೌಲಭ್ಯ ಹೊಂದಿದ್ದು. ಈ ಕಾಲೇಜು ಜಿಲ್ಲೆಯಲ್ಲಿಯೇ ಉತ್ತಮ ರೀತಿಯಲ್ಲಿ ಮುನ್ನಡೆದುಕೊಂಡು ಹೋಗುತ್ತಿದೆ. ಇಂದು ನಡೆದ ಕಾರ್ಯಕ್ರಮದಲ್ಲಿ ಎಂಜಿನಿಯರಿಂಗ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿದರು. ಅದೇ ರೀತಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೂ ಇದೆ ವೇಳೆ ಬಹುಮಾನ ವಿತರಿಸಿದರು.
ಈ ವೇಳೆ ಕಾರ್ಯಕ್ರಮದಲ್ಲಿ ಗಣ್ಯರು ಹಾಗೂ ಅತಿಥಿಗಳು ಮಾತನಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಮುಂದಿನ ಅವರ ಭವಿಷ್ಯದ ಬಗ್ಗೆ ಉತ್ತಮವಾದ ರೀತಿಯಲ್ಲಿ ಕಿವಿ ಮಾತು ಹೇಳಿದರು. ಅಂತಿಮವಾಗಿ ಕಂಪ್ಯೂಟರ್ ಸೈನ್ಸ್ ಮುಖ್ಯಸ್ಥ ಡಾ :ಅನ್ವರ್ ಸಾತಿಕ್. ಜೆ.ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ವಂದನಾರ್ಪಣೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಅಂಜುಮನ್ ಉಪಾಧ್ಯಕ್ಷ ಮೇಜರ್ ಡಾ. ಮೊಹಮ್ಮದ್ ಜುಬೇರ್ ಕೋಲಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಎಂ.ಐ. ಟಿ ಮಣಿಪಾಲದ ಜೈವಿಕ ತಂತ್ರಜ್ಞಾನ ವಿಭಾಗದ ಸಹಾಯಕ ನಿರ್ದೇಶಕ ಹಾಗೂ ಹಿರಿಯ ಪ್ರಾಧ್ಯಾಪಕ ಡಾ.ವಿ ರಾಮಚಂದ್ರ ಮೂರ್ತಿ ಇದ್ದರು.
ಭಟ್ಕಳ ಎ.ಎಚ್.ಎಂ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇಶಾಕ್ ಶಾಬಂದ್ರಿ, ಭಟ್ಕಳ ಎಐಟಿಎಂ ಕಾರ್ಯದರ್ಶಿ ಮೊಹಿದ್ದೀನ್ ರುಕ್ನಾದ್ದೀನ್,ಅಬ್ದುಲ್ ಹಸೀಬ್ ಕಾಡ್ಲಿ, ತನ್ವೀರ್ ಕಾಸರಗೋಡ, ಅಂಜುಮನ್ ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ಕೆ.ಫಜಲುರ್ ರೆಹಮಾನ್,ರಿಜಿಸ್ಟ್ರಾರ್ ಪ್ರೊ.ಜಾಹಿದ್ ಖರೂರಿ,ಡಾ ಅನಂತಮೂರ್ತಿ ಶಾಸ್ತ್ರಿ ಮಾಧ್ಯಮ ಸಂಯೋಜಕ ಪ್ರೊ.ಸುಬ್ರಹ್ಮಣ್ಯ ಗಜಾನನ ಭಾಗವತ್, ಶ್ರೀ ಶೈಲ ಭಟ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು
ಭಟ್ಕಳ : ಭಟ್ಕಳದ ಕಡವಿನಕಟ್ಟೆ ಹೊಳೆಯಲ್ಲಿ ಸ್ನಾನ ಮಾಡಲು ಹೋಗಿದ್ದ ಹದಿನೈದು ಮಂದಿಗಳ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಸೂರಜ್ ನಾಯ್ಕ (15),ಪಾರ್ವತಿ ಶಂಕರ ನಾಯ್ಕ (35) ಸ್ನಾನ ಮಾಡುವಾಗ ನೀರಿನಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿಗಳಾಗಿದ್ದಾರೆ. ಮೃತರು ಕಂಡೆಕೋಡ್ಲು ನಿವಾಸಿಗಳಾಗಿದ್ದಾರೆ. 15ಕ್ಕೂ ಹೆಚ್ಚು ಮಂದಿ ಸೇರಿ ಹೊಳೆಯಲ್ಲಿ ಸ್ನಾನ ಮಾಡಲು ತೆರಳಿದ್ದರು. ಈ ವೇಳೆ ಕಾಲು ಜಾರಿ ಇಬ್ಬರೂ ನೀರಿನಲ್ಲಿ ಮುಳುಗಡೆಯಾಗಿ ಮೃತಪಟ್ಟಿದ್ದಾರೆ. ಮೃತರ ಇಬ್ಬರೂ ಶವವನ್ನ ಹೊರತೆಗೆಯಲಾಗಿದೆ. ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ.
ಭಟ್ಕಳ: 85 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಭಟ್ಕಳ ಎಜ್ಯುಕೇಶನ್ ಟ್ರಸ್ಟ್’ನ 8 ವಿದ್ಯಾ ಸಂಸ್ಥೆಗಳಲ್ಲಿ ಒಂದು, ಪ್ರತಿಷ್ಠಿತ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜು. ಕರ್ನಾಟಕ ಸರ್ಕಾರದ ಮಾನ್ಯತೆಯೊಂದಿಗೆ, ಕರ್ನಾಟಕ ವಿಶ್ವವಿದ್ಯಾಲಯದ ಸಂಯೋಜನೆಗೊಳಪಟ್ಟ BCA – BCom – BBA – BA ಕೋರ್ಸುಗಳನ್ನು ಹೊಂದಿದೆ. ಪ್ರತಿವರ್ಷ ನೂರಾರು ಉದ್ಯೋಗಾರ್ಹ ಪದವೀಧರರನ್ನು ರೂಪಿಸುತ್ತಿರುವ ಸಂಸ್ಥೆಯು, ಶಿಕ್ಷಣದೊಂದಿಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರಾಶಸ್ತ್ಯ ನೀಡುತ್ತಿದೆ. ಉದ್ಯೋಗ ನೀಡುವ ಧ್ಯೇಯವನ್ನಿಟ್ಟು ಮಕ್ಕಳ ಭವಿಷ್ಯವನ್ನು ಉಜ್ವಲವಾಗಿ ರೂಪಿಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಅಗತ್ಯವಿರುವ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ, ಕ್ಯಾಂಪಸ್ ಸಂದರ್ಶನಕ್ಕೆ ಹೆಸರುವಾಸಿಯಾಗಿದೆ. Wipro, Infosys, TCS, Fidelity, 24×7.ai, Genpact, Growth Falcon ಮುಂತಾದ ಬಹುರಾಷ್ಟ್ರೀಯ ಕಂಪನಿಗಳಿಗೆ ಪ್ರತಿವರ್ಷ ಹಲವಾರು ವಿದ್ಯಾರ್ಥಿಗಳು ಆಯ್ಕೆಯಾಗುತ್ತಿದ್ದಾರೆ.
Government Scholarship ಜೊತೆಯಲ್ಲಿ Wipro’s Santoor, TATA Capitals, HDFC, Jindal Foundation, GGKRF ಮುಂತಾದ ಪ್ರತಿಷ್ಠಿತ ಸಂಸ್ಥೆಗಳಿಂದ ಲಕ್ಷಾಂತರ ರುಪಾಯಿ ಮೌಲ್ಯದ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳು ಪಡೆಯುತ್ತಿರುವರು. ICT Academy, M.R.Pai Foundation, ExcelR Academy, CI Academy, Vreach Academy, WKC ಮುಂತಾದ ಹತ್ತು ಹಲವಾರು Training Unit ಮೂಲಕ ವಿದ್ಯಾರ್ಥಿಗಳ ಭವಿಷ್ಯ ಆಧಾರಿತ ತರಬೇತಿಯನ್ನು ನೀಡಲಾಗುತ್ತಿದೆ. Deshpande Foundation ಸಂಸ್ಥೆಯೊಂದಿಗೆ MoU ಮುಂದುವರೆದಿದ್ದು, ಕೌಶಲ್ಯಾಧಾರಿತ ತರಬೇತಿಯನ್ನು ನೀಡಿ ಉದ್ಯೋಗವಂತ-ಕೌಶಲ್ಯವಂತರನ್ನಾಗಿಸುತ್ತಿದೆ.
CA-CS ತರಬೇತಿ: B.Com, BBA ಪದವಿಯ ಜೊತೆಯಲ್ಲಿ CA, CS ಕಲಿಯುವ ಅವಕಾಶ ಈ ಕಾಲೇಜಿನಲ್ಲಿದ್ದು, ಈಗಾಗಲೇ ಹಲವಾರು ವಿದ್ಯಾರ್ಥಿಗಳು CA Foundation, CSEET ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.
ಗುಣಮಟ್ಟದ ಶಿಕ್ಷಣಕ್ಕೆ ಕೈಗನ್ನಡಿ: ಕಳೆದ ಹಲವಾರು ವರ್ಷಗಳಿಂದ ವಿಶ್ವವಿದ್ಯಾಲಯ ಮಟ್ಟದ Rank ಅನ್ನು ಗಳಿಸುವ ಮೂಲಕ SGS College ಗುಣಮಟ್ಟದ ಶಿಕ್ಷಣಕ್ಕೆ ಕೈಗನ್ನಡಿ ಯಾಗಿದೆ.
University Blue – Sports: ಕಾಲೇಜು ಶಿಕ್ಷಣದೊಂದಿಗೆ ಪಠ್ಯೇತರ ಹಾಗೂ ಕ್ರೀಡೆಗಳಲ್ಲಿ ಪ್ರೋತ್ಸಾಹ ನೀಡುತ್ತಿದ್ದು ಹಲವಾರು ವಿದ್ಯಾರ್ಥಿಗಳು ಯುನಿವರ್ಸಿಟಿ Blue ಆಗಿ ಹೊರಹೊಮ್ಮಿದ್ದಾರೆ. University ಮಟ್ಟದ Sports, Athletics, Games, Cultural Activities ಗಳಲ್ಲಿ ರಾಜ್ಯ ,ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟ ದಲ್ಲಿ ಭಾಗವಹಿಸಿ ವಿವಿಧ ಹಂತಗಳಲ್ಲಿ ಪ್ರತಿನಿಧಿಸಿರುತ್ತಾರೆ.
Skilled Future Talents ನ್ನು ಈ ಸಮಾಜಕ್ಕೆ ನೀಡುವ ಉದ್ದೇಶದಿಂದ AI-Hub(Artificial Intelligence) ಪ್ರಾರಂಭಿಸಿದ್ದು, ವಿದ್ಯಾರ್ಥಿಗಳಿಗೆ ಈ ದಿಶೆಯಲ್ಲಿ ವಿಶೇಷ ತರಬೇತಿಯನ್ನು ಕಾಲೇಜು ನೀಡುತ್ತಿದೆ.
ವಿಶೇಷ ತರಬೇತಿ: ಪದವಿಯ ಜೊತೆಯಲ್ಲಿ Banking, FinTech, Digital Commerce, e-Business ಕಲಿಯುವ ಅವಕಾಶ ಈಗ ಕಾಲೇಜಿನಲ್ಲಿದೆ. ವಿದ್ಯಾರ್ಥಿಗಳ & ನಾಗರೀಕರ ಅಪೇಕ್ಷೆ ಮೇರೆಗೆ ಇತಿಹಾಸ, ಅರ್ಥಶಾಸ್ತ್ರ, ಪತ್ರಿಕೋದ್ಯಮ ಸಂಯೋಜನೆಯೊಂದಿಗೆ, ಕಂಪ್ಯೂಟರ್ ತರಬೇತಿ ಒಳಗೊಂಡಂತೆ ಹಲವು ಸೌಲಭ್ಯದೊಂದಿಗೆ ಬಿಎ ಕೋರ್ಸ್ ವಿದ್ಯಾರ್ಥಿಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
ಸರ್ಕಾರಿ ಉದ್ಯೋಗಾವಕಾಶವನ್ನು ಪಡೆಯಲು ಸಹಕಾರಿಯಾಗುವ ಸ್ಪರ್ಧಾತ್ಮಕ ಪರೀಕ್ಷೆಗೆ ಮಾರ್ಗದರ್ಶನ ನೀಡಲಾಗುತ್ತಿದ್ದು, ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಪದವಿ ಪಡೆದು ಬಹುರಾಷ್ಟ್ರೀಯ ಕಂಪನಿ, ಬ್ಯಾಂಕಿಂಗ್, ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಪಡೆದು ತಮ್ಮ ಬಾಳನ್ನು ಬೆಳಗಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಕಾಲೇಜಿನಲ್ಲಿ NSS, Youth Red Cross, Rotaract Club, Unnat Bharat Abhiyan, Saptasvara, Samriddhi ಮುಂತಾದ Unit ಗಳನ್ನು ಪ್ರಾರಂಭಿಸಲಾಗಿದೆ.
Features: ಮೆರಿಟ್ ಆಧಾರಿತ ಶಿಕ್ಷಣ ಶುಲ್ಕ. Fees ತುಂಬಲು Installment ವ್ಯವಸ್ಥೆ. ಅರ್ಹ ಅನುಭವಿ ನುರಿತ ಶಿಕ್ಷಕರಿಂದ ಬೋಧನೆ. ಉದ್ಯೋಗ ಕೇಂದ್ರಿತ ಕೌಶಲ್ಯ ತರಬೇತಿ. ಹೊಸ ತಂತ್ರಜ್ಞಾನವನ್ನೊಳಗೊಂಡ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್. ತಂತ್ರಜ್ಞಾನ ಆಧಾರಿತ ಬೋಧನೆ ಮತ್ತು ಕಲಿಕೆ.
2024-25 ನೇ ಸಾಲಿನ ಇಂಜಿನಿರಿಂಗ್ ಗೆ ಪ್ರವೇಶಾತಿ ಪ್ರಾರಂಭ : 44 ವರ್ಷ ಗಳ Technical Excellence ಹೊಂದಿರುವ ಭಟ್ಕಳದ ಹೆಸರಾಂತ ಹಾಗೂ ಪ್ರತಿಷ್ಠಿತ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್ ಭಟ್ಕಳ ದಲ್ಲಿ B. E, MBA, MCA ಪ್ರವೇಶ ಆರಂಭ ವಾಗಿದೆ. ನುರಿತ ಶಿಕ್ಷಕರ ವರ್ಗ, ಅತ್ಯಾಧುನಿಕ ತಂತ್ರಜ್ಞಾನ ದಿಂದ ಕೂಡಿದ ಪ್ರಯೋಗಲಯ ಗಳ ಸೌಲಭ್ಯ, ಪ್ರತಿಷ್ಠಿತ ಕಂಪನಿಗಳಿಂದ ಕ್ಯಾಂಪಸ್ ಪ್ಲೇಸ್ಮೆಂಟ್ ವ್ಯವಸ್ಥೆ, ಕಾಲೇಜು ಬಸ್ ವ್ಯವಸ್ಥೆ, ಸತತವಾಗಿ ಉತ್ತಮ ಫಲಿತಾಂಶ ನೀಡುತ್ತಾ ಬಂದಿರುವ ಅತ್ಯುತ್ತಮ ಸಂಸ್ಥೆ. Contact 9448933848, 8123452286, 9886489598
ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ 41 ನೇ ವಾರ್ಷಿಕ ಅಥ್ಲೆಟಿಕ್ ಮೀಟ್(sports day)ಅದ್ಭುತ ಯಶಸ್ಸನ್ನು ಕಂಡಿತು! ನಮ್ಮ ಗೌರವಾನ್ವಿತ ಹಳೆಯ ವಿದ್ಯಾರ್ಥಿ ಮತ್ತು ಪ್ರಸ್ತುತ ಯುಕೆಡಿಎಫ್‌ಎ ಅಧ್ಯಕ್ಷರಾದ ಶ್ರೀ ಮಾವಿಯಾ ಮೊಹ್ತೇಶಾಮ್ ಅವರು ಉದ್ಘಾಟನಾ ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದರು .ಅವರು ಮಾತನಾಡಿ ಕ್ರೀಡೆಯ ಮಹತ್ವ ವನ್ನು ವಿವರಿಸಿದರು.ಅವರ ಜೊತೆಯಲ್ಲಿ ಪ್ರಾಂಶುಪಾಲರಾದ ಡಾ. ಕೆ. ಫಜಲುರಹ್ಮಾನ್, ಮಾತನಾಡಿ ಆಟದಲ್ಲಿ ಗೆಲವು ಸೋಲು ಮುಖ್ಯವಲ್ಲ, ಭಾಗವಹಿಸುವದೇ ಮುಖ್ಯ ಎಂದರು. ಜತೆಗೆ ವೇದಿಕೆಯ ಮೇಲೆ ರಿಜಿಸ್ಟರಾರ್ ಮತ್ತು ಎಲ್ಲಾ ವಿಭಾಗಗಳ ಮುಖ್ಯಸ್ಥರು ಇದ್ದರು.
ಬೆಳಿಗ್ಗೆ 10 ಗಂಟೆಗೆ ಪವಿತ್ರ ಕುರಾನ್ ಪಠಣದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು, ಒಟ್ಟು 12 ವಿವಿಧ ಕ್ರೀಡೆಗಳು ಆಯೋಜಿಸಲ್ಪಟ್ಟವು.ವಿದ್ಯಾರ್ಥಿಗಳು ತಮ್ಮ ಕೌಶಲ್ಯ ಮತ್ತು ದೃಢತೆಯನ್ನು ಸಂಜೆ 5 ಗಂಟೆಯವರೆಗೆ ಪ್ರದರ್ಶಿಸಿದರು. ಪ್ರಾಂಶುಪಾಲ ಡಾ.ಫಜಲುರ್ ರೆಹಮಾನ್ ಕೆ, ರಿಜಿಸ್ಟ್ರಾರ್ ಪ್ರೊ.ಜಾಹಿದ್ ಕರೂರಿ, ಮತ್ತು ಮಾಧ್ಯಮ ಸಂಯೋಜಕ ಪ್ರೊ.ಸುಬ್ರಹ್ಮಣ್ಯ ಗಜಾನನ ಭಾಗವತ್ ಅವರು ಪ್ರೊ.ಜುಹೇರ್, ಪ್ರೊ.ಸೈಯದ್ ನೂರೇನ್ ಮತ್ತು ನಮ್ಮ ವಿದ್ಯಾರ್ಥಿಗಳ ಜೊತೆಗೆ ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಎಲ್ಲ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.
ಭಟ್ಕಳ : ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಭಟ್ಕಳದ ವಿದ್ಯಾರ್ಥಿಗಳಾದ ಮೊಹಮ್ಮದ್ ಇಸ್ಮಾಯಿಲ್ (4ನೇ ವರ್ಷದ ಮೆಕ್ಯಾನಿಕಲ್), ಜುರೈಫ್ ಅಹ್ಮದ್ ಮತ್ತು ಮೊಹಮ್ಮದ್ ಮೀರಾನ್ ಮೊಹ್ತಿಶಾಮ್ (2ನೇ ವರ್ಷದ ಎಲೆಕ್ಟ್ರಾನಿಕ್ಸ್) , ಎಂಐಟಿ ಕುಂದಾಪುರದಲ್ಲಿ ನಡೆದ ಸಾವಿಷ್ಕಾರ್ ಫೆಸ್ಟ್‌ನಲ್ಲಿ ಭಾಗವಹಿಸಿ ಓವರಾಲ್ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಹೆಸರು ಗಳಿಸಿದರು. ಅವರು 3 ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನ ಪಡೆದರು. ಎಐಟಿಎಂ ಮ್ಯಾನೇಜ್‌ಮೆಂಟ್, ಎಐಟಿಎಂ ಪ್ರಾಂಶುಪಾಲ ಡಾ.ಫಜಲುರ್ ರೆಹಮಾನ್ ಕೆ, ರಿಜಿಸ್ಟ್ರಾರ್ ಪ್ರೊ.ಜಾಹಿದ್ ಖರೂರಿ, ಮಾಧ್ಯಮ ಸಂಯೋಜಕ ಪ್ರೊ.ಸುಬ್ರಹ್ಮಣ್ಯ ಗಜಾನನ ಭಾಗವತ್ ಮತ್ತಿತರರು ಈ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು
೨೦೨೪- ಶಿಕ್ಷಕ ಶೀರ್ಷಿಕೆ ಅಡಿಯಲ್ಲಿ ಅಂಜುಮಾನ್ ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ವೇದಿಕೆಯ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸುಂದರವಾಗಿ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ. ದಿನೇಶ್ ಗಾಂವ್ಕರ್ ಆಡಳಿತಾಧಿಕಾರಿಗಳು ಮತ್ತು ಪ್ರಾಂಶುಪಾಲರು, ಆರ್.ಎನ್.ಎಸ್ ಮುರ್ಡೇಶ್ವರ ಶಿಕ್ಷಣ ಸಂಸ್ಥೆಗಳು, ಇವರು ಪ್ರಾಸ್ತಾವಿಕ ಭಾಷಣ ಮಾಡಿ ಅಂಜುಮಾನ್ ತಾಂತ್ರಿಕ ಮಹಾವಿದ್ಯಾಲಯವು ಎಲ್ಲಾ ಭಾಷೆಗಳಿಗೆ ಪ್ರೋತ್ಸಾಹ ನೀಡುತ್ತಾ ಗುಡ್ಡದ ಮೇಲಿನ ಸ್ವರ್ಗವಾಗಿ ಕಂಗೊಳಿಸುತ್ತಿದೆ ಎಂದು ಹೇಳಿದರು. ನಮ್ಮ ಉತ್ತರಕನ್ನಡವು ಅನೇಕ ಕನ್ನಡ ಸಾಹಿತಿಗಳ ತವರು ಜಿಲ್ಲೆ ಮತ್ತು ಚುಟುಕು ಬ್ರಹ್ಮ ದಿನಕರ ದೇಸಾಯಿಯನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಕಾಲೇಜು ಪ್ರಾಂಶುಪಾಲರಾದ ಡಾ. ಫಜ್ಲುರ್ ರೆಹಮಾನ್ ರವರು ಮಾತನಾಡಿ ಭಾಷೆಯು ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.
ಕನ್ನಡ ವೇದಿಕೆಯ ಸಂಚಾಲಕರಾದ ಡಾ. ಪದ್ಮಯ್ಯ ನಾಯ್ಕರವರು ಮಾತನಾಡಿ ನಮ್ಮ ಸಣ್ಣ ಪ್ರಯತ್ನವೂ ಸಹ ವ್ಯರ್ಥವಲ್ಲ ಮತ್ತು ಸದಾ ಪ್ರಯತ್ನಶೀಲರಾಗಬೇಕೆಂದು ಕರೆ ಕೊಟ್ಟರು. ಕನ್ನಡ ವೇದಿಕೆಯ ವಿದ್ಯಾರ್ಥಿ ಸಂಚಾಲಕರಾದ ಶ್ರೀ. ಸಾಬಿತ್ ಸಾಹೇಬ್ ರವರು ಸಹ ಮಾತನಾಡಿದರು. ಕಾರ್ಯದರ್ಶಿಯಾದ ಭಾವನಾರವರು ಸ್ವಾಗತಿಸಿ, ಸುನೀತಾರವರು ವಂದನಾರ್ಪಣೆಯನ್ನು ಮಾಡಿದರು. ಅನನ್ಯ ಮತ್ತು ಪ್ರಗತಿ ಇವರು ಕಾರ್ಯಕ್ರಮವನ್ನು ನಿರೂಪಿಸಿ ಚೆಂದಗಾಣಿಸಿ ಕೊಟ್ಟರು ಎಂದು ಮಾಧ್ಯಮ ಸಂವಹನಾಧಿಕಾರಿ ಸುಬ್ರಮಣ್ಯ ಗಜಾನನ ಭಾಗವತ್ ಮಾಧ್ಯಮಗಳಿಗೆ ತಿಳಿಸಿದರು
ಬೆಂಗಳೂರಿನ ಕ್ಯೂ ಸ್ಪೈಡರ್ಸ್ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್‌ನ 15 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ಕಂಪ್ಯೂಟರ್ ಸೈನ್ಸ್ ವಿಭಾಗದವರು, 2 ವಿದ್ಯಾರ್ಥಿಗಳು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದವರು ಮತ್ತು 1 ವಿದ್ಯಾರ್ಥಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದವರಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕ್ಯೂ ಸ್ಪೈಡರ್ಸ್ ನಿಂದ ಇತ್ತೀಚಿನ ತಂತ್ರಜ್ಞಾನಗಳಲ್ಲಿ ಉಚಿತ ತರಬೇತಿಯನ್ನು ನೀಡಿ ತರಬೇತಿಯ ನಂತರ ಉದ್ಯೋಗಾವಕಾಶ ನೀಡಲಾಗುತ್ತದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಡಳಿತ ಮಂಡಳಿ,ಪ್ರಾಂಶುಪಾಲ ಡಾ.ಫಜಲುರ್ ರಹಮಾನ್, ರೆಜಿಸ್ಟ್ರಾರ್ ಪ್ರೊ.ಜಾಹಿದ್ ಖರೂರಿ, ಪ್ಲೇಸ್ ಮೆಂಟ್ ಅಧಿಕಾರಿ ಪ್ರೊ. ಶ್ರೀಶೈಲ್ ಭಟ್, ಹಾಗೂ ಉಳಿದ ಶಿಕ್ಷಕರು ಅಭಿನಂದಿಸಿದ್ದಾರೆ ಎಂದು ಮಾಧ್ಯಮ ಸಂವಹನಾಧಿಕಾರಿ ಪ್ರೊಫೆಸರ್ ಸುಬ್ರಹ್ಮಣ್ಯ ಗಜಾನನ ಭಾಗವತ್, ಮಾಧ್ಯಮ ಗಳಿಗೆ ತಿಳಿಸಿದ್ದಾರೆ
ಭಟ್ಕಳ : ಅರಬ್ಬೀ ಸಮುದ್ರದಲ್ಲಿ ಮೀನುಗಾರಿಕಾ ತೆರಳಿದ್ದ ಬೋಟ್ ಭಾರಿ ಗಾಳಿ ಮಳೆಯಿಂದಾಗಿ ಮುಳುಗಡೆಯಾಗಿ ಬೋಟ್‌ನಲ್ಲಿದ್ದ ನಾಲ್ಕು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ. ಭಟ್ಕಳ ತಾಲೂಕಿನ ಮಾವಿನಕುರ್ವೆ ಮೀನುಗಾರಿಕಾ ಬಂದರು ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಹಾದೇವ ಖಾರ್ವಿ ಮಾಲಕತ್ವದ ಓಂ ಮಹಾಗಣಪತಿ ಹೆಸರಿನ ಬೋಟ್ ಗಾಳಿಮಳೆಗೆ ಸಿಲುಕಿ ಮುಳುಗಡೆಯಾಗಿದೆ.
ಶನಿವಾರ ಬೆಳಿಗ್ಗೆ 5 ಗಂಟೆಯ ವೇಳೆಗೆ 4 ಮಂದಿ ಮೀನುಗಾರರು ಈ ಬೋಟ್‌ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಅರಬ್ಬೀ ಸಮದ್ರದಲ್ಲಿ ಕಾಣಿಸಿಕೊಂಡ ಭಾರೀ ಗಾಳಿ ಮಳೆಗೆ ಸಿಲುಕಿದ ಬೋಟ್ ಪಲ್ಟಿಯಾಗಿದೆ. ಸ್ಥಳದಲ್ಲಿದ್ದ ಇನ್ನೊಂದು ಬೋಟ್‌ನಲ್ಲಿದ್ದವರು ತಕ್ಷಣವೇ ನೆರವಿಗೆ ಧಾವಿಸಿದ್ದು, ಬೋಟ್‌ನಲ್ಲಿದ್ದ ಮೀನುಗಾರರ ರಕ್ಷಣೆ ಮಾಡಲಾಗಿದೆ.
ಇನ್ನೊಂದೆಡೆ ಕರಾವಳಿ ಜಿಲ್ಲೆಗಳಲ್ಲಿ ಭಾರತೀಯ ಹವಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ ಮೂರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ. ಏ.೨೦ ಮತ್ತು ಏ.೨೧ ರಂದು ಹವಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ.
ಕುಮಟಾ : ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಜಿಲ್ಲೆಯ ಕುಮಟಾ, ಅಂಕೋಲಾ, ಹೊನ್ನಾವರ ಸೇರಿದಂತೆ ಕರಾವಳಿಯ ತಾಲೂಕಿನ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಳೆ ಉಂಟಾಗಿದೆ. ಈ ಮೂಲಕ ಸುಡು ಬಿಸಿಲಿನಿಂದ ಪರಿತಪಿಸುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆರಾಯ ತಂಪೆರೆದಿದ್ದಾನೆ.
ಕಳೆದ ಎರಡು ದಿನಗಳಿಂದ ಭಾರೀ ಮೊಡಕವಿದ ವಾತಾವಣ ಇತ್ತು. ವಿಪರೀತವಾದ ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ಜನತೆಗೆ ತಂಪಾಗಿಸಿದ ವರುಣ ತಂಪೆರೆದಿದೆ. ಕಳೆದೆರಡು ದಿನಗಳಿಂದ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಅಬ್ಬರಿಸಿತ್ತು. ಇಂದು ಬೆಳ್ಳಂಬೆಳಿಗ್ಗೆ ಕುಮಟಾ, ಅಂಕೋಲಾ ಭಾಗದಲ್ಲಿ ಮಳೆ ಸುರಿಯುತ್ತಿದ್ದು ತಂಪೆರೆದಿದೆ.
ಇನ್ನೂ ಜಿಲ್ಲೆಯಲ್ಲಿ ಎಪ್ರಿಲ್ 22ರ ವರೆಗೆ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿರಸಿ, ಸಿದ್ದಾಪುರ, ಮುಂಡಗೋಡ, ಹಳಿಯಾಳ ಭಾಗದಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆ ಉಂಟಾಗುತ್ತಿದೆ. ಇನ್ನೂ ಎರಡು ದಿನ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುವ ಬಗ್ಗೆ ಇಲಾಖೆ ಮಾಹಿತಿ ನೀಡಿದೆ.