Satwadhara News

Category: Local News

  • ಹಿಂಸಾತ್ಮಕವಾಗಿ ಗೋವುಗಳ ಸಾಗಾಟ :ವಾಹನ ತಡೆದ ಸ್ಥಳಿಯರು

    ಹಿಂಸಾತ್ಮಕವಾಗಿ ಗೋವುಗಳ ಸಾಗಾಟ :ವಾಹನ ತಡೆದ ಸ್ಥಳಿಯರು

    ಹಿಂಸಾತ್ಮಕವಾಗಿ ಗೋವುಗಳ ಸಾಗಾಟ ಹೊನ್ನಾವರದ ಸುಬ್ರಹ್ಮಣ್ಯ ಹತ್ತಿರ ವಾಹನ ತಡೆದ ಸ್ಥಳಿಯರು . ಎರಡು ಹೋರಿ,ಒಂದು ಆಕಳು ಜೊತೆ ಎರಡು ಕರು ವಶ ಪಡೆದುಕೊಂಡ ಪೊಲೀಸರು . ಗುಂಡಬಾಳ ಹಂದಿಮೂಲೆಯಿಂದ ಕುಮಟಾ ಮತ್ತು ಶಿರಸಿಗೆ ಕೊಂಡೊಯ್ಯತ್ತಿದ್ದರು ಎಂದು ತಿಳಿದು ಬಂದಿದೆ . ಬೊಲೆರೊ ವಾಹನದಲ್ಲಿ ಸಾಗಾಟ,ವಾಹನ ಸಮೇತ ಮೂವರನ್ನು ವಶಕ್ಕೆ ಪಡೆದ ಹೊನ್ನಾವರ ಪೊಲೀಸರು

  • ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಅನಂತ್ ಕುಮಾರ ಹೆಗಡೆ

    ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಚಿವ ಅನಂತ್ ಕುಮಾರ ಹೆಗಡೆ

    ಇಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರಾದ ಶ್ರೀ ಅನಂತಕುಮಾರ ಹೆಗಡೆಯವರು ಅಸ್ಸಾಂ ರಾಜ್ಯದ ಗೌಹಾಟಿಯಲ್ಲಿರುವ PMKK ಕೇಂದ್ರಕ್ಕೆ (ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ) ಅನೀರೀಕ್ಷಿತ ಪರಿಶೀಲನಾ ಭೇಟಿ ನೀಡಿದರು. ಸಚಿವರು ಕೇಂದ್ರದಲ್ಲಿ ದಾಖಲಾಗಿರುವ ಅಭ್ಯರ್ಥಿಗಳನ್ನು ಮಾತನಾಡಿಸಿ ಅವರ ವೃತ್ತಿಜೀವನದ ಆಕಾಂಕ್ಷೆ ಮತ್ತು ಕೇಂದ್ರದಲ್ಲಿ ದೊರೆಯುತ್ತಿರುವ ಸೌಲಭ್ಯಗಳ ಬಗ್ಗೆ ವಿಚಾರಣೆ ಮಾಡಿದರು. ಈ ಕೇಂದ್ರದಲ್ಲಿ ನಡೆಸುತ್ತಿರುವ ವಿವಿಧ courseಗಳ ಬಗ್ಗೆ ಮತ್ತು ಅದರ ಆಂತರಿಕ ರಚನಾ ಸೌಲಭ್ಯಗಳನ್ನು ಸಹ ಈ ಸಂದರ್ಭದಲ್ಲಿ ಪರಿಶೀಲಿಸಿದರು.

  • ಸುಚಿತ್ರಾ ನಾಯ್ಕ್ ಯೋಗ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ

    ಸುಚಿತ್ರಾ ನಾಯ್ಕ್ ಯೋಗ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ

    ಹೊನ್ನಾವರ : ತಾಲೂಕಿನ ಖಾರ್ವಾದ ಸಿದ್ದಿವಿನಾಯಕ‌ ಹೈಸ್ಕೂಲಿನ ವಿದ್ಯಾರ್ಥಿನಿ ಗದಗದಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.

    ಈಕೆ ಸತತ ಐದನೆ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಕಲಿತಂತಹ ಶಾಲೆಗೆ , ಪಾಲಕರಿಗೆ ಹಾಗೂ ಊರಿಗೆ ಹಮ್ಮೆ ತಂದಿದ್ದಾಳೆ.

  • ಸಾ ರೆ ಗ ಮ ಪ Jio hoo-2018 ಕಾರವಾರದಲ್ಲಿ ಧ್ವನಿ ಪರೀಕ್ಷೆ

    ಸಾ ರೆ ಗ ಮ ಪ Jio hoo-2018 ಕಾರವಾರದಲ್ಲಿ ಧ್ವನಿ ಪರೀಕ್ಷೆ

    ಸಾ ರೆ ಗ ಮ ಪ Jio hoo-2018 ಸಂಗೀತ ಧ್ವನಿ ಪರೀಕ್ಷೆ ಕಾರವಾರದ ಎನ್ ಜಿ ಓ ನೌಕರರ ಸಭಾಭವನದಲ್ಲಿ ನಡೆಯಲಿದೆ.ಸುಮ್ಮಿಂಗ ಪೂಲ್ ಹತ್ತಿರ 24.10.2017 ಮಂಗಳವಾರ ಬೆಳಿಗ್ಗೆ 10ಕ್ಕೆ ನಡೆಯಲಿದೆ.

  • ಎನ್ನೆಸ್ಸೆಸ್ ಶಿಬಿರಾರ್ಥಿಗಳಿಂದ ‘ಶರಸೇತು ಬಂಧ’ ಯಕ್ಷಗಾನ

    ಎನ್ನೆಸ್ಸೆಸ್ ಶಿಬಿರಾರ್ಥಿಗಳಿಂದ ‘ಶರಸೇತು ಬಂಧ’ ಯಕ್ಷಗಾನ

    ಕುಮಟಾ; ಅಳ್ವೆಕೋಡಿಯಲ್ಲಿ ಸಕಕಾರಿ ಕಾಲೇಜ್ ನೆಲ್ಲಿಕೇರಿಯ ಎನ್ನೆಸ್ಸೆಸ್ ಶಿಬಿರಾರ್ಥಿಗಳಿಂದ ‘ಶರಸೇತು ಬಂಧ’ ಯಕ್ಷಗಾನ ಬಯಲಾಟ ಸಂಪನ್ನಗೊಂಡಿತು.

  • ವಿದ್ಯಾರ್ಥಿಗಳಿಗೆ ಅಭಿನಂದನೆ,ಟ್ರ್ಯಾಕ್ ಸೂಟ್ ವಿತರಿಸಿದ ದಿನಕರ ಶೆಟ್ಟಿ

    ವಿದ್ಯಾರ್ಥಿಗಳಿಗೆ ಅಭಿನಂದನೆ,ಟ್ರ್ಯಾಕ್ ಸೂಟ್ ವಿತರಿಸಿದ ದಿನಕರ ಶೆಟ್ಟಿ

    ಹಾವೇರಿಯ ಹೊಸರತಿಯಲ್ಲಿ ನಡೆಯುವ ವಿಭಾಗಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗಿರುವ ಗಿಬ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಬಿ ಜೆ ಪಿ ಧುರೀಣರಾದ ಮಾಜಿ ಶಾಸಕ ದಿನಕರ ಕೆ ಶೆಟ್ಟಿಯವರು ಟ್ರಾಕ್ ಸೂಟ್ ನೀಡುವುದರ ಮುಖಾಂತರ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಅದೇ ರೀತಿ ಚಿದಾನಂದ ನಾಯ್ಕ ವಿನಾಯಕ ನಾಯ್ಕ ಶಾಲೆಯ ಶಿಕ್ಷಕವೃಂದ, ಹಾಗೂ ಆಡಳಿತ ಮಂಡಳಿಯವರು,ಪಾಲಕರು ಶುಭ ಹಾರೈಸಿರುತ್ತಾರೆ .

  • ಸೇವಾ-ಸುರಕ್ಷಾ-ಸಂಸ್ಕಾರ ಶೀರ್ಷಿಕೆಯಡಿ ಸ್ಥಾಪನೆಯಾಯ್ತು ಭಜರಂಗದಳ ಘಟಕ

    ಸೇವಾ-ಸುರಕ್ಷಾ-ಸಂಸ್ಕಾರ ಶೀರ್ಷಿಕೆಯಡಿ ಸ್ಥಾಪನೆಯಾಯ್ತು ಭಜರಂಗದಳ ಘಟಕ

    ಯಲ್ಲಾಪುರ :ತಾಲೂಕಿನ ಬಾಳೆಹದ್ದ ಊರಿನಲ್ಲಿ ಬಜರಂಗದಳ ಘಟಕವನ್ನು ಸ್ಥಾಪನೆ ಮಾಡಲಾಯಿತು.

    ಈ ಸಂದರ್ಭದಲ್ಲಿ ಅಮಿತ್ ಮಂಚಿಕೇರಿ,ವಿನಯ್ ಭಟ್,ಶ್ರೀಧರ ಮೊಗೇರ,ದತ್ತಾತ್ರೇಯ ಎಂ,ಪರಶುರಾಮ, ಕಾರ್ತಿಕ್, ಮಧು ಮೊಗೇರ,ಅಕ್ಷಯ್,ರವಿ,ನರಸಿಂಹ, ತಿಮ್ಮ,ಗಣೇಶ ಎಂ ಮೊಗೇರ್ ಅವರು ಉಪಸ್ಥಿತರಿದ್ದರು

  • ಪ್ರತಿಭಾ ಪುರಸ್ಕಾರ,ಸನ್ಮಾನ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ

    ಪ್ರತಿಭಾ ಪುರಸ್ಕಾರ,ಸನ್ಮಾನ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮ

    ಹೊನ್ನಾವರ :ಉತ್ತರ ಕನ್ನಡ ಜಿಲ್ಲಾ ಅಂಬಿಗ ಸಮಾಜ ವಿದ್ಯಾವರ್ದಕ ಸಂಘ ಮಿರ್ಜಾನ,ಕುಮಟಾ ಹಾಗೂ ಹೊನ್ನಾವರ ತಾಲೂಕಾ ಅಂಬಿಗ ಸಮಾಜದ ಸಹಯೋಗದೊಂದಿಗೆ’ಪ್ರತಿಭಾ ಪುರಸ್ಕಾರ, ಸನ್ಮಾನ ಹಾಗು ಸಾಂಸ್ಕೃತಿಕ ಕಾರ್ಯಕ್ರಮ ದಂಡಿನ ದುರ್ಗಾದೇವಿ ಸಭಾ ಭವನ ಹೊನ್ನಾವರದಲ್ಲಿ ಅದ್ದೂರಿಯಾಗಿ ನಡೆಯಿತು.

  • ಕುಮಟಾದಲ್ಲಿ ಕಲಾ ಗಂಗೋತ್ರಿ ಸಹಯೋಗದಲ್ಲಿ ಯಕ್ಷಗಾನ ಸಂಪನ್ನ

    ಕುಮಟಾದಲ್ಲಿ ಕಲಾ ಗಂಗೋತ್ರಿ ಸಹಯೋಗದಲ್ಲಿ ಯಕ್ಷಗಾನ ಸಂಪನ್ನ

    ಕುಮಟಾ:ಕಲಾಗಂಗೋತ್ರಿ-ಕುಮಟಾ (ಉ.ಕ) ಇವರ ಆಶ್ರಯದಲ್ಲಿ ಸಿರಿಕಲಾ ಮೇಳ ಬೆಂಗಳೂರು, ಖ್ಯಾತ ಮಹಿಳಾ ಕಲಾವಿದರು ಹಾಗೂ ಅತಿಥಿ ಕಲಾವಿದರಿಂದ ಪೌರಾಣಿಕ ಯಕ್ಷಗಾನ ನಡೆಯಿತು.ಶ್ರೀ ಶಾಂತಿಕಾ ಪರಮೇಶ್ವರಿ ಸಭಾಮಂಟಪ,ದೇವರಹಕ್ಕಲ ಕುಮಟದಲ್ಲಿ ನಡೆದ ಯಕ್ಷಗಾನದಲ್ಲಿ ದಿವಂಗತ ಚಿಟ್ಟಾಣಿಯವರನ್ನು ನೆನೆಯುತ್ತಾ ಅವರಿಗೆ ಕಲಾಗಂಗೋತ್ರಿ ಬಳಗದವರು ಶ್ರದ್ಧಾಂಜಲಿ ಸಲ್ಲಿಸಿದರು.

    ನಂತರ ನಡೆದ ಯಕ್ಷಗಾನ ಸುಧನ್ವಾರ್ಜುನ ಕಾಳಗ ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

  • ಜನಾರ್ಧನ ರಾಜು ನಾಯ್ಕ ಜಿಲ್ಲಾ ಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ

    ಜನಾರ್ಧನ ರಾಜು ನಾಯ್ಕ ಜಿಲ್ಲಾ ಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ

    ಕುಮಟಾ :ನಿರ್ಮಲಾ ಕಾಮತ್ ಪ್ರೌಢಶಾಲೆಯ ವಿದ್ಯಾರ್ಥಿ ಜನಾರ್ಧನ ರಾಜು ನಾಯ್ಕ ಜಿಲ್ಲಾ ಮಟ್ಟದ ಎತ್ತರ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾನೆ. ಕಳೆದ ವರ್ಷವೂ ರಾಜ್ಯ ಮಟ್ಟದಲ್ಲಿ ಕುಮಟಾ ತಾಲೂಕನ್ನು ಪ್ರತಿನಿಧಿಸಿದ್ದ.